ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಾ ಶಿವಯೋಗಿಮಠ ಅನುವಾದಿಸಿದ ಗಿಬ್ರಾನ್ ನ ಹೂವಿನ ಹಾಡು

 ಚೈತ್ರಾ ಶಿವಯೋಗಿಮಠ

ಸೃಷ್ಟಿ ಉಲಿದು ಪುನರುಚ್ಛರಿಸಿದ
ಮೆಲುದನಿಯು ನಾನು
ನೀಲ ನಭದಿಂದುದುರಿ,
ಹಸಿರ ಹಾಸಿನ ಮೇಲೆ
ಬಿದ್ದ ನಕ್ಷತ್ರ ನಾನು
ಪಂಚಭೂತಗಳೊಂದಿಗಿನ ಸಮಾಗಮದಿಂದ
ಮಾಗಿಯು ಗರ್ಭಧರಿಸಿ,
ಚೈತ್ರ ಹಡೆದು,
ವೈಶಾಖದ ಮಡಿಲಲಿ ಆಡಿ ಬೆಳೆದು,
ಶರದ್ ಶಯ್ಯೆಯ ಮೇಲೆ
ಚಿರನಿದ್ರೆಗೆ ಜಾರುವ ಮಗಳು ನಾನು

ಅರುಣೋದಯದಿ ತಂಗಾಳಿಯೊಂದಿಗೆ
ಸಂಘಟಿಸಿ ಬೆಳಕಿನಾಗಮನವ ಸಾರುವೆನು
ಸಂಧ್ಯಾಕಾಲದಿ ಹಕ್ಕಿಗಳೊಡಗೂಡಿ,
ನಿರ್ಗಮಿಸುವ ಬೆಳಕ ಬೀಳ್ಕೊಡುವೆನು.

ಬಯಲುಗಳು ನನ್ನ ಸುಂದರ ಬಣ್ಣಗಳಿಂದ
ವರ್ಣರಂಜಿತವಾಗಿ ಸಿಂಗರಿಸಿಕೊಂಡಿವೆ,
ಗಾಳಿ ನನ್ನ ನಸುಗಂಪಿನಿಂದ ಸುವಾಸಿತ.


ನಿಶೆಯ ಕಂಗಳು ನಾನು ಸುಖನಿದ್ರೆಗೆ
ಜಾರುತ್ತಿದಂತೆ ನನ್ನ ಕಾವಲು ಕಾಯುವವು.
ಬೆಳಕ ಏಕೈಕ ಕಣ್ಣಾದ
ದಿನಮಣಿಯ ಏಳುತಲಿ ದಿಟ್ಟಿಸುವೆನು.

ಮದಿರೆಗೆ ಇಬ್ಬನಿಯ ಸೇವಿಸುವೆ,
ಹಕ್ಕಿಗಳ ಚಿಲಿಪಿಲಿಯ ಆಲಿಸಿ,
ಲಯಬದ್ಧವಾಗಿ ತೊನೆದಾಡುವ ಹುಲ್ಲಿನ
ತಾಳಕೆ ನಾ ಕುಣಿಯುವೆ.

ಪ್ರೇಮಿಯ ಪ್ರೇಮ ಕಾಣಿಕೆ ನಾ,
ಮದುವೆಗೆ ಹೂಮಾಲೆ ನಾ,
ಸಂತಸದ ಕ್ಷಣಗಳ ಸವಿನೆನಪು ನಾ,
ಮಡಿದ ಜೀವಕೆ ಕೊನೆಯ ಕಾಣಿಕೆ ನಾ,
ಸುಖ-ದುಃಖಗಳ ಅವಿಭಾಜ್ಯ ಅಂಗ ನಾ.

ಮನುಜ ಅರಿಯಬೇಕಾದ್ದು ಇದು ಕೇಳು
ಸದಾ ನಲಿವಿನ ಬೆಳಕ ತಲೆ ಎತ್ತಿ ನೋಡುವೆ.
ನೋವಿನ ನೆರಳ ಎಂದಿಗೂ ತಲೆಬಾಗಿ ನೋಡೆನು.

‍ಲೇಖಕರು nalike

31 July, 2020

4 Comments

  1. Prajna Mattihalli

    Good poem Chaitra but it would be better except last pyara Poems sound nice without preechings

  2. prathibha nandakumar

    Brilliant translation ಚೈತ್ರಾ ಶಿವಯೋಗಿಮಠ

  3. ಚೈತ್ರಾ ಶಿವಯೋಗಿಮಠ

    ಥ್ಯಾಂಕ್ಯೂ ಮ್ಯಾಮ್

  4. ಚೈತ್ರಾ ಶಿವಯೋಗಿಮಠ

    Thank you madam…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading