ಮೂಲ – ಹಿಂದಿ (ಮೇರಿ ಡೈರಿ)
ಕನ್ಬಡಕ್ಕೆ : ನಾಗರಾಜ ಮಸೂತಿ
ಜೇಬು ಇಲ್ಲದ ಬಟ್ಟೆ
ಕೈಗೆಟಕದಿರುವ ವಸ್ತುಗಳ ಕುರಿತು
ದೂರು ಸಲ್ಲಿಸುವುದೇ ಜೀವನ ಆಗೋಗಿದೆ.
ಬೆಲೆ ಬಾಳುವ ಸಮಯ,
ಬೆಲೆ ಪಾವತಿಸದೆ ಸಿಕ್ಕಾಗ ಸದುಪುಯೋಗ ಆಗದಿರುವುದು ನಿಸ್ಸಂದೇಹ,
ಮನುಷ್ಯನನ್ನು ಮನುಷ್ಯನಂತೆ ನೋಡಲಿಲ್ಲವೆಂದು
ಅರಿವಿಗೆ ಬಂದಿದ್ದು ಅಂತಿಮ ಗಳಿಗೆಯಲ್ಲಿ.
ಹೀಗೆ ಗೊಂದಲಕ್ಕೆ ಬದುಕು ಒಡ್ಡಿ, ಏನೊಂದು ಅನುಭವಿಸದೆ ಸಮಯ ಕಳೆದು ಹೋಯಿತೆಂದು ಕಪಾಳು ಒದ್ದೆ ಆಗಿದ್ದು ಕೊನೆಯ ಕಂಬನಿಯಲ್ಲಿ.
ಇದು ಕೇವಲ ನನ್ನ ಅಥವಾ ನಿನ್ನ ಕಥೆಯಲ್ಲ,
ಜಗದ ಬಹುತೇಕರ ಕಥೆ.
ಜೀವನಪೂರ್ತಿ ಹಣ ತುಂಬಿದ ಜೇಬು ಬಯಸುತ್ತೆವೆ,
ಅರಿವಿಗೆ ಬರುವುದು ಜೇಬು ಇಲ್ಲದ ಬಟ್ಟೆ
ನಮ್ಮ ಶವಕ್ಕೆ ಹೊದಿಸಿದಾಗ.






0 Comments