-ತಾರಿಣಿ ಶುಭದಾಯಿನಿ
ದಿನಾ ಸಾಯೋರಿಗೆ
ಅದೇ ಮತ್ತೆ
ದಿನಾ ಸಾಯೋರಿಗೆ ಅಳರ‍್ಯಾರು?
ಮಾಡಲು ಕೆಲಸ ಇಲ್ಲವೆ?
ಡೆಡ್‌ಲೈನುಗಳ ಕೆಂಪುಗೆರೆ
ನರಮಂಡಲದ ತುಂಬ
ಚೇಳಿನಂತೆ ಹರಿದಾಡಿ
ಅಳುವ ಕಣ್ಣುಗಳು ಬಾಡಿವೆ
ನಾಳೆ ಸಾಧ್ಯವಾದರೆ ಮನದುಂಬಿ
ಅಳಬೇಕು, ಅವನಿಗಾಗಿ
ಸತ್ತವನಿಗಾಗಿ
ಟಿವಿಯಲ್ಲಿ ಇಡೀ ದಿನ ಅಂತ್ಯಸAಸ್ಕಾರ
ತಲೆಗಳ ರಾಶಿ ದೂರದೂರಕ್ಕೆ
ಇಡುಕಿರಿದ ಲಾರಿಬಸ್ಸುಗಳ ಮಧ್ಯೆ
ಹೂಹಾರಗಳ ಅಂಬುಲೆನ್ಸು
ಅಲ್ಲೇ ಅಳೋಣ, ಎಲ್ಲೋ ಇಲ್ಲೇ
ಊರ ಮಧ್ಯದಲ್ಲೇ ಜಾಗ ಕೊಡ್ತಾರಂತಲ್ಲ?
ಸಮಾಧಾನವಾಗುವಷ್ಟು ನಿಂತು ನೋಡಿ
ಸುಗಂಧರಾಜದ ವಾಸನೆ ಮೂಗಿಗಿಡಿಸಿಕೊಂಡು
ಪಂಚಭೂತದಲ್ಲಿ ಲೀನವಾಗುವವರೆಗೂ
ಬಿಡುವುದಿಲ್ಲ ಇವಳು, ರ‍್ವಾತೆ
ರಾಷ್ಟಿçÃಯ ಸಂಗೀತದ ಶೋಕರಾಗ
ಬೆಂಕಿ ಎಲ್ಲಿ ಹೇಗೆ ಉರಿಯಲಿ ಈ ಜನರ
ಮಧ್ಯೆ ಎಂದು ಹೊಸ ಕೃಷ್ಣಾರ್ಜುನರ ಕೇಳುತ್ತೆ
ದಿನವೂ ಹೊಸ ಕತೆ
ಸತ್ತವರ ಕತೆ ಹೊಸಹೊಸೆದು
ಮಾನ ಕಳಕೊಂಡವಳ
ಪ್ರಾಣ ಹೋದಂತೆ ಎಂಬAತೆ
ದಿನಾ ಗಾಯಗಳಿಗೆ ಮುತ್ತು ಕೊಡುವುದು
ಹೇಗೆಂದು ಚಿಂತಿಸುತ್ತಾ
ಏನ್ ಮಹಾ,ಮಾನ ಹೋಯಿತೆ?
ಪ್ರಾಣ ಹೋದರೆ ಹೋಗಲಿ
ಕಿರಿಕಿರಿ ಮಾಡಬೇಡ, ಬೇಕಾದರೆ
ಹೋಗಿ ಹೊರಗೆ ಕೆಮ್ಮು
ದಿನಾ ಹೀಗೆ ನನ್ನ ಪ್ರಾಣ ತಿಂದರೆ
ಎAದವನ ಕಾಲು ಹಿಡಿದು
ಬಿಡಲಾರೆ ನಿನ್ನ ಪಾದ
ಒಂದಿಷ್ಟು ಕರುಣೆ ತೋರಿ
ಅಳುವ ನಾಟಕವನ್ನಾದರೂ ಮಾಡು
ದಿನಾ ಅದೇ
ದಿನಾ ಸಾಯೋರಿಗೆ
ಅಳುವವರ ಎಲ್ಲಿ ತರುವುದು?
—-






0 Comments