– ಆದಿವಾಲ ಗಂಗಮ್ಮ
ಬಯಲಾಗಬೇಕೆನಿಸಿದೆ
ಜೀವನದ ಹಾದಿಯಲಿ ನಲಿವಿಗಿಂತ
ಹೆಚ್ಚಾಗಿ ನೋವನ್ನೆ ಕಂಡವಳಿವಳು
ಪ್ರೀತಿಯ ಮೋಡಿಗೆ ಸಿಲುಕಿ
ದೇಶ ತೊರದು ಈ ದೇಶದ ಅತ್ತೆಗೆ
ಮೆಚ್ಚಿನ ಸೊಸೆಯಾದವಳು
ಮೂವತ್ನಾಲ್ಕಕ್ಕೆ ಅತ್ತೆಯನ್ನ ಕಳಕೊಂಡಳು
ನಲವತ್ತನಾಲ್ಕಕ್ಕೆ ಗಂಡನನ್ನೂ
ವಿಧವೆ, ಬಾರ್ ಡ್ಯಾನ್ಸರ್ ಏನೆನ್ನೆಲ್ಲಾ ಬೈದು, ಅವಹೇಳನ
ಮಾಡಿದರೂ ನೋವ ನುಂಗಿ ಶಾಂತತೆ ಮೆರೆದಳು
ಇಲ್ಲಿಯ ಭಾಷೆ, ಆಚರಣೆ ಸಂಸ್ಕೃತಿ ಅಳವಡಿಸಿಕೊಂಡು
ಮಕ್ಕಳನ್ನು ಸುಸಂಸ್ಕೃತರಾಗಿ ಬೆಳಸಿದಳು
ದುರಂತದ ಸರಮಾಲೆಗೆ, ಕುಹಕಕ್ಕೆ ಹೆದರಲಿಲ್ಲ
ಹೇಡಿಯಂತೆ ತಾಯ್ನಾಡಿಗೆ ಓಡಿ ಹೋಗಲಿಲ್ಲ
ಪ್ರಧಾನಿ ಪಟ್ಟ ಬಯಸದೆ, ದೇಶವನ್ನು ಮುನ್ನೆಡೆಸುತ್ತಾ
ಕಷ್ಟಕಾರ್ಪಣ್ಯಗಳನ್ನೆಲ್ಲಾ ಉಸಿರಾಡಿದ್ದಾಳೆ
ಪ್ರಭಾವಿ ರಾಜಕಾರಣಿಗಳ ಮಧ್ಯೆ ತನ್ನ ವಿಶಿಷ್ಟ
ಹಜ್ಜೆಯ ಗುರತನ್ನು ನಮೂದಿಸಿದ್ದಾಳೆ
ಮಹಾನ್ ಮಾದರಿ ಹೆಣ್ಣಿಗೀಗ ತನ್ನೊಡಲ
ನೋವು ನಲಿವುಗಳ ಹಂಚಿಕೊಳ್ಳಬೇಕೆನಿಸಿದೆ
ಅನಿವಾರ್ಯವೆನಿಸಿದೆ,ಬಯಲಾಗಬೇಕೆನಸಿದೆ
ಆಕೆಗೀಗ ಬಯಲಾಗಬೇಕೆನಿಸಿದೆ,
ಆ ಸ್ವಾತಂತ್ರ ಆಕೆಗಿದೆ
ತಪ್ಪೇನು, ನಾವು ಅವಳ ಒಡಲಿನ ಧಗೆಗೆ, ಮನದ ದುಗಡಕ್ಕೆ
ಸ್ಪಂದಿಸೋಣ, ಸಾದ್ಯವಾದರೆ ಕೊಂಚ ಪರಿತಪಿಸೋಣ
ಒಂದೆರಡು ಹನಿ ಕಂಬನಿ ಹರಿಸೋಣ
ಒಂದೆರಡು ಹನಿ ಕಂಬನಿ ಹರಿಸೋಣ






0 Comments