ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಗುವಿನ ಸಾಗರದಲ್ಲಿ ಸಾಹಿತ್ಯದ ಅಲೆಗಳು

ಎಚ್ ಡುಂಡಿರಾಜ್ ಅವರ ಆತ್ಮಕಾದಂಬರಿ ‘ಡುಂಡಿ ಯಾತ್ರೆ’

ಅಂಕಿತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ.

-ಉದಯಕುಮಾರ ಹಬ್ಬು

ಸೃಜನಶೀಲ ಸಾಹಿತ್ಯ ರಚನೆಯಲ್ಲಿ ‌ಹಾಸ್ಯ ಸಾಹಿತ್ಯ ರಚಿಸುವುದು ಸುಲಭದ ಮಾತಲ್ಲ‌ ಕಥೆ ಕಾದಂಬರಿ, ಗಂಭೀರ ಕಾವ್ಯ ಅಥವಾ ಮಹಾಕಾವ್ಯವನ್ನು ರಚಿಸುವುದು ಹಾಸ್ಯ ಸಾಹಿತ್ಯ ರಚನೆ ಕಷ್ಟವೆ ಸೈ‌ ಶಬ್ದಗಳಲ್ಲಿ pun, ,ಅಥವಾ ಶ್ಲೇಷೆಯನ್ನು ಬಳಸಿ, ಅರ್ಥಪೂರ್ಣ ಮತ್ತು ನಗುವನ್ನು ಉಕ್ಕಿಸುವ ಸೃಜನತೆ ಹೆಚ್ಚು ಹರಿತ ಮತಿ ಕುಶಾಗ್ರಮತಿತ್ವದ ಅಗತ್ಯವಿರುತ್ತದೆ‌ ಯಾರು ಹಾಸ್ಯವನ್ನು ಸೃಷ್ಟಿಸುತ್ತಾರೆಯೊ ಅವನು ಹೆಚ್ಚು ಜನರ ಮನಸ್ಸನ್ನು ಗೆಲ್ಲುತ್ತಾನೆ‌ ಕ್ಷುಲ್ಲಕ ವಿಷಯದಲ್ಲೂ ಹಾಸ್ಯವನ್ನು ಕಂಡರಿಸುವ ಬರವಣಿಗೆ ಕಾದಂಬರಿಕಾರ, ಕತೆಗಾರನಿಗೆ ಸಾಧ್ಯವಿಲ್ಲ‌ ಅಂತಹ ಅಪೂರ್ವ ಪ್ರತಿಭೆಯುಳ್ಳ ಲಕ್ಷಗಟ್ಟಲೆ ಅಭಿಮಾನಿಗಳನ್ನು ಹೊಙದಿದ ಎಚ್ ಡುಂಡಿರಾಜ್ ಅವರ “ಡುಂಡಿ ಯಾತ್ರೆ” ಖರೀದಿಸಿ ಖುಶಿಪಟ್ಟೆ‌.

ಈ ಕೃತಿಯನ್ನು ಡುಙಡಿ ಸಾಹಿತ್ಯ ಯಾತ್ರೆ ಎಂದು ಕರೆಯುವಷ್ಟು ಅವರ ಸಾಹಿತ್ಯ ಯಾನವನ್ನೇ ಬಿತ್ತರಿಸುತ್ತದೆ‌‌. ಸಾಹಿತ್ಯ ಯಾನದಲ್ಲೂ ಡುಂಡಿ ಅವರ ತುಂಟುತನ, ಚುಟುಕಿನ ಮೂಲಕ ಕುಟುಕು‌ ಕುಟುಕಿಗಿಂತ‌‌ ಅಪ್ಪಟ‌ ಹಾಸ್ಯವೆ ವಿಜೃಂಭಿಸಿದೆ. ಎಲ್ಲರಿಗೂ ಹಾಸ್ಯ ಸೃಷ್ಟಿಸುವ ಪ್ರತಿಭೆ ಇರುವುದಿಲ್ಲ. ನಾನು ಕಾದಂಬರಿ, ಕವಿತೆ ಕತೆಗಳನ್ನು ‌ಬರೆಯಬಲ್ಲೆ. ಆದರೆ ಹಾಸ್ಯ ಕವಿತೆಯನ್ನು ರಚಿಸಲಾರೆ‌. ಇವರ ಈ ಹಾಸ್ಯ ಇಡೀ ಕರ್ನಾಟಕ ಮಾತ್ರವಲ್ಲ; ಮುಂಬೈ ಕೇರಳ, ಗುಜರಾತ್ ಮಧ್ಯಪ್ರದೇಶ ಅದಷ್ಟಲ್ಲದೆ ದುಬೈ, ಕತಾರ್, ಅಮೇರಿಕಾ ಇಂಗ್ಲೆಂಡ್ ಎಲ್ಲೆಡೆಗೆ ಶ್ರೀಗಂಧದಂತೆ ಪಸರಿಸಿದೆ.

ಸಾಹಿತ್ಯ ರಚನೆಯಿಂದ ಇವರಿಗೆ ಅಮಪರಿಮಿತ ಅಭಿಮಾನಿಗಳಿದ್ದಾರೆ. ಇವರನ್ನು ಎರಡನೆಯ ಮದುವೆಯಾಗಲು ತಯಾರಿರುವ ಹುಡುಗಿಯರೂ ಇದ್ದರು. ಅರಸರಂತೆ ಜಗತ್ತಿನ ದಿಗ್ವಿಜಯವನ್ನು ಮಾಡಿದ್ದಾರೆ.ಅವರ ವ್ಯಕ್ತಿತ್ವದಂತೆ ಅವರ ಕವಿತೆಯೂ ಸರಳ ಸುಂದರ ಮತ್ತು ಆಕರ್ಷಕ ‌ ಓದಿ ಮರುಳಾಗದವರಿಲ್ಲ‌. ಇವರ ಕವಿತೆಗಳ ಮೇಲೆ ಓರ್ವ ವಿದ್ಯಾರ್ಥಿ ಪಿ ಎಚ್ ಡಿ ಮಾಡುತ್ತಿದ್ದಾರೆ‌‌.

ಇವರ ಸಾಹಿತ್ಯ ಯಾತ್ರೆಯಲ್ಲಿ ಎಷ್ಟೊಂದು ಜನ ಸಾದಕರು ಇವರ ಜೊತೆಯಾಗಿದ್ದಾರೆ, ಇವರ ಹಾಡುಗಳನ್ನು ಹಾಡಿದ ಎಷ್ಟೊಂದು ಪ್ರಸಿದ್ದ ಹಾಡುಗಾರರು, ಸಂಗೀತ ನಿರ್ದೇಶಕರು ಇದ್ದಾರೆ. ಇವರ ಈ ಡುಂಡಿ ಯಾತ್ರೆ ಓದಿದವರಿಗೆ ಕನ್ನಡದ ಎಲ್ಲ ಪ್ರಮುಖ ಸಾಹಿತಿಗಳ ಪರಿಚಯವಾಗುತ್ತದೆ.‌ಎಚ್ ಎಸ್ ವಿ ಕಣವಿ, ಚಂಪಾ ಪಿ ಲಂಕೇಶ್, ನಿಸಾರ್ ಅಹಮದ್, ಮನೋಮೂರ್ತಿ ಅಂದರೆ ಕರ್ನಾಟಕದ ಸಾಹಿತ್ಯ ದಿಗ್ಗಜರ ಪರಿಚಯ ಇವರಿಂದ ನಮಗಾಗುತ್ತದೆ.

ಇವರು ತಮ್ಮ ಯಾತ್ರೆಯಲ್ಲಿ ಎಲ್ಲೂ ಸೋತದ್ದಿಲ್ಲ.‌ವೃತ್ತಿ ಜೀವನದಲ್ಲಿ, ಸಾಹಿತ್ಯ ಸಾಧನೆಗಳಲ್ಲಿ ಅಥವಾ ಕೌಟುಂಬಿಕ ‌ಬದುಕಿನಲ್ಲಿ ಸೋತದ್ದಿಲ್ಲ. ಅನುರೂಪ ದಾಂಪತ್ಯ, ಅರತಿಗೆ ಒಬ್ಬ ಮಗಳು ಕೀರ್ತಿಗೆ ಒಬ್ಬ‌ ಮಗ. ಬದುಕನ್ನು ತಮ್ಮ ಸಾಧನೆಗಳ ಮೂಲಕ ಬಾಂಬಾಟಾಗಿ ಎಂಜಾಯ್ ಮಾಡ್ತಿದಾರೆ‌
ವೈದಿಕ ಕೂಡು ಕುಟುಂಬದಲ್ಲಿ ಜನಿಸಿದ ಇವರು ಸಾಕಷ್ಟು‌ ಶ್ರೀಮಂತ ಸಾಂಸ್ಕೃತಿಕ ಅರ್ಥಿಕ ಹಿನ್ನೆಲೆಗಳಲ್ಲೇ ಬೆಳೆದವರು.

ಹಟ್ಟಿಕುದ್ರು ಅವರು ಜನಿಸಿದ ಊರು‌ ನದಿಯಿಂದ ಆವೃತವಾದ ದ್ವೀಪ. ಬಾಲ್ಯದಿಂದಲೇ ನದಿ ದಾಟಿ ಶಾಲೆಗೆ ಹೋಗಬೇಕಿತ್ತು‌‌ ಗುಡ್ಡ ಹತ್ತಿ ಶಾಲೆಗೆ ಹೋಗಬೇಕಿತ್ತು‌‌ ಐದು ಮಕ್ಕಳಲ್ಲಿ ಇವರು ಕೊನೆಯ ಸಂತಾನವಾದ್ದರಿಂದ ಎಲ್ಲ ನಾಲ್ಕು ಅಕ್ಕಂದಿರ ಪ್ರೀತಿಯಲ್ಲೇ‌ ಬೆಳೆದ ಸುಖಿ ಪುರುಷ. ಬದುಕಿನಲ್ಲಿ ‌ಯಾವೊಂದು ಕಷ್ಟ ನಷ್ಟಗಳನ್ನು ನೋವನ್ನೂ ಅನುಭವಿಸುವ ಅವಕಾಶಗಳೇ ಇರಲಿಲ್ಲ.‌ಈ‌ಬನಿರಾಯಾಸದ ಬದುಕು ಇವರನ್ನು ಹಾಸ್ಯ ಕವಿಯನ್ನಾಗಿ ರೂಪಿಸಿತೋ ಏನೋ!

ಅಪ್ಪ ಲ್ಯಾಂಡ್ ಲಾರ್ಡ್‌ ಪೌರೋಹಿತ್ಯ, ಆಯುರ್ವೇದ ಮುಂತಸದವುಗಳು ಅವರ ಕುಟುಂಬಕ್ಕೆ ಸಾಕಷ್ಟು ಆದಾಯವನ್ನು ತರುತ್ತಿತ್ತು. ಅಪ್ಪನ‌ ಪ್ರೋತ್ಸಾಹದಿಂದಲೆ‌ ಶಿಕ್ಷಣ ಮುಂದುವರಿಸಲು ಸಾಧ್ಯವಾಯಿತು‌ ಇವರ ಹೆಂಡತಿ ಭಾರತಿ ಅವರ ತವರು ಮನೆ ಮೊಗೇರಿ. ಅದೇ ಮನೆಯಲ್ಲಿ ನವ್ಯ ಕಾವ್ಯದ ನೇತಾರ ಶ್ರೀ ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು. ಅಡಿಗರು ಡುಂಡಿ ಅವರಿಗೆ ಸಣ್ಣ ಕವಿತೆ ಬರೆದು ನಿನ್ನ ಪ್ರತಿಭೆ ವೇಸ್ಟ್ ಮಾಡಿಕೊಳ್ಳಬೇಡ ಎಂದಿದ್ದರಂತೆ‌ ಅಡಿಗರ ಮಾತು ಕೇಳುತ್ತಿದ್ದರೆ ಡುಂಡಿರಾಜ್ ಇಷ್ಟೊಂದು ಜನಪ್ರಿಯ ಸಾಹಿತಿ ಆಗುತ್ತಿರಲಿಲ್ಲ.

ಅವರ ಹಳ್ಳಿಯ ಬದುಕು ಅವರ‌ ಹಾಸ್ಯ ಪ್ರವೃತ್ತಿಗೆ‌ ಇಂಬು ಕೊಟ್ಟಂತೆ ಕಾಣುವುದಿಲ್ಲ. ಬಿ ಆರ್ ಲಕ್ಷ್ಮಣ ರಾವ್ ಇವರ ಆತ್ಮೀಯ ಗೆಳೆಯ‌ ಅವರೂ ಸಾಕಷ್ಟು ಹಾಸ್ಯ ಕವಿತೆಗಳನ್ನು‌ ಬರೆದಿದ್ದಾನೆ ‌ ಅವರ ಹಾಡುಗಳು‌ ಜನಪ್ರಿಯವೆ‌ ಅಂತೆಯೇ ಡುಂಡಿರಾಜ್ ಅವರ ಹಾಡುಗಳು ನಾಟಕಗಳು ಜನಪ್ರಿಯವೆ. ಅವರು ಬರೆದ ನಾಟಕಗಳು ನೂರಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಕಂಡಿವೆ‌. ಈ ಪುಸ್ತಕದಲ್ಲಿ ಅನೇಕ ಹನಿಗವನಗಳಿವೆ‌ ಅವುಗಳಲ್ಲಿ ಒಂದೆರಡು ಇಲ್ಲಿ ಬರೆದರೆ ಅಪ್ರಸ್ತುತವಾಗಕ್ಕಿಲ್ಲ.

ಬರೆದೂ ಬರೆದೂ
ಕನ್ನಡ ಕವನ
ಪಡೆದೆನು
ಕನ್ನಡಕವನ್ನ

ಕನ್ನಡದ ಕನ್ನಡಕ ಹಾಕಿಕೊಂಡೆ
ಎಲ್ಲೆಲ್ಲೂ ಕಾಣುಸಿತು ಚೆಲುವು
ಕನ್ನಡದ ಪದಗಳಲ್ಲಿ ಬಣ್ಣಿಸಿದೆನು
ಕವಿ ಎಂದು ಕರೆದಿರಿ ನೀವು

ವಿಮಾನದಲ್ಲಿ ‌ಗಗನ ಸಖಿ
ರೈಲಿನಲ್ಲಿ ರೈಲು ಸಖಿ
ಬರಬಹುದು ಇನ್ನು ಮುಂದೆ
ಬಸ್ಸಿನಲ್ಲೂ‌ ಬಸ್ಸು ಸಖಿ
ಒಟ್ಟಿನಲ್ಲಿ ಗಂಡು ಇನ್ನು
ಮನೆಯ ಹೊರಗೇ ಹೆಚ್ಚು ಸುಖಿ

ಕೊರೊನಾ ಸಮಯದಲ್ಲಿ ಡುಂಡಿರಾಜ್ ಮನೆಯಲ್ಲೇ‌ ಖೈದಿಯಂತೆ ಇರಬೇಕಾಯಿತು‌ ಆಗ ಅವರು ಹೆಂಡತಿಯನ್ನು ಗಮನವಿಟ್ಟು ನೋಡಿದರು. ಅವರ ಹೆಂಡತಿ ಅವರಿಗೆ ಚಂದ ಕಾಣತೊಡಗಿದರು‌ ಹೆಂಡತಿ ಎಲ್ಲರೊಡನೆ ಹೇಳತೊಡಗಿದರು ನನ್ನ ಗಂಡ ಈಗ ಹೊರಗೆ ಹೋಗೋದೆ ಇಲ್ಲ‌
ಇದರ ಮೇಲೆ ಡುಂಡಿರಾಜ್ ಹನಿಗವನ ಬರೆದರು
ಕವಿಗೋಷ್ಠಿ ಭಾಷಣ ಅಂತ‌
ಯಾವಾಗಲೂ ಮನೆಯಿಂದ
ಹೊರಗೇ ಇರುತ್ತಿದ್ದವರು ನಮ್ಮವರು
ಈಗ ಎಲ್ಲೂ ಹೋಗದೆ
ಮನೆಯೊಳಗೆ ಕುಳಿತು
ಹೆದರಿ ಹೆದರಿ ಕೆಮ್ಮುವರು
ಆಗ ಜೋರಾಗಿ ಕೆಮ್ಮಲೂ ಭಯ‌ ಅದನ್ನು ಪಕ್ಕದ ಮನೆಯವರು ಕೇಳಿಸಿಕೊಂಡರೆ‌ ನನಗೆ ಕೊರೊನಾ ಬಂದಿರಬಹುದೆಂದು ತಿಳಿದು ಆರೋಗ್ಯ ಇಲಾಖೆಯವರಿಗೆ ಫೋನ್ ಮಾಡಿದರೆ ನಾನು ಕ್ವಾರಂಟೈನ್ ಕೇಂದ್ರಕ್ಕೆ ಹೋಗುವ ಅಪಾಯವಿತ್ತು” ಪುಟ ಸಂಖ್ಯೆ 348

ಈ ಪುಸ್ತಕ ಓದಲು ಎಷ್ಟು ಆಕರ್ಷಕವಾಗುದೆಯೋ‌ ಅಷ್ಟೇ ಉಪಯುಕ್ತವೂ ಆಗಿದೆ‌ ಇಡೀ ಪುಸ್ತಕ‌ Positive Energy ಯಿಂದ ತುಂಬಿ ತುಳುಕಿದೆ‌ ಹಾಗಾಗಿ ಇದು ಜೀವನಾಸಕ್ತಿಯನ್ನು ಮೂಡಿಸುವ ಕೃತಿ. ನಿವೃತ್ತರು ಹೇಗೆ ಸಮಯವನ್ನು ಕಳೆಯಬಹುದು ಎಂಬುದರ ಬಗ್ಗೆ ತೋರ್ಬೆರಳು‌ ಇದೆ‌
ಯಾವುದೆ ಪುಟ ಹಾರಿಸಿ ಓದುವ ಪ್ರಮೇಯವೇ ಬರುವುದಿಲ್ಲ. ಅಷ್ಟೊಂದು ಕುತೂಹಲಕಾರಿ ಕೃತಿ ಇದು‌
ಬಳಸದೆ ಎಲ್ಲವನ್ನೂ
ಉಳಿಸಲು ಯತ್ನಿಸುತ್ತಾನೆ ಮನುಷ್ಯ
ಬಳಸದಿದ್ದರೂ
ಖರ್ಚಾಗುತ್ತದೆ ಆಯುಷ್ಯ
ಇದು ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲುನಾನಿ
ಇಲ್ಲಿ ಮನುಷ್ಯ ಆಯುಷ್ಯ ಎಷ್ಟು ಅರ್ಥಗರ್ಭಿತ ಪ್ರಾಸ‌
ನಿಜಕ್ಕೂ ಇವರಿಗೆ ಅಗಾದ ಹಾಸ್ಯ ಸರ್ಜನಶೀಲತೆ ಇರುವುದು ಒಂದು ಅದೃಷ್ಟ ಅಂತಲೇ ನಾನು ಭಾವಿಸುತ್ತೇನೆ ‌ನಾನು ಕವಿಯಸದದ್ದು ಮಾತ್ರ by choice.”ಎನ್ನುತ್ತಾರೆ ಡುಂಡಿರಾಜ್ ‌
ಇವರು ಹನಿಗವನಗಳ ಚಕ್ರವರ್ತಿ
ಇವರ ಬದುಕು ಹುಟ್ಟಿನಿಂದ ಈವರೆಗೆ ಸುಖಮಯವಾಗಿ ಕಳೆದಿದೆ.
ಇನ್ನು ಮುಂದೆಯೂ ಸುಖವಾಗಿಯೇ ಕಳೆಯುತ್ತದೆ
ಯಾಕೆಂದರೆ ಡುಂಡಿರಾಜ್ ಪ್ರತಿಯೊಂದನ್ನು ಯೋಚಿಸಿಯೇ ಮುಂದಿನ ಹೆಜ್ಜೆ ಇಡುತ್ತಾರೆ

‍ಲೇಖಕರು Admin

29 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading