-ವಿಜಯಲಕ್ಷ್ಮಿ ಸತ್ಯಮೂರ್ತಿ
ಈ ಪ್ರಪಂಚ ನನ್ನದೇ
ಕಾಡುವುದೋ ಬೇಡುವುದೋ ನಾನರಿಯೆ
ಅಕ್ಕರೆ, ಸಹಾನುಭೂತಿ, ಅತಿಯಾದ ಪ್ರೀತಿ ಪ್ರಪಂಚವೇ ನನ್ನದೆಂಬ ಅತಿಯಾದ ಹುಂಬತನ?
ಅಂದಹಾಗೆ ಕಾಡುವುದೆಂದರೆ ಏನು? ನನ್ನನ್ನೋ ಅಥವಾ ನನ್ನಂಥಹವರನ್ನೋ?
ಅಂದೆನಿಸಿದವುಗಳೆಲ್ಲ ಭ್ರಮೆಯೋ ಅಥವಾ ಒಂಚೂರು ಹೃದಯಕ್ಕೆ ಹೊಕ್ಕು ಭಾವನೆಗಳೊಂದಿಗೆ ಬೆರೆತಿದ್ದೋ, ಸುಮ್ಮನೆ ತಗುಲಿ ಹೋಗಿದ್ದೋ
ತಿಳಿಯದು ಎಲ್ಲೋ ಒಂದು ಕಡೆ ಗಾಯವಾಗಿರೋದಂತೂ ನಿಜವೇ!
ಪ್ರೀತಿ ಬೇಡುವುದಲ್ಲ ತಾನಾಗೇ ಉದ್ಭವಿಸಬೇಕು
ಅಣುವಣುವಾಗಿ ಬೆರೆಯಬೇಕು ಜೇನಾಗಿ!
ಈಗ ನನ್ನ ಯಾವ ಪ್ರಶ್ನೆಗಳಿಗೆ ಉತ್ತರ ತಾನೆ ಉತ್ತರ ಸಿಕ್ಕೀತು? ಅಣಕಿಸುತ್ತವೆ ನನ್ನ ಮಾತುಗಳು ನನ್ನನ್ನು..ಗಟ್ಟಿಯಾಗಲಿಲ್ಲ ನೀನು.
ಆಗಿದ್ದರೆ ಏನಾಗುತ್ತಿತ್ತು? ಮಾತಿನ ಚಾಟಿಗಳು ಒಂದಕ್ಕೊಂದು ಬಡಿದಾಡಿ ಅಂದೇ ಮುರಿದು ಹೋಗುತ್ತಿದ್ದವು!
ಹೌದಲ್ಲವೇ ಮುರಿದುಹೋಗಿದ್ದರೆ ಅಂದೇ…
ಮುಗಿದೇ ಹೋಗುತ್ತಿತ್ತು ಎಲ್ಲವೂ. ಪ್ರಶ್ನೆ ಉತ್ತರ ಎಲ್ಲವೂ ಅರ್ಥವಿಲ್ಲದೇ ಮಣ್ಣು ಸೇರುತ್ತಿದ್ದವು.
ಭಾವನೆಗಳನ್ನು ಭದ್ರವಾಗಿ ಆಲಂಗಿಸಿ
ಮತ್ತೆ ಮತ್ತೆ ಹೇಳುವಾಸೆ ಈ ಪ್ರಪಂಚ ನನ್ನದೇ ಕೇವಲ ನನ್ನದೇ..






0 Comments