-ಮಾಲಾ.ಮ.ಅಕ್ಕಿಶೆಟ್ಟಿ
ಕೆಂಪು ಚಂದ್ರ
ಅಲ್ನೋಡು ಕೆಂಪು ಚಂದ್ರ
ಅವನೇಕೆ ಹಾಗೆ ಎಂದ?
ಚಂದ್ರನಿಗೆ ಬಂದಿದೆ ಸಿಟ್ಟು
ಅದಕ್ಕೆ ಹಾಕಿದ್ದಾನೆ ಮುಖ ಗಂಟು
ಸಿಟ್ಟಿಗೇನು ಕಾರಣ?
ಅಡ್ಡಗಟ್ಟಿದ್ದಾರೆ ವಿನಾಕಾರಣ
ಅಡ್ಡಗಟ್ಟು ಎಂದರೆ?
ಅವನಾಟದಲ್ಲಿ ತೊಂದರೆ !
ಯಾರು ಬಂದವರು ನಡುವೆ ?
ಭೂಮಿ ಬಂದಿದೆ ನಡುವೆ
ಭೂಮಿಯ ನೆರಳು ಚಂದ್ರನ ಮೇಲೆ
ಸಿಟ್ಟಿಗೆ ಕಾರಣ ಇದರ ನೆಲೆ






0 Comments