-ಮಲ್ಲಿಕಾರ್ಜುನ ಮಹಾಮನೆ
ಕಲೆ : ಫಿಲಿಪ್ ಪೆಟ್ರೋವಿಕ್
1 ತಂಗಾಳಿ ಸಾಲು
ಬೇಸಿಗೆಯ ಮಳೆಯಂತೆ
ಅವಳು
ಕಾಮನಬಿಲ್ಲಾಗಿ ಕಾಡುತ್ತಾಳೆ
ಸುಡು ಸುಡುವ
ನನ್ನೆದೆಯಲಿ
ಹನಿ ಹನಿಯಾಗುತ್ತಾಳೆ
ಮುಗಿಲ ಒಲವಾಗಿ
ನನ್ನ ಹೃದಯದ
ಧರೆಗೆ
ಇಳಿಯುತ್ತಾಳೆ
ದಾಮಿನಿ
ತಂಪ ಸುರಿದು
ಮಾಯವಾಗುತ್ತಾಳೆ
ಮೋಹಿನಿ

2 ತಂಗಾಳಿ ಸಾಲು
ತುಂತುರು ಮಳೆಯಲಿ
ನಿನ್ನ ಜೊತೆಗೆ
ಹೆಜ್ಜೆ ಹಾಕಿದ್ದು
ಕೈ ಸೋಕಿದಾಗ
ಭುಜ ತಾಕಿದಾಗ
ನನ್ನಲ್ಲಿ ಮಿಂಚು ಹರಿದಾಡಿದ್ದು
ತುಂತುರು ಹನಿ
ನಿನ್ನ ಹಣೆಯ ಅಲಂಕರಿಸಿದಾಗ
ನಾನು ಅಲ್ಲಿ
ಕಾಮನಬಿಲ್ಲ ಕಂಡಿದ್ದು
ಗುಡುಗು ಸಿಡಿಲು
ಅಬ್ಬರಿಸಿದಾಗ
ನೀ ನನ್ನ ತಬ್ಬಿಕೊಂಡಿದ್ದು
ಜೋರು ಮಳೆಯಲಿ
ನಾವು ತೊಯ್ದು ತೊಪ್ಪೆಯಾಗಿದ್ದು
ನಿನ್ನ ತೋಳಲಿ ನಾನು
ನನ್ನ ತೋಳಲಿ ನೀನು
ಬೆಚ್ಚಗಾಗಿದ್ದು
ನೀ ನನ್ನ ಕೊರಳಿಗೆ
ಮುತ್ತನಿಟ್ಟಿದ್ದು
ಕಿವಿ ಕಚ್ಚಿದ್ದು
ಎಲ್ಲ ನೆನಪಾಯಿತು…
ಯಾಮಿನಿ
ಬದುಕಿನ ಇಳಿ ಸಂಜೆಯಲಿ
ಒಂಟಿ ಪಯಣದಲಿ
ನಿನ್ನ ನೆನಪು
ಹಸಿರಾಯಿತು…
ನೀ ಚೆಂದ ಇದ್ದೀಯಲ್ಲಾ..
ಎಲ್ಲಿರುವೆ..
ಮನೆಯವರು…???






0 Comments