ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಗೆ ಅದೆಷ್ಟು ರೆಕ್ಕೆಗಳು

-ದೇವಿಕಾ ನಾಗೇಶ್

ಪ್ರೀತಿ ರೆಕ್ಕೆ

ಪ್ರೀತಿಗೆ ಅದೆಷ್ಟು ರೆಕ್ಕೆಗಳು
ಬಣ್ಣ, ಭಾವ,ಮೋಹಕ ಬೆಳಕು
ಅಕ್ಕರೆಯ ಅಗ್ನಿಕುಂಡ
ಸಕ್ಕರೆಯಂತೆ ವಿಷ ಅಂದರೆ ವಿಷ
ಕಸು ಅಂದರೆ ಕಸು

ಅವರವರ ಭಾವಕ್ಕೆ ದಕ್ಕಿದಂತೆ
ಮೃದು ಮಧುರ ಹುಳಿ ಒಗರು
ನಾದಿದಷ್ಟೂ…ಬೆತ್ತಲಾಗುವ
ಆ..ಕಾರ ವಿಕಾರ
ದುಡಿಸುವ ದುಗುಡಕೆ
ಕಾಲ ಕಂಗಾಲು

ಕೋಶದ ಹೂ ಹಸಿರು
ಭೂಮಿ ವಿಸ್ತಾರ ಬಯಸಿದೆ
ಬಾನಿಗೂ ಚಾಚಿದೆ
ನೀರುಣಿಸುವ ನದರು ನಗೆ ಮಿಂಚು
ಜೇನು ಕರೆದಿದೆ…ಮಕರಂದ ಸವಿದಿದೆ
ಚಳಿ ಮಳೆ ಬಿಸಿಲಿಗೂ ಏಗಿ ಬಾಗಿದೆ
ಜಗವ ಬಾಚಿ ತಬ್ಬಿದೆ

ನೀತಿಗೂ ಮೀರಿದ ಭಾವ ಇದು
ಅಂತರಂಗ ಬಹಿರಂಗ ಸೃಜಿಸಿ
ನವಿರುಭಾವ ಅಷ್ಟೇ ಸತ್ಯ ನಿತ್ಯ
ಎನುತ ಮೊಂಡು ಹೂಡಿದೆ.

ಪ್ರೀತಿ ರೆಕ್ಕೆಯೊಳ ಬಿಕ್ಕು ಉಕ್ಕಿ
ಹಣತೆ ಹಚ್ಚುವ ಕಾಯಕದ ಹುಕ್ಕಿ
ಗೆರೆ ಕೊರೆದು ಬಿತ್ತಿದ
ಚಿತ್ರಗಳ ಪೊರೆದಿದೆ

‍ಲೇಖಕರು Admin

15 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading