ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಹುಡುಕುತ್ತಿರುವುದಾದರೂ ಏನನ್ನು?

-ವಿಜಯಲಕ್ಷ್ಮಿ ಸತ್ಯಮೂರ್ತಿ

ಕಾಣಬಹುದೇ ಆ ಕಣ್ಣುಗಳು

ದಿಟ್ಟಿಸಿ ನೋಡುತ್ತೇನೆ ಬೆಳ್ಳಗಿನ ಆಗಸವನ್ನು
ತುಸು ಹೆಚ್ಚೇ ಇತ್ತೀಚೆಗೆ!

ಹಾ..ಅದರೊಂದಿಗೆ ಹಸಿರು ಎಲೆಗಳನ್ನು
ಕೆಂಪು ಬಿಳಿಯ ಹೂಗಳನ್ನೂ.
ನನ್ನದೇ ತೋಟದಲ್ಲಿ..

ಎಂದೋ ಕಳೆದುಹೋದ ಉಲ್ಲಾಸ ಉತ್ಸಾಹಗಳ
ರೆಕ್ಕೆ ಚಿಗುರಿರಬಹುದೇ?
ಆ ಶುದ್ಧ ನಗು, ತುಂಟತನದ
ಕಣ್ಣುಗಳು
ಮತ್ತೆ ಎಲ್ಲಾದರೂ
ಕಾಣಬಹುದೇ ?

ಅದು ಸರಿ…ನಾನೇನನ್ನು ನಿರೂಪಿಸಲು
ಹೊರಟಿರುವೆನೀಗ?
ನಿಜ, ನಾನು ಹುಡುಕುತ್ತಿರುವುದಾದರೂ ಏನನ್ನು?

ನನ್ನದೇ ಆದದ್ದು ದಕ್ಕುತ್ತದೆಯೆಂಬ ನಿರೀಕ್ಷೆಯೊಂದಿಗೆ .
ನನ್ನೆದೆಗೆ ಬೀಳದೆ ಮತ್ತೆಲ್ಲಿಗೆ ಹೋದೀತು?

ಆ ಪರಿ ಅಪರಿಮಿತ ಒಲವನ್ನು ಬಚ್ಚಿಟ್ಟುಕೊಂಡು ತನ್ನೆದೆಯೊಳಗೆ
ಎಷ್ಟು ಗಳಿಗೆಗಳು ಕಣ್ಣು ತಪ್ಪಿಸಲಾದೀತು?

ನನ್ನೊಳಗೆ ಬೀಡುಬಿಟ್ಟುರುವ ಜೇನುಗೂಡನ್ನು
ಕದಲಿಸುವುದೇನು ಸುಲಭದ ಮಾತಲ್ಲ.
ಒಮ್ಮೆ ಕದಲಿದರೂ,
ಕವಿ ಅಲ್ಲವೇ ನಾನು
ಗೂಡನ್ನು ಮತ್ತೆ ಕಟ್ಟುವ
ಅಚಲ ವಿಶ್ವಾಸ
ಕ್ಷಣಕ್ಷಣಕ್ಕೂ
ಹುಟ್ಟುತ್ತಲೇ ಇರುತ್ತದೆ ನನ್ನಲ್ಲಿ

ಎದೆಯೊಳಗಿನ ದಗೆಗೆ ಕರಗುವುದಿಲ್ಲ ಅದು

‍ಲೇಖಕರು Admin

25 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading