ವಿಜಯನಗರ ಪ್ರತಿಷ್ಠಾನ (ರಿ) ವತಿಯಿಂದ ನೀಡಲಾಗುವ “ಹಂಪಿ ಸಾಹಿತ್ಯ ಪುರಸ್ಕಾರ–2026″ಕ್ಕೆ, 2026ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳುಹಿಸಿಕೊಡಬೇಕೆಂದು ಕೋರಲಾಗಿದೆ.
ವಿಜಯನಗರ ಪ್ರತಿಷ್ಠಾನದ ವತಿಯಿಂದ ಕನ್ನಡ ಸಾಹಿತ್ಯದ ಆರು ಪ್ರಕಾರಗಳಿಗೆ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ: 1) ಕಾವ್ಯ 2) ಕಥೆ 3) ಕಾದಂಬರಿ 4) ಸಂಶೋಧನೆ 5) ಅನುವಾದ ಸಾಹಿತ್ಯ 6) ನಾಟಕ. ಈ ಪ್ರತಿಯೊಂದು ಪ್ರಕಾರದ ಪುರಸ್ಕಾರವು ₹5,000 ನಗದು ಪ್ರಶಸ್ತಿ ಮತ್ತು ಫಲಕವನ್ನು ಒಳಗೊಂಡಿದ್ದು, 2026ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿರುವ ಕೃತಿಗಳನ್ನು ಈ ಪುರಸ್ಕಾರಕ್ಕೆ ಆಹ್ವಾನಿಸಲಾಗಿದೆ. 2027ರಲ್ಲಿ ನಡೆಸಲು ಉದ್ದೇಶಿಸಿರುವ “ಹಂಪಿ ಸಾಹಿತ್ಯ ಉತ್ಸವ–2027″ರಲ್ಲಿ ಆಯ್ಕೆಯಾದ ಕೃತಿಗಳ ಕರ್ತೃಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.
1.2026ರ ಜನವರಿಯಿಂದ ಇಲ್ಲಿಯವರೆಗೆ ಪ್ರಕಟವಾಗಿರುವ ಕಾವ್ಯ, ಕಥೆ, ಕಾದಂಬರಿ, ಸಂಶೋಧನೆ, ಅನುವಾದ ಮತ್ತು ನಾಟಕ ಪ್ರಕಾರದ ಕೃತಿಗಳನ್ನು 2026ರ ಡಿಸೆಂಬರ್ 25ರೊಳಗೆ ಕಳುಹಿಸಿಕೊಡಲು ಕೋರಲಾಗಿದೆ.
2.ಪ್ರತಿ ಪ್ರಕಾರಕ್ಕೂ 3 ಪ್ರತಿಗಳನ್ನು ಕಳುಹಿಸಬೇಕು. ವಿಭಾಗವನ್ನು ಸ್ಪಷ್ಟವಾಗಿ ನಮೂದಿಸಬೇಕು. ಕಳುಹಿಸಿದ ಕೃತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.
3.ಪ್ರತಿಷ್ಠಾನವು ನೇಮಿಸುವ ತೀರ್ಪುಗಾರರ ಶಿಫಾರಸನ್ನು ಪರಿಗಣಿಸಿ ಕೃತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು.
4.ಅನುವಾದಿತ ಕೃತಿಗಳು ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳಾಗಿರಬೇಕು. ಅವು ಯಾವುದೇ ಸಾಹಿತ್ಯ ಪ್ರಕಾರದವಾಗಿದ್ದರೂ ಪರಿಗಣಿಸಲಾಗುವುದು.
5.ಸಂಶೋಧನಾ ವಿಭಾಗಕ್ಕೆ ಕಳುಹಿಸುವ ಕೃತಿಗಳು ಮಹಾಪ್ರಬಂಧಗಳಾಗಿದ್ದರೆ ಅಥವಾ ಬಿಡಿ ಸಂಶೋಧನಾ ಲೇಖನಗಳ ಸಂಕಲನಗಳಾಗಿದ್ದರೆ ಪರಿಗಣಿಸಲಾಗುವುದು.
6.ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಡಾ. ಪಿ. ದಿವಾಕರ ನಾರಾಯಣ, ವಿಜಯನಗರ ಪ್ರತಿಷ್ಠಾನ (ರಿ)
ಮನೆ ಸಂ. 655/2, ಪಾರ್ವತಿ ನಿಲಯ, ಬಲ್ಡೋಟಾ ರಕ್ತನಿಧಿ ಕೇಂದ್ರದ ಹತ್ತಿರ,
ಜೈನ ಕಾಲೋನಿ, ಹೊಸಪೇಟೆ–583201, ವಿಜಯನಗರ ಜಿಲ್ಲೆ.
ಮೊ.ನಂ. 8277203999






0 Comments