ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 9 –ಆಸ್ಟ್ರೇಲಿಯಾ ಯಾಕೆ ಬಾರ್ಬಿಕ್ಯೂ ದೇಶ?

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.

ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.

ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.

ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.

ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.

ಸರಣಿ – 9

ಫೋಟೋ ಕೃಪೆ : ಪ್ರವೀಣ್ ಮೂರ್ತಿ

ಆಸ್ಟ್ರೇಲಿಯಾದಲ್ಲಿ ಬೆಂಕಿಗೂ ಒಂದು ಸಾಮಾಜಿಕ ಜೀವನ ಇದೆ. ನಮ್ಮಲ್ಲಿ ಬೆಂಕಿ ಸಾಮಾನ್ಯವಾಗಿ ಅಡುಗೆಮನೆಯೊಳಗೆ ಬದುಕುತ್ತದೆ. ಗೋಡೆಗಳ ನಡುವೆ. chimneyಗಳ ಕೆಳಗೆ. pressure cooker ಸೀಟಿಯ ನಡುವೆ. ಇಲ್ಲಿ ಮಾತ್ರ ಬೆಂಕಿ ಹೊರಗೆ ಬರುತ್ತದೆ. parkಗಳಿಗೆ ಬರುತ್ತದೆ. beachಗಳಿಗೆ ಬರುತ್ತದೆ. ಅಪರಿಚಿತರ ಮಧ್ಯೆ ಕುಳಿತುಕೊಳ್ಳುತ್ತದೆ.

Melbourneನಲ್ಲಿ ಮೊದಲ barbecue ನೋಡಿದ್ದು ರೆಸ್ಟೋರೆಂಟ್ ನಲ್ಲಿ ಅಲ್ಲ. ಒಂದು ಪಾರ್ಕ್ ನಲ್ಲಿ. ಸಂಜೆ ಐದು ಗಂಟೆ. Port Phillip Bay ಕಡೆಯಿಂದ ಗಾಳಿ ಬೀಸುತ್ತಿತ್ತು. ಚಳಿ ನಿಧಾನವಾಗಿ ಕಿವಿಯ ತುದಿಗೆ ಏರುತ್ತಿತ್ತು. ದೂರದಲ್ಲಿ tram ಹಾದುಹೋಯಿತು. ಮಕ್ಕಳು football ಆಡುತ್ತಿದ್ದರು. ಹತ್ತಿರದ steel grill ಮೇಲೆ onions ಸುಡುತ್ತಿದ್ದರು. ಹೊಗೆ ಮೇಲಕ್ಕೆ ಹೋಗಲಿಲ್ಲ. Melbourne ಗಾಳಿಯಂತೆ ಅದು ಮೊದಲು ಎಡಕ್ಕೆ ತಿರುಗಿತು. ನಂತರ ಬಲಕ್ಕೆ. ಕೊನೆಯಲ್ಲಿ ನಮ್ಮ ಮುಖಕ್ಕೆ ಬಂತು.

ಆ smell ವಿಭಿನ್ನ ವಾಗಿತ್ತು. Grilled meat. Caramelised onion. ಒದ್ದೆಯಾದ ಹುಲ್ಲು ಮತ್ತು ಚಳಿ.

ಪ್ರವೀಣ್ ನಗುತ್ತಾ ಹೇಳಿದ.
“Barbie.” ಮೊದಲಿಗೆ ಅರ್ಥವಾಗಲಿಲ್ಲ. ನಂತರ ಗೊತ್ತಾಯಿತು. ಇಲ್ಲಿ Barbie ಅಂದರೆ ಗೊಂಬೆ ಅಲ್ಲ.
Barbecue.

Barbecue ಅಂದರೆ ಇಲ್ಲಿ ಸಾಮಾನ್ಯವಾಗಿ ತೆರೆದ ಜಾಗದಲ್ಲಿ steel grill ಮೇಲೆ ಆಹಾರ ಬೇಯಿಸುವ ವಿಧಾನ. ಆದರೆ Australiansಗೆ ಅದು cooking ಮಾತ್ರ ಅಲ್ಲ. ಕೆಲವರು grill ಮುಂದೆ ನಿಂತಿರುತ್ತಾರೆ. ಕೆಲವರು onions ತಿರುಗಿಸುತ್ತಿರುತ್ತಾರೆ. ಕೆಲವರು ಮಾತಾಡುತ್ತಿರುತ್ತಾರೆ. ಆಹಾರ ನಿಧಾನವಾಗಿ ಸಿದ್ಧವಾಗುತ್ತದೆ. ಸಂಜೆ ಕೂಡ ಹಾಗೆಯೇ.

“ಇದು ಇಲ್ಲಿನ ವಿಶಿಷ್ಟ ಸಂಸ್ಕೃತಿ ,” ಎಂದ ಪ್ರವೀಣ್.

ಆಸ್ಟ್ರೇಲಿಯಾದಲ್ಲಿ ಸುಮಾರು ಎಪ್ಪತ್ತು ಪ್ರತಿಶತ ಮನೆಗಳ backyard ನಲ್ಲಿ barbecue setup ಇದೆ ಎಂದು ಹೇಳುತ್ತಾರೆ. ಆದರೆ Melbourneನಲ್ಲಿ ಆಶ್ಚರ್ಯ ಮನೆಗಳಲ್ಲ. Public barbecues.

ಮೊದಲ ಬಾರಿ parkನಲ್ಲಿ stainless steel structures ನೋಡಿದಾಗ drinking water station ಅನ್ನಿಸಿತು. ನಂತರ ಯಾರೋ button ಒತ್ತಿದರು. Heat ಶುರುವಾಯಿತು. Sausages grill ಮೇಲೆ ಬಿದ್ದವು.
“Free,” ಎಂದ ಪ್ರವೀಣ್.

ನನ್ನ ಭಾರತೀಯ ಮೆದುಳು ತಕ್ಷಣ suspicious ಆಯಿತು. Free? ಯಾರೂ token ಕೇಳುವುದಿಲ್ಲವೇ?
ಯಾರ permission ಬೇಡವೇ? ಯಾರೂ chain ಹಾಕುವುದಿಲ್ಲವೇ?

Melbourne parksಗಳಲ್ಲಿ ಇದು ಸಾಮಾನ್ಯ ದೃಶ್ಯ. ಯಾರೋ birthday ಆಚರಿಸುತ್ತಿರುತ್ತಾರೆ. ಯಾರೋ Sunday lunch ಮಾಡುತ್ತಿರುತ್ತಾರೆ. ಯಾರೋ grill ಮುಂದೆ ನಿಂತು ಕೇವಲ ಮಾತಾಡುತ್ತಿರುತ್ತಾರೆ.
ನಮ್ಮಲ್ಲಿ ಅತಿಥಿಗಳು ಬಂದರೆ ಸಾಮಾನ್ಯವಾಗಿ ಮನೆ ಒಳಗೆ ಕರೆಯುತ್ತೇವೆ. ಇಲ್ಲಿ ಜನ ಹೊರಗೆ ಕರೆಯುತ್ತಾರೆ.

ಬಹುಶಃ hospitalityಗೂ geography ಇರುತ್ತದೆ.
British settlers ತಂದ backyard cooking, ನಂತರ migrants ತಂದ flavours ಜೊತೆ ಬೆರೆತು barbecue ಇಲ್ಲಿ ನಿಧಾನವಾಗಿ ರಾಷ್ಟ್ರೀಯ ಅಭ್ಯಾಸವಾಯಿತು. ಆದರೆ ಈ history booksಗಿಂತ smokeನಲ್ಲಿ ಹೆಚ್ಚು ಕಾಣುತ್ತದೆ.

ಒಮ್ಮೆ ಒಂದು parkನಲ್ಲಿ Korean family meat ತಿರುಗಿಸುತ್ತಿತ್ತು. ಪಕ್ಕದಲ್ಲಿ Greek grandparents lamb ಮಾಡುತ್ತಿದ್ದರು. ಇನ್ನೊಂದು tableನಲ್ಲಿ Indian family aluminium foil ತೆಗೆಯುತ್ತಿತ್ತು. ಮಕ್ಕಳು ಎಲ್ಲರೂ ಒಟ್ಟಿಗೆ football ಆಡುತ್ತಿದ್ದರು. Smoke ಮಾತ್ರ common language.

Melbourne weather ಮತ್ತು barbecue ನಡುವಿನ ಸಂಬಂಧವೂ ವಿಚಿತ್ರ. ಇದು tropical Australia ಅಲ್ಲ. ಒಂದೇ ದಿನದಲ್ಲಿ ಹಲವು seasonಗಳು ಬಂದಂತೆ ಅನಿಸುವ ನಗರ. ಒಂದು ಸಂಜೆ ಜನ jackets ಹಾಕಿಕೊಂಡಿದ್ದರು. ಕೆಲವರು beanies ಹಾಕಿಕೊಂಡಿದ್ದರು. Grillನಿಂದ ಹೊಗೆ ಬರುತ್ತಿತ್ತು.
ಜನರ ಬಾಯಿಂದಲೂ ಹೊಗೆ ಬರುತ್ತಿತ್ತು. ಕ್ಷಣಕಾಲ ಯಾವುದು ಥಂಡಿ . ಯಾವುದು barbecue.
ತಿಳಿಯಲಿಲ್ಲ.

Traditional Australian barbecue ಕೂಡ ಸ್ವಲ್ಪ Australia ತರಹವೇ ಕಾಣುತ್ತದೆ. Complicated ಅಲ್ಲ. Snags ಎಂದು ಕರೆಯುವ sausages. Lamb chops. Steaks. Simple food. ಆದರೆ conversation complex.

Weekendನಲ್ಲಿ hardware storeಗಳಿಗೆ ಹೋದರೂ barbecue ತಪ್ಪಿಸಿಕೊಳ್ಳಲು ಆಗುವುದಿಲ್ಲ. ನೀವು hammer ಖರೀದಿಸಲು ಹೋಗುತ್ತೀರಿ. Paint ನೋಡಲು ಹೋಗುತ್ತೀರಿ. ಹೊರಗೆ charity sausage stall ನಿಂತಿರುತ್ತದೆ. Suddenly screws ಖರೀದಿಸುವ ಕೆಲಸ lunch break ಆಗಿಬಿಡುತ್ತದೆ.

Australian politicsಗೂ barbecue ಸಂಬಂಧ ಇದೆ.
Election ದಿನ polling booth ಹೊರಗೆ volunteers sausage grills ಮಾಡುತ್ತಾರೆ. Vote ಹಾಕಿದ ನಂತರ ಜನ breadನಲ್ಲಿ sausage ಇಟ್ಟು ತಿನ್ನುತ್ತಾರೆ.
ಇದನ್ನು Democracy Sausage ಎನ್ನುತ್ತಾರೆ.
ಕೆಲವು ದೇಶಗಳಲ್ಲಿ ಚುನಾವಣೆ anxiety produce ಮಾಡುತ್ತದೆ. ಇಲ್ಲಿ onions produce ಮಾಡುತ್ತದೆ.

ಈ ದೇಶದಲ್ಲಿ ಪ್ರಧಾನಮಂತ್ರಿ sausage tongs ತಪ್ಪಾಗಿ ಹಿಡಿದರೂ national news ಆಗಬಹುದು. ಇಲ್ಲಿ barbecue ಕೆಲವೊಮ್ಮೆ character certificate ತರಹ ಕಾಣುತ್ತದೆ.

ಒಂದು ಸಂಜೆ ಅಪರಿಚಿತರ ಪಕ್ಕದಲ್ಲಿ bench ಮೇಲೆ ಕುಳಿತು sausage ತಿನ್ನುವುದನ್ನು ನೋಡಿದೆ.ಯಾರೂ hurry ಮಾಡುತ್ತಿರಲಿಲ್ಲ. ಯಾರೂ reservation ಮಾಡಿರಲಿಲ್ಲ. ಯಾರೂ dress code follow ಮಾಡುತ್ತಿರಲಿಲ್ಲ. Perfect weatherಗಾಗಿ ಕಾಯದೆ ಬದುಕುವುದೂ ಒಂದು ಕಲೆ ಇರಬಹುದು.

ನಮ್ಮ ಆತಿಥ್ಯ ಸಾಮಾನ್ಯವಾಗಿ ಮನೆಯೊಳಗೆ ನಡೆಯುತ್ತದೆ. ಬಹುಶಃ ಅದಕ್ಕೇ ಭಾರತೀಯ ಅಡುಗೆಮನೆಯ ವಾಸನೆ ಗೋಡೆಗಳ ನಡುವೆ ಉಳಿಯುತ್ತದೆ. Australian barbecue ವಾಸನೆ ಮಾತ್ರ ಗಾಳಿಯಲ್ಲಿ ಬದುಕುತ್ತದೆ.

ಹಿಂತಿರುಗುವಾಗ parkನಲ್ಲಿ smoke ಇನ್ನೂ ತೇಲುತ್ತಿತ್ತು. ಒಬ್ಬ ಅಜ್ಜ grill clean ಮಾಡುತ್ತಿದ್ದರು. ಮಕ್ಕಳು ಇನ್ನೂ ಓಡುತ್ತಿದ್ದರು. ಯಾರೋ ಕೊನೆಯ onions ತಿರುಗಿಸಿದರು.

ಆ smoke ನೋಡುತ್ತಾ ನನಗೆ ಅನಿಸಿತು.
ಮನುಷ್ಯ ಇನ್ನೂ ಬೆಂಕಿಯ ಸುತ್ತ ನಿಂತಿದ್ದಾನೆ. ಇನ್ನೂ ಮಾತಾಡುತ್ತಿದ್ದಾನೆ. ಇನ್ನೂ ಆಹಾರ ಹಂಚಿಕೊಳ್ಳುತ್ತಿದ್ದಾನೆ.
Difference ಅಂದ್ರೆ ಈಗ ಒಂದು ಕೈಯಲ್ಲಿ tongs ಇವೆ.
ಮತ್ತೊಂದು ಕೈಯಲ್ಲಿ smartphone.

ಅದೇ ಬೆಂಕಿ .ಅದೇ ಮನುಷ್ಯ . ಸುತ್ತ ಕುಳಿತ ಕಥೆಗಳು ಮಾತ್ರ ಹೊಸದು.

। ನಾಳೆಗೆ ।

‍ಲೇಖಕರು Admin

2 June, 2026

ನಿಮಗೆ ಇವೂ ಇಷ್ಟವಾಗಬಹುದು…

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 10 – ಮೆಲ್ಬೋರ್ನ್ ನಲ್ಲಿ ಆಚಾರ್ಯ ಸುಶ್ರುತ..

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 10 – ಮೆಲ್ಬೋರ್ನ್ ನಲ್ಲಿ ಆಚಾರ್ಯ ಸುಶ್ರುತ..

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 8 – ಚಕ್ಕುಲಿಯ ವಿದೇಶಿ ಸಂಬಂಧಿ – Churros

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 8 – ಚಕ್ಕುಲಿಯ ವಿದೇಶಿ ಸಂಬಂಧಿ – Churros

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading