ಮೂಲ : Ima Ryma
ಕನ್ನಡಕ್ಕೆ : ಪ್ರತಿಭಾ ನಂದಕುಮಾರ್
ಕವಿತೆಯ ವಿಶ್ಲೇಷಣೆ
ನಾನೊಂದು, ನಾನೇ ಬರೆದ ಕವಿತೆ.
ನನ್ನ ಭೂತಕಾಲದ ಕುರಿತು,
ಪ್ರೀತಿ ಪ್ರಣಯದ ಮಾತುಗಳನ್ನೆಲ್ಲಾ ಉಲ್ಲೇಖಿಸಿ,
ಪ್ರತಿ ಸಾಲೂ ಪ್ರಾಸಬದ್ಧವಾಗುವಂತೆ ಬರೆದದ್ದು.
ನನ್ನನ್ನು ‘ಅನಾಮಧೇಯ’ ಎಂದು ಕರೆದುಕೊಂಡೆ,
ಸ್ವಲ್ಪ ಕಾಲದವರೆಗೆ ಅದರಲ್ಲೇನೂ ತೊಂದರೆ ಇರಲಿಲ್ಲ.
ಆದರೆ ಆಧುನಿಕ ಕಾಲದಲ್ಲಿ ನನ್ನನ್ನು ಓದಿದಾಗ
ವಿಮರ್ಶಕರು ಆಕ್ಷೇಪಿಸತೊಡಗಿದರು.
ಪ್ರೀತಿಗಾಗಿ ಪ್ರಾಸಬದ್ಧವಾಗಿ ಬರೆಯುವ
ನನ್ನ ಕಾವ್ಯಶೈಲಿಯನ್ನು ಕಂಡು,
ನನ್ನನ್ನು ಅಪಹಾಸ್ಯ, ತಿರಸ್ಕಾರಕ್ಕೆ
ಗುರಿಯಾಗಿಸತೊಡಗಿದರು.
ಕವಿತೆಯಾಗಿ ನನ್ನ ಬಗ್ಗೆ ದೂರುಗಳು
ದಿನೇದಿನೇ ಹೆಚ್ಚಾಗತೊಡಗಿದವು.
ಆದ್ದರಿಂದ ನನ್ನನ್ನು ಮುಕ್ತಛಂದಸ್ಸಿನಲ್ಲಿ
ಬರೆದುಕೊಳ್ಳತೊಡಗಿದೆ.
ಆದರೆ ಈಗ ವಿಮರ್ಶೆಗಳೂ
ಇನ್ನೂ ಹೆಚ್ಚು ಕಟುವಾಗಿವೆ.
**






0 Comments