ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 6 – ಟ್ರಾಮ್‌ನಲ್ಲಿ ಕಂಡ ಮೆಲ್ಬೋರ್ನ್..

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.

ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.

ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.

ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.

ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.

ಸರಣಿ – 6

ಫೋಟೋ ಕೃಪೆ : ಪ್ರವೀಣ್ ಮೂರ್ತಿ

ಒದ್ದೆಯಾದ ಹಳಿಗಳ ಮೇಲೆ ಒಂದು bell ಸಣ್ಣದಾಗಿ ಮೊಳಗಿತು. ನಂತರ ಹಸಿರು -ಬಿಳಿ tram ಚಳಿಯ ಮಂಜನ್ನು ಕತ್ತರಿಸುತ್ತಾ ನಮ್ಮ ಮುಂದೆ ನಿಂತಿತು.
ಆ ಬೆಳಗ್ಗೆ Melbourne ಸಂಪೂರ್ಣವಾಗಿ ಚಳಿಯೊಳಗೆ ಮಡಚಿಕೊಂಡಿತ್ತು. ನಾನು ಮತ್ತು ರಂಜನಾ jacket, woollen cap, gloves ಹಾಕಿಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದೆವು. ಉಸಿರು ಹೊರಬಂದಾಗ ಹೊಗೆಯಂತೆ ಕಾಣಿಸುತ್ತಿತ್ತು. ಬೆಂಗಳೂರಿನಲ್ಲಿ ಜನ ಚಳಿಗೆ sweater ಹಾಕುತ್ತಾರೆ. Melbourneನಲ್ಲಿ ಜನ weather ಜೊತೆ formal agreement ಮಾಡಿಕೊಂಡಂತೆ ಕಾಣುತ್ತಾರೆ.
ಬನ್ನಿ, ಮೆಲ್ಬೋರ್ನ್‌ನ್ನು ನಿಜವಾಗಿ ಅರ್ಥಮಾಡಿಕೊಳ್ಳಬೇಕಾದರೆ ಒಮ್ಮೆ tramನಲ್ಲಿ ಪ್ರಯಾಣ ಮಾಡಲೇಬೇಕು ಎಂದಳು ನೈನಾ.

ನಾವು ಒಳಗೆ ಹತ್ತಿದ ಕ್ಷಣವೇ ಗಾಜಿನ ಮೇಲೆ ಮಂಜು ನಿಧಾನವಾಗಿ ಹಬ್ಬತೊಡಗಿತು. ಹೊರಗೆ ನಡುಗುವ ಚಳಿ. ಒಳಗೆ ಹಿತವಾದ ಬಿಸಿ. ಹಳೆಯ wooden finish. ಲೋಹದ ಹಿಡಿಗಳು. window ಪಕ್ಕದಲ್ಲಿ coffee cup ಹಿಡಿದು ಕುಳಿತಿದ್ದ ಜನ. ಆ bell ಮತ್ತೆ ಮೊಳಗಿತು.
ಆ ಶಬ್ದದಲ್ಲಿ ಏನೋ ವಿಚಿತ್ರ ಪರಿಚಯ ಇತ್ತು. ನಮ್ಮ ಬಾಲ್ಯದ cycle bell. ಹಳೆಯ Bangalore double-decker bus. railway platform announcement. ಎಲ್ಲವೂ ಸ್ವಲ್ಪ ದೂರದ ನೆನಪಿನೊಳಗಿಂದ ಒಂದೇ ಸಮಯದಲ್ಲಿ ಎದ್ದು ಬಂದಂತೆ.
Tram ನಿಧಾನವಾಗಿ ಚಲಿಸಲಾರಂಭಿಸಿತು.
ಮೊದಲ ಕೆಲವು ನಿಮಿಷಗಳಲ್ಲಿ ನನಗೆ ಒಂದು ಸಂಗತಿ ಅರ್ಥವಾಯಿತು. Tram ಒಂದು vehicle ಅಲ್ಲ. ಅದು ಒಂದು ನಗರದ ಮನಸ್ಥಿತಿ.

ಇಲ್ಲಿ ಬಸ್ ಆತುರದಲ್ಲಿ ಓಡುತ್ತದೆ. Metro ಭೂಗರ್ಭದಲ್ಲಿ ಮರೆಯಾಗುತ್ತದೆ. Tram ಮಾತ್ರ ನಗರದ ಜೊತೆಗೇ ಮಾತನಾಡುತ್ತಾ ಸಾಗುತ್ತದೆ. Cafeಗಳ ಮುಂದೆ. Graffiti ಗೋಡೆಗಳ ನಡುವೆ. ಮಳೆ ತೇವವಾದ ಮರಗಳ ಕೆಳಗೆ. Old Victorian ಕಟ್ಟಡಗಳ ಪಕ್ಕದಲ್ಲಿ.
ಕೆಲವೆಡೆ ಅದು ಜನರ drawing room ಹತ್ತಿರದಿಂದಲೇ ಹೋಗುತ್ತದೆ.

ಒಂದು balconyಯಲ್ಲಿ ಒಬ್ಬ ವೃದ್ಧ newspaper ಓದುತ್ತಿದ್ದ. Tram ಹಾದುಹೋದರೂ ಅವನು ತಲೆ ಎತ್ತಲಿಲ್ಲ. ಆ ದೃಶ್ಯ ವಿಚಿತ್ರವಾಗಿ ಸುಂದರವಾಗಿತ್ತು. ನಗರ ಮತ್ತು ಅದರ ಶಬ್ದಗಳು ಅವನ ಜೀವನದ background music ಆಗಿಬಿಟ್ಟಂತೆ. ನಮ್ಮಲ್ಲಿ ರಸ್ತೆ ಶಬ್ದ ಅಂದರೆ disturbance. ಇಲ್ಲಿ ಅದು neighbourhood rhythm.

ನೈನಾ ಹೇಳಿದಳು. Melbourneನಲ್ಲಿ world’s largest tram network ಇದೆ ಎಂದು. ಕೇಳಿ ಆಶ್ಚರ್ಯವಾಯಿತು. Australia ಬಗ್ಗೆ ನಾವು ಸಾಮಾನ್ಯವಾಗಿ cricket, kangaroo, beaches ಬಗ್ಗೆ ಯೋಚಿಸುತ್ತೇವೆ. ಆದರೆ ಈ ನಗರ ತನ್ನ ಆತ್ಮವನ್ನು overhead electric wiresಗಳಲ್ಲಿ ಅಡಗಿಸಿಕೊಂಡಿದೆ.
Gold rush ಕಾಲದಲ್ಲಿ horse-drawn tramಗಳಿಂದ ಆರಂಭವಾದ ವ್ಯವಸ್ಥೆ ಇನ್ನೂ ಓಡುತ್ತಿದೆ. ಕೆಲವು tramಗಳು ಹೊಸದಾಗಿವೆ. ಕೆಲವು almost museum pieces ಹಾಗೆ ಕಾಣುತ್ತವೆ. Melbourne ತನ್ನ historyಯನ್ನು delete ಮಾಡದೇ update ಮಾಡಿಕೊಂಡಂತೆ ಅನ್ನಿಸಿತು.

ಒಂದು ಟ್ರಾಮ್ ನಲ್ಲಿ ಒಬ್ಬ ಯುವತಿ knitting ಮಾಡುತ್ತಾ ಕುಳಿತಿದ್ದಳು. ಕಿವಿಯಲ್ಲಿ earphones. ಮಡಿಲಲ್ಲಿ ಅರ್ಧ ಮುಗಿದ ನೀಲಿ woollen scarf. Tram ತಿರುಗಿದಾಗ ಅವಳ knitting needle ಮೇಲೆ ಬೆಳಕು ಹೊಳೆಯಿತು. ಆ ಕ್ಷಣದಲ್ಲಿ ನನಗೆ ನಮ್ಮ ಅಜ್ಜಿಯ ನೆನಪಾಯಿತು. ಕರಾವಳಿಯ ಮನೆಯ ವರಂಡದಲ್ಲಿ ಸಂಜೆ ಹೊತ್ತು ಕೂತು ಅವಳು sweater ಹೊಲೆಯುತ್ತಿದ್ದಳು. ಸಾವಿರಾರು kilometre ದೂರದ Melbourne tram ಒಳಗೆ ಹಠಾತ್ ನಮ್ಮ ಮನೆಯ ಮೌನ ಬಂದು ಕುಳಿತಂತಾಯಿತು.

Travel ಅಂದರೆ ಬಹುಶಃ ಅದೇ. ಹೊಸ ದೇಶದಲ್ಲಿ ಹಳೆಯ ನೆನಪು ನಿಮ್ಮನ್ನು ಹುಡುಕಿಕೊಂಡು ಬರುವುದು.

ಹೊರಗೆ ಸಣ್ಣ ಮಳೆ ಆರಂಭವಾಯಿತು. ಒದ್ದೆಯಾದ ಹಳಿಗಳ ಮೇಲೆ tram ಚಕ್ರ ತಿರುಗುವ ಶಬ್ದ steel spoon ಅನ್ನು ಗಾಜಿನ ಗ್ಲಾಸಿನೊಳಗೆ ನಿಧಾನವಾಗಿ ತಿರುಗಿಸಿದಂತೆ ಇತ್ತು. Window ಮೇಲೆ ಮಂಜು. ಒಳಗೆ coffee ವಾಸನೆ. ಕೆಲವರು ಪುಸ್ತಕ ಓದುತ್ತಿದ್ದರು. ಯಾರೂ phoneನಲ್ಲಿ ಜೋರಾಗಿ ಮಾತನಾಡುತ್ತಿರಲಿಲ್ಲ.
ಭಾರತೀಯನಾಗಿ ಅದು ನನಗೆ ಸ್ವಲ್ಪ supernatural ಅನುಭವ ಅನ್ನಿಸಿತು.

ಇನ್ನೊಂದು ವಿಚಿತ್ರ ಸಂಗತಿ — Melbourneನ central zoneನಲ್ಲಿ tramಗಳು free. ಈಗಂತೂ ಕೆಲವು public transport services ಕೂಡ free ಮಾಡಿದ್ದಾರಂತೆ. ಅದನ್ನು ಕೇಳಿದ ಕ್ಷಣವೇ ಕರ್ನಾಟಕ ರಾಜಕೀಯ ಭಾಷಣಗಳ rhythm ನೆನಪಾಯಿತು.
“Free ಅಂದ್ರೆ free. ಎಲ್ಲರಿಗೂ free. No condition. Full guarantee.”
ಆದರೆ ಇಲ್ಲಿ interesting ವಿಷಯ ಬೇರೆ. ಯಾರೂ excitement ತೋರಿಸುತ್ತಿಲ್ಲ. ಯಾರೂ announcement video ಮಾಡುತ್ತಿಲ್ಲ. Tram ಹತ್ತುವವರು ಕೂಡ ಅದನ್ನು basic civic system ಅನ್ನೋ calmness ಜೊತೆ ಬಳಸುತ್ತಾರೆ. ನಮ್ಮಲ್ಲಿ free scheme ಬಂದರೆ ಮೊದಲು debate ಶುರುವಾಗುತ್ತದೆ. ಇಲ್ಲಿ free transport ಕೂಡ morning coffee ತರಹ ನಾರ್ಮಲ್ .

ಆ ಕ್ಷಣದಲ್ಲಿ ನನಗೆ ಒಂದು ದೊಡ್ಡ ಸತ್ಯ ಅರ್ಥವಾಯಿತು.
ಒಂದು ನಗರದ ಸಂಸ್ಕೃತಿ ಅದರ museumsನಲ್ಲಿ ಕಾಣುವುದಿಲ್ಲ. ಅದರ public transportನಲ್ಲಿ ಕಾಣುತ್ತದೆ.

ಜನ ಸೀಟ್ ಹೇಗೆ ಕೊಡುತ್ತಾರೆ. ಡೋರ್ ಮುಚ್ಚುವಾಗ ಹೇಗೆ ಕಾಯುತ್ತಾರೆ. ಸೈಲೆನ್ಸ್ ಅನ್ನು ಎಷ್ಟು ಗೌರವಿಸುತ್ತಾರೆ. ಇವೆಲ್ಲ civilisationನ blood reports.

ರಂಜನಾ ಕಿಟಕಿಯ ಹೊರಗೆ ನೋಡುತ್ತಾ ನಿಧಾನವಾಗಿ ಹೇಳಿದಳು, “ಈ city hurry ಮಾಡೋದಿಲ್ಲ.”
ಅದು ನಿಜ.
ಬಹಳಷ್ಟು ಆಧುನಿಕ ನಗರಗಳು ತಮ್ಮ ರಸ್ತೆಗಳ ಜೊತೆಗಿನ ಸಂಬಂಧ ಕಳೆದುಕೊಂಡಿವೆ. Metro ನಿಮ್ಮನ್ನು ಒಂದು pointನಿಂದ ಇನ್ನೊಂದು pointಗೆ ಕರೆದೊಯ್ಯುತ್ತದೆ. Tram ಮಾತ್ರ ಮಧ್ಯದಲ್ಲಿರುವ ಜೀವನವನ್ನೂ ತೋರಿಸುತ್ತದೆ.
ಕಿಟಕಿಯ ಹೊರಗೆ bakery. ಮಳೆಯೊಳಗೆ ನಿಂತಿರುವ ಯುವ ಜೋಡಿ . ನಾಯಿ ಜೊತೆ ನಡೆಯುತ್ತಿರುವ ವೃದ್ಧೆ. Corner cafe ಒಳಗಿನ laughter. ನಗರ ಮಾಯವೇ ಆಗುವುದಿಲ್ಲ. ಅದು ನಿಮ್ಮ ಜೊತೆ ಪ್ರಯಾಣಿಸುತ್ತದೆ.

ಬಹುಶಃ ಅದಕ್ಕೇ tram cityಗಳಿಗೆ ಒಂದು ವಿಭಿನ್ನ rhythm ಇರುತ್ತದೆ. ಅವು speed ಬಗ್ಗೆ obsess ಆಗುವುದಿಲ್ಲ. Presence ಬಗ್ಗೆ ಕಾಳಜಿ ವಹಿಸುತ್ತವೆ.
ನಾವು ಇಳಿದ ನಂತರ tram ಮತ್ತೆ ನಿಧಾನವಾಗಿ ಮುಂದೆ ಸರಿಯಿತು. Window ಪಕ್ಕದಲ್ಲಿ ಕುಳಿತಿದ್ದ knitting ಮಾಡುತ್ತಿದ್ದ ಯುವತಿ ಇನ್ನೂ ತನ್ನ scarf ಹೊಲೆಯುತ್ತಿದ್ದಳು. ಹೊರಗೆ ಮಳೆ ಇನ್ನೂ ಬೀಳುತ್ತಿತ್ತು.
ಆ ಬೆಳಗ್ಗೆ ನನಗೆ ಅನ್ನಿಸಿತು — ಕೆಲವು ನಗರಗಳು ರಸ್ತೆಗಳ ಮೂಲಕ ನೆನಪಾಗುವುದಿಲ್ಲ. ಅವು ಹಳಿಗಳ ಮೂಲಕ ನೆನಪಾಗುತ್ತವೆ.

। ನಾಳೆಗೆ ।

‍ಲೇಖಕರು Admin

30 May, 2026

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. ಶ್ರೀನಿವಾಸ್ ರೈತ

    Nice, experiential explanations. ಅಲ್ಲಿನ ಅನುಭವವನ್ನು ಭೂತ ಕಾಲಕ್ಕೆ ಮತ್ತು ನಮ್ಮ ಇಲ್ಲಿನ ಜೀವನಕ್ಕೆ ಓರೇ ಹಚ್ಚಿ ವಿವರಿಸಿದ್ದಾರೆ. ಬಹಳಷ್ಟು ಸೂಕ್ಷ್ಮ ಸಂವೇದನಾ ಸಣ್ಣ ಸಣ್ಣ ಘಟನೆಗಳನ್ನು ಮನ ಮುಟ್ಟುವಂತೆ ಲೇಖಕರು ಬರೆದಿ ದ್ದಾರೆ.
    ನಾವೇ ಟ್ರಾಮ್ ನಲ್ಲಿ ಪ್ರಯಾಣಿಸುತಿದ್ದೀವೆನೋ ಎಂಬ ಅನುಭವ ಓದುಗರಿಗೆ. ಧನ್ಯವಾದಗಳು.

    Reply

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading