ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತವಕದಲ್ಲಿದೆ ಆ ನೆರಳೂ…!

-ದಾಕ್ಷಾಯಣಿ ಮಸೂತಿ

ಆ ನೆರಳು

ಮಲಗಿದಾಗ ಬೆನ್ನ
ಹಿಂದೆ ಯಾವುದೋ
ಮಾಯೆಯಂತೆ ಸದ್ದಿಲ್ಲದೆ
ಸರಿಯುತ್ತಲೇ‌‌ ಇದೆ
ಆ ನೆರಳು

ನಿಂತರೂ ಕುಂತರೂ
ಎದ್ದರೂ ಓಡಿದರೂ
ಜೊತೆಗಿರುವ ನೆರಳು
ಊಂ ಊಂ
ಅಲ್ಲವೇ ಅಲ್ಲ

ಮರದ ಹಣ್ಣಲೆಗಳ
ಜಾರುವಿಕೆಯಲಿ
ಏಕಾಏಕಿ ಗುರುತು
ಇಲ್ಲದಂತಾದ ಮರಳಗೂಡಿನಲಿ
ಇದ್ದಕ್ಕಿದ್ದಂತೆ ಇಲ್ಲವಾದ
ಸಂಬಂಧಗಳ ಕಳೇಬರಗಳಲಿ
ಖಾಲಿಯಾದ ಡಬ್ಬಗಳ ಚಡಪಡಿಕೆಗಳಲಿ
ಧುತ್ತನೆ ತನ್ನ ಇರುವಿಕೆಯನ್ನು
ಗಟ್ಟಿಗೊಳಿಸುತ್ತಲೇ
ಉರಿಗೊಳ್ಳುತ್ತದೆ.
ಛಾಯೆ!

ಲಟ್ಟಕ್ಕನೇ ಮುರಿದ
ಕಟ್ಟಿಗೆಯಲ್ಲಿ ಸುಳಿದ
ಅದರ ಬಿಂಬ
ಎಂದಾರೊಂದು ಒಂದು
ಘಳಿಗೆ ಆವರಿಸುವ
ತವಕದಲ್ಲಿದೆ
ಆ ನೆರಳೂ…!

‍ಲೇಖಕರು Admin

26 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading