-ಮಯೂರ ಬಿ ಮಸೂತಿ
ಅಲಾರಾಮಿನ ಸದ್ದಿಲ್ಲದೆ ಎದ್ದೇನಲ್ಲ ಎಂದು ಕಣ್ಣು ತೆರೆದು ನೋಡಿದಾಗ ಆಗಲೇ ಬೆಳಿಗ್ಗೆ10:30 ಆಗಿತ್ತು.ಸೂರ್ಯ ತನ್ನ ಪ್ರಭಾವ ಬೀರಲು ಶುರು ಮಾಡಿ ಬಹಳ ಹೊತ್ತೇ ಆಗಿತ್ತು.ಮನೆಯ ಬಾಗಿಲು ಕಿಟಕಿಗಳನ್ನು ಇನ್ನೂ ತೆರೆಯದೆ ಇದ್ದರು,ಕಿಟಕಿಗಳ ಮಂದ ಗಾಜಿನಿಂದ ಹರಿದ ಬೆಳಕು ಯಾವ ಮಧ್ಯಾಹ್ನದ ಬಿಸಿಲಿಗೂ ಕಡಿಮೆಯಾಗಿರಲಿಲ್ಲ..ಹೇಳಿ ಕೇಳಿ ವಸಂತ ಕಾಲ.ಮುಂಜಾನೆಯ ಏಳು ವರೆಗೆ ಎದ್ದು ನಿದ್ದೆಗಣ್ಣಿನಲ್ಲಿ ಡೋರ್ ಲಾಕ್ ಅನ್ನು ತೆರೆದು ಮನೆಯ ಅಂಗಳದಲ್ಲಿ ಬಿದ್ದ ವಿಶ್ವವಾಣಿ ದಿನಪತ್ರಿಕೆಯನ್ನು ತೆಗೆದುಕೊಂಡು ದಿವಾನದ ಮೇಲೆ ಬಿಸಾಕಿ ಒಲ್ಲದ ಮನಸ್ಸಿನಿಂದ ಬಾಗಿಲು ಹಾಕಿ ಮತ್ತೆ ಮಂಚದ ಮೇಲೆ ಬೋರಲಾಗಿ ಮಲಗಿದ ನೆನಪು.ಗ್ಯಾಸ್ ಹಚ್ಚಿಸಿ ಪಾತ್ರೆಯಲ್ಲಿ ನೀರು ಹಾಕಿ ಒಂದು ಸಣ್ಣ ವಿಳ್ಳೆದೆಲೆಯನ್ನು ಹರಿದು ಹಾಕಿ,ನೀರು ಕುದಿಯುವವರೆಗೂ ಹೆಡ್ಲೈನ್ಸ್ಗಳನು ಓದಿದರೆ ಆಯಿತೆಂದು ಹಾಗೆ ಪತ್ರಿಕೆಯ ಮೇಲೆ ಕಣ್ಣಾಡಿಸಿದೆ ಆಗಲೇ ನೀರು ಸಾಕಷ್ಟು ಕುದ್ದಿದ್ದರಿಂದ ಹಲ್ಲು ಉಜ್ಜಿ ನೀರು ಕುಡಿದು ದಿನ ನಿತ್ಯದ ಕರ್ಮಗಳನ್ನು ಪೂರ್ಣಗೊಳಿಸಿದೆ. ಆಫೀಸಿಗೆ ಹೋಗಲು ತಯಾರಾಗತೊಡಗಿದೆ.
ಇಂದು ನನ್ನ LWD(Last Working Day). ಮುಂದಿನ ತಿಂಗಳು ಬೆಂಚ್ ಲೆಟರ್ ಕೊಟ್ಟು ಆಮೇಲೆ ನನ್ನ ನೋಟಿಸ್ ಪೀರಿಯಡ್ ಶುರುವಾಗುವುದಿತ್ತು.ಎರಡು ದಿನಗಳ ಹಿಂದೆ ಆಫೀಸಿನಿಂದ ಬರುವಾಗ ಅಪರಿಚಿತ ಕರೆಯೊಂದು ಬಂದಿತ್ತು.ಬೆಂಗಳೂರಿನ ವಾಹನಗಳ ಸಂಚಾರವೆಂಬ ಮಹಾ ಸಾಗರದಲ್ಲಿ ತೇಲಿಕೊಂಡು ಬರುತ್ತಿದ್ದ ನನಗೆ ಎರಡು ಮೂರು ಬಾರಿ ಮಿಸ್ ಕಾಲ್ ಆಗಿದ್ದು ಗಮನಕ್ಕೆ ಬಂದಿರಲಿಲ್ಲ.ಬ್ರಿಗೇಡ್ ಮಿಲೇನಿಯಂ ಸಿಗ್ನಲ್ ನಲ್ಲಿ ಜೇಬಿನಿಂದ ಮೊಬೈಲ್ ತೆಗೆದು ನೋಡಿದೆ… ಅರೇ ಅಪರಿಚ ಕರೆ..! ಯಾವುದಾದರೂ ಇಂಟರ್ವ್ಯೂ ಕರೆ ಇರಬಹುದೆಂದು ಕಾಲ್ ಮಾಡಿದೆ. “ಕುಮಾರ್ ನಿಮ್ಮ ಮೀಟಿಂಗ್ ಆಗಲೇ ೫:೩೦ ಗೆ ಇತ್ತು ” ಎಂದು ಉದ್ಗಾರ ಬಂದಿತು..”ಅಂದ ಹಾಗೆ ನೀವು ಯಾರು ಮೇಡಂ..? ಎಂದು ವಿನಮ್ರತೆಯಿಂದ ಕೇಳಿದೆ..ನಾನು H.R ದಿವ್ಯಾ ಎಂದು ಹೇಳಿದಳು.ಸರಿ ಮೇಡಂ ನಾನು ಟ್ರಾಫಿಕ್ ಅಲ್ಲಿ ಇರುವೆ ಮನೆಗೆ ಮುಟ್ಟಿದ ಮೇಲೆ ನಿಮಗೆ ಕಾಲ್ ಮಾಡುವೆ ಎಂದೆ.ಸರಿ ಕುಮಾರ್ ನಿಮ್ಮ ಮೀಟಿಂಗ್ ಅನ್ನು ಏಳು ಗಂಟೆಗೆ reschedule ಮಾಡುತ್ತೇನೆ ಆ ಕಡೆಯಿಂದ ಕರೆ ಮುಗಿಯಿತು.ಯಾಕೋ ಮನದಲ್ಲಿ ತಳಮಳ..ಕೆಂಡವಿಲ್ಲದೆ ಹೊಗೆಯಾಡುವುದಿಲ್ಲ ಕುಮಾರ ಎಂದು ಮನಸು ಮನೆ ಮುಟ್ಟುವವರೆಗೂ ಸಾರಿ ಸಾರಿ ಹೇಳಲತ್ತಿತು.ಮನೆ ತಲುಪುವುದರೊಳಗೆ ಆಗಲೇ ಸಮಯವಾಗಿತ್ತು ಲ್ಯಾಪ್ಟಾಪ್ ತೆರೆದು ಮೀಟಿಂಗ್ ಜಾಯಿನ್ ಆಗಿಬಿಟ್ಟೆ.
ಮೀಟಿಂಗ್ ಶುರು ಆಗುವ ಅರ್ಧ ಘಂಟೆ ಮುಂಚೆ ಮನಸ್ಸನ್ನು ಸಮಾಧಾನ ಪಡಿಸಲು ಗೆಳಯ ಭೋಜನಿಗೆ ಫೋನಾಯಿಸಿದೆ. ಡಿಪ್ಲೊಮಾದಲ್ಲಿ ಜೊತೆಗೆ ಕಲಿತವ,ಆಗಾಗ ನಾನು ಕವಿತೆಗಳನ್ನು ಬರೆಯುತ್ತಿದ್ದ ಕಾರಣ ಕವಿ ಕಾಳಿದಾಸನೆಂದು ತಮಾಷೆ ಮಾಡುತ್ತಿದ್ದ ..ಮತ್ತೆ ನಾನು ಕಾಳಿದಾಸನಾದರೆ ನೀನು ಭೋಜರಾಜನಲ್ಲವೇ ಎಂದು ಅವನನ್ನು ಭೋಜನೆಂದೇ ಕಾಲೇಜು ದಿನಗಳಿಂದ ಕರೆಯುತ್ತಿದ್ದೆ . ಫೋನನ್ನು ಎತ್ತಿದವನೇ ಹೇಳೋ ಮಗಾ ಎಂದು ಗತ್ತಿನಿಂದ ಕೇಳಿದ.ಅವನ ಹಾವ – ಭಾವ ಯಾವಾಗಲೂ ಗತ್ತಿನಿಂದಲೇ ಕೂಡಿರುತ್ತದೆ.ಮಗಾ HR ಮೀಟಿಂಗ್ schedule ಮಾಡಿದಾರೆ ಕಣೋ, ಎಲ್ಲಿ ಅವಳು Fuck off from the company ಎಂದು ಹೇಳಿಬಿಡುತ್ತಾಳೋ ಅಂತ ಭಯವಾಗ್ತಿದೆಯೆಂದು ತಮಾಷೆ ಭಯ ಎರಡನ್ನು ಸೇರಿಸಿ ಹೇಳಿದೆ. ಮಗಾ ಯಾವುದಕ್ಕೂ ನಿನ್ನ ದಿಲ್ ಗಟ್ಟಿ ಮಾಡ್ಕೋ,ಹೊರಗಡೆಗೆ ಎಲ್ಲ ಬರಿ ಇದೇ ನಡೀತಾ ಇದೆ, ಇದೆಲ್ಲಾ ಕಾರ್ಪೊರೇಟ್ ಅಲ್ಲಿ ಸಾಮಾನ್ಯ ಕಣೋ..ಯಾವುದಕ್ಕೂ ಹಠಾತ್ತನೆ ಪ್ರತಿಕ್ರಿಯೆ ನೀಡಬೇಡ,ಮೊದಲು ಅವಳು ಹೇಳೋದನ್ನ ಗಮನವಿಟ್ಟು ಕೇಳಿಸಿಕೋ ಹಾಗೆ ನನಗೆ phone ಮಾಡೋದನ್ನ ಮರಿಬೇಡ ಎಂದು ಹೇಳಿ ಮರೆಯಾದ.
ಕುಮಾರ್ ನೀವು ಕಂಪನಿಗೆ ಐದು ವರ್ಷಗಳಿಂದ ಕೆಲಸ ಮಾಡಿದ್ದೀರಾ ಅದಕ್ಕೆ ಕಂಪನಿ ನಿಮಗೆ ಆಭಾರಿಯಾಗಿರುತ್ತದೆಂದು ಮಾತು ಶುರು ಮಾಡಿದಳು.ಕುರಿಯನ್ನು ಬಲಿ ಕೊಡುವ ಮುಂಚೆ ಚೆನ್ನಾಗಿಯೇ ಮೇಯಿಸುವ ದೃಶ್ಯ ಕಣ್ಣ ಮುಂದೆ ಸಹಜವಾಗಿ ಹರಿದಾಡಲು ಶುರು ಮಾಡಿದವು.ಕುಮಾರ್ 17 ನೇ ಏಪ್ರಿಲ್ ನಿಮ್ಮ ಕೊನೆಯ ಕೆಲಸದ ದಿನವೆಂದು ಹೇಳಿಯೇಬಿಟ್ಟಳು.ನನ್ನ ತಲೆಯ ಸುತ್ತ ಬರಿ ನಕ್ಷತ್ರಗಳಲ್ಲ ಇಡೀ ಬ್ರಹ್ಮಾಂಡವೇ ಸುತ್ತುತ್ತಿರುವಂತೆ ಅನಿಸಿತು.ಆದರೂ ಧೈರ್ಯ ತಂದುಕೊಂಡು ಇಂದು ಏಪ್ರಿಲ್ 14 ಅಂದರೆ ಇನ್ನು ಮೂರು ದಿನಗಳಲ್ಲಿ ನಾನು ಕಂಪನಿಯನ್ನು ತೊರೆಯಬೇಕೆ…?ಎಂದು ಒಣಗಿದ ಗಂಟಲಿನಿಂದ ಧ್ವನಿ ಹೊರಡಿಸಿದೆ.ಅವಳು ಹೌದೆಂದು ಸ್ಟೈಲ್ ಆಗಿ ತಲೆ ಆಡಿಸಿದಳು.ನಾನೇ ಏಕೇ ಎಂದು ಅಳಕುತ್ತಾ ಕೇಳಿದೆ..ಕುಮಾರ್..!!! ಕಂಪನಿಯವರು ವ್ಯವಹಾರದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ.ನಿಮಗೆ ಮೂರು ತಿಂಗಳ ನೋಟಿಸ್ ಅವಧಿಯ ಸಂಬಳವನ್ನು ನೀಡಲಾಗುವುದು.ನೀವು ಹೊರಗಡೆ ಕೆಲಸವನ್ನು ಆರಾಮವಾಗಿ ಹುಡುಕಬಹುದು ಎಂದು ಅರಾಮವಾಗಿಯೇ ಹೇಳಿದಳು.
ನೋಡಿ ಮೇಡಂ ನಿಮಗೆ ನನ್ನ ಪರಿಸ್ಥಿತಿಯನ್ನು ಎರಡು ಆಯಾಮಗಳಲ್ಲಿ ವಿವರಿಸುತ್ತೇನೆ.ಮೊದಲು, ನನ್ನ ಲ್ಯಾಪ್ಟಾಪ್ ಸ್ಕ್ರೀನ್ ಶೇರ್ ಮಾಡಿರುವೆ ನೋಡಿ…ಈಗಲೂ ಕೂಡ ನನಗೆ ಪ್ರಾಜೆಕ್ಟಿನ ಕರೆಗಳು ಸಂದೇಶಗಳು ಬರುತ್ತಿವೆ…ನನ್ನ ಪ್ರಾಜೆಕ್ಟ್ ಮುಗಿದರೂ ಕೂಡ ಸಣ್ಣ ಪುಟ್ಟ ಕೆಲಸಗಳು ಬರುತ್ತಲೇ ಇರುತ್ತವೆ ಮತ್ತೆ ನನ್ನ ಮ್ಯಾನೇಜರ್ ಮೇ 1 ರಿಂದ ನಿನಗೆ ಬೆಂಚ್ ಲೆಟರ್ ಸಿಗುತ್ತದೆ ಮತ್ತು ಅಲ್ಲಿಂದ 90 ದಿನದೊಳಗೆ ಬೇರೆ ಪ್ರಾಜೆಕ್ಟ್ ಹಾಕಲು ನೋಡ್ತೇವೆ ಇಲ್ಲ ನೀನು ಕೂಡ ಹೊರಗಡೆ ಪ್ರಯತ್ನ ಪಡಬಹುದು…ಹಾಗೇನಾದರೂ 90 ದಿನದೊಳಗೆ ಇಲ್ಲಿ ಕೆಲಸ ಸಿಗದಿದ್ದರೆ ನಿನ್ನ ನೋಟಿಸ್ ಪೀರಿಯಡ್ ನ ಕೊನೆಯ ಅಂದರೆ 90 ನೆಯ ದಿನವೇ ನಿನ್ನ ಕೆಲಸದ ಕೊನೆಯ ದಿನವೂ ಕೂಡ ಆಗಿರುತ್ತದೆ ಎಂದು ಎಚ್ಚರಿಸಿದ್ದರು ಎಂದು ಚಾಚು ತಪ್ಪದೆ ಒಂದು ಪದಗಳನ್ನು ಬಿಡದೆ ಅವಳಿಗೆ ಹೇಳಿದೆ. ಇನ್ನು ಎರಡನೇ ಆಯಾಮವೆಂದರೆ ನಾನು ಬ್ಯಾಚುಲರ್ ಹುಡುಗನಲ್ಲ…ನನಗೂ ನನ್ನನ್ನೇ ಅವಲಂಬಿಸಿರುವ ಕುಟುಂಬವಿದೆ..ನನ್ನ ಕುಟುಂಬಕ್ಕೆ ನಾನೊಬ್ಬನೇ ಆದಾಯದ ಮೂಲವೆಂದು ವಾಸ್ತವದ ದಿವ್ಯ ದರ್ಶನ ಮಾಡಿಸಲು ಪರದಾಡಿದೆ.
ಆಯಾಮಗಳು ವಾಸ್ತವಗಳನ್ನ ಮಡಿಸಿ ನಿನ್ನ ಕಿಸೆಯಲ್ಲಿ ಇಟ್ಟುಕೋ ಎನ್ನುವಂತೆ This is Business Decision ಕುಮಾರ್ ಅಂತ ತನ್ನ ಮಾತಿನಲ್ಲಿಯೇ ಕೆಲಸದಿಂದ ಆಚೆ ತಳ್ಳಿದ್ದಳು.ಕಂಪನಿಯಿಂದ ಹೊರ ಹೋಗಲು ನಾನು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿ ನಾನು ಸಕ್ರಿಯವಾಗಿ ಎಡೆಬಿಡದೆ ಪಾಲ್ಗೊಂಡಿದ್ದ ಪಂಚವಾರ್ಷಿಕ ಯೋಜನೆಗೆ ಅಂದರೆ ಐದು ವರ್ಷದ ಕೆಲಸದ ಅನುಭವಕ್ಕೆ ಕೆಲವೇ ನಿಮಿಷದಲ್ಲಿ ಎಳ್ಳು ನೀರು ಬಿಟ್ಟಿದ್ದಳು ರಾಕ್ಷಸಿ. ಏನು ಮಾಡುವುದು ಅವಳಾದರೋ ತನ್ನ ಕೆಲಸ ಮಾಡುತ್ತಿದ್ದಾಳೆ ಅಂದುಕೊಂಡು ನನ್ನ ಮನದ ದಡಕ್ಕೆ ಅಪ್ಪಳಿಸುತ್ತಿದ್ದ ಭಾವನೆಯ ಅಲೆಗಳನ್ನು ಹತೋಟಿಗೆ ತರಲು ಪ್ರಯತ್ನಿಸಿ ಅಂತರ್ಮುಖಿಯಾದೆ.ಆದರೂ ನನ್ನ ಭಾವನೆಗಳು ತಾವು ಬಂದು ಅಪ್ಪಳಿಸಿ ಹೋದ ಕುರುಹನ್ನು ನನ್ನ ಕಣ್ಣಂಚಿನಲಿ ಹನಿ ಹನಿಯಾಗಿ ಜಿನುಗಿಸಿದವು.
ಮತ್ತೊಮ್ಮೆ ಆಫೀಸಿನ ಲ್ಯಾಪ್ಟಾಪ್ ತೆರೆದು ಏನಾದರೂ ಮೇಲ್ ಚೆಕ್ ಮಾಡುವುದು ಇದೆಯೆ ಎಂದು ಒಮ್ಮೆ ಪರಿಶೀಲಿಸಿ ಆಫೀಸಿನಿನ ಬ್ಯಾಗ್ನಿಂದ ನನ್ನ ಸ್ವಂತ ಮೌಸ್ ಮತ್ತು Bluetooth Headset ಗಳನ್ನ ತೆಗೆದು ಕೇವಲ ಕಂಪನಿಯ ಸಾಮಾನುಗಳನ್ನು ಬ್ಯಾಗ್ ಅಲ್ಲಿ ಇಟ್ಟು ಹೊರಡಲುಸಜ್ಜಾದೆ.ಮತ್ತೆ ದಾರಿಯ ಮದ್ಯದಲ್ಲಿ HR ಕೆರೆ ಮಾಡಿ,ಕುಮಾರ್ ನಿಮ್ಮ ಲ್ಯಾಪ್ಟಾಪ್ ಹಿಂತಿರುಗಿಸಲು ನೀವು ಟಿಕೆಟ್ ರೈಸ್ ಮಾಡಬೇಕು ಕಂಪನಿಯ ವೆಬ್ಸೈಟ್ ಅಲ್ಲಿ ಎಂದು ರಾಗ ಹಾಡಿದಳು.ನೀನು ನೀಡಿದ ಅನಿರೀಕ್ಷಿತ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ ಮತ್ತೆ ಈ ಕೆಲಸಕ್ಕೆ ಬಾರದ ಮೀನಮೇಷಗಳು ಬೇರೆ.ಕಂಪನಿಯನ್ನು ತೊರೆದು ಬಿಡು ಎಂದಮೇಲೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಕೂಡ ಅವರೇ ನಿರ್ವಹಿಸಬೇಕು.ಯಾವನು ತಾನೆ ಎರಡು ಮೂರು ದಿನಗಳ ನಂತರ ನೀನು ಬರಬೇಡ ಅಂತ ಹೇಳುತ್ತಾನೆ. ಹೇಳಿ ಒಪ್ಪಿಸಿದ ಮೇಲೂ ಕೂಡ ಉದ್ಯೋಗಿಯಾದವನು ಸಹಜವಾಗಿಯೇ ದುಃಖದಲ್ಲಿ ಇರುತ್ತಾನೆ.ಅಂತಹ ಸ್ಥಿತಿಯಲ್ಲಿ ಇವರು ಇನ್ನೂ ಅದನ್ನ ಮಾಡಿ ಇದನ್ನ ಮಾಡಿ ಎನ್ನುವುದು ಎಷ್ಟು ಸಮಂಜಸ ಎಂದು ಮನದಲ್ಲಿಯೇ ಗೊಣಗುತ್ತಾ ನನ್ನ ಏಕಾಗ್ರತೆಗೆ ಭಂಗ ಬರದಂತೆ ಗಾಡಿಯನ್ನು ಓಡಿಸುತ್ತಿದ್ದೆ. ಪ್ರತಿ ಬಾರಿಯೂ ಆಫೀಸಿಗೆ ಹೋಗುವ ಹುರುಪು ಇಂದು ಇರಲಿಲ್ಲ..ಯಾವ ಸಹೋದ್ಯೋಗಿಯ ಮುಖವನ್ನು ನೋಡುವ ಮನಸ್ಸಿರಲಿಲ್ಲ..ಹೋಗಿ ಕೆಲಸ ಮುಗಿಸಿಕೊಂಡು ಬಂದರೆ ಸಾಕಾಗಿತ್ತು.ಅಂತು ಭಾರವಾದ ಮನಸ್ಸಿಂದ ಆಫೀಸಿನ ಗೇಟ್ ತಲುಪಿದೆ.ಒಳಗೆ ಹೋಗುವಾಗ ಕೊರಳಲ್ಲಿದ್ದ ID ಕಾರ್ಡ್ ಹೊರಗೆ ಬರುವಾಗ ಇರುವುದಿಲ್ಲ ಬ್ಯಾಗ್ ಕೂಡ ಇರುವುದಿಲ್ಲ ಎಂಬ ಭಾದೆ.ಪ್ರತಿಯೊಬ್ಬ IT ಉದ್ಯೋಗಿಗು ತನ್ನ ಕಂಪನಿಯ ಐಡಿ ಕಾರ್ಡ್ ಎಂಬುದು ಮಂಗಳಸೂತ್ರಕ್ಕೆ ಸಮಾನ.ಒಂದು ಕಾಫಿ ಸಿಗರೇಟೆಗಾಗಿ..ಇಲ್ಲ ಬೇರೆ ಕೊಠಡಿ.. ಫ್ಲೋರ್ ಗಳಿಗೆ ಹೋಗಬೇಕಾದರೆ ಅದಿಲ್ಲದೇ ಯಾವ ಕೆಲಸವು ಆಗದು..ಕಾರ್ಡ್ ಇಲ್ಲದೆ ಉದ್ಯೋಗಿಯ ಅಸ್ತಿತ್ವವೇ ಸುಳ್ಳು ಎಂಬ ಕಟು ಸತ್ಯವು ನನ್ನ ಐದು ವರುಷದ Corporate ಅನುಭವದಿಂದ ಮನವರಿಕೆಯಾಗಿತ್ತು.
ಗಾಡಿಯನ್ನು ಬೇಸ್ಮೆಂಟ್ ನಲ್ಲಿ ಪಾರ್ಕ್ ಮಾಡಿ,Lift ಹತ್ತಿರ ಬಂದು ನಾಲ್ಕನೇ ಫ್ಲೋರಿನ ಗುಂಡಿಯನ್ನು ಒತ್ತಿದೆ.ನಿಜ ಹೇಳಬೇಕೆಂದರೆ ನಾನು ಕೆಲಸ ಮಾಡುವುದು ಐದನೇ ಮಹಡಿ ಆದರೆ ಅಲ್ಲೊಂದು IT ತಂಡದ ಜೊತೆ ಟಿಕೆಟ್ ರೈಸ್ ಮಾಡುವ ಕೆಲಸಇರುವ ಕಾರಣಕ್ಕೆ ಅಲ್ಲಿಗೆ ಪ್ರಯಾಣ ಶುರು ಮಾಡಿದೆ ಹಾಗೆ ಮುಂಚೆ ನಾನು ಮಾಡುತ್ತಿದ್ದ ಹಳೆಯ ಪ್ರಾಜೆಕ್ಟ್ ನಾ ಮಹಡಿ ಕೂಡ ಇದೇ ಆಗಿತ್ತು.IT ತಂಡದ ವಿಭಾಗಕ್ಕೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ನಡೆದೆ.ದಾರಿಯಲ್ಲೇ ನಾನು ಮುಂಚೆ ಕುಳಿತುಕೊಳ್ಳುತ್ತಿದ್ದ ಕ್ಯಾಬಿನ್ ಅನ್ನು ಕಳ್ಳ ಬೆಕ್ಕು ಹಾಲನ್ನು ಕದ್ದು ಕುಡಿಯುವ ಮುಂಚೆ ಒಂದು ಬಾರಿ ತೆರೆದ ಕಿಟಿಕಿಯಿಂದ ಇಣುಕಿ ನೋಡುವ ಹಾಗೆ ನೋಡಿ ಮೆಲ್ಲಗೆ ತಲೆ ಬಗ್ಗಿಸಿ ದಾಪುಗೋಲು ಹಾಕಿದೆ.ಲ್ಯಾಪ್ಟಾಪ್ ತೆಗೆದು ಟಿಕೆಟ್ ರೈಸ್ ಮಾಡಿ ಇನ್ನೇನು ಹೊರಡಬೇಕು ಅಷ್ಟರಲ್ಲಿ ಸಹೋದ್ಯೋಗಿ ಸಾತ್ವಿಕ್ ಕರೆ ಮಾಡಿ ಎಲ್ಲಿದ್ದೀರಿ ಸರ್ ಎಂದು ಕೇಳಿಯೇ ಬಿಟ್ಟ..ಬೇರೆ ದಾರಿಯಿಲ್ಲದೆ ನಿಮ್ಮ ಮಹಡಿ ಅಲ್ಲಿಯೇ ಇದ್ದೇನೆ ಒಂದು ಚಿಕ್ಕ ಕೆಲಸವಿತ್ತೆಂದು ಕಸಿವಿಸಿಯಿಂದ ಉತ್ತರಿಸಿದೆ. ಸರಿ ಸರ್ ಮತ್ತೆ ಐದನೇ ಫ್ಲೋರಿಗೆ ಬನ್ನಿ ಅಲ್ಲಿಯೇ ಊಟ ಮಾಡುತ್ತಾ ಮಾತನಾಡೋಣವೆಂದ.ನಿಜ ಹೇಳಬೇಕೆಂದರೆ ಯಾರನ್ನು ಭೇಟಿಯಾಗುವ ಇಚ್ಚೆಯಿರಲಿಲ್ಲ.ಲ್ಯಾಪ್ಟಾಪ್ ಮತ್ತು ID ಕಾರ್ಡನ್ನು ಕೊಟ್ಟು ಅಲ್ಲಿಂದ ಕಳಚಿಕೊಂಡರೆ ಸಾಕು ಎಂದುಕೊಂಡಿದ್ದೆ…ಆದರೆ ಐದು ವರ್ಷ ಕಳೆದ ಸಮಯ ಸಂಬಂಧಗಳು ಹೇಗೆ ಅಷ್ಟು ಸುಲಭವಾಗಿ ಬಿಟ್ಟು ಕೊಡುತ್ತವೆ ಹೇಳಿ…?ಕುಳಿತು ಊಟ ಮಾಡಲು ಶುರು ಮಾಡಿದೆವು..ಏನು ಸರ್ ಇದು ನಿಜಕ್ಕೂ ಶಾಕಿಂಗ್.. ಇಂದು ನಿಮಗೆ ಹೋಗಿ ಅಂದಿದ್ದಾರೆ..ಯಾರಿಗೆ ಗೊತ್ತು ನಾಳೆ ನಮಗೆ ಹೋಗು ಎನ್ನಬಹುದು ಎಂದು ಸಾತ್ವಿಕ್ ನನಗಿಂತ ಹೆಚ್ಚು ಚಿಂತಕ್ರಾಂತನಾದ..ಕೆಫೆಟೇರಿಯದಲ್ಲಿ ಅಲ್ಲಲ್ಲಿ ಓಡಾಡುತ್ತಿದ್ದ ಸಹೋದ್ಯೋಗಿಗಳನ್ನು ನೋಡಿಯೂ ನೋಡದ ಹಾಗೆ ತಲೆ ಮರೆಸಿಕೊಂಡೆ.ಸರ್ ಬೇರೆಯವರನ್ನು ಇಲ್ಲಿಯೇ ಕರೆಸುತ್ತೇನೆ..ಒಳ್ಳೆಯ Bonding ಇಟ್ಟುಕೊಳ್ಳಬೇಕು ಸರ್ ಎಲ್ಲರ ಜೊತೆಗೆ..ಯಾರು ಯಾವಾಗ ಸಹಾಯಕ್ಕೆ ಬರುತ್ತಾರೆ ಹೇಳಲಾಗುವುದಿಲ್ಲ ಎಂದು ಮತ್ತೊಂದಿಷ್ಟು ಜನರನ್ನು ಕರೆಸಿದ..ಬಹುತೇಕ ಕಂಪನಿಗಳು ಧಿಡೀರನೆ ಉದ್ಯೋಗಿಗಳನ್ನು ತೆಗೆಯುವ ವಿಧಾನವನ್ನೇ ಅನುಸರಿಸುತ್ತಿವೆ..ಇದಕ್ಕೆಲ್ಲ ಕಾರಣ Layoff ಮಾಡಿದ ದುಡ್ಡನ್ನು AI ತಂತ್ರಜ್ಞಾನದ ಮೇಲೆ ಸುರಿಯುತ್ತಾರೆ..ಅಮೆರಿಕ ಇರಾನ್ ನಡುವಿನ ಯುದ್ಧದ ಪರಿಣಾಮವು ಆಗಿರಬಹುದೆಂಬ ಗಂಭೀರ ಚರ್ಚೆಗಳು ನಡೆದವು.
ಈ ಚರ್ಚೆಗಳ ಮಧ್ಯೆ ನನಗೆ ಮನೆಯಿಂದ ಅಣ್ಣನ ಕರೆ ಬಂದಿತು.ಅವನ ಧ್ವನಿಯಲ್ಲಿ ಸಣ್ಣನೆಯ ನಡುಕವಿತ್ತು.. ಕುಮಾರ್ ಆಫೀಸ್ ಅಲ್ಲಿ ಇರುವೆಯ..?ಎಂದು ಕೇಳಿದ.ಹೌದು ಅಣ್ಣಾ ಏನಾಗಬೇಕೆಂದು ಕೇಳಿದೆ.ನೋಡು ನಮ್ಮ ದೊಡ್ಡಣ್ಣ ಅಪ್ಪನನ್ನು ಬಳ್ಳಾರಿಯಿಂದ ಆಂಬುಲೆನ್ಸ್ ಅಲ್ಲಿ ಈ ಸಂಜೆ ಬೆಂಗಳೂರಿಗೆ ಕರೆದುಕೊಂಡು ಬರುತ್ತಾರೆ,ನೀನು ಇಂದು ಮತ್ತೆ ನಾಳೆ ಹೇಗಾದರೂ ಮಾಡಿ ಸ್ವಲ್ಪ ಸಂಭಾಳಿಸು.ಭಾನುವಾರ ಬೆಳಿಗ್ಗೆ ನಾನು ಅಲ್ಲಿ ಬರುತ್ತೇನೆ ಎಂದು ಅವಸರದಲ್ಲಿ ಹೇಳಿದ.ಇದೇನಿದು ಗಾಯದ ಮೇಲೆ ಬರೆ ಎಳೆದ ಹಾಗಾಯಿತಲ್ಲ ಎಂದು ಚಿಂತೆಗೀಡಾದೆ.ನೆನ್ನೆ ಇನ್ನು ಅಪ್ಪ ತಾವು ಬರೆದ ಕವಿತೆಯನ್ನು ವಾಟ್ಸಾಪ್ ಅಲ್ಲಿ ಕಳುಹಿಸಿದ್ದರು,ಆಗ ನಾನು ಕವಿತೆಯೇನೋ ಚೆನ್ನಾಗಿದೆ ಆದರೆ ಇನ್ನೂ ದೊಡ್ಡದಾಗಿದ್ದರೆ ಚೆನ್ನಾಗಿತ್ತು ಎಂದು ಉತ್ತರಿಸಿದ್ದೆ.ಅಪ್ಪ ಮೆಸೇಜ್ ಅನ್ನು ಮಾಡಿದ್ದು ನೋಡಿದರೆ ಎಲ್ಲಾ ಸೌಖ್ಯ ಎಂದು ಭಾವಿಸಿದ್ದೆ.ನಾನು ಕೆಲಸ ಕಳೆದುಕೊಂಡ ವಿಷಯವನ್ನು ಹೇಳುವುದಾಗಿ ನಿರ್ಧರಿಸಿ ಅರ್ಧ ಗಂಟೆಯೊಳಗೆ ಅಣ್ಣನ ಕರೆ ಬಂದಿತ್ತು.ಬೆಂಗಳೂರಿನಿಂದ ಅಮ್ಮನ ಮಂಡಿ ನೋವಿನ ಶಸ್ತ್ರ ಚಿಕಿತ್ಸೆಯನ್ನು ಮುಗಿಸಿಕೊಂಡು ಊರಿಗೆ ಹೊದಾಗಿನಿಂದ ಅಪ್ಪನಿಗೆ ನಿಶ್ಶಕ್ತಿ…ಕಾಲುಗಳಲ್ಲಿ ಶಕ್ತಿಯಿಲ್ಲವೆಂದು ಹೇಳುತ್ತಿದ್ದರು.ಮನೆಯ ಹತ್ತಿರವಿದ್ದ ಆಸ್ಪತ್ರೆಗೇನೋ ಕರೆದುಕೊಂಡು ಹೋಗಿದ್ದೆ..ಚಿಕಿತ್ಸೆಯ ಒಂದೆರಡು ದಿನ ಗುಣ ಮುಖರಾಗಿದ್ದರು ಆದರೆ ಮತ್ತೆ ಅದೇ ತೊಂದರೆ ಶುರುವಾಯಿತು..ತದನಂತರ ಅಪ್ಪ ಅಮ್ಮ ಊರಿಗೆ ಹೊರಟು ಹೋಗಿದ್ದರು.
ಊರಲ್ಲಿ ಕೆಲವು ದಿನಗಳ ನಂತರ ಮತ್ತೆ ಅಪ್ಪನ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ದೊಡ್ಡಣ್ಣನಿಗೆ ಸಂದೇಹ ಬಂದು ಚಿಕಿತ್ಸೆಗೆಂದು ಬಳ್ಳಾರಿಯಲ್ಲಿರುವ ಹೃದಯಧಾಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ.ECG ಪರೀಕ್ಷೆ ಮಾಡಿದಾಗ ಏರುಪೇರು ಕಂಡು ಬಂದು ಅಪ್ಪನನ್ನು ಅಲ್ಲಿಯೇ ಒಂದು ದಿನ ಸೇರಿಸಿಕೊಂಡರು. ನಾಲ್ಕೂವರೆ ವರ್ಷದ ಕೆಳಗೆ ಇದೇ ರೀತಿ ಅಪ್ಪನಿಗೆ ಇನ್ನೂ ತೀವ್ರವಾದ ಆಘಾತವಾಗಿತ್ತು ಆವಾಗ ಇದೇ ಆಸ್ಪತ್ರೆಯಲ್ಲಿ ಹೃದಯದ ನಾಳದಲ್ಲಿ ಉಂಟಾದ Blockage ತೆಗೆಯಲು Stent ಹಾಕಲಾಗಿತ್ತು. ಈಗ ಅದೇ ಸ್ಟೆಂಟ್ ಮುಂದೆ ಮತ್ತೆ Blockage ಆಗಿದೆ..ಯಾವುದಕ್ಕೂ ಒಮ್ಮೆ ಖಚಿತಪಡಿಸಿಕೊಳ್ಳಲು Angiogram ಮಾಡಿ ಮುಂದಿನ ಚಿಕಿತ್ಸೆ ಶುರು ಮಾಡುವುದಾಗಿ ಅಣ್ಣನಿಗೆ ವೈದ್ಯರು ಆಶ್ವಾಸನೆ ನೀಡಿದ್ದರು.ಆದರೆ ECG ಏರಿಳಿತದ ಕಾರಣದಿಂದ ವೈದ್ಯರು ಚಿಕಿತ್ಸೆಯನ್ನು ಶುರು ಮಾಡಬೇಕೇ ಬೇಡವೆಂಬ ದ್ವಂದದಲ್ಲಿದ್ದರು,ಕೊನೆಗೆ ಬೆಂಗಳೂರಿನ Sacred Heart ಸರ್ಕಾರಿ ಆಸ್ಪತ್ರೆಯಲ್ಲಿ ಕಾಣಬೇಕಾದ ವೈದ್ಯರ ಮಾಹಿತಿಯನ್ನು ನೀಡಿ ಆಂಬುಲೆನ್ಸ್ ಅಲ್ಲಿ ತುರ್ತಾಗಿ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರು.ಈ ಪರಿಸ್ಥಿಯಲ್ಲಿ ಅಪ್ಪನಿಗೆ ನಾನು ಕೆಲಸ ಕಳೆದುಕೊಂಡ ವಿಷಯ ಹೇಳುವುದು… ಕನಸಿನಲ್ಲೂ ಊಹಿಸಿಕೊಳ್ಳಲಾಗುವುದಿಲ್ಲ…
ಸಹೋದ್ಯೋಗಿಗಳೊಂದಿಗೆ ಸವಿ ಸವಿ ನೆನಪು ಸಾವಿರ ನೆನಪಿನ ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆ. ಐದು ವರುಷಗಳಲ್ಲಿ ಟೀಂ ಲಂಚ್ ಔಟಿಂಗ್ ಪಾಟ್ಲಕ್ ಗಳಲ್ಲಿ ತೆಗೆಸಿಕೊಂಡ ಫೋಟೋಗಳು ಅಷ್ಟಾಗಿ ಹತ್ತಿರವಾಗಿರಲಿಲ್ಲ ಆದರೆ ಇಂದು ತೆಗೆಸಿಕೊಂಡ ಫೋಟೋಗಳು ಅದೇಕೋ ಮನಸಿಗೆ ಬಹಳ ಖಾಸಗಿಯೆನಿಸಿದವು.. ಎಲ್ಲರೂ ನನ್ನನು ಲಿಫ್ಟ್ ವರೆಗೆ ಬಂದು ಬೀಳ್ಕೊಟ್ಟು ಭಾರವಾದ ಮನಸ್ಸಿನಿಂದ ತಮ್ಮ ಕೊಠಡಿಗೆ ಮರಳಿದರು. ಮನಸ್ಸಿನ ದುಃಖದ ಸಾಗರದ ಸುಳಿಯಲ್ಲಿ ಸಿಲುಕಿ,ಇತ್ತ ಮುಳುಗದೆ ಹೊರ ಬರದೆ ನಿರಂತರವಾಗಿ ಸುತ್ತುತ್ತ ನೊಂದರು ಮನಸನ್ನು ಬೇರೆ ವಿಚಾರಗಳಿಗೆ ಒಡ್ಡಿ ಗಾಡಿಯನ್ನು ಬೇಸ್ಮೆಂಟ್ ನಿಂದ ತೆಗೆದು ಮನೆಯ ದಾರಿ ಹಿಡಿದುಬಿಟ್ಟೆ.
ಮನೆ ತಲುಪಿದ ಮೇಲೆ ನೀರಿನಲ್ಲಿ ಬಿಂದಿಗೆಯನ್ನು ಮುಳುಗಿಸಿದಾಗ ಸದ್ದು ಮಾಡುತ್ತ ಬರುವ ಗುಳ್ಳೆಯಂತೆ ಮೊಬೈಲ್ ಅಲ್ಲಿ ನೋಟಿಫಿಕೇಷನ್ ಒಂದು ಚಂಗನೆ ಜಿಗಿದು ಪರದೆಯ ಮೇಲೆ ಕಾಣಿಸಿತು.”ಕುಮಾರ್ ನೀವು ಯಶಸ್ವಿಯಾಗಿ ಇನ್ನರ್ ವೆಲ್ಬಿಂಗ್ ನ ಆರು ಹಂತಗಳನ್ನು ಮುಗಿಸಿದ್ದೀರಿ..ನಾಳಿನ ಏಳನೇ ಹಂತದ ತಯಾರಿಗೆ ದಯವಿಟ್ಟು ಕೆಳಕಂಡ ನಿಯಮಗಳನ್ನು ಪಾಲಿಸಿ ” ಎಂಬ ಸಂದೇಶವನ್ನು ಓದಿ ಮುಗಿಸಿದೆ.ಕೆಲವು ದಿನಗಳ ಹಿಂದೆ Youtube ವಿಡಿಯೋ ಗಳನ್ನು ನೋಡುವಾಗ ಪ್ರಖ್ಯಾತ ಅಧ್ಯಾತ್ಮಿಕ ಗುರುಗಳೊಬ್ಬರ ಸತ್ಸಂಗದ ಜಾಹೀರಾತನ್ನು ನೋಡಿದ್ದೆ ಹಾಗೆ ಗೆಳಯ ಭೋಜನ ಸಲಹೆಯ ಮೇರೆಗೆ ಈ Online ಕಾರ್ಯಕ್ರಮವನ್ನು ಸೇರಿದ್ದೆ.ಇದನ್ನು ಆಯ್ಕೆ ಮಾಡಿಕೊಳ್ಳಲು ಇನ್ನೊಂದು ಪ್ರಮುಖ ಕಾರಣವೆಂದರೆ ಅವರು ನಿಗದಿಪಡಿಸಿದ ಸಮಯದಲ್ಲಿ ಈ ಆಧ್ಯಾತ್ಮಿಕ ತರಬೇತಿಯನ್ನು ಮುಗಿಸಿದರೆ ನಾವು ಪಾವತಿಸಿದ ಹಣವನ್ನು ಸಂಸ್ಥೆಯವರು ಮರುಪಾವತಿಸುವುದಾಗಿ ನಿಯಮಗಳಲ್ಲಿ ಸೂಚಿಸಿದ್ದರು. ನಾನು ಆಗಲೇ ಅವರು ಹೇಳಿದ ಆರು ಹಂತಗಳನ್ನು ಚಾಚು ತಪ್ಪದೆ ಮುಗಿಸಿದ್ದೆ.ಏಳನೇ ಹಂತಕ್ಕೆ ಅವರು ನಿಗಧಿಪಡಿಸಿದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಆ ದಿನದಂದು ಗುರುಗಳೊಬ್ಬರು ಏಳನೇ ಹಂತವನ್ನು ಮುಗಿಸಲು ಬೇಕಾದ ಮಾರ್ಗದರ್ಶನವನ್ನು ನೀಡುತ್ತಿದ್ದರು.
ಆಫೀಸಿನ ಒತ್ತಡವನ್ನು ನಿಯಂತ್ರಿಸಲು,ಜೀವನವನ್ನು ಒಳ್ಳೆಯ ಮಾರ್ಗದಲ್ಲಿ ನಿರ್ವಹಿಸಲು ಗೆಳೆಯ ಭೋಜ ಜಗದ್ಗುರುಗಳ 16 ನಿಮಿಷಗಳ ಶಾಂತಿ ಕ್ರಿಯೆಯನ್ನು ನೋಡಿ ದಿನಕ್ಕೆ ಎರೆಡು ಬಾರಿ ಮಾಡುವುದನ್ನು ರೂಢಿ ಮಾಡಿಕೊಳ್ಳಲು ಹೇಳಿದ್ದ. ದಿನಕ್ಕೆ ಎರೆಡು ಬಾರಿ ಆಗದಿದ್ದರೂ ಕನಿಷ್ಠ ಪಕ್ಷ ಒಂದು ಬಾರಿಯಾದರೂ ಮಾಡುವುದನ್ನು ಕೆಲ ದಿನಗಳು ರೂಢಿಸಿಕೊಂಡಿದ್ದೆ.ಪೂರ್ವ ಡಿಕ್ಕಿನಕಡೆಗೆ ಕುಳಿತುಕೊಂಡು ಕಣ್ಣುಮುಚ್ಚಿಕೊಂಡು ನಾನು ಶರೀರವಲ್ಲ..ನಾನು ಮನಸ್ಸು ಅಲ್ಲ..ಎಂಬ ವಾಕ್ಯವನ್ನುಧೀರ್ಘವಾದ ಉಚ್ವಾಸ ನಿಚ್ವಾಸದೊಂದಿಗೆ ಮನನ ಮಾಡಿಕೊಳ್ಳುವುದು ಹಾಗೂ ಕ್ರಿಯೆಯಲ್ಲಿ ಬರುವ ಕೊಳಲಿನ ನಿನಾದ ಮತ್ತು ಮಂತ್ರವನ್ನು ಕೇಳುವುದು ಮೊದಲು ಒಗ್ಗಲಿಲ್ಲ..ಆದರೆ ಬರು ಬರುತ್ತಾ ದೇಹ ಮನಸ್ಸು ಹೊಂದಿಕೊಳ್ಳತೊಡಗಿತು…ಮನನಸ್ಸು ತಕ್ಕ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆ ಎಂಬ ಅನುಭವ ಕೂಡ ಆಗತೊಡಗಿತ್ತು.ಈ ಕ್ರಿಯೆಗೆ ಹೊಂದಿಕೊಂಡ ನನಗೆ ಈ ಸಂಸ್ಥೆಯವರ Inner wellbeing ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಬಹಳ ಹೊತ್ತು ಹಿಡಿಯಲಿಲ್ಲ ಹಾಗೆ ಗೆಳಯ ಕೂಡ ಈ ಸಾಧನವನ್ನು ಬಹಳ ವರುಷಗಳಿಂದ ರೂಢಿಸಿಕೊಂಡಿದ್ದ ಮತ್ತು ನನ್ನ ಜೀವನಕ್ಕೂ ಕೂಡ ಇದು ಔಚಿತ್ಯ ಪೂರ್ಣವಾದದ್ದೆಂದು ಗ್ರೀನ್ ಸಿಗ್ನಲ್ ನೀಡಿದ್ದ ಆದರೆ ಏಳನೇ ಹಂತವನ್ನು ಮುಗಿಸಲು ಇನ್ನೂ ಯೋಗ ಕೂಡಿ ಬಂದಿರಲಿಲ್ಲವೋ ಏನೋ..?ನಿಗದಿಪಡಿಸಿದ ದಿನಾಂಕದಂದು ತುರ್ತು ಪರಿಸ್ಥಿತಿಗಳು ಎದುರಾಗಿದ್ದವು..
ಇನ್ನೊಬ್ಬ ಗೆಳೆಯ ವಲ್ಲಭ ನನ್ನ ಅನಿರೀಕ್ಷಿತ ನಿರುದ್ಯೋಗ ಪರಿಸ್ಥಿಗೆ ಮನನೊಂದು ತನಗೆ ಬಂದ interview ಕರೆಯನ್ನು ನನಗೆ schedule ಮಾಡಿಸಿದ್ದ..ಏನು ಇಲ್ಲಾ ಬ್ರೋ ಚೆನ್ನಾಗಿ ತಯಾರಿ ಮಾಡ್ಕೊಳಿ..ಇಪ್ಪತ್ತು ಹುದ್ದೆಗಳಿವೆಯಂತೆ…ಅವರ ಹೆಚ್ಚಿನ ಆದ್ಯತೆ ಕೌಶಲಕ್ಕಿಂತ ಮಾತುಗಾರಿಗೆ ಮತ್ತು ನಿರ್ವಹಣೆಗಂತೆ ಎಂದು ನನ್ನ ದುಃಖವನ್ನು ತನ್ನ ದುಃಖವೆಂದು ಭಾವಿಸಿ ಸಂದರ್ಶನಕ್ಕೆ ಹೋಗಲು ಹುರಿದುಂಬಿಸಿದ್ದ. ಈ ಎರಡು ಕಾರಣಗಳಿಂದ ಏಳನೇ ಹಂತವನ್ನು ಮುಗಿಸಲು ದಿನಾಂಕವನ್ನು ಮುಂದೂಡಲು ನನ್ನ ತರಬೇತುದಾರರಿಗೆ ವಿನಂತಿಸಿಕೊಂಡಿದ್ದೆ. ನೀವು ಅಪ್ಲಿಕೇಶನ್ ಅಲ್ಲಿ ಹೋಗಿ ನಿಮ್ಮ ಮುಂದಿನ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬಹುದು ಆದರೆ ಅವರು ನಿಗದಿಪಡಿಸಿದ ದಿನಾಂಕದಂದು ಮುಗಿಯಲಿಲ್ಲವೆಂದರೆ ನಿಮ್ಮ ಹಣ ಮರುಪಾವತಿಸಲಾಗುವುದಿಲ್ಲವೆಂದು ಎಚ್ಚರಿಸಿದ್ದರು. ನಾನು ಪರವಾಗಿಲ್ಲ…ಗುರುದಕ್ಷಿಣೆ ನೀಡಿದ್ದೇನೆಂದು ಅಂದುಕೊಂಡರಾಯಿತೆಂದು ಮುಂದಿನ ದಿನಾಂಕವನ್ನು ನಿಗದಿಪಡಿಸಿಕೊಂಡೆ.
ಈ ಎರಡು ತುರ್ತು ಪರಿಸ್ಥಿಗಳಲ್ಲಿ, ಬಳ್ಳಾರಿಯಿಂದ ಬೆಂಗಳೂರಿಗೆ ಇಂದು ರಾತ್ರಿ ಅಪ್ಪನನ್ನು ಆಸ್ಪತ್ರೆಗೆ ಸೇರಿಸಲು ಬರುವ ನನ್ನ ಅಣ್ಣನ ಜೊತೆ ಕೈ ಜೋಡಿಸುವುದಾಗಿತ್ತೆ ಹೊರತು ಇಂಟರ್ವ್ಯೂ ಹಾಜರು ಮಾಡುವುದಾಗಿರಲಿಲ್ಲ ಏಕೆಂದರೆ interview ಮತ್ತೆ ಕೊಡಬಹುದು ಆದರೆ ಅಪ್ಪನ ಆರೋಗ್ಯ ನಮ್ಮ ಕುಟುಂಬದ ಉಸಿರಾಗಿತ್ತು.ಅಣ್ಣ ಕರೆದುಕೊಂಡು ಬರುವುದರೊಳಗೆ ಒಂದು ಸಣ್ಣ ನಿದ್ದೆ ಮಾಡಿಬಿಡೋಡೋಣವೆಂದು ಬೇಗನೆ ಊಟ ಮಾಡಿ ಮಲಗಿಕೊಂಡೆ.ಅಣ್ಣನಿಗೆ ಮೊದಲೇ ಹೇಳಿದ್ದೆ ನೀವು ಬೆಂಗಳೂರಿನ ಹತ್ತಿರವಿರುವಾಗ ಒಂದು ಕರೆ ಮಾಡೆಂದು.ಅಣ್ಣನ Misscall ಆಗಿತ್ತು ಮೊಬೈಲ್ನಲ್ಲಿ .. ಎಲ್ಲಿ ಇವರು ಆಸ್ಪತ್ರೆ ತಲುಪಿದರೋ ಎಂದು ಗಾಭರಿಯಲ್ಲಿ ವಾಪಸ್ ಕರೆ ಮಾಡಿದೆ…ಅಣ್ಣ ತುಸು ಕೋಪದಲ್ಲಿ ಏನೋ ಕಾಲ್ ಎತ್ತುತ್ತಿಲ್ಲ..ನಾವು ಆಗಲೇ ಬೆಂಗಳೂರು ಒಳಗಡೆ ಬಂದಿದ್ದೇವೆ.ಇನ್ನೂ ಹತ್ತು ಕಿಲೋಮೀಟರ್ ಇದೇ ಎಂದ.ಆಯ್ತು ಮನೆಯಿಂದ ನನಗೇನು ಬಹಳ ದೂರವಾಗುವುದಿಲ್ಲವೆಂದು ಹದಿನೈದು ನಿಮಿಷದಲ್ಲಿ ಆಸ್ಪತ್ರೆಯಲ್ಲಿ ನಿಮಗಾಗಿ Emergency Gate ಹತ್ತಿರ ಕಾಯುತ್ತಿರುತ್ತೇನೆಂದು ಆಸ್ಪತ್ರೆ ಕಡೆಗೆ ದೌಡಾಯಿಸಿದೆ. ರಾತ್ರಿ ಹನ್ನೊಂದುವರೆ ಘಂಟೆ ಸುಮಾರು ಹೆಚ್ಚಿನ ಟ್ರಾಫಿಕ್ ಇರದ ಕಾರಣ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಆಸ್ಪತ್ರೆಯನ್ನು ತಲುಪಿದ್ದೆ.ಮುಟ್ಟಿದ ತಕ್ಷಣವೇ ಅಣ್ಣನಿಗೊಂದು ಕರೆ ಮಾಡಿ ಎಲ್ಲಿದ್ದಾರೆಂದು ಖಾತ್ರಿ ಪಡಿಸಿಕೊಂಡೆ.ಹೋಗಿ ಮುಕ್ಕಾಲು ಘಂಟೆಯ ನಂತರ ಅಪ್ಪನನ್ನು ಹೊತ್ತುಕೊಂಡ ಬಳ್ಳಾರಿಯಿಂದ ಬಂದ ಆಂಬುಲೆನ್ಸ್ ತುರ್ತು ವಿಭಾಗದ ಬಾಗಿಲಿಗೆ ಬಂದು ನಿಂತೇ ಬಿಟ್ಟಿತು.
ಆಂಬುಲೆನ್ಸ್ ನ ಬಾಗಿಲು ನಿಧಾನವಾಗಿ ತೆರೆಯಿತು,ಒಳಗಿನಿಂದ ಮೊದಲು ಅಣ್ಣ ಇಳಿದ,ಒಬ್ಬ ನರ್ಸ್ ಇಳಿದ,ಆಮೇಲೆ ಅಪ್ಪನನ್ನುಕೈಮಂಚದಿಂದ ನಿಧಾನವಾಗಿ ಗಾಲಿ ಕುರ್ಚಿಯ ಮೇಲೆ ಕೂರಿಸಿದರು.ಅಪ್ಪ ನೋಡಲು ಬಹಳ ಸೊರಗಿದ್ದರು..ಆರಾಮಾಗಿ ಮಾತಾಡುತ್ತಿದ್ದರು ಆದರೆ ಅವರು ಒಳಗೆ ಅನುಭವಿಸುತ್ತಿರುವ ನೋವು ಅವರಿಗೇ ಗೊತ್ತಿತ್ತು.ನನ್ನ ನೋಡಿದ ತಕ್ಷಣ ನೀನ್ಯಾಕೆ ಬಂದೇ ಇಷ್ಟೊತ್ತಿನಲ್ಲಿ ಎಂದು ನನ್ನ ದಿಟ್ಟಿಸಿದರು.ನಾನೇನು ಮಾತಾಡದೆ ತಲೆಯಾಡಿಸಿದೆ. ಆಸ್ಪತ್ರೆಯ ಒಳಗಡೆ ಕರೆದುಕೊಂಡು ಹೋದೆವು.ಅಡ್ಮಿಷನ್ ಕೌಂಟರ್ ನಲ್ಲಿ ಫೈಲ್ ಮಾಡಿಸಲು ಹೇಳಿ ತುರ್ತಾಗಿ ಅವರನ್ನು ECG ಮಾಡಲು ಕರೆದುಕೊಂಡು ಹೋಗಲು ಹೇಳಿದರು.ರೋಗಿಯ ಜೊತೆ ಇರಲು ಕೇವಲ ಒಬ್ಬರಿಗೆ ಮಾತ್ರ ಅವಕಾಶವೆಂದು ಸೆಕ್ಯೂರಿಟಿ ನನ್ನನ್ನು ಹೊರಹಾಕಿದ.ಅಣ್ಣ ನೀನು ಹೊರಗಡೆ ಇರು ಎಂದು ನನಗೆ ಕಣ್ಣಲ್ಲೇ ಸನ್ನೆ ಮಾಡಿದ.ಹೊರಗಡೆ ಅಪ್ಪನನ್ನು ಗಾಜಿನ ಬಾಗಿಲಿನಿಂದ ಇಣುಕುತ್ತಾ ನೋಡುತ್ತ ನಿಂತೆ.ಸೆಕ್ಯೂರಿಟಿ ಮತ್ತೆ ಹಿಂದೆ ನಿಂತುಕೊಳಯ್ಯ ಎಲ್ಲರೂ ಇಲ್ಲಿ ನಿಂತ್ರೆ ಗಲಾಟೆಯಾಗುತ್ತೆ ಎಂದು ಗದರಿಸಿದ.ಬೇರೆ ದಾರಿಯಲ್ಲಿದೆ ಸ್ವಲ್ಪ ದೂರದಲ್ಲೇ ಇದ್ದ ಗ್ರಿಲ್ಗೆ ಅಣಿಕೊಂಡು ನಿಂತೆ.ಪಾಳೆಯ ಪ್ರಕಾರ ಒಂದರನಂತರ ಒಂದು ಬರುವ ಆಂಬುಲೆನ್ಸ್ ಗಳನ್ನು ನೋಡುತ್ತಿದ್ದೆ. ಗಾಡಿಯಿಂದ ಇಳಿದು ಆಸ್ಪತ್ರೆಗೆ ಸೇರುವ ರೋಗಿಗಳ ದೃಶ್ಯ ಎಂತ ಕಟುಕನಿಗೂ ಸಹ ಹೃದಯ ವಿದ್ರಾಯಕವೆನಿಸುವಂತಿದ್ದವು .
ಒಬ್ಬ ರೋಗಿಯನ್ನು ಬಹಳ ಅವಸರದಲ್ಲಿ ಕರೆದುಕೊಂಡು ಬಂದರು..ರೋಗಿ ಅರೆ ಬಟ್ಟೆಯಲ್ಲಿದ್ದ..ಮೂಗಿಗಷ್ಟೇ ಅಲ್ಲದೆ ಎಲ್ಲೆಂದರಲ್ಲಿ ಹಾಕಿದ ಪೈಪುಗಳನ್ನು ನೋಡಿ ಒಂದು ಕ್ಷಣ ಅವಾಕ್ಕಾದೆ..ಆದರೆ ಒಳಗಡೆ ನೋಡಿದರೆ ಬೇಗ ಬಿಡಲೇ ಇಲ್ಲ..ಫೈಲುಗಳನ್ನು ಚೆಕ್ ಮಾಡುತ್ತಿದರು.. ಗಾಲಿ ಕುರ್ಚಿಯಿನ್ನು ಸಿಕ್ಕಿರಲಿಲ್ಲ… ರೋಗಿಯ ಹೆಂಡತಿ ಪಕ್ಕದಲ್ಲಿ ನಿಂತು ಜೋರಾಗಿ ಅಳುತ್ತಿದ್ದಳು..ಸಮಾಧಾನ ಮಾಡೋಣವೆನಿಸಿತು..ಆದರೆ ನಾನು ಸಮಾಧಾನ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ..ಎಲ್ಲವನ್ನೂ ಭಗವಂತ ಆಡಿಸುತ್ತಿರುವ ಆಟವೆಂದು ನೋಡುತ್ತಿರುವ ಮೂಕ ಪ್ರೇಕ್ಷಕನಂತೆ ನೋಡುತ್ತ ನಿಂತಿದ್ದೆ.ಕೊನೆಗೆ ಅಲ್ಲಿ ನೆರೆದಿದ್ದವರ ಪೈಕಿ ಒಬ್ಬ ಜೋರಾಗಿ ಬಹಳ ಹೊತ್ತಿನಿಂದ ರೋಗಿ ಆಂಬುಲೆನ್ಸ್ ಅಲ್ಲೇ ಇದ್ದಾನೆ,ಯಾರು ಅವರನ್ನು ಬೇಗನೆ ಅಡ್ಮಿಟ್ ಮಾಡಿಕೊಳ್ಳುವುದಿಲ್ಲವೇ..?ಇದು ಯಾವ ಸಿಸ್ಟಮ್ ರೀ..?ಎಂದು ಗುಡುಗಿದ..ಅಲ್ಲಿದ್ದವರೆಲ್ಲ ಅವನ ಜೊತೆ ದನಿಗೂಡಿಸಿದರು..ಅಷ್ಟರಲ್ಲಿ ಒಳಗಿಂದ ಕೈಮಂಚ ತೆಗೆದುಕೊಂಡು ಬಂದ ನರ್ಸ್ ಒಬ್ಬ, ನೋಡಿ ಅವರು ಹಳೆಯ ಆಸ್ಪತ್ರೆಯಿಂದ ತಂದ ಫೈಲ್ ಅಪೂರ್ಣವಾಗಿದೆ..ಅದನ್ನು ಸರಿಯಾಗಿ ಗಮನಿಸೋದು ಬೇಡವೆ ಎಂದು ಒಳಗೆ ಕರೆದುಕೊಂಡು ಹೋಗುವ ತಯಾರಿ ನಡೆಸಿದರು..ಆದರೂ ಗುಸು ಗುಸು ಇನ್ನೂ ಕಡಿಮೆಯಾಗಿರಲಿಲ್ಲ.
ಅಪ್ಪನ ಸ್ಥಿತಿ ಹೇಗಿದೆಯೆಂದು ನೋಡಲು ಸೆಕ್ಯೂರಿಟಿ ಯನ್ನು ಕೇಳದೆ, ಅವನು ಬೇರೆ ಕಡೆ ಮುಖ ಮಾಡಿ ಮಾತನಾಡುತ್ತಿರುವಾಗ ಒಳಗೆ ನೇರವಾಗಿ ನುಗ್ಗಿ ಬಿಟ್ಟೆ.. ECG ಯ ಫಲಿತಾಂಶದಲ್ಲಿ ಮತ್ತೆ ಏರುಪೇರು ಕಂಡು ಬಂದಿದೆ..ನಿಮ್ಮ ತಂದೆಯವರನ್ನು ತುರ್ತು ನಿಘಾ ಘಟಕಕ್ಕೆ (ICU) ಗೆ ವರ್ಗಾವಣೆ ಮಾಡಿ ಎಂದು ಸಲಹೆ ನೀಡಿದ್ದರು. ಅಷ್ಟರಲ್ಲಿ ಬಳ್ಳಾರಿಯಿಂದ ಬಂದ ಆಂಬುಲೆನ್ಸ್ ಡ್ರೈವರ್ ಮತ್ತು ನರ್ಸ್ ನಮಗೆ ದುಡ್ಡನ್ನು ಕೊಟ್ಟರೆ ನಾವು ವಾಪಸ್ ಹೊರಟುಹೋಗುತ್ತೇವೆ ಎಂದು ಅಣ್ಣನನ್ನು ಗೋಗರೆಯುತ್ತಿದ್ದರು..ಅಪ್ಪ ಅವರದು ಏನಿದೆ ಅದನ್ನ ಕೊಟ್ಟು ಕಳಿಸಿಬಿಡು ಎಂದು ಅಣ್ಣನಿಗೆ ಸಣ್ಣ ದನಿಯಲ್ಲಿ ಹೇಳಿದರು.ಅಣ್ಣ ಅವರನ್ನು ನನಗೆ ಪರಿಚಯಿಸಿ,ಅವರಿಗೆ ದುಡ್ಡನ್ನು ಕೊಟ್ಟು ಕಳುಹಿಸಿದ.
ಸರ್ ಇನ್ನು ICU ನಲ್ಲಿ ಬೆಡ್ಗಳು ಖಾಲಿಯಾಗಿಲ್ಲ ಹೀಗಾಗಿ ನೀವು ಇಲ್ಲಿಯೇ ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆಯೆಂದು ನಮಗೆ ವಾರ್ಡ್ ಬಾಯ್ ಸಲಹೆ ನೀಡಿದ.ಅಪ್ಪ ಅಣ್ಣನ ಬ್ಯಾಗುಗಳನ್ನು ಹಾಲಿನಲ್ಲಿ ತಂದಿಟ್ಟು ಕಾಯುತ್ತಾ ಕುಳಿತೆವು.ಸಮಯಕ್ಕೆ ಸರಿಯಾಗಿ ತಂದು ಪ್ರಥಮ ಹಂತದ ಚಿಕಿತ್ಸೆ ಕೊಡಿಸಿದ್ದು ಎಲ್ಲರಿಗೂ ಸ್ವಲ್ಪ ಮಟ್ಟಿನ ನಿರಾಳತೆಯನ್ನು ಮೂಡಿಸಿತ್ತು. ಹೂ ಬನ್ನಿ ಸರ್ ಆ ಬಿಲ್ಡಿಂಗ್ ಗೆ ಕರೆದುಕೊಂಡು ಹೋಗುತ್ತೇನೆ ಎಂದು ವಾರ್ಡ್ ಬಾಯ್ ನಮ್ಮನ್ನು ಕರೆದುಕೊಂಡು ಹೊರಟ.. ಸರ್ ಸದ್ಯಕ್ಕೆ ಯಾವುದೇ ಬೆಡ್ ಖಾಲಿ ಆಗಿಲ್ಲ..ಅವರು ಕೈಮಂಚದ ಮೇಲೆ ಮಲಗಬೇಕಾಗುತ್ತದೆ.. ಸರೀನಾ?ಎಂದು ಪ್ರಶ್ನಿಸಿದ..ನಾವು ಸರಿ ಎಂದು ತಲೆಯಾಡಿಸಿ ಲಿಫ್ಟ್ನ ಒಳಗೆ ಹೋದೆವು.
ರಾಜಕಾರಣಿಯೊಬ್ಬ ಕೊಲೆಯ ಪ್ರಕರಣದಲ್ಲಿ ಜೈಲಿಗೆ ಸೇರಿದ ವಿಡಿಯೋವನ್ನು ನೋಡುತ್ತಿದ್ದ.ಕೊಲೆ ಮಾಡಿರುವುದು ಖಾತ್ರಿಯಾಗಿದೆಯಾ ಹಾಗೆ ಜೈಲಿಗೆ ಹಾಕಿರುವುದು ನಿಜವಾ ಎಂದು ಅವನನ್ನು ಪ್ರಶ್ನಿಸಿದೆ.ಹೌದು ಸರ್ ಯಾವುದೇ ಸಂದೇಹವಿಲ್ಲ.. ಪಕ್ಕಾ ಜೈಲು..ಎಂದು ಮೊಬೈಲ್ ನ ಶಬ್ದ ಸ್ವಲ್ಪ ಕಡಿಮೆ ಮಾಡಿ ನನ್ನತ್ತ ನೋಡಿದ.ಇಂತವರಿಗೆಲ್ಲಾ ಹೃದಯ ಬೇನೆ ಬರುವುದಿಲ್ಲವೇ..? ಇಲ್ಲಾ..ಇಂತವರಿಗೆ ಹೃದಯವೇ ಇರುವುದಿಲ್ಲವೇ..?ಪೊಲೀಸ್ ಗಾಡಿಯಲ್ಲಿ ಕುಳಿತು ಅಳುತ್ತಿದ್ದ ಧುರೀಣ..ಜೈಲಿಗೆ ಹೋಗುತ್ತಿದೆನಲ್ಲ ಎಂದು ಅಳುತ್ತಿದ್ದನೋ ಅಥವಾ ಕೊಲೆ ಮಾಡಿದ ತಪ್ಪಿಗೆ ಅಳುತ್ತಿದ್ದಾನೋ..ಒಂದು ತಿಳಿಯಲಿಲ್ಲ..ಅಷ್ಟರಲ್ಲಿ ಆಗಲೇ ನಾವು ಆರನೇ ಫ್ಲೋರಿಗೆ ಬಂದಿದ್ದೆವು. ವಾರ್ಡ್ ಬಾಯ್ ಅನುಸರಿಸಿ ಹೊರಟೆವು..ತೀವ್ರ ನಿಘಾ ಘಟಕ ಎಂದು ಬರೆದ ಗೋಡೆಯ ಕೆಳಗಿನ ಬಾಗಿಲಿನೊಳಗೆ ನಡೆದೆವು.ಮತ್ತೆ ಸೆಕ್ಯೂರಿಟಿ ತಡೆದು ಕೇವಲ ಒಬ್ಬರಿಗೆ ಮಾತ್ರ ಒಳಗಡೆ ಪ್ರವೇಶವೆಂದು ಎಚ್ಚರಿಸಿದ.ಸರಿ ನೀನು ಇಲ್ಲೇ ಇರು ಕುಮಾರ ನಾನು ಅಪ್ಪನನ್ನು ಒಳಗಡೆ ಕರೆದುಕೊಂಡು ಹೋಗುತ್ತೇನೆಂದು ಅಣ್ಣ ಹೇಳಿದ. ಲಗೇಜ್ ರೂಮಿನಲ್ಲಿ ನಮ್ಮ ಬ್ಯಾಗುಗಳನ್ನು ಇಡಲು ಸೆಕ್ಯೂರಿಟಿ ಹೇಳಿ ಸಣ್ಣ ನಿದ್ದೆಗೆ ಜಾರಿದ. ಇದೇ ಅವಕಾಶ ಉಪಯೋಗಿಸಿಕೊಂಡು ಬೇಗನೆ ಬ್ಯಾಗುಗಳನ್ನು ಖಾನೆಯಲ್ಲಿ ಇಟ್ಟು ICU ಒಳಗೆ ನುಗ್ಗಿಬಿಟ್ಟೆ.
ತಣ್ಣನೆಯ ನೆಲ..ನರ ಮಾನವರ ಸದ್ದಿಲ್ಲ..ನಿರಂತರವಾಗಿ ಪಿಟೀಲನ್ನು ನುಡಿಸುತ್ತಿರುವಂತೆ ಸದ್ದು..ಮಂದ ಬೆಳಕಿನಲ್ಲಿ ಚಿಕಿತ್ಸೆಗೆಂದೇ ಪ್ರತಿ ರೂಮಿನಲ್ಲಿ ಇಟ್ಟಂತಹ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಜಗಮಗಿಸುತ್ತಿರುವ LED ಬುಲ್ಬುಗಳು. ಪಿಟೀಲಿನಂತೆ ಬರುತ್ತಿರುವ ಸದ್ದು ಅವರವರ ಹಣೆ ಬರಹಕ್ಕೆ ತಕ್ಕಂತೆ ಭಗವಂತ ನುಡಿಸುತ್ತಿರುವ ವೀಣೆಯಂತೆನಿಸಿತು..ರೂಮುಗಳನ್ನು ಬಟ್ಟೆಯ ಪರದೆಯನ್ನು ಹಾಕಿ ವಿಭಾಗಿಸಲಾಗಿತ್ತು..ಪ್ರತಿ ರೂಮಿನಲ್ಲಿ ಎರಡು ಬೆಡ್ಡುಗಳು..ನೋಡಿಕೊಳ್ಳಲು ಇಬ್ಬರು ವ್ಯಕ್ತಿಗಳು ಮಾತ್ರ..ಎಲ್ಲ ರೂಮುಗಳಲ್ಲಿ ಮಲಗಿದ್ದ ರೋಗಿಗಳು ಅವರರವ ಪರಿಸ್ಥಿತಿಗನುಗುಣವಾಗಿ ಉಸಿರಾಡುತ್ತಿದ್ದರು.. ಇದು ನೊಂದ ಹೃದಯಗಳ ಜೊತೆಗೆ ಸಾಂತ್ವನ ಹೇಳುವ ಹೃದಯಗಳ ಸಾಮ್ರಾಜ್ಯ..ಇನ್ನೂ ಡಾಕ್ಟರ್ ನುರ್ಸೆಗಳೆಲ್ಲ ದೇವರ ಪ್ರತಿನಿಧಿಗಳೆನಿಸಿತು..ಅಪ್ಪನನ್ನು ಕೈಮಂಚದಿಂದ ಮೇಲೆ ಮಲಗಿಸಲಾಯಿತು.ಅಣ್ಣ, ಅಡ್ಮಿಷನ್ ಸೆಲ್ ನಲ್ಲಿ ಹೋಗಿ ಫೈಲ್ ಅನ್ನು ನೋಂದಣಿ ಮಾಡಿಸಿಕೊಂಡು ಬಂದ ಮೇಲೆ ಇಲ್ಲಿಯ ಚಿಕಿತ್ಸೆ ಶುರುಮಾಡುತ್ತಾರೆಂದು ಹೇಳಿ ನನ್ನ ಕೈಗೆ ಫೈಲ್ ಕೊಟ್ಟ ಹೋಗುವ ಮೊದಲು ಒಮ್ಮೆ ಕುತೂಹಲ ತಾಳಲಾರದೆ ಪಿಟಿಲಿನ ಶಬ್ದ ಮಾಡುತ್ತಿದ್ದ ಇಲೆಕ್ಟ್ರಾನಿಕ್ ಉಪಕರಣದ ಹೆಸರೇನೆಂದು ಕೌಂಟರಿನಲ್ಲಿ ಕೂತಿದ್ದ ಒಬ್ಬ ನರ್ಸಿಗೆ ಕೇಳಿಯೇಬಿಟ್ಟೆ..ಬಹಳ ತರಾತುರಿಯಲ್ಲಿದ್ದ ಅವನು ತಲೆಯನ್ನು ಎತ್ತದೆ ವೆಂಟಿಲೇಟರ್ ಎಂದು ಮತ್ತೆ ಕೆಲಸದಲ್ಲಿ ತೊಡಗಿಸಿಕೊಂಡ.
ಅಡ್ಮಿಷನ್ ಸೆಲ್ ಇರುವ ಕಟ್ಟಡಕ್ಕೆ ಹೋಗಿ ಫೈಲ್ ಅನ್ನು ನೀಡಿದೆ..ಅವರು ನನ್ನ ಕಡೆ ಫಾರ್ಮ್ ತುಂಬಿಸಿಕೊಂಡು ಒಂದು ಘಂಟೆ ಕಾಯಲು ಹೇಳಿದರು.ಆಗಲೇ ರಾತ್ರಿ ಒಂದು ವರೆ ಸಮಯವಾಗಿತ್ತು.ಇನ್ನೂ ಎರಡು ವರೆವರಿಗೂ ಕಾಯಬೇಕಿತ್ತು.ಕಾಯುವವರಿಗಾಗಿ ಕಾಯ್ದಿರಿಸಿದ ಕುರ್ಚಿಗಳಲ್ಲಿ ಕುಳಿತೆ.ದೊಡ್ಡದಾಗಿ ಇಟ್ಟ aquarium ಅನ್ನು ನೋಡುತ್ತಾ ಕುಳಿತೆ..ಇನ್ನೂ ಸಮಯ ಹೋಗುತ್ತಿಲ್ಲವೆಂದು ಅದರ ಹತ್ತಿರ ಹೋಗಿ ಬಣ್ಣ ಬಣ್ಣದ ಮೀನುಗಳನ್ನು ನೋಡಿದೆ.ಮೀನಿನ ಹೆಜ್ಜೆಗಳನ್ನು ಕಂಡುಹಿಡುವುದು ಕಷ್ಟವೆನ್ನುತ್ತಾರೆ..ಮತ್ತೆ ಅದರ ಹೃದಯ ಬಡಿತವನ್ನು ಕೇಳುವವರು ಯಾರು…?ಹೀಗೆ ತಲೆಯಲ್ಲಿ ಬಂದ ವಿಚಿತ್ರ ಆಲೋಚನೆಗಳನ್ನೇ ಹೊತ್ತುಕೊಂಡು ಮತ್ತೆ ಚೇರಿನ ಮೇಲೆ ಕುಳಿತೆ.ಸುತ್ತಲೂ ನೋಡಿ ಎದುರುಗಡೆ ಕೃತಕವಾದ ಬಗೆ ಬಗೆಯ ಪ್ಲಾಸ್ಟಿಕ್ ಹೂಗಳನ್ನು ಇಟ್ಟಿದ್ದರು..ಅವುಗಳನ್ನು ದಿಟ್ಟಿಸಿ ಸಾವು ಬದುಕಿನ ನಡುವೆ ಹೋರಾಟ ಮಾಡುವ ಈ ಮಾನವರ ಜೀವನಕ್ಕಿಂತ ಇವುಗಳ ಜೀವನವೇ ಲೇಸಾ..?ಎಂಬ ಪ್ರಶ್ನೆ ಹುಟ್ಟಿತು.ಮೊಬೈಲ್ ಸಮಯ ನೋಡಿಕೊಂಡೆ..ಐದು ನಿಮಿಷ ಬೇಕಂತಲೇ ತಡ ಮಾಡಿದ್ದೆ.ಕೌಂಟರ್ ಅಲ್ಲಿ ಹೋಗಿ ಫೈಲ್ ತೆಗೆದುಕೊಂಡು ಮತ್ತೆ ICU ಕಟ್ಟಡಕ್ಕೆ ಹೊರಟುಹೋದೆ.
ಸೆಕ್ಯೂರಿಟಿ ತಡೆದ.. ಫೈಲ್ ಕೊಟ್ಟು ಬರುವುದಾಗಿ ತಿಳಿಸಿ ಒಳ ನಡೆದೆ.ಅಣ್ಣನಿಗೆ ಫೈಲ್ ಕೊಟ್ಟು ಅಪ್ಪನ ಚಿಕಿತ್ಸೆಯ ಕುರಿತಾಗಿ ನಮ್ಮ ಮುಂದಿನ ನಡೆನೆಯೇನಾಗಿರುತ್ತದೆಂದು ಕೇಳಿದೆ.ಬಳ್ಳಾರಿಯ ಆಸ್ಪತ್ರೆಯ ವೈದ್ಯರು ಡಾ.ನಿತೀಶ್ ಅವರ ಹತ್ತಿರ ತೋರಿಸಲು ಹೇಳಿದ್ದರು.ಅವರು ಆಗಲೇ ಬಂದು ನೋಡಿ ಹೋದರು. ಅಪ್ಪನ ಹೃದಯದಲ್ಲಿ ಎಲ್ಲಿ ತೊಂದರೆಯಾಗಿದೆಯೆಂದು ತಿಳಿಯಲು Angiogram ಮಾಡಲಾಯಿತು ನಾಳೆಯೇ ಶಸ್ತ್ರ ಚಿಕಿತ್ಸೆ ಮಾಡಲಾಗುವುದೆಂದು ಚಿಂತಾಜನಕ ಸ್ಥಿತಿಯಲ್ಲಿ ಉತ್ತರಿಸಿ ಹೋದರು ಎಂದು ಅಣ್ಣ ಚಿಂತೆಗೀಡಾದ. ಈಗಾಗಲೇ ಬಹಳ ಸಮಯವಾಗಿದೆ ನೀನು ಇಲ್ಲಿಂದ ಮನೆಗೆ ಹೊರಡು ಹಾಗೆ ನಾಳೆ ಆದಷ್ಟು ಬೇಗನೆ ಇಲ್ಲಿ ಬಾ ಎಂದು ಹೇಳಿದ.ನಾನು ಇಲ್ಲಿಯೇ ನಿಮ್ಮ ಬಳಿಯೇ ಇರುತ್ತೇನೆಂದು ಹಠ ಮಾಡಿದೆ.ನೋಡು ಇಲ್ಲಿ ಕೇವಲ ಒಬ್ಬರಿಗಿರಲು ಮಾತ್ರ ಅವಕಾಶವಿದೆ..ದಯವಿಟ್ಟು ಹೊರಡು ಎಂದು ಹೇಳಿದ.ನಾನು ಆಸ್ಪತ್ರೆಯಿಂದ ಹೊರಟು ಬಿಟ್ಟೆ.
ಬೆಳಿಗ್ಗೆ ನನ್ನ ಮತ್ತೂಬ್ಬ ಅಣ್ಣ ಊರಿಂದ ಬಂದಿದ್ದ.ಇಬ್ಬರು ಆಸ್ಪತ್ರೆ ತಲುಪಿದೆವು. ಆಪರೇಷನ್ ಥಿಯೇಟರ್ ಹತ್ತಿರ ಅಪ್ಪನನ್ನು ಕರೆದುಕೊಂಡು ಎಲ್ಲರೂ ಬಂದೆವು. ಡಾಕ್ಟರ್ ದೊಡ್ಡ ಅಣ್ಣನ ನನ್ನು ಕರೆದುಕೊಂಡು ಹೋಗಿ ನೋಡಿ ನಿಮ್ಮ ತಂದೆಗೆ ಮುಂಚೆ ಹಾಕಿದ ಸ್ಟೆಂಟ್ ಮುಂದೆ Blockage ಆಗಿದೆ ನೀವು ಅನುಮತಿ ನೀಡಿದರೆ ನಾವು ಹಳೆಯದನ್ನು ತಗೆದು ಹೊಸದನ್ನು ಹಾಕುತ್ತೇವೆ..ನಮ್ಮ ಪ್ರಯತ್ನ ನಾವು ಮಾಡುತ್ತೇವೆ..ಜೀವಕ್ಕೆ ಅಪಾಯವಾದರೆ ನಾವು ಕಾರಣರಲ್ಲವೆಂದು ನೇರವಾಗಿ ಹೇಳಿ ಶಸ್ತ್ರ ಚಿಕಿತ್ಸೆಯ ಫಾರ್ಮ್ ನಾ ಮೇಲೆ ಸಹಿ ಹಾಕಿಸಿಕೊಂಡು ಅಪ್ಪನನ್ನು ಕರೆದುಕೊಂಡು ಹೋದರು. ಎಲ್ಲರ ಮುಖದಲ್ಲಿ ಭಯ ಆವರಿಸಿತ್ತು.ಈಗಾಗಲೇ ನಾಲ್ಕು ವರೆ ವರುಷಗಳ ಹಿಂದೆ ಹೃದಯಾಘಾತವಾಗಿತ್ತು ಅದರ ಮೇಲೆ ಮತ್ತೊಮ್ಮೆ ಶಸ್ತ್ರ ಚಿಕಿತ್ಸೆ ಎಂಬ ಭಯ. ನನಿಗಂತೂ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಪದಪುಂಜಗಳು ಹೃದಯ ವಿದ್ರಾವಕ ಹೃದಯ ವಿಹಂಗಮ ಇನ್ನೂ ಇತರೆ ತಲೆಯಲ್ಲಿ ನೃತ್ಯ ಮಾಡಲು ಶುರುಮಾಡಿದ್ದು.ಇನ್ನೂ ಹಾಡು ಹಾಡುಗಳಿಗೇನು ಕಡಿಮೆಯಿರಲಿಲ್ಲ..ಹೃದಯವು ಬಯಸಿದೆ ನಿನ್ನನೇ..ಹೃದಯದಲಿ ಇದೇನಿದು ನದಿಯೊಂದು ಓಡಿದೆ ಇನ್ನೂ ಇತರೆ ಹಾಡುಗಳು ಪ್ರಶ್ನಾರ್ಥಕವಾಗಿ ಕೇಳುತ್ತಿದ್ದವು ..ಪ್ರಶ್ನೆಗಳು ಬೇರೆ.. ಯಾಕೀ ಹೃದಯ ನಮ್ಮ ಗೋಳು ಹೊಯ್ದು ಕೊಳ್ಳುತ್ತದೆ..?ಹೃದಯಕ್ಕೂ ಹೃದಯ ಇರಬೇಕಲ್ಲವೇ..?ಈ ಎಲ್ಲಾ ಚಿಂತೆಗಳ ಮಧ್ಯೆ operation theatre ನ ಕೆಂಪು ಬಣ್ಣದ ಬಲ್ಬು ಆಫ್ ಆಗಿತ್ತು.ಎಲ್ಲರ ಕಣ್ಣುಗಳು ಅರಳಿದವು.ಡಾಕ್ಟರ್ ಹೊರಬಂದು ಎಲ್ಲರ ಮುಖವನ್ನೊಮ್ಮೆ ನೋಡಿದರು..ಹೊಸ ನಾಳವನ್ನು ಹಾಕಿದ್ದೇವೆ ಅವರಿಗೆ ಏನು ತೊಂದರೆಯಿಲ್ಲ ಆದರೆ ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ನ ಪ್ರಮಾಣ ಕಡಿಮೆಯಿರುವುದರಿಂದ ಅವರಲ್ಲಿ ಇನ್ನೂ ನಿಶ್ಯಕ್ತಿಯಿದೆ ಒಂದು ದಿನ ICU ನಲ್ಲಿ ಇಡಬೇಕಾಗುತ್ತದೆ ಆಮೇಲೆ ಜನರಲ್ ವಾರ್ಡ್ಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ಹೇಳಿದರು.ಎಲ್ಲರಿಗೂ ಆನಂದವಾಯಿತು.
ಒಂದು ದಿನದ ನಂತರ ಅಪ್ಪನನ್ನು ಜನರಲ್ ವಾರ್ಡ್ ಗೆ ಸ್ಥಳಾಂತರಿಸಲಾಯಿತು.ಅಣ್ಣ ಬಿಲ್ ನ ರಿಯಾಯಿತಿಗಾಗಿ APL ಫಾರ್ಮ್ ಅನ್ನು ತುಂಬಿ ಅರ್ಜಿ ಹಾಕಿದ.ಫಾರ್ಮ್ಗೆ ಬೇಕಾದ ಎಲ್ಲ ಮಾಹಿತಿ ಪತ್ರಗಳನ್ನು ನೀಡಲಾಗಿತ್ತು..ಬೇರೆ ಬೆಡ್ಡಿನ ರೋಗಿಗಳ ರಿಯಾಯಿತಿಯ ಬಿಲ್ ಸಮ್ಮತಿಯಾಗಿ ಪಾವತಿಸಿ ಆಸ್ಪತ್ರೆಯಿಂದ ಹೋದರು.ಮತ್ತೊಮ್ಮೆ ಬಿಲ್ಗೆ ಸಂಬಂದಿಸಿದ ಅಧಿಕಾರಿಗಳನ್ನು ಭೆಟ್ಟಿ ಮಾಡಿ ಅವರಿಗೆ ಬೇಕಾದ ಮಾಹಿತಿಯನ್ನು ನೀಡಲಾಯಿತು. ಎರಡು ದಿನಗಳ ನಂತರ ಫೈಲ್ ಗೆ ಸಮ್ಮತಿ ಸಿಕ್ಕು ಚಿಕಿತ್ಸೆಯ ಶುಲ್ಕವನ್ನು ಪಾವತಿಸಲಾಯಿತು.ಅಣ್ಣ ರಾತ್ರಿ ಆಸ್ಪತ್ರೆಯಿಂದ ಹೊರಡಲು ಕಾರಿನ ವ್ಯವಸ್ಥೆ ಮಾಡಿದ.ಅಪ್ಪ ಹೊರಡುವ ಮುನ್ನ ಎಲ್ಲರೂ ಬಹಳ ಸಹಾಯ ಮಾಡಿದ್ದೀರಿ..ನಿಮ್ಮಿಂದ ನಾನು ಆರೋಗ್ಯವಾಗಿದ್ದೇನೆಂದು ಭಾವುಕನಾದ.ಕುಮಾರ ಬಹಳ ಸೊರಗಿದ್ದೀಯ…ಮುಖದಲ್ಲಿ ಲಕ್ಷಣವೇ ಇಲ್ಲ..ನಿನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸೆಂದ ಅಪ್ಪ.ಲಕ್ಷಣ..?ಎಲ್ಲಿಯ ಲಕ್ಷಣವಪ್ಪಾ..?ನನ್ನ ಬಳಿ ಉದ್ಯೋಗವೆಂಬುದು ಇದ್ದಿದ್ದರೆ ನಾನು ಅರಮವಿಲ್ಲದಿದ್ದರೂ ಲಕ್ಷಣ ಮಾತ್ರ ಖಂಡಿತವಿರುತ್ತಿತ್ತು ಏಕೆಂದರೆ ‘ಉದ್ಯೋಗಂ ಪುರುಷ ಲಕ್ಷಣಂ ಅಲ್ಲವೇ..? ಎಂದು ಮನಸಿನಲ್ಲಿ ಅಂದುಕೊಂಡೆ.ಕುಮಾರ ಏನಂದೆ..?ಅಪ್ಪ ಕೇಳಿಯೇ ಬಿಟ್ಟ..ಏನಿಲ್ಲ ಅಪ್ಪ ಹುಷಾರಾಗಿ ಹೋಗಿಯೆಂದು ಮುಗುಳ್ನಕ್ಕೆ.ಅಪ್ಪನು ಮುಗುಳ್ನಕ್ಕರು ಕೂಡ ಅದರಲ್ಲಿ ಸಂದೇಹದ ಛಾಯೆ ಎದ್ದು ಕಾಣುತ್ತಿತ್ತು.
ಇನ್ನು ಹೆಚ್ಚು ಹೊತ್ತು ಯಾರಿಗೂ ಮುಖ ಕೊಟ್ಟು ಮಾತನಾಡಲಾಗಲಿಲ್ಲ..ಮನೆಗೆ ಹೋಗುತ್ತಿದ್ದರೆಂಬ ದುಃಖ ಒಂದು ಕಡೆಯಾದರೆ ಇನ್ನೊಂದು ಕಡೆ ಕೆಲಸ ಕಳೆದುಕೊಂಡದ್ದು ಅಪ್ಪನಿಗೆ ಹೇಳದೆ ಇರುವುದು..
ಆಗಲೇ ಮಧ್ಯರಾತ್ರಿ 12:30 ಸಮಯ ಆಗಿಹೋಗಿತ್ತು ಮಾತುಕತೆಯಲ್ಲಿ.. ಅಪ್ಪ ಮತ್ತು ಅಣ್ಣ ನನಗೂ ಹೊರಡಲು ಹೇಳಿ ಊರಿಗೆ ಪ್ರಯಾಣ ಬೆಳೆಸಿದರು.ನಾನು ಮನೆಯ ಕಡೆ ನಡೆದೆ.ರಾತ್ರಿಯ ಸಮಯ traffic ಇರಲಿಲ್ಲ .ರಸ್ತೆಯಲ್ಲಿ ಕೇವಲ ನಾನು ಮತ್ತು ನನ್ನ ಜೊತೆಗೆ ನನ್ನಂತೆಯೇ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿಯಷ್ಠೆ..ಅವನು ಕೂಡ ಬೆಳಕಿನಲ್ಲಿ ಕಾಣಿಸುತ್ತಿದ್ದ..ಕತ್ತಲಿನಲ್ಲಿ ಮಾಯವಾಗುತ್ತಿದ್ದ..ನಿನಗೆ ಹೇಗೆ ಹೇಳಲಿ ಅಪ್ಪ..ನಿನ್ನ ಮುಂದೆ ಎಂದು ಸತ್ಯವನ್ನು ಮುಚ್ಚಿಟ್ಟವನಲ್ಲ..ಆದರೆ ಪರಿಸ್ಥಿತಿಗಳು ನನ್ನನ್ನು ಕಟ್ಟಿ ಹಾಕಿವೆ..ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ..ನಿನ್ನ ಹೃದಯ ಯಾವಾಗಲು ಆನಂದದಿಂದಿರಲಿಲೆಂದು ಅಪ್ಪನಿಗೆ ಮನದಲ್ಲೇ ನಮಿಸಿದೆ.
ಹೃದಯಗಳ ನಾಡಿನಿಂದ ಹೊರ ಬಿದ್ದಿದ್ದೆ. ನೊಂದ, ಸಾಂತ್ವನ ಹೇಳುವ, ಮಿಡಿವ ಎಲ್ಲ ಹೃದಯಗಳು, ಆಸ್ಪತ್ರೆಯ ವೆಂಟಿಲೇಟರಿನಿಂದ ಹೊರ ಹೊಮ್ಮಿದ ಪಿಟೀಲಿನಂತಹ ಸದ್ದುಗಳನ್ನು ಬೀಳ್ಕೊಟ್ಟಂತೆ ಅನಿಸಿತು.ನೌಕ್ರಿ,ಲಿಂಕ್ಡ್ ಇನ್ ವೆಬ್ಸೈಟ್ ಗಳಿಂದ ತಂಗಾಳಿಯಲ್ಲಿ ಕರೆಗಳು ಬಂದಂತಾಗಿ ಪ್ರಶ್ನಗೆಳು ಕಿವಿಯ ಮೇಲೆ ಹಾದುಹೋದಂತೆನಿಸಿತು.. ನಿಮ್ಮ ಎಕ್ಸ್ಪೀರಿಯೆನ್ಸ್ ಎಷ್ಟು..?ನಿಮ್ಮ ಪ್ಯಾಕೇಜ್..? ಹಳೆಯ ಕೆಲಸವನ್ನು ಏಕೆ ಬಿಟ್ಟಿರಿ ಎಂದು ಕೇಳುವಂತೆ.ಮನಸ್ಸು ಗೊಂದಲದಲ್ಲಿರುವಂತೆನಿಸಿ.. ಈ ಶರೀರ ನಿನ್ನದಲ್ಲ..ಈ ಮನಸೂ ನಿನ್ನದಲ್ಲ.. ಇನ್ಯಾವುದಕ್ಕೂ ತುಸು ವಿರಾಮವಿರಲಿ ಓ ಮನಸೇ ಎಂದು ಗಾಡಿಯ ವೇಗವನ್ನು ಹೆಚ್ಚಿಸಿದೆ….
ಮಯೂರ ಬಿ ಮಸೂತಿ ಅಲಾರಾಮಿನ ಸದ್ದಿಲ್ಲದೆ ಎದ್ದೇನಲ್ಲ ಎಂದು ಕಣ್ಣು ತೆರೆದು ನೋಡಿದಾಗ ಆಗಲೇ ಬೆಳಿಗ್ಗೆ10:30 ಆಗಿತ್ತು.ಸೂರ್ಯ ತನ್ನ ಪ್ರಭಾವ ಬೀರಲು ಶುರು ಮಾಡಿ ಬಹಳ ಹೊತ್ತೇ ಆಗಿತ್ತು.ಮನೆಯ ಬಾಗಿಲು ಕಿಟಕಿಗಳನ್ನು ಇನ್ನೂ ತೆರೆಯದೆ ಇದ್ದರು,ಕಿಟಕಿಗಳ ಮಂದ ಗಾಜಿನಿಂದ ಹರಿದ ಬೆಳಕು ಯಾವ ಮಧ್ಯಾಹ್ನದ ಬಿಸಿಲಿಗೂ ಕಡಿಮೆಯಾಗಿರಲಿಲ್ಲ..ಹೇಳಿ ಕೇಳಿ ವಸಂತ ಕಾಲ.ಮುಂಜಾನೆಯ ಏಳು ವರೆಗೆ ಎದ್ದು ನಿದ್ದೆಗಣ್ಣಿನಲ್ಲಿ ಡೋರ್ ಲಾಕ್ ಅನ್ನು ತೆರೆದು ಮನೆಯ ಅಂಗಳದಲ್ಲಿ ಬಿದ್ದ ವಿಶ್ವವಾಣಿ ದಿನಪತ್ರಿಕೆಯನ್ನು ತೆಗೆದುಕೊಂಡು ದಿವಾನದ ಮೇಲೆ ಬಿಸಾಕಿ ಒಲ್ಲದ ಮನಸ್ಸಿನಿಂದ ಬಾಗಿಲು ಹಾಕಿ ಮತ್ತೆ ಮಂಚದ ಮೇಲೆ ಬೋರಲಾಗಿ ಮಲಗಿದ ನೆನಪು.ಗ್ಯಾಸ್ ಹಚ್ಚಿಸಿ ಪಾತ್ರೆಯಲ್ಲಿ ನೀರು ಹಾಕಿ ಒಂದು ಸಣ್ಣ ವಿಳ್ಳೆದೆಲೆಯನ್ನು ಹರಿದು ಹಾಕಿ,ನೀರು ಕುದಿಯುವವರೆಗೂ ಹೆಡ್ಲೈನ್ಸ್ಗಳನು ಓದಿದರೆ ಆಯಿತೆಂದು ಹಾಗೆ ಪತ್ರಿಕೆಯ ಮೇಲೆ ಕಣ್ಣಾಡಿಸಿದೆ ಆಗಲೇ ನೀರು ಸಾಕಷ್ಟು ಕುದ್ದಿದ್ದರಿಂದ ಹಲ್ಲು ಉಜ್ಜಿ ನೀರು ಕುಡಿದು ದಿನ ನಿತ್ಯದ ಕರ್ಮಗಳನ್ನು ಪೂರ್ಣಗೊಳಿಸಿದೆ. ಆಫೀಸಿಗೆ ಹೋಗಲು ತಯಾರಾಗತೊಡಗಿದೆ.

0 Comments