ಬಸವರಾಜ ಕೋಡಗುಂಟಿ ಅಂಕಣ – ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಬೆಳಗಾವಿ ಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

21

ಬೆಳಗಾವಿ

ಬೆಳಗಾವಿ ಜಿಲ್ಲೆಯಲ್ಲಿ ದಾಕಲಾದ ಒಟ್ಟು ಬಾಶೆಗಳ ಸಂಕೆ ಅಯ್ವತ್ತೊಂದು. ಹಾಗೆಯೆ ಜಿಲ್ಲೆಯಲ್ಲಿ ಕನಿಶ್ಟ ತೊಂಬತ್ತೇಳು ಆಗುತ್ತವೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದೆ. ಒಟ್ಟು ಕನ್ನಡ ಮಾತುಗರ ಪ್ರತಿಶತತೆ ೬೮% ಇದೆ. ಕನ್ನಡದ ನಂತರ ಅತಿದೊಡ್ಡ ಬಾಶೆ ಮರಾಟಿ ಆಗಿದ್ದು ೧೯% ಇದೆ. ಆನಂತರ ಉರ‍್ದು ಬಾಶೆಗೆ ನಾಲ್ಕು ಲಕ್ಶಕ್ಕೂ ಹೆಚ್ಚು ಮಂದಿ ಇದ್ದು ಅತಿದೊಡ್ಡ ಬಾಶೆಗಳಲ್ಲಿ ಒಂದಾಗಿದೆ. ಇವುಗಳ ಜೊತೆಗೆ ಹಿಂದಿ, ತೆಲುಗು, ಕೊಂಕಣಿ ಮತ್ತು ಲಂಬಾಣಿ ಬಾಶೆಗಳು ಪರಿಗಣಿಸುವಶ್ಟು ಸಂಕೆಯ ಮಾತುಗರನ್ನು ಹೊಂದಿವೆ.

***

ಮೊದಲಿಗೆ ಜನಗಣತಿ ಕೊಟ್ಟಿರುವ ಬೆಳಗಾವಿ ಜಿಲ್ಲೆಯ ಮಾಹಿತಿಯನ್ನು ಅಟ್ಟದಲ್ಲಿ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ907911
ಆಸ್ಸಾಮಿ907911
ಬೆಂಗಾಲಿ1069719350
ಬೆಂಗಾಲಿ1069719350
ಡೋಗ್ರಿ1119120
ಡೋಗ್ರಿ1119120
ಗುಜರಾತಿ603530243011
ಗುಜರಾತಿ502225252497
ಪಟ್ಟಣಿ241014
ಸವರಾಶ್ಟ್ರ/ಸವರಾಶ್ಟ್ರಿ1477
ಇತರ975482493
ಹಿಂದಿ664983669429804
ಅವದಿ220
ಬಂಜಾರಿ348178170
ಬದ್ರಾವತಿ220
ಬೋಜ್ಪುರಿ362243119
ಬುಂದೇಲಿ/ಬುಂದೇಲ್ ಕಂಡಿ990
ಚತ್ತೀಸ್‍ಗರಿ990
ದುಂಡಾರಿ835
ಗರ‍್ವಾಲಿ63549
ಗೊಜ್ರಿ/ಗುಜ್ಜಾರಿ/ಗುಜರ್422
ಹರಿಯಾಣ್ವಿ28280
ಹಿಂದಿ390052222016785
ಕಾಂಗ್ರಿ110
ಕುಮವುನಿ61574
ಲಮಾಣಿ/ಲಂಬಾಡಿ19842102319611
ಮಗದಿ/ಮಗಹಿ330
ಮಂಡೇಅಲಿ220
ಮಾರ‍್ವಾರಿ510126862415
ನಾಗ್ಪುರಿಯ110
ಪಹರಿ28262
ರಾಜಸ್ತಾನಿ1206690516
ಸಾದನ್/ಸಾದ್ರಿ1046
ಇತರ403243160
ಕನ್ನಡ326906316564391612624
ಕನ್ನಡ326871416562461612468
ಕುರುಬ/ಕುರುಂಬ16106
ಪ್ರಾಕ್ರುತ/ಪ್ರಾಕ್ರುತ ಬಾಶಾ552728
ಇತರ278156122
ಕಾಶ್ಮೀರಿ25232
ಕಾಶ್ಮೀರಿ25232
ಕೊಂಕಣಿ210491067710372
ಕೊಂಕಣಿ209711062710344
ಕುಡುಬಿ/ಕುಡುಂಬಿ18135
ನವಾಯಿತಿ853
ಇತರ523220
ಮಯ್ತಿಲಿ342410
ಮಯ್ತಿಲಿ342410
ಮಲಯಾಳಂ1618799819
ಮಲಯಾಳಂ1587782805
ಯರವ241212
ಇತರ752
ಮಣಿಪುರಿ56524
ಮಣಿಪುರಿ54504
ಇತರ220
ಮರಾಟಿ893910450991442919
ಮರಾಟಿ 893878450975442903
ಆರೆ321616
ನೇಪಾಲಿ559329230
ನೇಪಾಲಿ558328230
ಓಡಿಯಾ110
ಓಡಿಯಾ1008626382
ಓಡಿಯಾ995622373
ಇತರ1349
ಪಂಜಾಬಿ705445260
ಪಂಜಾಬಿ705445260
ಸಂಸ್ಕ್ರುತ351619
ಸಂಸ್ಕ್ರುತ351619
ಸಂತಾಲಿ110
ಸಂತಾಲಿ110
ಸಿಂದಿ1150591559
ಕಚ್ಚಿ874146
ಸಿಂದಿ1062549513
ಇತರ110
ತಮಿಳು520126952506
ಕಯ್ಕಾಡಿ461927
ಕೊರವ1745833912
ತಮಿಳು341018431567
ತೆಲುಗು397642000219762
ತೆಲುಗು384171932819089
ವಡರಿ1748490
ಇತರ1173590583
ಉರ‍್ದು467816236804231012
ಉರ‍್ದು467743236765230978
ಇತರ733934
ಆದಿ110
ಆದಿ110
ಬಿಲಿ/ಬಿಲೊಡಿ834439
ಇತರ834439
ಬೊಟಿಯ110
ಬೊಟಿಯ110
ಕೂರ‍್ಗಿ/ಕೊಡಗು793742
ಕೂರ‍್ಗಿ/ಕೊಡಗು431
ಕೊಡವ753441
ದೇವೋರಿ1578
ದೇವೋರಿ1578
ಇಂಗ್ಲೀಶು1057480577
ಇಂಗ್ಲೀಶು1057480577
ಗಾರೊ110
ಗಾರೊ110
ಹಲಂ110
ಇತರ110
ಕಾಸಿ110
ಕಾಸಿ110
ಕಿನ್ನವುರಿ220
ಕಿನ್ನವುರಿ220
ಕೊಮ್211
ಕೊಮ್211
ಕೊರ‍್ವ734
ಇತರ734
ಕೊಯ281216
ಕೊಯ281216
ಕುಕಿ734
ಕುಕಿ734
ಕುರುಕ್/ಓರಆನ್440
ಕುರುಕ್/ಓರಆನ್440
ಲಡಾಕಿ550
ಲಡಾಕಿ550
ಲಹಂದ663036
ಇತರ663036
ಲಕೇರ್1165
ಮರ1165
ಲೊಹ್ತಾ220
ಲೊಹ್ತಾ220
ಲುಶಾಯಿ/ಮಿಜೊ 633
ಲುಶಾಯಿ/ಮಿಜೊ633
ಮಾವೊ110
ಮಾವೊ110
ಮೊಗ್110
ಮೊಗ್110
ಪಯ್ತೆ422
ಪಯ್ತೆ422
ತಾಡೊ202
ತಾಡೊ202
ಟಿಬೆಟನ್1138
ಟಿಬೆಟನ್1028
ಇತರ110
ತುಳು223411621072
ತುಳು222211541068
ಇತರ1284
ವಯ್ಪೆ110
ವಯ್ಪೆ110
ಜೆಮಿ110
ಜೆಮಿ110
ಜೊವು110
ಜೊವು110
ಇತರ229126103

ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಬಾಶಿಕ ಬಹುತ್ವ ಕಾಣಿಸುತ್ತದೆ. ಈ ಮೇಲಿನ ಅಟ್ಟವು ಒದಗಿಸುವ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ ಒಟ್ಟು ಅಯ್ವತ್ತು ಬಾಶೆಗಳು ದಾಕಲಾಗಿದ್ದು ಇತರ ಎಂಬ ಗುಂಪಿನಲ್ಲಿ ಕಡಿಮೆ ಮಾತುಗರು ಇರುವುದರಿಂದ ಅದನ್ನು ಒಂದು ಬಾಶೆ ಎಂದು ಲೆಕ್ಕಿಸಿದರೆ ಒಟ್ಟು ಅಯ್ವತ್ತೊಂದು ಬಾಶೆಗಳ ದಾಕಲೆ ಆದ ಹಾಗಾಯಿತು. ಹಾಗೆಯೆ ಒಟ್ಟು ತೊಂಬತ್ತಾರು ತಾಯ್ಮಾತುಗಳನ್ನು ಇದು ಪಟ್ಟಿಸುತ್ತದೆ. ಇತರ ಎಂಬ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಲೆಕ್ಕಿಸಿದರೆ ತಾಯ್ಮಾತುಗಳ ಸಂಕೆ ತೊಂಬತ್ತೇಳು ಆಗುತ್ತದೆ. ಇವುಗಳಲ್ಲಿ ಒಟ್ಟು ಹದಿನಾರು ಬಾಶೆಗಳಲ್ಲಿ ಇತರ ಎಂಬ ಗುಂಪು ಕಾಣಿಸುತ್ತದೆ. ಅವುಗಳೆಂದರೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಓಡಿಯಾ, ಸಿಂದಿ, ತೆಲುಗು, ಉರ‍್ದು, ಬಿಲಿ/ಬಿಲೊಡಿ, ಹಲಂ, ಕೊರ‍್ವ, ಲಹಂದ, ಟಿಬೆಟನ್ ಮತ್ತು ತುಳು. ಹಾಗಾದರೆ ಒಟ್ಟು ಹೆಸರಿಸಿದ ತಾಯ್ಮಾತುಗಳ ಸಂಕೆ ತೊಂಬತ್ತು ಆಗುತ್ತದೆ.

ಬೆಳಗಾವಿಯಲ್ಲಿ ಕನ್ನಡ ಹೆಚ್ಚು ಮಂದಿ ಮಾತಾಡುವ ಬಾಶೆಯಾಗಿದೆ. ಬೆಳಗಾವಿಯ ಒಟ್ಟು ಜನಸಂಕೆ 47,79,661 ಆಗಿದ್ದು ಇದರಲ್ಲಿ 32,69,063 (68.395%) ಮಂದಿ ಕನ್ನಡ ಮಾತಾಡುವವರು ಆಗಿದ್ದಾರೆ. ಕನ್ನಡವು ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿದ ಬಾಶೆಯಾಗಿದೆ. ಆನಂತರ ಮರಾಟಿ 8,93,910 (18.702%) ಮಂದಿ ಮಾತುಗರನ್ನು ಮತ್ತು ಉರ‍್ದು 4,67,816 (9.787%) ಮಂದಿ ಮಾತುಗರನ್ನು ಹೊಂದಿದ್ದು ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರಿರುವ ಬಾಶೆಗಳಾಗಿವೆ. ಮೂರು ಬಾಶೆಗಳಿಗೆ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿದ್ದಾರೆ. ಅವು, ಹಿಂದಿ – 66,498 (1.391%), ತೆಲುಗು – 39,764 (1.663%) ಮತ್ತು ಕೊಂಕಣಿ – 20,971 (0.438%). ಆನಂತರ ಒಟ್ಟು ಎಂಟು ಬಾಶೆಗಳಿಗೆ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಅವುಗಳೆಂದರೆ, ಗುಜರಾತಿ – 6,035 (0.126%), ತಮಿಳು – 3,410 (0.108%), ತುಳು – 2,234 (0.046%), ಮಲಯಾಳಂ – 1,618 (0.033%), ಸಿಂದಿ – 1,150 (0.024%), ಬೆಂಗಾಲಿ – 1,069 (0.022%), ಇಂಗ್ಲೀಶು – 1,057 (0.022%) ಮತ್ತು ಓಡಿಯಾ – 1,008 (0.021%). ಸಾವಿರಕ್ಕಿಂತ ಕಡಿಮೆ ಮತ್ತು ಒಂದು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಒಟ್ಟು ಮೂರು ಬಾಶೆಗಳು (ಪಂಜಾಬಿ, ನೇಪಾಲಿ ಮತ್ತು ಡೋಗ್ರಿ) ಇವೆ. ಹಾಗೆ ಇತರ ಎಂಬ ಗುಂಪಿನಲ್ಲಿಯೂ ನೂರಕ್ಕೂ ಹೆಚ್ಚು ಮಂದಿ (229) ಇದ್ದಾರೆ. ಆನಂತರ ನೂರಕ್ಕೂ ಕಡಿಮೆ ಮಾತುಗರು ಇರುವ ಒಟ್ಟು ಮೂವತ್ಮೂರು ಬಾಶೆಗಳು ಇವೆ. ಈ ಬಾಶೆಗಳನ್ನು ಕೆಳಗಿನಂತೆ ಚಿತ್ರಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ32,69,06368.395%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಮರಾಟಿ8,93,91018.702%
’’ಉರ‍್ದು4,67,8169.787%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಹಿಂದಿ66,4981.391%
’’ತೆಲುಗು39,7640.831%
’’ಕೊಂಕಣಿ21,0490.440%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಗುಜರಾತಿ6,0350.126%
’’ತಮಿಳು5,2010.108%
’’ತುಳು2,2340.046%
’’ಮಲಯಾಳಂ1,6180.033%
’’ಸಿಂದಿ1,1500.024%
’’ಬೆಂಗಾಲಿ1,0690.022%
’’ಇಂಗ್ಲೀಶು1,0570.022%
’’ಓಡಿಯಾ1,0080.021%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳುಪಂಜಾಬಿ, ನೇಪಾಲಿ, ಇತರ, ಡೋಗ್ರಿ1,6040.033%
ನೂರಕ್ಕಿಂತ ಕಡಿಮೆಮೂವತ್ಮೂರು ಬಾಶೆಗಳು5850.012%
ಒಟ್ಟು ಮಾತುಗರು47,79,661100%

ಬೆಳಗಾವಿ ಜಿಲ್ಲೆಯ ಜನಗಣತಿ ಒದಗಿಸಿರುವ ಈ ಮಾಹಿತಿಯಲ್ಲಿ ಇರುವ ತಾಯ್ಮಾತುಗಳನ್ನು ತುಸು ಗಮನಿಸಬಹುದು. ಇದರಿಂದ ಬೆಳಗಾವಿ ಜಿಲ್ಲೆಯ ಬಾಶೆಗಳ ಪಟ್ಟಿ ತುಸು ಬದಲಾಗುತ್ತದೆ. ಕರ್ನಾಟಕದ ಸಂದರ್ಬದಲ್ಲಿ ಪ್ರಮುಕವೆನಿಸುವ ಹಿಂದಿಯೊಳಗಿನ ತಾಯ್ಮಾತುಗಳನ್ನು ಕೆಳಗೆ ಪಟ್ಟಿಸಿದೆ.

ಹಿಂದಿ 66,498

ಬಂಜಾರಿ 348

ಹಿಂದಿ 39,005

ಲಮಾಣಿ/ಲಂಬಾಡಿ 19,842

ಮಾರ‍್ವಾರಿ 5,101

ರಾಜಸ್ತಾನಿ 1,206

ಹಿಂದಿಗೆ ಜಿಲ್ಲೆಯಲ್ಲಿ ದಾಕಲಾದ ಒಟ್ಟು ಮಾತುಗರ ಸಂಕೆ 66,498. ಇದರಲ್ಲಿ ಹಿಂದಿ ಮಾತಾಡುವ 39,005 ಮಂದಿ ಇದ್ದಾರೆ. ಇದು ಜಿಲ್ಲೆಯ ಒಟ್ಟು ಹಿಂದಿಯ 58.655% ಮತ್ತು ಜಿಲ್ಲೆಯ 0.816% ಆಗುತ್ತದೆ. ಲಮಾಣಿ ಹೆಸರಿನಲ್ಲಿ 19,842 ಮತ್ತು ಬಂಜಾರಿ ಹೆಸರಿನಲ್ಲಿ 348 ಮಂದಿ ಇದ್ದು ಇವೆರಡು ಸೇರಿದರೆ ಲಂಬಾಣಿ ಬಾಶೆಯ ಮಾತುಗರು 20,190 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 30.361% ಮತ್ತು ಜಿಲ್ಲೆಯ 0.422% ಆಗುತ್ತದೆ. ಇದರೊಟ್ಟಿಗೆ ಮಾರ‍್ವಾರಿ ಬಾಶೆಗೆ 5,101 (0.106%) ಮತ್ತು ರಾಜಸ್ತಾನಿಗೆ 1,206 (0.025%) ಮಂದಿ ಮಾತುಗರು ದಾಕಲಾಗಿದ್ದಾರೆ. ಈಗ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳ ಪಟ್ಟಿಗೆ ಹಿಂದಿಯ ಜೊತೆ ಲಂಬಾಣಿ ಸೇರಿಕೊಳ್ಳುತ್ತದೆ ಮತ್ತು ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಗೆ ಮಾರ‍್ವಾರಿ ಮತ್ತು ರಾಜಸ್ತಾನಿಗಳು ಬರುತ್ತವೆ.

ಇದರೊಟ್ಟಿಗೆ ತಮಿಳಿನ ಒಳಗೆ ದಾಕಲಾದ ಕೊರವಕ್ಕೆ 1,745 ಮಂದಿ ಮತ್ತು ಕಯ್ಕಾಡಿಗೆ 46 ಮಂದಿ ದಾಕಲಾಗಿದ್ದಾರೆ. ಇವೆರಡನ್ನು ಸೇರಿಸಿದರೆ ಕೊರವ ಸಂಕೆ 1,801 ಆಗುತ್ತದೆ. ಇದು ಜಿಲ್ಲೆಯ ತಮಿಳಿನ 34.627% ಮತ್ತು ಜಿಲ್ಲೆಯ 0.037% ಆಗುತ್ತದೆ. ತಮಿಳು ಮಾತಾಡುವ 3,410 ಮಂದಿ ಇದ್ದಾರೆ. ಇದು ತಮಿಳಿನ 65.564% ಮತ್ತು ಜಿಲ್ಲೆಯ 0.071% ಆಗುತ್ತದೆ. ತಮಿಳಿನ ಜೊತೆಗೆ ಕೊರವ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಗೆ ಸೇರುತ್ತದೆ. 

ಆನಂತರ ಓಡಿಯಾಕ್ಕೆ 1008 ಮಂದಿ ಮಾತುಗರು ದಾಕಲಾಗಿದ್ದು ಸಾವಿರಕ್ಕೂ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಯಲ್ಲಿ ಅದು ಸೇರಿಕೊಂಡಿದೆ. ಆದರೆ, ಇದರಲ್ಲಿ ಇತರ ಗುಂಪಿನಲ್ಲಿ 13 ಮಂದಿ ಇದ್ದಾರೆ. ಓಡಿಯಾ ತಾಯ್ಮಾತಿನ ಲೆಕ್ಕ ಹಾಕಿದಾಗ ಅದು 995 ಆಗುತ್ತದೆ. ಹೀಗಾಗಿ ಓಡಿಯಾ ಸಾವಿರಕ್ಕೂ ಹೆಚ್ಚು ಮಂದಿ ಇರುವ ಬಾಶೆಗಳ ಪಟ್ಟಿಯಿಂದ ಕೆಳಗಿಳಿಯುತ್ತದೆ. ತೆಲುಗು ಬಾಶೆಯಲ್ಲಿ ದಾಕಲಾಗಿರುವ ಇತರ ಗುಂಪಿನಲ್ಲಿ 1,173 (0.024%) ಮಂದಿ ದಾಕಲಾಗಿದ್ದಾರೆ.

ಈ ಎಲ್ಲ ಚರ‍್ಚೆಯನ್ನು ಮತ್ತು ಬೆಳಗಾವಿ ಜಿಲ್ಲೆಯ ತಾಯ್ಮಾತುಗಳನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮರುವಿನ್ಯಾಸಗೊಳಿಸಿ ಕೆಳಗೆ ಕೊಟ್ಟಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ32,68,71468.387%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಮರಾಟಿ8,93,87818.701%
’’ಉರ‍್ದು4,67,7439.786%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಹಿಂದಿ39,0050.816%
’’ತೆಲುಗು38,4170.803%
’’ಕೊಂಕಣಿ20,9710.438%
’’ಲಂಬಾಣಿ19,8420.415%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಗುಜರಾತಿ6,0350.126%
’’ಮಾರ‍್ವಾರಿ5,1010.106%
’’ತಮಿಳು3,4100.071%
’’ತುಳು2,2220.046%
’’ಕೊರವ1,8010.037%
’’ಮಲಯಾಳಂ1,5870.033%
’’ರಾಜಸ್ತಾನಿ1,2060.025%
’’ತೆಲುಗು-ಇತರ1,1730.024%
’’ಬೆಂಗಾಲಿ1,0690.022%
’’ಸಿಂದಿ1,0620.022%
’’ಇಂಗ್ಲೀಶು1,0570.022%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಬೆಳಗಾವಿ47,79,661ಕನ್ನಡ 32,68,71468.387%1
ಮರಾಟಿ8,93,87818.701%2
ಉರ‍್ದು4,67,7439.786%3
ಹಿಂದಿ39,0050.816%4
ತೆಲುಗು38,4170.803%5
ಕೊಂಕಣಿ20,9710.438%6
ಲಂಬಾಣಿ20,1960.422%7
ಗುಜರಾತಿ6,0350.126%8
ಮಾರ‍್ವಾರಿ5,1010.106%9
ತಮಿಳು3,4100.071%10

‍ಲೇಖಕರು Admin

July 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: