ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗ್ರಾಮೀಣ ಪ್ರಾದೇಶಿಕ ಕತೆಗಳಾಗಿ ಅನನ್ಯ

ಡಾ ರಾಮಕೃಷ್ಣ ಗುಂದಿ ಅವರ ‘ಸಮಗ್ರ ಕತೆಗಳು’

ಈ ಕೃತಿಯ ಕುರಿತ ಉದಯಕುಮಾರ್ ಹಬ್ಬು ಬರಹ ಇಲ್ಲಿದೆ.

-ಉದಯಕುಮಾರ್ ಹಬ್ಬು

ಡಾ ರಾಮಕೃಷ್ಣ ಗುಂದಿ ಅವರ ಸಮಗ್ರ ಕತೆಗಳು ಈವರೆಗೆ ಬಂದ ನಾಲ್ಕು ಕಥಾ ಸಂಕಲನಗಳ ಕಥಾಸಮುಚ್ಚಯವಾಗಿದೆ. ಈ ಕಥಾ ಸಂಕಲನಗಳ ಮೊದಲ ಸಂಕಲನ” ಆವಾರಿ” ಇದರ ಲೇಖಕರ ಮುನ್ನುಡಿಯಲ್ಲಿ ಡಾ ರಾಮಕೃಷ್ಣ ಗುಂದಿ ಅವರು ಹೀಗೆ ಬರೆಯುತ್ತಾರೆ:” ನಾನು ಹುಟ್ಟಿ ಬೆಳೆದು ಬಂದ ದಲಿತ‌ ”ಆಗೇರ” ಜನಾಂಗದ ಅನಕ್ಷರತೆ, ಅಜ್ಞಾನ, ಹಸಿವು,ಬಡತನಗಳ ಕಾರಣದಿಂದ ಸಮುದಾಯವು ಅನುಭವಿಸುತ್ತಿರುವ ಶೋಷಣೆ-ಅವಮಾನ, ಸಾಮಾಜಿಕ ತಿರಸ್ಕಾರಗಳನ್ನು ಬಾಲ್ಯದಿಂದದಲೂ ಗಮನಿಸುತ್ತಲೇ ಬೆಳೆದವನು ನಾನು.

…..” ಎಪ್ಪತ್ತು ಎಂಬತ್ತರ ದಶಕಗಳಲ್ಲಿ ರಾಜ್ಯಾದ್ಯಂತ ‌ರೂಪುಗೊಳ್ಳುತ್ತಿದ್ದ ದಲಿತ ಬಂಡಾಯದ ಚಳವಳಿ‌ ನನ್ನ ಅಭಿವ್ಯಕ್ತಿಯ ಅಭಿಲಾಷೆಗೆ ಒಂದು ಸ್ಪಷ್ಟತೆಯನ್ನು ನೀಡಿತು. ಚಳವಳಿಯ ಮುಂಚೂಣಿಯಲ್ಲಿದ್ದ ದೇವನೂರು, ಬೆಸಗರಹಳ್ಳಿ, ಸಿದ್ಧಲಿಂಗಯ್ಯ,ಕುಂ. ವಿ. ಮುಂತಾದ ಲೇಖಕರ ಬರಹ ಮತ್ತು ವಿಚಾರಗಳು ನನ್ನನ್ನು ಬಹಳವಾಗಿ ಪ್ರಭಾವಿಸಿದವು. ನನ್ನ ಬರಹಗಳಿಗೆ ಪ್ರೇರಣೆಯೂ ಆದವು. ಅಂಥ‌ ಸನ್ನಿವೇಶದಲ್ಲಿ ನನ್ನ ಸುತ್ತಲಿನ ಕತ್ತಲ ಬದುಕಿನ‌ ಅಭಿವ್ಯಕ್ತಿಗಾಗಿ ನಾನು ಕಥಾಸಾಹಿತ್ಯ ಪ್ರಕಾರವನ್ನು ನನ್ನ ಮಾಧ್ಯಮವಾಗಿ ಆಯ್ದುಕೊಂಡೆ.” ಇದು ಅವರ ಬರಹಗಳ ಹಿನ್ನೆಲೆ.

ಆವಾರಿ ಈ ಕಥೆಯ ಕುರಿತು ರಾಮಕೃಷ್ಣ ಗುಂದಿಯವರೆ  ಬರೆಯುತ್ತಾರೆ: ” ‘ಆವಾರಿ’ ನಮ್ಮ ಭಾಗದ ಗ್ರಾಮದೇವತೆಗಳಿಗೆ ಒಪ್ಪಿಸುವ ಒಂದು ವಾರ್ಷಿಕ ಹರಕೆ. ಹನೆಹಳ್ಳಿ ಎಂಬ ಗ್ರಾಮದಲ್ಲಿ ಆಗೇರ ಕೊಪ್ಪದ ಆಗೇರರಿಗೆ ರಕ್ತಬಯಲಕಡೆ ಸೋಂಕು ಒಬ್ಬೊಬ್ಬರನ್ನಾಗಿ ಬಲಿ ತೆಗೆದುಕೊಳ್ಳುತ್ತಿರುತ್ತದೆ. ಆಗೇರ  ಕೊಪ್ಪದವರು ಇದರ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗದೆ ಗ್ತಾಮದೇವತೆ ಮುರ್ಕುಂಡಿ ದೇವರು ಸಿಟ್ಟಿಗೆದ್ದು ಸಾಯುತ್ತಿದ್ದಾರೆ ಎಂಬ ಮೌಢ್ಯಕ್ಕೆ ಸಿಕ್ಕಿಕೊಂಡವರು. ಬೀರ ಎಂಬವನು ಸಮುದಾಯದ ನಾಯಕನಾಗಿ ತನ್ನ ಸಮಾಜದಲ್ಲಿ ಸಂಭವಿಸುತ್ರಿರುವ ಈ ಸಾವುಗಳನ್ನು ನಿಲ್ಲಿಸಬೇಕಿದೆ‌ ‌ನಿರೂಪಕ ನಿರೂಪಿಸಿದಂತೆ” ಅವರಿಗೆ ಡಾಕ್ಟರರು ಹೇಳಿದ ಔಷಧಿ ತರಲಾಗುವುದಿಲ್ಲ. ಹೆಚ್ಚೆಂದರೆ ಮುರ್ಕುಂಡಿ ದೇವರಿಗೆ ಹರಕೆ ಹೊರುತ್ತಾರಷ್ಟೆ‌ 

ಈ ಮುರ್ಕುಂಡಿ ದೇವರಿಗೆ ‘ಆವಾರಿ’ ಆಗಬೇಕು. ಆಗ ಆಗೇರು ಸಾವಿನ ಸರಪಳಿಯಿಂದ ಪಾರಾಗಬಹುದು ಎಂದು ಆಗೇರರು ಅವರ ಸಮಾಜದ ಬುದವಂತ ಬೀರನ ಮೇಲೆ ಆವಾರಿ ಮಾಡಿಸುವ ಜವಾಬ್ದಾರಿ ಹೊರಿಸುತ್ತಾರೆ‌ ಆವಾರಿ ಎಂದರೆ ದೇವರಿಗೆ ಕುರಿಯ ಬಲಿ ಕೊಡಬೇಕು. ಈ ಕುರಿಬಲಿಯ ಹೆಚ್ಚಿನ ಲಾಭ ಪಡೆಯುವವರು ದೇಗುಲದ ಮೊಕ್ತೇಸರ ಮತ್ತು ‌ಗುನಗಿಯರು. ಈ ಕುರಿಯನ್ನು ಖರೀದಿಸಲು ಹಣವೆಲ್ಲಿ? ಅವರು ಮೊಕ್ತೇಸರರಿಗೆ ಮೊರೆ ಹೋಗಿ ಎಲ್ಲ ಆಗೇರರೂ ತಲಾ ಐವತ್ತು ರೂಪಾಯಿಯಂತೆ ಸಾಲ ಪಡೆಯೋದು. ಮತ್ತು ಅದು ತೀರಿಸಲಾಗದೆ ಮೊಕ್ತೇಸರರ ಮನೆಯಲ್ಲಿ ಸಾಲ ತೀರುವವರೆಗೂ ಜೀತದಾಳಾಗಿರುವುದು. ಕುರಿ ಬಲಿ ಕೊಡುವುದು ಆಗೇರ ಬುದವಂತನೆ. ಆದರೆ ಕುರಿಯ ಮಾಂಸದ ಅರ್ಧಭಾಗ ಮೊಕ್ತೇಸರನಿಗೆ, ಉಳಿದರ್ಧ ಬಾಗದಲ್ಲಿ ಅರ್ಧ ಗುನಗಿಯರಿಗೆ, ಉಳಿದ ಸ್ವಲ್ಪ ಮಾಂಸವನ್ನು ಆಗೇರರೆಲ್ಲ ತಮ್ಮೊಳಗೆ ಹಂಚಿಕೊಳ್ಳಬೇಕು. ಹಾಗಾಗಿಯೆ ಬೀರನು ತನ್ನಷ್ಟಕ್ಕೆ ಮಾತಾಡಿಕೊಳ್ಳುತ್ತಾನೆ:” ತಿಳಿದೂ ತಿಳಿದೂ ಮತ್ತಿಟ್ಟ ಸಾಲಾ ಮಾಡಿ ದುಡ್ಡು ಕೂಡಸ ಮೊಕ್ತೇಸ್ರನ ಎದಿಮ್ಯಾನ ಹಾಕಬೇಕಾಯ್ತಲ? ಇದಕಿಂತಾ ದಿನಕ್ಕೊಬ್ರ ಸತ್ರ ಏನಾಗೂದು?” ಎಂದು ಯೋಚಿಸಿದರೂ ಕೊಪ್ಪದಲ್ಲಿರುವ ತನ್ನವರ ಹಿತಕ್ಕಾಗಿಯಾದರೂ ಆವಾರಿ ಮಾಡಲೇಬೇಕು ಎಂದು ಆವಾರಿ ಮಾಡಲೇಬೇಕೆಂದು ತೀರ್ಮಾನಿಸುತ್ತಾನೆ. ಎಲ್ಲ ಆಗೇರರೂ ಮೊಕ್ತೇಸರನಲ್ಲಿಗೆ ಹೋಗಿ ಸಾಲಾ ಕೇಳಿ ಪಡೆದು ಆವಾರಿ ಆಚರಣೆ ನಡೆಸುತ್ತಾರೆ.

ಕತೆ ನಾಟಕೀಯ ತಿರುವನ್ನು ಅಂತ್ಯದಲ್ಲಿ ಪಡೆದುಕೊಳ್ಳುತ್ತದೆ‌.

ಆವಾರಿಯಲ್ಲಿ ಕುರಿಯನ್ನು ಕಡಿಯುವಾಗ ಬೀರ ಸಿಕ್ಕಾಪಟ್ಟೆ ಕುಡಿದಿದ್ದ. ಇದೆ ಅಮಲಿನಲ್ಲಿ ಚಕ್ರೇಶ್ವರ ದೇವಸ್ಥಾನದ ಹಿಂಬದಿಗೆ ಬಂದು ಯೋಚಿಸುತ್ತ ನಿಂತ. “ಕುಡಿದ ಅಮಲಿನ ಧೈರ್ಯ. ” ಸುಮ್ಮನ ಈ ದ್ಯಾವ್ರ ಮನೆ ಒಳಗ ಹೋಗಬೇಕ. ದ್ಯಾವರ ಸಿಲಿ ಕಿಟ್ಟಬೇಕ. ಯಾರಿಗ ಮೈಲಿಗಿ ಆಗೂದು? ದ್ಯಾವ್ರಿಗೋ …ನಂಗೋ?” ದ್ಯಾವ್ರ ಕೆಟ್ಟಬೇಕ. ಅದು ಏಟ್ ಚಂದೀತ್ ನೋಡ್ಬೇಕ.” ಎಂದು ದೇಗುಲದ ಗರ್ಭಗುಡಿಯನ್ನು ಬೀರ ಸಮೀಪಿಸುತ್ತಾನೆ. ಅಲ್ಲಿ ಬೀರನ ಹೆಂಡತಿ ಮತ್ತು ಮೊಕ್ತೇಸರರು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುತ್ತಾರೆ‌.

ಇದನ್ನು ಕಂಡ ಬೀರ ಕುರಿಯನ್ನು ಕಡಿದ ಕತ್ತಿಯಿಂದ ಮೊಕ್ತೇಸರನ ಕುತ್ತಿಗೆಯನ್ನು ಕಡಿದು ಚೆಂಡಾಡುತ್ತಾನೆ. ಅವನು ಕಡಲ ತೆರೆಯತ್ತ ಓಡಿ ಹೋಗುತ್ತಾನೆ.

ಬಹುಶಃ ಕಥೆಗಾರನ ಸುಪ್ತ ಆಶಯವೂ ಇದಾಗಿರಬಹುದು.ದಲಿತರ ಗರ್ಭಗುಡಿಯ ಪ್ರವೇಶ ಮತ್ತು ಮೇಲ್ಜಾತಿವರ ಅನೈತಿಕತೆ ಮತ್ತು ಶೋಷಣೆಯನ್ನು ಧ್ವನಿಸಲು ಕತೆಯಲ್ಲಿ ನಾಟಕೀಯತೆ ಪ್ರವೇಶ ಮಾಡಿದೆ.

ಈ ಕಥೆಯು ದಲಿತರ ಅನಕ್ಷರತೆ, ಮೌಢ್ಯ, ಈ ಮೌಢ್ಯವನ್ನು ಬಂಡವಳನ್ನಾಗಿ ಮಾಡಿ ದಲಿತರನ್ನು ದೋಚುವ ಮೇಲ್ವರ್ಗದವರು ಮಾಡುವ ಶೋಷಣೆಯನ್ನು ಪರಿಣಾಮಕಾರಿಯಾಗಿ ನಿರೂಪಕನಿಗೆ ತೋರಿಸಬೇಕಿದೆ‌

ಈ ಕಥೆಯು ಆಗೇರ ಎಂಬ ದಲಿತ ಸಮಾಜದ ಹಸಿವು, ಮೌಢ್ಯ ಮತ್ತು ಶೋಷಣೆಯ ಕುರಿತು ಆಗೇರರು ಮಾತಾಡುವ ಕೆಲ ಪದಗಳು ಮತ್ತು ವಾಕ್ಯಗಳ ಮೂಲಕ ಗ್ರಾಮೀಣ ಪ್ರದೇಶದ ಭಾಷೆಯನ್ನು ಅನಾವರಣಗೊಳಿಸಿದುವುದರ ಮೂಲಕ. ವ್ಯಕ್ತಗೊಂಡಿದೆ‌

೨ ನೆ ಕತೆ ಆಡಳಿತಾಧಿಕಾರಿಯು ಓರ್ವ ಆದರ್ಶ ಶಿಕ್ಷಕಿಗೆ ಕೊಡುವ ಲೈಂಗಿಕ ಕಿರುಕಳ ಮತ್ತು ಅದನ್ನು ಪೂರೈಸದಿದ್ದಾಗ ಶಿಕ್ಷಕಿ ಸುಧಾರಣೆ ಮಾಡಿದ ಶಾಲೆಯ ಕುರಿತು ಇನ್ಸ್ಪೆಕ್ಟರ್ ಕೆಟ್ಟ ವರದಿ ಬರೆದು ಅವಳು ಉದ್ಯೋಗ ಬಿಡುವಂತೆ ಮಾಡುವ ಅಧಿಕಾರಿಗಳ ದೌರ್ಜನ್ಯ ಮತ್ತು ಶೋಷಣೆಯ ಕುರಿತಾದ ಕಥೆ.

 ಇರಿತ ಕಥೆಯಲ್ಲಿ ದಲಿತ ಜೀತದಾಳು ಒಬ್ಬ ಒಡೆಯರಿಗೆ ನಿತ್ಯ ಮಾಲು (ಹೆಣ್ಣು) ಪೂರೈಸುವ ಕಾಯಕದಲ್ಲಿ ಸೋತು ಹೋಗುತ್ತಾನೆ. ಆ ವೃದ್ಧ ಜೀತದಾಳಿಗೆ ಒಬ್ಬಳು ಮಗಳು. ಅವಳನ್ನು ಗೋಕರ್ನದ ಒಬ್ಬ ಯುವಕನಿಗೆ ಮದುವೆ ಮಾಡಿಕೊಡಬೇಕೆಂಬ ಮನಸು. ಆದರೆ‌ ಈ ಒಡೆಯ ಗೋವಿಂದ ನಾಯ್ಕ ಮುತ್ತಜ್ಜನ ಮಗಳನ್ನೆ ಭೋಗಿಸುತ್ತಾನೆ. ಇದನ್ನು ಅರಿತ ಮುತ್ತಜ್ಜ ಒಡೆಯರನ್ನು ಕತ್ತಿಯಿಂದ ಇರಿದು ಕೊಲ್ಲಲು ಹೋದಾಗ ಒಡೆಯರು ಅವನನ್ನು ಒದ್ದು ಕೆಳಗೆ ಕೆಡವಿದಾಗ ಆ ಕತ್ತಿ ಮುತ್ತಜ್ಜನಿಗೆ ಇರಿಯುತ್ತದೆ‌.

ಮುತ್ತಜ್ಜನು ಸತ್ತಾಗ ಒಡೆಯರು “ಅಯ್ಯೋ ಬರ್ರೋ, ಮುತ್ತಜ್ಜ ಮೆಟ್ಲಿಂದ ಜಾರಿ ಬಿದ್ನಲ್ರೋ” ಎಂದು ಬೊಬ್ಬೆ ಹೊಡೆದು ಜನರನ್ನು ಕೂಡಿಸುತ್ತಾರೆ‌

ಹೀಗೆ feudalism ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಅತ್ಯಾಚಾರದ ಅನಾವರಣ ಈ ಕಥೆಯಲ್ಲಿ ಚಿತ್ರಿತವಾಗಿದೆ ‌

“ಶೋಷಣೆಯ ಇನ್ನೊಂದು ಮುಖ” ಕಥೆಯಲ್ಲಿ ಜೀತದಾಳಿನ ದುರಂತ ಕಥೆ ಇದೆ. ನಾಗಪ್ಪ ಎಂಬ ಒಬ್ಬ ಜೀತದಾಳು ಒಡೆಯರ ಮನೆಯಲ್ಲಿ ಎರಡು ಹೊತ್ತಿನ ಊಟಕ್ಕಾಗಿ ಜೀತ ಮಾಡುತ್ತಿರುತ್ತಾನೆ. ನಿರೂಪಕ ನಾಗಪ್ಪನು ಹೇಗೆ ಮೋಸ ಹೋಗುತ್ತಿದ್ದಾನೆ. ಅವನನ್ನು ಜೀತದಾಳಿನಿಂದ ಮುಕ್ತಗೊಳಿಸಬೇಕು ಎಂದು ಬುದ್ಧಿವಾದ ಹೇಳುತ್ತಾನೆ.‌ಒಡೆಯ ನಾಗಪ್ಪ ದಂಪತಿಗಳ ಹೆಸರಿನಲ್ಲಿ ವೃದ್ಧರಿಗೆ ನೀಡುವ ಸರಾಸರಿ ಪಿಂಚಣಿಗೆ ನಾಗಪ್ಪ ದಂಪತಿಗಳ ಹೆಬ್ಬೆಟ್ಟು ಒತ್ತಿಸಿ ಬರುವ ಪೆನ್ಶನಿನಲ್ಲಿ ೧೦ ರೂಪಾಯಿ ಪೋಸ್ಟ್ ಮ್ಯಾನನಿಗೆ ಮತ್ತು ಉಳಿದ ಹಣವನ್ನು ಒಡೆದಿರೆ ಪಡೆದುಕೊಳ್ಳುತ್ತಿದ್ದರು.‌ನಿರೂಪಕ ಆ ಒಡೆಯ ನಾಯಕನಿಗೆ ಹೀನಾಯವಾಗಿ ನಿಂದಿಸಿ ಇದನ್ನು ಪೋಲಿಸರಿಗೆ ತಿಳಿಸುವ ಬೆದರಿಕೆ ಹಾಕುತ್ತಾನೆ.‌ಹೀಗೆ ಒಡೆಯರನ್ನು ಹೆದರಿಸಿ ನಾಗಪ್ಪನನ್ನು ಜೀತದಾಳಿನಿಂದ ಬಿಡುಗಡೆ ಮಾಡಿದೆ ಎಂದು ಸಮಾಧಾನಪಟ್ಟು ಮುಂಬೈಗೆ ಹೋಗುತ್ತಾನೆ.

ಇನ್ನೊಮ್ಮೆ ಊರಿಗೆ ಹೋದಾಗ ನಾಗಪ್ಪ ಸತ್ತಿದ್ದು ಗೊತ್ತಾಗುತ್ತದೆಮ ಒಡೆಯರು ಅವನ ಕೊಲೆ ಮಾಡಿದ್ದರು.

“,ರಾಕ್ಷಸರಿದ್ದಾರೆ” ಕಥೆಯಲ್ಲಿ ಮಾದಿಗ ತರುಣನೊಬ್ಬನ್ನು ಶ್ರೀಮಂತ ಕುಲದವರು ಯಾವುದೊ ಕಾರಣಕ್ಕಾಗಿ ಕೊಲೆ ಮಾಡುತ್ತಾರೆ. ಆ ಕೊಲೆಯನ್ನು ಆತ್ಮಹತ್ಯೆ ಎಂದು ಸಾಬೀತುಪಡಿಸಿ ಕೊಲೆಗಾರರು ಶಿಕ್ಷೆಯಿಂದ ಪಾರಾಗಲು ಪ್ರಯತ್ನಿಸುತ್ತಾರೆ. ಅವರು ಪೋಲಿಸ್ ಇಲಾಖೆಯವರನ್ನೂ, ಹೆಣದ ಪೋಸ್ಟ್ ಮಾರ್ಟಮ್ ಮಾಡುವ ವೈದ್ಯರನ್ನೂ ಖರೀದಿಸಿ ಅದು ಕೊಲೆಯಲ್ಲ ಎಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತಾರೆ.ಮಾದಿಗ ಯುವಕನೊಬ್ಬ ಈ ಶ್ರೀಮಂತರ ಮೋಸದ ಶೋಷಣೆಯ ವಿರುದ್ಧ ಹೋರಾಡಲು ಅಣಿಯಾಗುತ್ತಾನೆ. ಪೋಲಿಸ್ ಕಂಪ್ಲೇಂಟ್ ಕೊಟ್ಡರೂ ಪೋಲಿಸರು ಕ್ಯಾರೆ ಎನ್ನುವುದಿಲ್ಲ.‌ಎಸ್ ಪಿ ಗೆ ಫೋನ್ ಮಾಡುವ ಎಂದರೆ ಈ ಹಣವಂತರು ಪೋನ್ ಲೈನನ್ನೆ ಕಟ್ ಮಾಡಿ ಬಿಡುತ್ತಾರೆ. ಆ ಮಾದಿಗ ಯುವಕನ‌ ನ್ಯಾಯಕ್ಕಾಗಿ ಹೋರಾಟವು ವ್ಯರ್ಥವಾಗಿಬಿಡುತ್ತದೆ.

ಹೇಗೆ ಶ್ರೀಮಂತರು ಸರಕಾರದ ಎಲ್ಲವರನ್ನೂ ಖರೀದಿಸಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಎಂಬ ವಿಡಂಬನೆಯೊಂದಿಗೆ ಮೃತರ ಹೆತ್ತವರೂ ಶ್ರೀಮಂತರು ಕೊಟ್ಟ ಹಣಕ್ಕೆ ಮಗನದು ಅತ್ಮಹತ್ಯೆ ಎಂದು ಒಪ್ಪಿಕೊಳ್ಳುವ ಕ್ರೌರ್ಯ ಇಲ್ಲಿ ಅಭಿವ್ಯಕ್ತಿಗೊಂಡಿದೆ.

“ಬೆಳಕಿನಲ್ಲಿ ಬಂದವಳು” ಕತೆಯಲ್ಲಿ ದಲಿತ ಯುವಕ ಹಾಗೂ ಬ್ರಾಹ್ಮಣ ಯುವತಿ ಪರಸ್ಪರ ಪ್ರೀತಿಸಿ ಮತ್ತೆ ಆ ಹುಡುಗಿಗೆ ಮನೆಯವರ ಬೆದರಿಕೆ ಮತ್ತು ಒತ್ತಡಗಳಿಂದ. ದಲಿತ ಯುವಕನನ್ನು ಮದುವೆಯಾಗದೆ ಒಬ್ಬ ವೃದ್ಧ ವಿದುರನನ್ನು ಮದುವೆಯಾಗಬೇಕಾದ ಅನಿವಾರ್ಯ ಸನ್ನಿವೇಶದ ನಿರೂಪಣೆ ಇದೆ‌

ಹೀಗೆ ಇಲ್ಲಿನ‌ಕಥೆಗಳು ಜೀವಂತ ಪಾತ್ರಗಳ ಮೂಲಕ ಕತೆಯನ್ನು ಬೆಳೆಸಿಕೊಂಡು ಹೋಗುವ ನಿರೂಪಕನ ಕೌಶಲ್ಯವನ್ನು ತೋರಿಸುತ್ತವೆ‌

ಓದಿಸಿಕೊಂಡು ಹೋಗುವ ಕಲೆ ಈ ಕತೆಗಳಲ್ಲಿ ಕಂಡುಬರುತ್ತದೆ ‌

ಗ್ರಾಮೀಣ ಪ್ರಾದೇಶಿಕ ಕತೆಗಳಾಗಿ ಅನನ್ಯವಾಗಿವೆ.

ಡಾ ರಾಮಕೃಷ್ಣ ಗುಂದಿ ಅವರ ಸಮಗ್ರ ಕತೆಗಳು ಈವರೆಗೆ ಬಂದ ನಾಲ್ಕು ಕಥಾ ಸಂಕಲನಗಳ ಕಥಾಸಮುಚ್ಚಯವಾಗಿದೆ. ಈ ಕಥಾ ಸಂಕಲನಗಳ ಮೊದಲ ಸಂಕಲನ” ಆವಾರಿ” ಇದರ ಲೇಖಕರ ಮುನ್ನುಡಿಯಲ್ಲಿ ಡಾ ರಾಮಕೃಷ್ಣ ಗುಂದಿ ಅವರು ಹೀಗೆ ಬರೆಯುತ್ತಾರೆ:” ನಾನು ಹುಟ್ಟಿ ಬೆಳೆದು ಬಂದ ದಲಿತ‌ ”ಆಗೇರ” ಜನಾಂಗದ ಅನಕ್ಷರತೆ, ಅಜ್ಞಾನ, ಹಸಿವು,ಬಡತನಗಳ ಕಾರಣದಿಂದ ಸಮುದಾಯವು ಅನುಭವಿಸುತ್ತಿರುವ ಶೋಷಣೆ-ಅವಮಾನ, ಸಾಮಾಜಿಕ ತಿರಸ್ಕಾರಗಳನ್ನು ಬಾಲ್ಯದಿಂದದಲೂ ಗಮನಿಸುತ್ತಲೇ ಬೆಳೆದವನು ನಾನು.

‍ಲೇಖಕರು Admin

6 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading