ಜೊತೆ ಸಾಗಿದರು ಜೊತೆಗೂಡಿಲ್ಲ!

ಯಾನ

ಲಕ್ಷ್ಮಿ ವಾರಣಾಶಿ ಅಡ್ಕತಿಮಾರ್

ಇದು ಕಾಡ ರಾತ್ರಿಯ ಹೊಳಪು
ದೀಪ ಆರುತಿದೆ ಇದರ ಪ್ರಖರತೆ ಕಂಡು!
bird on shoulderದಾರಿ ಒಬ್ಬಂಟಿ ನಡೆಯುತಿಹೆ ಜೊತೆಯಾಗಿ
ಬಿರುಸು ಶಬ್ದಕೆ ಹೆದರಿ
ಮರೆತ ನುಡಿಗಳು ಮತ್ತೆ ಉದುರಿ
ಸಾಗುತಿವೆ ಪಯಣ ಹುಡುಕಿ

ದೂರ ಮತ್ತೂ ದೂರ ಇನ್ನೂ ದೂರ
ಮುಗಿಯದು ಹಾದಿ
ಉಸಿರು ನಿಲ್ಲುವ ತನಕ ಸಾಗಬೇಕು
ಮತ್ತೆ ಇರುವುದೆ ಬದುಕು ?

ಆಸೆಗಳ ಮೂಟೆ ಕಟ್ಟಿ
ಹಸಿವಿನ ಬನ್ನ ಅಟ್ಟಿ
ಕೋಪ ತಾಪಗಳ ಕಾಲು ಮುಟ್ಟಿ
ಜಾರುತಿದೆ ಸಮಯ ಅರ್ಥ ಹುಡುಕಿ

ರೈಲು ಹಳಿಗಳು ಆ ಕಾಡ ದಾರಿಯಲಿ ಸಾಗಿದೆ
ಕೊನೆ ಇನ್ನು ತಲುಪಿಲ್ಲ
ಅದನ ಇಟ್ಟವರಾರು ?
ಜೊತೆ ಸಾಗಿದರು ಜೊತೆಗೂಡಿಲ್ಲ !
ನಡು ರಾತ್ರಿಯ ಯಾನ
ಬಿಸಿಯ ಧಗೆಯ ಮರೆಮಾಚಿದೆ
ಬೆಳಕ ಸುಳಿವಿಲ್ಲ !!

‍ಲೇಖಕರು admin

May 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. kvtirumalesh

    ಲಕ್ಷ್ಮಿ ಅವರೇ
    ಸಾಮಾನ್ಯ ರೂಪಕವೊಂದನ್ನು (ಹಳಿಗಳು ಜತೆಜತೆಯಾಗಿ ಸಾಗುತ್ತವೆ, ಅದರೆ ಯಾವತ್ತೂ ಒಟ್ಟು ಸೇರುವುದಿಲ್ಲ ಎನ್ನುವುದನ್ನು) ಅಸಾಮಾನ್ಯವಾಗಿ ಬಳಸಿದ್ದೀರಿ! ಆದ್ದರಿಂದ ನಿಮ್ಮ ಕವಿತೆ ನನಗೆ ಇಷ್ಟವಾಯಿತು. ಅಲ್ಲದೆ ಆ ಕಾಡಿನ ಪರಿಸರ ಕವಿತೆಗೆ ಅನನ್ಯವಾದ ಹಿನ್ನೆಲೆಯೊಂದನ್ನು ಕೊಡುತ್ತದೆ. ಅಲ್ಮೋಸ್ಟ್ ಮೆಟಫಿಸಿಕಲ್. ಟ್ರೇನಿನ ಇಮೇಜರಿ ನನಗೆ ವೈಯಕ್ತಿಕವಾಗಿ ಬಹಳ ಇಷ್ಟ. ನನ್ನ ಬಾಲ್ಯಕಾಲದ ಪ್ರಜ್ಞೆಯನ್ನು ರೂಪಿಸಿದ ಸಂಗತಿಗಳಲ್ಲಿ ಟ್ರೇನಿನ ಯಾನ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಇಲ್ಲಿ ತಂದು ಇಟ್ಟವರಾರು, ಅಲ್ಲವೇ?!
    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ
  2. ಚಿದನಂದ ಮಾಸನಕಟ್ಟಿ

    ಇಲ್ಲಿ ಯಾವ ದಾರಿಗಳಿಗು ಕೊನೆಯಿಲ್ಲ ಮೇಡಂ, ಹಳೆ ದಾರಿಗಳಿಗೆ ಹೊಸ ದಾರಿಗಳು ಅಂಟುತ್ತಲೇ ಇವೆ. ಸಾವರಿಸಿಕೊಂಡು ಮುಂದೆ ಹೋಗಬೇಕೆನ್ನುತ್ತೆ ಜೀವ……

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: