ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೀರದಲಿ ನಿಂತು…

ಸ್ವಭಾವ ಕೋಳಗುಂದ

ಒಂದು ಕಡೆ ನಿನ್ನ ನೆನಪುಗಳು
ಈ ಮುಸುಕು ಮಳೆಯಂತೆ
ಬಿಟ್ಟೂ ಬಿಡದೆ ಜಿಟಿ ಜಿಟಿ
ಕವುಚಿ ಮಲಗಿದರೂ
ನುಸುಳಿ ಇರಿವ ಚೂರಿ ಚಳಿಯಂತೆ

ಗಲ್ಲಗೈಯ್ಯಾಗಿ ಕಕ್ಕುರುಗಾಲಲ್ಲಿ
ಕುಳಿತು ಕನಸು ಕಟ್ಟಲು
ಈ ಗೋಳ ಭೂಗೋಳದ ಅಂಚಲಿ
ಅವ ಇಂಚಿಂಚಾಗಿ ತೆರೆ ಸರಿಸಿ
ಮಿಣುಕು ಬೆಳಕು ಮಿಂಚು ಹೊತ್ತಿಸಿದ್ದಾನೆ

ಹಟ್ಟಿಯ ರಂಗೋಲಿಯ ಮಧ್ಯ
ಹೂ ನಗುವ ಚೆಂದಿರನ ತುಂಟಾಟ
ಅದುಮಿಟ್ಟ ಭಾವಗಳ ಪರದಾಟ
ತೂಗಿ ತೊನೆದು ಬಿಟ್ಟ ನೆತೆಯಂತ
ನಿನ್ನೊಡನೆ ಕಳೆದ ಗಳಿಗೆಗಳ ಆಟ

ಗಾಲುಗಲ್ಲದ ತುಟಿಯ ಬಯಕೆ
ಓರೆ ಮಾಡಿದ ಕದದ ಹಿಂದೆ ಅವಿತಂತಿದೆ
ಈ ತೋಳು ಎದೆ ಹಾಸು ಕಾಯುತ್ತಲೇ ಇದೆ
ಬರುವ ಇರುವ ಹಾದಿಯ ತಂಬಾ
ನವಿಲುಗಣ್ಣಿನ ಕನಸ ಗಾಯನ

‍ಲೇಖಕರು Admin

14 July, 2022

1 Comment

  1. T A M kotresh

    ಚೆಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading