-ಗುಂಡಣ್ಣ ಚಿಕ್ಕಮಗಳೂರು
ನಮ್ಮ ಮನೆಯ ಒಳ ಆವರಣ ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು…
ಗಣೇಶ್ ಸಂಚಯ ಅವರ ಪರಿಕಲ್ಪನೆಯ, ಸಂಚಯದ ವಿಜಯ್ ಭಾರದ್ವಾಜ್ ಅವರ ಅಭಿನಯದ ೪೦ ನಿಮಿಷಗಳ ಏಕ ಕಲಾವಿದ ಪ್ರಸ್ತುತಿ ” ಮತ್ತೆ ವಸಂತ” ಪ್ರಯೋಗವನ್ನು ಸ್ವೀಕರಿಸಿತು…

ಬೆಳಕು ವಿನ್ಯಾಸ, ಪ್ರಸಾಧನ ವಸ್ತ್ರವಿನ್ಯಾಸದ ರಗಳೆ-ಗೊಂದಲಗಳಿಲ್ಲದ ಈ ಸರಳ ಪರಿಕಲ್ಪನೆಯ ಸಂಚಯ ತಂಡದ ಗಣೇಶ್ ಮತ್ತು ವಿಜಯ್ ಅವರುಗಳು ನಿಜಕ್ಕೂ ಅಭಿನಂದನಾರ್ಹರು. ಯಾವುದೇ ಮನೆಯಲ್ಲಿ ಲಭ್ಯವಿರುವ ಒಂದು ಖುರ್ಚಿ, ಒಂದು ಟೀಪಾಯ್ ಇದ್ದರೆ ಆಯಿತು…..ನಾಟಕ ಆರಂಭವಾಯಿತು ಎಂದೇ ತಿಳಿಯಿರಿ…. ಈ ಪ್ರಯೋಗ ಪ್ರಸ್ತುತವಾಗುವ ಮನೆಯ ಸದಸ್ಯರು, ಸುತ್ತಮುತ್ತಲ ನೆರೆಹೊರೆಯವರು…. ಗರಿಷ್ಠ 10-15 ಜನ ಸಾಕು ಪ್ರೇಕ್ಷಕರಾಗಿ…. ಮಳೆ, ವಾಹನ ದಟ್ಟಣೆ, ತಿರುಗಿ ಮನೆಗೆ ಹೋಗಬೇಕು ಎನ್ನುವ ಕಾತುರಗಳ್ಳಿಲ್ಲ…. ಆಪ್ತ ರಂಗಭೂಮಿಯ ಪ್ರಸ್ತುತಿ ಎಂದರೆ,ಅದರ ಪೂರ್ಣ ಅರ್ಥದಲ್ಲಿ, ಸರಿಯಾಗಿ ಇದು ಆಪ್ತ ರಂಗಭೂಮಿಯ ಪ್ರಸ್ತುತಿಯೇ….

ಮತ್ತೆ ವಸಂತ….. ಒಬ್ಬ ವ್ಯಕ್ತಿಯ ಹಳೆ ನೆನಪುಗಳನ್ನು ಕೆದುಕುವ ಒಂದು ಸರಳ ಕಥೆ….. ಕಲಾವಿದ ತನ್ನ ಹಳೆಯ ನೆನಪುಗಳನ್ನು ಕೆದಕಲು ಪ್ರಾರಂಭಿಸಿದ ಕೂಡಲೇ ಪ್ರೇಕ್ಷಕರ, ನೋಡುಗರ ಮುಖ ಸಂತಸದಿಂದ ಅರಳುತ್ತದೆ…. ಹೌದಲ್ವಾ…ನನಗೂ ಈ ರೀತಿಯ ಅನುಭವ ಬಾಲ್ಯದಲ್ಲಿ ಆಗಿತ್ತಲವಾ ಎಂದು ತನ್ನ ಬಾಲ್ಯದ ಮಧುರ ಭಾವನೆಗಳ/ ದುಃಖ- ಸೇಡು- ಜಿದ್ದಿನ ಭಾವನೆಗೆ ತೆರಳುತ್ತಾನೆ….. ಅನುಭಾವಿಸುತ್ತಾನೆ….. ಅಯ್ಯೋ……ನಾಟಕ ಮುಗಿಯಿತಾ? ಇನ್ನೂ ಸ್ವಲ್ಪ ವಿಸ್ತರಿಸಬಹುದಾಗಿತು…ಎಂದು ತನ್ನ ಅಭಿಪ್ರಾಯವನ್ನು ಯಾರೂ ಕೇಳದೆ ತಿಳಿಸುತ್ತಾನೆ….. ತನ್ನ ಬಾಲ್ಯದ, ಶಾಲೆಯ, ಶಿಕ್ಷಕರ, ತನ್ನ ನೆರೆಹೊರೆಯವರ ಅನುಭವಗಳನ್ನು ಹೆಮ್ಮೆಯಿಂದಲೋ, ನೋವು- ಸಂಕೋಚಗಳಿಂದಲೋ ಮಾತನಾಡಿ, ತನ್ನ ಹಳೆಯ ನೆನಪಿನ ಬುತ್ತಿಯನ್ನು ಇತರರಿಗೆ ಉಣಬಡಿಸುತ್ತಾನೆ…… ನಾನು ನಾಟಕದ ಕಥೆಯನ್ನು ಹೇಳಲು ಬಯಸುವುದಿಲ್ಲ….ಕಥೆಯ ಪರಿಚಯ ನಿಮ್ಮ ಮನೆಯ ಒಳಾಂಗಣದಲ್ಲಿ ನಡೆದಾಗ,ಅದರ ಪರಿವಯ ತಮಗಾಗಲಿ…
ವಿಜಯ್ ನಮ್ಮ ಕಾಲದ ನಟರು….. ಛಾಯಾಗ್ರಾಹಕರು….ಹಲವು ರಂಗತಂಡಗಳ ನಾಟಕಗಳನ್ನು ದಾಖಲಾತಿಗೆಂದು ಕ್ಲಿಕ್ಕಿಸಿದ ರಂಗಪ್ರೇಮಿ… ನಟರಂಗದ ರಮೇಶ್, ಬೆನಕದ ವಾಲಿ, ಸೂತ್ರದಾರದ ಪರೇಶ್, ವಾರ್ತಾ ಇಲಾಖೆಯ ಶಿವು…ಸಾಲಿಗೆ ದಾಖಲಾಗುವ ರಂಗಭೂಮಿಯ ಹಿರಿಯ ಛಾಯಾಗ್ರಾಹಕ…. ಒಂದಿಷ್ಡು ವರ್ಷ ಕಳೆದು ಹೋಗಿದ್ದ ವಿಜಿ, ಈಗ ಮತ್ತೆ ವಸಂತದ ಮುಖಾಂತರ ವೇದಿಕೆ ಹತ್ತಿದ್ದಾರೆ…. ನವರಸ ಭಾವಗಳನ್ನು ಪ್ರದರ್ಶಿಸಿ, ಅಭಿನಯಿಸಿ, ನಾನು ರಂಗಭೂಮಿ ಮರೆಯಲಾಗದ ಕಲಾವಿದ ಎಂದು ಎಲ್ಲರಿಗೂ ನೆನಪಿಸಿದ್ದಾರೆ…
೬ ೪೫ ಕ್ಕೆ ಪ್ರಾರಂಭವಾದ ” ಮತ್ತೆ ವಸಂತ” ೭.೩೦ ರ ಸುಮಾರಿಗೆ ಮುಕ್ತಾಯವಾಯಿತು…. ೮.೩೦ ರ ತನಕ ಪ್ರಸ್ತುತಿಯ ಕುರಿತು ಬಂದ ನಮ್ಮ ಬಡಾವಷೆಯ ಪ್ರೇಕ್ಷಕರು ಚರ್ಚೆ, ಹರಟೆ, ಮೆಚ್ಚುಗೆ ಎಲ್ಲವನ್ನೂ ವ್ಯಕ್ತಪಡಿಸಿ, ಮನೆಯಲ್ಲಿನ ಲಘು ಉಪಹಾರ ಸೇವಿಸಿ, ಮನೆ ಖಾಲಿಯಾದಾಗ, ನನಗೆ ಮತ್ತು ಸಂಧ್ಯಾಗೆ ಮತ್ತೆ ಮನೆ ಬಿಕೋ ಎನಿಸಿತು.

ಒಂದೆರಡು ಘಂಟೆ, ನಮ್ಮನ್ನು ಹರುಷದಿಂದ ಇರಿಸಿದ ಸಂಚಯ ತಂಡದ ಗಣೇಶ್, ವಿಜಯ್, ಧ್ವನಿ ಸಂಯೋಜಕ ಸತೀಶ್, ಪ್ರೇಕ್ಷಕರಾಗಿ ಬಂದ ಸಂಜಯ್ ಸೂರಿ, ಶಕುಂತಲಾ ಸೂರಿ, ವಿಕ್ರಮ್ ಸೂರಿ, ನಮಿತ ವಿಕ್ರಮ್, ಕಿರಣ್ ವಟಿ, ಕೃಷ್ಣ ರಾಯಚೂರು, ಮಹಾಮನೆ, ಶಿವಲಿಂಗ ಪ್ರಸಾದ್, ವಿಜಯಕುಮಾರ್ ಎಲ್ಲರಿಗೂ ಮನದಳಾದ ಧನ್ಯವಾದಗಳು, ವಂದನೆಗಳು…
ಈ ರೀತಿಯ ಸಣ್ಣ ಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಉತ್ಸಾಹ ಮತ್ತೆ ಪುಟಿದೆದ್ದಿದೆ…….
ಇದು ವಸಂತದ ಹಂಬಲಕ್ಕೆ ಕಾತರಿಸುವ ಬಾಲ್ಯದ ನೆನಪುಗಳ ತಡಕಾಟದ ಸವಿಯಾದ ಮಧುರ ಪಯಣದ ಹೂ ಗುಚ್ಚ. ನಾವು ಇದರೊಳಗಾಗುತ್ತಲೆ ನಮ್ಮ ನಮ್ಮ ಬೇರೆ ತೆರನಾದ ನೆನಪುಗಳು ಸಂಕಲಿಸುತ್ತಲೆ ಹೋಗುವುದು ವಿಶೇಷ.






0 Comments