-ವೀರೇಂದ್ರ ರಾವಿಹಾಳ್
ಒಂಟಿತನ
ಲೋಕ ಎಂದಿದ್ದರೂ ನಮ್ಮ ಜೊತೆ
ಹೆಜ್ಜೆ ಹಾಕುವುದಿಲ್ಲ
ಅದಕ್ಕೆಂದೇ
ಒಂಟಿತನವ ರೂಢಿಸಿಕೊಳ್ಳಬೇಕಿದೆ.
ಜೊತೆಗಿದ್ದವರು
ದಾರಿ ಬದಲಿಸಿ ನಡೆದಾಗ
ನಮ್ಮ ಹೆಜ್ಜೆಗಳನ್ನೇ
ನಂಬಿಕೊಳ್ಳಬೇಕಿದೆ.
ಕರೆದಾಗ ಬರುವವರಿಗಿಂತ
ಕರೆಯದಿದ್ದರೂ
ನಮ್ಮೊಳಗೇ ಉಳಿಯುವಂತ
ಮೌನವೊಂದು ಬೇಕಿದೆ.
ನಮ್ಮ ನೆರಳಿಗೂ
ಒಂದು ದಿನ ದಣಿವಾಗಬಹುದು;
ಆಗಲೂ
ನಮ್ಮ ಹೆಜ್ಜೆಯ ಸದ್ದನ್ನೇ
ನಂಬಿಕೊಂಡಿರಬೇಕು.
ಒಂಟಿತನವೆಂದರೆ
ಯಾರನ್ನೂ ಕಳೆದುಕೊಳ್ಳುವುದಲ್ಲ
ಯಾರೂ ಇಲ್ಲದ ಹೊತ್ತಿನಲ್ಲೂ
ನಮ್ಮೊಳಗೇ
ನಮ್ಮನ್ನು ಉಳಿಸಿಕೊಳ್ಳುವುದು.






0 Comments