-ಎಚ್ ಆರ್ ಲೀಲಾವತಿ
ನೆನಪು..
ನೆನಪುಗಳು
ಎಲ್ಲ ಸಾಯುವುದಿಲ್ಲ…..
ಅಂದು ನೀನೆನ್ನ ಮುಡಿಯೊಳಿಟ್ಟ
ಮಲ್ಲಿಗೆಯ ಕಂಪು
ರಂಗೇರಿದ ಕದಪಿನಲಿ
ರಚಿಸಿದ ಶೃಂಗಾರ ಚಿತ್ರ
ಕಿವಿದೆರೆಯೊಳುಸಿರಿದ
ಪ್ರೇಮ ಕಾವ್ಯ
ಕೆಂದುಟಿಯ ಹಾಸಿನಲಿ
ಪೋಣಿಸಿದ ಮುತ್ತಿನ ಮಾಲೆ
ಮೂಗಿನ ನತ್ತ ಸರಿಪಡಿಸುವ ನೆಪಕೆ
ಕಚ್ಚಿದ ನಾಸಿಕದ ಮಧುರ ವೇದನೆ
ನನ್ನ ಕಣ್ಣ ಕನ್ನಡಿಯಲ್ಲಿ ನಿಂತ
ನಿನ್ನ ಚೆಲುವ ಚಿತ್ತಾರ
ಹಚ್ಚಡದ ಹೊದಿಕೆಯಲಿ
ಗಾಢವಾಗಿ ಬಿಗಿದಪ್ಪಿದಾಗ
ಹರಿದ ನಿನ್ನ ಬೆವರ ಸೇಚನದ
ಕಂಪಿನಿಂಪು
ಪಂಚೇಂದ್ರಿಯ ಸುಖದ ಸವಿ
ನೀ ನನ್ನ ಬಿಟ್ಟು ದೂರ ಸರಿದರೂ
ನೆನಪೆ ನಿಜವೆನಿಸಿ
ಮೈ ಮನದಿ ಪುಳಕ






0 Comments