-ನಾಗರಾಜನಾಯಕ ಡಿ.ಡೊಳ್ಳಿನ
ಹೈದರಾಬಾದ ಕರ್ನಾಟಕ ವಿಮೋಚನೆಯ ಹೋರಾಟದ ವಿವಿಧ ಮಜಲುಗಳು – ಭಾಗ- 2
–ಮುಂದುವರೆದ ಭಾಗ
ಹಿಂದಿನ ಭಾಗ ಓದಿ
ಮುಂಡರಗಿ ಶಿಬಿರ
ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಅತ್ಯಂತ ರೋಚಕ ಹೋರಾಟ ಮಾಡಿದ ಶಿಬಿರ ವೆಂದರೆ ಮುಂಡರಗಿ ಶಿಬಿರ. ಕೊಪ್ಪಳ ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿತವಾದ ಶಿಬಿರಗಳಲ್ಲಿ ಇದು ಅತ್ಯಂತ ದೊಡ್ಡ ಶಿಬಿರವಾಗಿ ಕಾರ್ಯ ಪ್ರವೃತ್ತವಾಗಿತ್ತು ಎಂದು ಹೇಳಬಹುದು. ಕಾಶಿಂರಜ್ವಿಯ ನೇತೃತ್ವದಲ್ಲಿ ಈ ಮೊದಲೇ ಪ್ರಾರಂಭವಾಗಿದ್ದ “ಇತ್ತೇಹಾದ್ ಮುಸಲ್ಮೀನ್’ ಸಂಸ್ಕಯ ಕೈಗೊಂಬೆಯಾಗಿ ನಿಜಾಂನ ಸರಕಾರ ಒಳಗಾದಾಗ ಈ ರಜಾಕಾರರ ನಾಯಕನಾದ ಕಾಶಿಂರಜ್ವಿಯ ಪ್ರಬಲ— ಪಡೆಯುತ್ತಿದ್ದ ಸಂದರ್ಭದಲ್ಲಿ ಪ್ರಥಮವಾಗಿ ಮುಂಡರಗಿ ಶಿಬಿರದಿಂದ ರಜಾಕಾರರ ದೌರ್ಜನ್ಯಗಳ ಖಂಡನೆ,
ನಿಜಾಂನ ಅದಕ್ಷತೆಯ ವಿರುದ್ದ ಪ್ರತಿಭಟನೆಗಳು ಕೇಳಿ ಬಂದವು. ಈ ಮುಂಡರಗಿ ಶಿಬಿರದ ಶಿಬಿರಾಧಿಪತಿಯಾದ ಶ್ರೀ ಶಿವಮೂರ್ತಿಸ್ವಾಮಿ ಅಳವಂಡಿಯವರ ಸಮರ್ಥ ನಾಯಕತ ದಲ್ಲಿ ರಜಾಕಾರರ ಹಾವಳಿ ವಿರುದ್ಧ ಪ್ರತಿ ಭಟನೆ, ದಾಳಿಗಳನ್ನು ಕೈಗೊಂಡಿತು.” ಕೇವಲ ಮುಂಡರಗಿ ಶಿಬಿರದ ನಾಯಕತ ಶ್ಯ ಅಲ್ಲದೆ ಕೊಪ್ಪಳ ಜಿಲ್ಲೆಯ ಎಲ್ಲ ಶಿಬಿರಗಳ ಕಮಾಂಡರರಾಗಿ ಶಿವಮೂರ್ತಿಸ್ವಾಮಿ ಅಳವಂಡಿಯವರು ಕಾರ್ಯಗೈದಿದ್ದು ಅವರ ಹೋರಾಟಶೀಲ ಮನೋಭಾವನೆಯನ್ನು ಸಂಕೇತಿಸುತ್ತದೆ. ಹೈದರಾಬಾದ್ ಸಂಸ್ಥಾನಗಳಲ್ಲಿ ಕರ್ನಾಟಕದ ಈ ನಾಲ್ಕು ಜಿಲ್ಲೆ ಗಳಲ್ಲಿ ನ ಪ್ರಜೆಗಳು ತಮ್ಮ ಸ್ವಾತಂತ್ರ‍್ಯಕ್ಕಾಗಿ ಸನ್ನದ್ದರಾಗತೊಡಗಿದರು. ರಜಾಕಾರರ ರಾಕ್ಷಸಿ ಕೃತ್ಯ ದೌರ್ಜನ್ಯಗಳು ಹೆಚ್ಚಾಗತೊಡಗಿದವು. ಮುಗ್ದ ಪ್ರಜೆಗಳ ಮೇಲೆ ಗುಂಡು ಹಾರಿಸುವುದು, ಮಹಿಳೆಯರನ್ನು ಅವಮಾನ, ಅತ್ಯಾಚಾರದಂಥ ಪಾಶವಿಕೃತ್ಯಗಳು ಎಲ್ಲ ಕಡೆಗೂ ಹಬ್ಬ ತೊಡಗಿದವು. ಈ ರಜಾಕಾರರ ಕೃತ್ಯಗಳಿಗೆ ನಿಜಾಂ ಪೋಲಿಸರ, ಪಠಾಣರ ಬೆಂಬಲವು ಇದ್ದಿತು. ಇದರಿಂದಾಗಿ ಹೈದ್ರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ಈ ಭಾಗದಲ್ಲಿ ಅರಾಜಕತೆ ತಾಂಡವವಾಡುತ್ತಿತ್ತು. ಅದೇ ಸಮಯದಲ್ಲಿ ನಿಜಾಂನ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಶ್ರೀ ಶಿವಮೂರ್ತಿಸ್ವಾಮಿ ಅಳವಂಡಿಯವರ ಮೇಲೆ ತೀವ್ರವಾದ ಪ್ರಭಾವ ಬೀರಿತು. ಆಗಲೇ ನಿಜಾಂನ ವಿರುದ್ಧ ಪ್ರತಿಭಟನೆಯ ಕಹಳೆಯೂದಿದ ಶಿವಮೂರ್ತಿ ಸ್ವಾಮಿ ಅಳವಂಡಿಯವರು ಜಿಲ್ಲೆಯ ಮುಂಬೈ ಗಡಿ ಪ್ರಾಂತ್ಮವಾಗಿದ್ದ ಮುಂಡರಗಿಯಲ್ಲಿ ಸಭೆ ಸೇರಿ ಡಾ.ಸಿ.ಎಂ. ಚುರ್ಚಿಹಾಳಮಠ, ಶ್ರೀ ಹೆಚ್.ನಾಗಪ್ಪ, ಶಿವಪ್ಪ ಭೂಮರಡ್ಡಿ, ಶ್ರೀ ರಾಚೋಟೆಪ್ಪನವರ ಒಡಗೂಡಿ “ಮುಂಡರಗಿ’ ಶಿಬಿರವನ್ನು ಸ್ಥಾಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.” ಮುಂಡರಗಿ ಶಿಬಿರವು ಸಶಸ್ತ್ರ ಪಡೆಯ ಕಾರ್ಯಕರ್ತರೊಂದಿಗೆ ಸದಾ ಸನ್ನದ್ದವಾಗಿರುತ್ತಿತ್ತು.
ಮುಂಡರಗಿ ಶಿಬಿರದ ಘಟನೆಗಳು
ಈ ಮುಂಡರಗಿ ಶಿಬಿರಕ್ಕೆ ಉಪಶಿಬಿರ ಶಾಖೆಗಳಾಗಿ ತಿಮ್ಮಾಪೂರ, ನರೇಗಲ್, ನಿಡಗುಂದಿ ಕೊಪ್ಪ, ಸೂಡಿ, ಇಟಗಿಗಳನ್ನು ಆಯ್ಕೆ ಮಾಡಲಾಯಿತು. ರಜಾಕಾರರ ವಿರುದ್ಧ ದಾಳಿಗಳನ್ನು ಮಾಡಲು ಹಲವು ರೂಪುರೇಷೆಗಳನ್ನು ಶ್ರೀ ಶಿವಮೂರ್ತಿಸ್ವಾಮಿ ಅಳವಂಡಿ ಯವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು. ಈ ಮುಂಡರಗಿ ಶಿಬಿರಗಳ ಮೂಲಕ ಪ್ರಥಮವಾಗಿ ಸ್ತ್ರೀಯರ ಹೋರಾಟವು ನಡೆಯಿತು. ಇದರ ಕಾರ್ಯಕೇಂದ್ರ ಅಳವಂಡಿಯ ಶ್ರೀ ಸಿದ್ದೇಶ್ವರ ಮಠವೇ ಮುಖ್ಯ ಕೇಂದ್ರವಾಯಿತು. ಮುಂಡರಗಿ ಶಿಬಿರಾಧಿಪತಿಗಳಾಗಿ, ಹೋರಾಟದ ಹಿರಿತನ ಹೊತ್ತಿದ್ದರಿಂದ, ಪಠಾಣರು, ರಜಾಕಾರರು ಇವರ ಮಠವನ್ನೇ ಲೂಟಿ ಮಾಡಿ ತಮ್ಮ ಮಿಲಿಟರಿ ಕ್ಯಾಂಪ್ ಮಾಡಿಕೊಂಡಿದ್ದಲ್ಲದೆ, ಅಳವಂಡಿಯ ಜನರಿಗೆ ಚಿತ್ರಹಿಂಸೆ ನೀಡಿ, ಸ್ತ್ರೀಯರ ಮಾನಹರಣ ಮಾಡಿದರು. ಹನುಮರೆಡ್ಡಿ ಕಲ್ಲುಡಿಯೆಂಬ ರೈತನನ್ನು ಎಳೆದುಕೊಂಡು ಹೋಗಿ ನೆರೆದ ನೂರಾರು ಜನರೆದುರು ಗುಂಡು ಹಾರಿಸಿ ಕೊಂದರು.”
ಬೆಟಗೇರಿ ಘಟನೆ
ಶಿಬಿರಕ್ಕೆ ಉಪ್ಪಿನ ಬೇಟಗೇರಿ ಪಾತರದ ತಾಯಿ ಮಗಳಿಬ್ಬರು ಜೋಗಮ್ಮರಾಗಿ ರಜಾಕಾರರ ಗುಟ್ಟು ತಿಳಿಸುತ್ತಿದ್ದರು. (ಲಕ್ಷ್ಮವ್ವ ಪಾತರದ) ಇದನ್ನು ಗಮನಿಸಿದ ಪಠಾಣರು ಹಾಗು ರಜಾಕಾರರು ಇವರಿಗೆ ಚಿತ್ರಹಿಂಸೆ ನೀಡಿ ಕೊಂದು ಹಾಕಿದರು. ಸಾಮಾನ ಕೆಳವರ್ಗದ ಮಹಿಳೆಯರು ಕೂಡ ಮುಂಡರಗಿ ಶಿಬಿರದ ಮೂಲಕ ರಜಾಕಾರರ ಹಾವಳಿಯನ್ನು ಮಟ್ಟಹಾಕಲು ಹಾಗು ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಇವರು ಮಾಡಿದ ತ್ಕಾಗ ಸ್ಮರಣೀಯವಾದುದ್ಲಾಗಿದೆ.”
ಕುಕನೂರು ಘಟನೆ
ಮುಂಡರಗಿ ಶಿಬಿರದ ಅತ್ಯಂತ ಪ್ರಮುಖವಾದ ದಾಳಿಗಳಲ್ಲಿ ಕುಕನೂರ ಪೋಲಿಸ್ ಠಾಣೆಯನ್ನು ಮುತ್ತಿ ಅಲ್ಲಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ರೀತಿ ಎಂಥವರನ್ನು ಚಕಿತಗೊಳಿಸುತ್ತದೆ. ಇದು ಶಿಬಿರದ ಅತ್ಮಂತ ರೋಮಾಂಚನ ಘಟನೆಗಳಲ್ಲಿ ಒಂದಾಗಿದೆ. ಈ ಶಿಬಿರದ ಮಿಲಿಟರಿ ಕಮಾಂಡರ್‌ರಾಗಿದ್ದ ಬನ್ನಿ ಕೊಪ್ಪದ ಶಂಕರಪ್ಪ ಯರಾಶಿ ಶಸ್ತ್ರ ಸಜ್ಜಿತ ಹೋರಾಟ ಹಾಗೂ ಗೆರಿಲ್ಲಾ ಮಾದರಿಯ ಹೋರಾಟವನ್ನು ಅನುಸರಿಸಿ ಮೂರು ಜನ ರಜಾಕಾರರನ್ನು ಕೊಂದಿದ್ದು ಅವರ ಶೂರತ್ವವನ್ನು ತೋರಿಸುತ್ತದೆ. ಪ್ರಭುರಾಜ ಪಾಟೀಲ್, ತೆಗ್ಗಿನಮನಿ ಶಂಕರಗೌಡ, ಸೋಮಪ್ಪ ವಕೀಲರು, ಶ್ರೀ.ಕೆ.ಸಿ. ಸಾರಂಗ ಮಠರಂಥಹ ತಾಕತ್ತಿನ ವೀರಯೋದರಿದ್ದುದರಿಂದಾಗಿ ಮುಂಡರಗಿ ಶಿಬಿರಕ್ಕೆ ಗೆಲವು, ಕೀರ್ತಿ, ಮೆರಗು ಕೂಡಾ ಬಂದಿತ್ತು. ಈ ಶಿಬಿರವು ಸುತ್ತಮುತ್ತಲಿನ ೪೦ರಿಂದ ೪೮ ಕೀ.ಮಿ. ವ್ಯಾಪ್ತಿಯವರೆಗೆ ತನ್ನ ನಿಯಂತ್ರಣವನ್ನು ಹೊಂದಿತ್ತು. ಕೊಪ್ಪಳ ಭಾಗದ ಗಾಂಧಿಯೆ೦ದೇ ಪ್ರಸಿದ್ಧರಾದ ಶಿರೂರು ವೀರಭದ್ರಪ್ಪನವರು ಮುಂಡರಗಿ ಶಿಬಿರದ ಪ್ರಮುಖ ಸಲಹೆಗಾರರಾಗಿ ಶಿಬಿರದ ನಾಯಕರಾದ ಶ್ರೀ ಶಿವಮೂರ್ತಿಸ್ವಾಮಿ ಅಳವಂಡಿಯವರ ಮಾರ್ಗದರ್ಶನದಲ್ಲಿ ನಿಜಾಂ ಸರಕಾರಕ್ಕೆ ಪ್ರತಿಭಟನೆ, ಸತ್ಕಾಗ್ರಹಗಳ ಮೂಲಕ ಬಿಸಿ ಮುಟ್ಟಿಸುತ್ತಿದ್ದರು. ಅದರಂತೆ ಈ ಶಿಬಿರದ ಗೃಹರಕ್ಷಕ ದಳದ ಕಮಾಂಡರ್ ಆಗಿದ್ದ ಡಾ. ಸಿ.ಎಂ.ಚುರ್ಚಿಹಾಳ ಮಠರವರ ಹೋರಾಟ ಅಪ್ರತಿಮವಾಗಿದೆ. ರಾಜಕೀಯ ಸಾಹಿತ್ಮ, ಸಂಸ್ಕೃತಿ, ಧರ್ಮ, ಆಯುರ್ವೇದ ಚಿಕಿತ್ಸೆ ಹಾಗೂ ಇತಿಹಾಸ ಸಂಶೋಧನೆಯ ಜೊತೆಗೆ, ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಮುಂಡರಗಿ ಶಿಬಿರದಲ್ಲಿ ಇವರ ಪಾತ್ರವು ಮಹತ್ವದ್ದಾಗಿದೆ. ಇವರು ಶಿಬಿರಕ್ಕೆ ಅಲ್ಲಿಯ ನಾಗರಿಕ ಸೇವಾ ಸಮಿತಿಯ ಮೂಲಕ ಎಲ್ಲ ರೀತಿಯ ನೆರವು ಹಾಗು ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವಂತ ನಿಷ್ಮರ ವ್ಯಕ್ತಿತ್ತದ ಉದಾರ ಮನಸ್ಸುಳ್ಳವರಾಗಿದ್ದರು.
ಈ ಶಿಬಿರದ ಕಾರ್ಯಕರ್ತರು ಮೊಟ್ಟ ಮೊದಲನೆ ಕವಲೂರಿನ ಮೇಲೆ ಮಾಡಿದ ದಾಳಿಯ ಅಲ್ಲಿಂದ ಸರಕಾರಕ್ಕೆ ಸಲ್ಲಬೇಕಾಗಿದ್ದ ಮೂರುನೂರು ರೂಪಾಯಿಗಳ ಕಂದಾಯದ ಹಣವನ್ನು ಇವರು ಮಾಡಿದ ದಾಳಿಯಿಂದ ಶಿಬಿರದ ವಶವಾಯಿತು. ಅದನ್ನು ಶಿಬಿರದ ಸಂಘಟನೆಗೆ ಉಪಯೋಗಿಸಬೇಕೆಂದು ಶಿಬಿರದ ಮುಖ್ಯಸ್ಥರು ಸಲಹೆ ನೀಡಿದರು. ನಂತರ ಮುಂಡರಗಿ ಶಿಬಿರವು ರಜಾಕಾರರ ವಿರುದ್ದ ಅನೇಕ ಯಶಸ್ವಿ ದಾಳಿ ಗಳನ್ನು ಮಾಡುತ್ತಲೆ ಹೋಯಿತು. ಯಲಬುರ್ಗಾ ತಾಲೂಕಿನ ಕುಕನೂರು ಠಾಣೆಯ ಮೇಲೆ ಮಾಡಿದ ದಾಳಿಯು ಅವರ ಧೈರ್ಯ, ಸಾಹಸಕ್ಕೆ ಹಿಡಿದ ಕನ್ನಡಿಯಾಗಿದೆ.” ಬೆಳಗಟ್ಟಿಯಲ್ಲಿ ೧೯೪೮ ಜನೆವರಿ ೧೩ ರಂದು ಈ ಮುಂಡರಗಿ ಶಿಬಿರದ ಕಾರ್ಯಕರ್ತರು ಪ್ರಚಾರಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು ಇನ್ನೂರು ಜನ ರಜಾಕಾರರು ಆ ಗ್ರಾಮಕ್ಕೆ ಆಗಮಿಸುತ್ತಿದ್ದರು. ಜನರಿಗೆ ತೊಂದರೆ ಕೊಡುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆಯೆ ಮುಂಡರಗಿ ಶಿಬಿರದ ಶಸ್ತ್ರಾಸ್ತ್ರಗಳ ನಾಯಕರಾದ ಪ್ರಭುರಾಜ ಪಟೇಲರ ಸಮ್ಮುಖದಲ್ಲಿ ೨೦೦ ಜನ ರಜಾಕಾರರನ್ನು ಸುತ್ತುವರಿದು ಗುಂಡು ಹಾರಿಸ ತೊಡಗಿದರು. ಇವರ ಧೈರ್ಯ ಹಾಗೂ ಸಾಹಸಗಳನ್ನು ಅರಿತ ರಜಾಕಾರರು ದಿಕ್ಕಾಪಾಲಾಗಿ ಓಡಿಹೋದರು ಎಂದು ಹೋರಾಟಗಾರ ಚೆನ್ನಬಸವನಗೌಡ ಅಲಿಪುರ ಹೇಳುವ ಮಾತಿನಲ್ಲಿ ಸ್ವಾತಂತ್ರ‍್ಯ ಪ್ರೇಮದ ತುಡಿತ ಎದ್ದು ಕಾಣುತ್ತಿತ್ತು.”
ಗಜೇಂದ್ರಗಡ ಶಿಬಿರ
ಜವಾಬ್ದಾರಿ ಸರ್ಕಾರದ ರಚನೆ ಮೂಲ ಉದ್ದೇಶವನ್ನು ಇಟ್ಟುಕೊಂಡು ಸ್ಹಾಪಿತವಾದವುಗಳೇ ಈ ಶಿಬಿರಗಳು. ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಅತ್ಮಂತ ಮಹತ್ವದ ಪಾತ್ರವಹಿಸಿ ಅತೀ ಶೀಘ್ರದಲ್ಲಿ ಹೋರಾಟದ ಸ್ಫೂರ್ತಿಯನ್ನು ಚುರುಕುಗೊಳಿಸಿದ ಕೀರ್ತಿ ಗಜೇಂದ್ರಗಡ ಶಿಬಿರಕ್ಕೆ ಸಲ್ಲುತ್ತದೆ. ಈ ಶಿಬಿರದ ಮೂಲಕ ಹೋರಾಟ ಮಾಡಿದ ಸಾಮಾನ್ಮನು ಬೇರೆ ಯಾವ ಶಿಬಿರಗಳಲ್ಲೂ ಇಂತಹ ಸ್ವಾತಂತ್ರ‍್ಯ ಪ್ರೇಮ, ಭೂಗತ ಹೋರಾಟಗಳನ್ನು ಮಾಡಿರುವುದು ಕಂಡುಬರುವುದಿಲ್ಲ. ಕೊಪ್ಪಳ ಜಿಲ್ಲೆಯ ಗಡಿಭಾಗದಲ್ಲಿರುವ ಈ ಪ್ರದೇಶ ಇಂದು ಪಕ್ಕದ ಗದಗ ಜಿಲ್ಲೆಗೆ ಸೇರಿದೆ. ಅಂದು
ಹೈದರಾಬಾದ್ ಕರ್ನಾಟಕದ ವಿಮೋಚನ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಯೂನಿಯನ್ ಪ್ರದೇಶವಾಗಿತ್ತು. ಸ್ವಾಮಿ ರಮಾನಂದ ತೀರ್ಥರ ಪ್ರೇರಣೆಯೇ ಈ ಶಿಬಿರದ ಸ್ಥಾಪನೆಗೆ ಕಾರಣವಾಯಿತು. ಅದರಂತೆಯೆ ಮುರುಡಿ ಭೀಮಜ್ಞನವರು ಶಿಬಿರವನ್ನು ಹುಟ್ಟು ಹಾಕುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದಾರೆ. ಗಜೇಂದ್ರಗಡ ಶಿಬಿರದ ಶಿಬಿರಾಧಿಪತಿಯಾಗಿ, ಅಪ್ಪಟ ಸ್ವಾತಂತ್ರ‍್ಯ ಪ್ರೇಮಿ ಹಾಗೂ ಸೇನಾನಿಯಾದ ಶ್ರೀ ಪುಂಡಲೀಕಪ್ಪ ಜ್ಞಾನಮೋರೆ ಯವರು ವಹಿಸಿಕೊಂಡರು. ಗಜೇಂದ್ರಗಡ ಶಿಬಿರವು ಮುಖ್ಯವಾಗಿ ಭೂಗತ ಕಾರ್ಯಗಳ ಮುಖಾಂತರ ಹಾಗು ರಾಜಕೀಯ ಬುಡಮೇಲು ಕೃತ್ಯಗಳನ್ನು ಎಸಗುವುದರ ಮೂಲಕ ನಿಜಾಂ ಸರ್ಕಾರದ ಭದ್ರತೆಗೆ ಭಂಗ ತರುವಲ್ಲಿ ಯಶಸ್ವಿಯಾಯಿತು.
೧೯೪೭ ಆಗಸ್ಟ್ ೧೫ ರಂದು ಹೈದರಾಬಾದ್ ಪ್ರಾಂತದಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಬಹಿಷ್ಕರಿ ಸಲ್ಪಟ್ಟಿತು. ಈ ಶಿಬಿರದ ವ್ಯಾಪ್ತಿಯಲ್ಲಿ ಬರುವ ಮಾಲಗಿತ್ತಿ ಎಂಬ ಗ್ರಾಮದಲ್ಲಿ ಜನ ಸೇರುವಂತೆ ಕಾಂಗ್ರೆಸ್ಸಿಗರು ಪ್ರಚಾರ ಮಾಡಿದರು. ಇಲ್ಲಿನ ಪ್ರತಿಯೊಂದು ಹಳ್ಳಿಗಳಲ್ಲಿ ಇದು ಪ್ರಚಾರ ಪಡೆಯಿತು. ಈ ಸಮಯದಲ್ಲಿ. ಜನಾರ್ಧನರಾವ್ ದೇಸಾಯಿ ಹಾಗೂ ಇತರರು ಪ್ರವಾಸಮಾಡಿ ಜನರಲ್ಲಿ ರಾಷ್ಟ್ರೀಯತೆಯ ಚೈತನ್ಮವನ್ನು ತುಂಬಿದ್ದರು. ಸಾವಿರಗಟ್ಟಲೆ ಜನರು ಈ ಕರೆಗೆ ಧಾವಿಸಿ ಬಂದರು. ಇವರೆಲ್ಲ ಸೇರಿ ಧ್ವಜ ಹಿಡಿದು ನಿಂತರು. ಈ ಸಂದರ್ಭದಲ್ಲಿ ಮಾಲಗಿತ್ತಿಯ ಸೀತಮ್ಮ ಬಡಿಗೇರ ಎಂಬ ಮಹಿಳೆಯು ತ್ರಿವರ್ಣ ಧ್ವಜವನ್ನು ಹಿಡಿದು ಕೊಂಡು ಕುಣಿಯುತ್ತಿದ್ದುದನ್ನು ನೋಡಿದ ಶಿಬಿರಾರ್ಥಿಗಳು, ಭಾವಾವೇಶದಿಂದ “ವಂದೇ ಮಾತರಂ, “ಜೈಹಿಂದ್”, “ಭಾರತ್ ಮಾತಾಕೀ ಜೈ’ ಎಂಬ ಘೋಷಣೆಗಳನ್ನು `ಕೂಗಿದರು. ಇದು ರಜಾಕಾರರ ವಿರುದ್ಧ ನಿಜಾಂ ಸರಕಾರಕ್ಕೆ ನೀಡಿದ ಮೊದಲ ಎಚ್ಚರಿಕೆಯಾಯಿತು. ಹೀಗೆ ಶಿಬಿರದಿಂದ ಹತ್ತು ಮೈಲು ದೂರದಲ್ಲಿದ್ದ ತುಮರಗುದ್ದಿ ಎಂಬ ಚಿಕ್ಕಹಳ್ಳಿಯಲ್ಲಿ ನಿಜಾಂ ಸರ್ಕಾರವು ಒತ್ತಾಯಪೂರ್ವಕವಾಗಿ ಲೇವಿ (ಕಂದಾಯ) ಸಂಗ್ರಹಿಸಿ, ಆ ಗ್ರಾಮದ ಹನುಮಂತ ದೇವರ ಗುಡಿಯಲ್ಲಿ ಇಟ್ಟಿದ್ದರು. ದಿನಾಂಕ ೧೫.೧೦.೧೯೪೭ ರಂದು ಮಧ್ಯರಾತ್ರಿಯಲ್ಲಿ ಈ ಶಿಬಿರದ ಕಾರ್ಯಕರ್ತರು ಗುಂಡು ಹಾರಿಸುತ್ತಾ, ಲೇವಿಧಾನ್ಮ ಕಾಯುತ್ತಿದ್ದವರನ್ನು ಓಡಿಸಿ, ಗ್ರಾಮದ ಕುಲಕರ್ಣಿಯನ್ನು ಬೆದರಿಸಿ ೫೦ ಚೀಲ ಭತ್ತವನ್ನು ರಾತ್ರೋರಾತ್ರಿ ಗಜೇಂದ್ರಗಡ ಶಿಬಿರಕ್ಕೆ ಸಾಗಿಸಿದರು. ಇದು ಈ ಶಿಬಿರದಲ್ಲಿದ್ದವರ, ಕಾರ್ಯಕರ್ತರ ಸಾಹಸ, ಧೈರ್ಯಗಳನ್ನು ಎತ್ತಿ ತೋರಿಸುತ್ತದೆ. ಶಿಬಿರದ ದಾಳಿಗಳಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಮಹತ್ವವಾದ ದಾಳಿಯೆಂದರೆ ಹಿರೇವಂಕಲಕು೦ಟಿ ಪೊಲೀಸ್ ಸ್ಟೇಶನ್ ಮೇಲೆ ನೇರವಾಗಿ ದಾಳಿ ಮಾಡಿದ್ದು ಒಂದಾಗಿದೆ. ಈ ಗ್ರಾಮದಲ್ಲಿ ನಿಜಾಂ ಪೊಲೀಸರು ಠಿಕಾಣಿ ಹೂಡಿದ್ದರು. ೮-೧೨-೧೯೪೭ರಂದು ಜಿ.ಕೆ. ರಾಜಪುರೋಹಿತರ ನೇತೃತ್ವದಲ್ಲಿ ಒಂದು ದೊಡ್ಡ ಗುಂಪು ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಿತು.” ದಾಳಿಯ ಸಂದರ್ಭದಲ್ಲಿ ಹನ್ನೆರಡು ಜನ ನಿಜಾಂರು ಪೊಲೀಸರನ್ನು ಕಟ್ಟಿಹಾಕಿ ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡರು. ಈ ಕಾರ್ಯಾಚರಣೆಯಲ್ಲಿ ಪುಂಡಲೀಕಪ್ಪನವರ ಸಹೋದರರಾದ ಕೋಟೆಪ್ಪ, ಚಿನ್ನಪ್ಪ, ಸೇತುರಾಮಚಾರ್ಯರು ಪ್ರಮುಖ ವಾಗಿ ಭಾಗವಹಿಸಿದ್ದಾರೆ. ಇದು ನಿಜಾಂನಿ೦ದ ತೀವ್ರ ಪ್ರತಿಕ್ರಿಯೆಗೆ ಒಳಗಾಗಿ, ದಾಳಿಯಲ್ಲಿ ಪಾಲ್ಗೊಂಡವರನ್ನು ಬಂಧಿಸಲು ಆದೇಶ ಹೊರಡಿಸಿತು. ಮಾಲಗಿತ್ತಿ ಗ್ರಾಮದಲ್ಲಿ ರಜಾಕಾರರ ಠಾಣೆಯು ಹಗಲಿನಲ್ಲಿ ದರೋಡೆ, ಅತ್ಯಾಚಾರ, ದೌರ್ಜನ್ಯಗಳನ್ನು ವಿರಾಜಮಾನವಾಗಿ ನಡೆಸುತ್ತಿತ್ತು. ಇದರಿಂದ ತೊಂದರೆ ಗೊಳಗಾದ ಜನರು ಈ ಗಜೇಂದ್ರಗಡ ಶಿಬಿರದ ಕಾರ್ಯಕರ್ತರೊಡನೆ ಸೇರಿಕೊಂಡು ೨.೧.೧೯೪೮ರಂದು ರಜಾಕಾರರ ಕ್ಯಾಂಪಿನ ಮೇಲೆ ಸಶಸ್ತ್ರ ಹೋರಾಟ ಪ್ರಾರಂಭಿಸಿದರು. ನಂತರ ನಡೆದ ಗುಂಡಿನ ಚಕಮುಕಿ ಹಾಗೂ ನಾಡಬಾಂಬ್ ಸ್ಫೋಟದಿಂದ ಏಳು ಜನ ಕಾಯ್ದಿಟ್ಟ ನಿಜಾಂ ಪೊಲೀಸರನ್ನು ಕೊಂದರು. ಇದು ಅವರ ಹೋರಾಟಕ್ಕೆ ಸ್ಫೂರ್ತಿ ಯಾಗಿ ಹೈದರಾಬಾದ್ ಕರ್ನಾಟಕ ಪ್ರಾಂತ್ಯವನ್ನು ಶೀಘ್ರವಾಗಿ ನಿಜಾಂನಿ೦ದ ಪಡೆಯಲು ನೆರವಾಯಿತು.
ಜಹಗೀರ್ ತಹಶೀಲ್‌ದಾರನಿಗೆ ಲಾಠಿ ಏಟುಗಳ ಘಟನೆಗಳು ಪ್ರಮುಖವಾಗಿವೆ. “ಶಿಬಿರದ ಕಾರ್ಯಕರ್ತರ ಅಪ್ರತಿಮ ಹೋರಾಟದ ಕೆಚ್ಚೆದೆಗಳನ್ನು ತೋರಿಸುವಲ್ಲಿ ಈ ಘಟನೆಗಳು ಬಹುಮುಖ್ಯವಾದದ್ದಾಗಿವೆ. ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಶಿಬಿರಗಳಲ್ಲಿ ಸಶಸ್ತ್ರ ಹೋರಾಟ ವನ್ನು ಮಾಡಿದ ಕೀರ್ತಿ ಈ ಗಜೇಂದ್ರಗಡ ಶಿಬಿರಕ್ಕೆ ಸಲ್ಲುತ್ತದೆ.'” “ಶ್ರೀ ಪುಂಡಲೀಕಪ್ಪ ಜ್ಞಾನಮೋಠೆಯವರ ಶಿಸ್ತಿನ ನಾಯಕತ್ವ, ಸ್ವಾತಂತ್ರ‍್ಯ ಪ್ರೇಮ, ಸಮಾಜಸೇವೆ ಇವುಗಳನ್ನು ಕೊನೆಯವರೆಗೂ ಅವರನ್ನು ಗಜೇಂದ್ರಗಡ ಶಿಬಿರಕ್ಕೆ ಶಿಬಿರಾಧಿಪತಿಯಾಗಿ ಇರುವಲ್ಲಿ ನೆರವಾಯಿತು. ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟ ದಲ್ಲಿ ಗಜೇಂದ್ರಗಡ ಶಿಬಿರದ ಪಾತ್ರ ಸ್ಮರಣೀಯವಾದುದಾಗಿದೆ.’್
ಇಟಗಿ ಶಿಬಿರ
“ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಅತ್ಯಂತ ತೀವ್ರತರವಾದ ಹೋರಾಟವನ್ನು ಮಾಡಿ ಜನರಲ್ಲಿ ಕ್ರಾಂತಿಯ ಕಿಡಿಯನ್ನು ಸ್ವಾತಂತ್ರ‍್ಯದ ಕನಸನ್ನು ನನಸಾಗಿಸುವಲ್ಲಿ ಕೊಪ್ಪಳ ಜಿಲ್ಲೆಯ (ಗಡಿ ಪ್ರದೇಶವಾದ ಇಂದಿನ ಗದಗ ಜಿಲ್ಲೆಗೆ ಒಳಪಟ್ಟ) ಇಟಗಿ ಶಿಬಿರದ ಸಾಧನೆ ಅಪೂರ್ವವಾದುದ್ದಾಗಿದೆ. ಈ ಪ್ರದೇಶದ ೧೩ ಹಳ್ಳಿಗಳನ್ನು ಸೇರಿಸಿ, ಅದರಲ್ಲಿ ಗುಳಗುಳಿ, ಮುಗಳಿ, ಶಾಂತಗಿರಿ, ಹಿರೇ ಅಳಗುಂಡಿ,ತಳ್ಳಿಹಾಳ, ಹೊನ್ನಿಗನೂರು, ಗುಡ್ಡದ ಮಲ್ಲಾಪುರ ಸಂಕನೂರು, ಶಿರಗುಂಪಿ, ಕಾತ್ರಾಳು ಈ ಹಳ್ಳಿಗಳನ್ನು ಸೇರಿಸಿಕೊಡು ಇಟಗಿ ಶಿಬಿರವನ್ನು ರಚಿಸಲಾಯಿತು. “ಆರಖಾದ ಆಯ್‌ಲೆಂಡ್” ಎಂಬ ಹೆಸರಿನಿಂದ ನಾವು ೧೫ ಆಗಸ್ಟ ೧೯೪೭ ರಲ್ಲಿಯೇ ಈ ಎಲ್ಲ ಹಳ್ಳಿಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದ ಕೀರ್ತಿ ಈ ಶಿಬಿರಕ್ಕೆ ಸಲ್ಲುತ್ತದೆ. ಶ್ರೀ ವಿರೂಪಾಕ್ಷಯ್ಯನವರು ಈ ಶಿಬಿರದ ಶಿಬಿರಾಧಿಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಟಗಿ ಶಿಬಿರದಲ್ಲಿ ೧೩೦೦ ಹೋಮಗಾರ್ಡ್ಸ್ ಇದ್ದರು. ಇವರಿಗೆಲ್ಲಾ ಮಿಲಿಟರಿ ಡ್ರೆಸ್, ಸೇನಾ ಉಪಕರಣ, ವಿವಿಧ ಆಯುಧಗಳನ್ನು ತರಬೇತಿಗಾಗಿ ಹಾಗೂ ರಜಾಕಾರರ ವಿರುದ್ದ ಸಾಮಾನ್ಯ ಜನರ ರಕ್ಷಣೆಗಾಗಿ ಉಪಯೋಗಿಸುತ್ತಿದ್ದರು. ಇಟಗಿ ಶಿಬಿರದ ನಾಯಕರು, ಮಹಿಳೆಯರು ರಜಾಕಾರರಿಂದ ತಪ್ಪಿಸಿಕೊಳ್ಳಲು ಹಲವು ತಂತ್ರಗಳನ್ನು ರೂಪಿಸಿಕೊಂಡಿದ್ದರು. ಅದರಲ್ಲಿ ಮುಖ್ಯವಾಗಿ ರಜಾಕಾರರಿಗೆ ಖಾರದ ಪುಡಿಯನ್ನು ಎರಚುವುದು, ಗುಪ್ತ ಮಾಹಿತಿಗಳನ್ನು ಕಾರ್ಯಕರ್ತರಿಗೆ ತಿಳಿಸುವುದು ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಯಿತು. ಹನುಮಸಾಗರದಲ್ಲಿ ಬಾವುದ್ದೀನ್ ಎಂಬ ರಜಾಕಾರ ಮುಖಂಡನಿದ್ದ. ಇಲ್ಲಿ ನಿಜಾಂನ ಸೈನಿಕರು, ರಜಾಕಾರರು ಇರುತ್ತಿದ್ದರು. ಇವರು ಇಟಗಿ ಶಿಬಿರದ ಸುತ್ತಮುತ್ತ ಆಗಾಗ ದಾಳಿ ಮಾಡುತ್ತಿದ್ದರು. ದಿನಾಂಕ ೧೩.೧೨.೧೯೪೭ ರಂದು ರಜಾಕಾರರಿಗೂ ಇಟಗಿ ಶಿಬಿರದ ಕಾರ್ಯಕರ್ತರಿಗೂ ಮಾಲಗಿತ್ತಿಯಲ್ಲಿ ನಡೆದ ಭಯಂಕರ ಗುಂಡಿನ ಚಕಮುಕಿಯಲ್ಲಿ ೮ ಜನ ಪಠಾಣರು ಬಲಿಯಾದರು. ಶಿಬಿರದ ಕೆಲವರಿಗೆ ಗಾಯವಾದರೂ ಪ್ರಾಣಾಪಾಯದಿಂದ ಪಾರಾದರು. ಅದೇ ರೀತಿ ಶಿಬಿರದ ಮುಖಂಡನಾದ ರಾಮಜಿಯು ೮.೨.೧೯೪೮ ರಂದು ಗುಡ್ಡದ ಮಲ್ಲಾಪುರ ಕಣವಿಯಲ್ಲಿ ಅವಿತು ರಜಾಕಾರರನ್ನ ಕೊಲ್ಲಲು ಹೊಂಚುಹಾಕಿದ್ದನು. ಆದರೆ ವಿಷಯ ತಿಳಿದು ವೇಷ ಬದಲಿಸಿದ ರಜಾಕಾರರು ರಾಮಜಿಯ ಮೇಲೆ ಗುಂಡಿನ ಮಳೆಗೆರೆದು ಬಲಿ ತೆಗೆದುಕೊಂಡರು. ಇದರಿಂದ ಮತ್ತಷ್ಟು ರೊಸಿಹೋದ ಶಿಬಿರದ ಕಾರ್ಯಕರ್ತರು ರಜಾಕಾರರ ಹಾಗು ಪಠಾಣರ ದುಷ್ಪತ್ಯಗಳನ್ನು ಮಟ್ಟಹಾಕಲುಯೋಚಿಸಿದರು. ಹೊಲದಲ್ಲಿ ಬೆಳೆದ ಈಚಲ ಗಿಡಗಳನ್ನು ಕಡಿದು ಸಾಗುವಳಿಗೆ, ಅನುಕೂಲ ಮಾಡಿದರು. ಇಟಗಿ, ಸಂಕನೂರು, ಮ್ಯಾಗೇರಿಗಳಲ್ಲಿದ್ದ ಸುಂಕದ ಕಟ್ಟೆಗಳ ಮೇಲೆ ದಾಳಿ ಮಾಡಿ ಅಲ್ಲಿನ ಕಾಗದ ಪತ್ರಗಳನ್ನು ನಾಶ ಮಾಡಿ ಹಣವನ್ನು ದೋಚಿ ಶಿಬಿರಕ್ಕೆ ಉಪಯೋಗಿಸಿಕೊಂಡರು. ಹಾಗೂ ಮುಂಡರಗಿ, ಗಜೇಂದ್ರಗಡ, ಕಂಪ್ಲಿಯ ಶಿಬಿರಗಳೊಂದಿಗೆ ಸದಾ ಒಡನಾಟದೊಂದಿಗೆ (ಪ್ರತಿಕ್ಷಣ) ಶಿಬಿರಗಳ ಮಾಹಿತಿಗಳನ್ನು ಪಡೆಯುತ್ತಿದ್ದರು. ತನ್ಮೂಲಕ ಅತಿ ಶೀಘ್ರವಾದ ಕಾರ್ಯಾಚರಣೆಯನ್ನು ಜರುಗಿಸುತ್ತಿದ್ದರು. ಈ ಇಟಗಿ ಶಿಬಿರಕ್ಕೆ ಅಂದಾನಪ್ಪ ದೊಡ್ಡಮೇಟೆ, ಕ್ರಾಂತಿವೀರ ವಾಲಿ ಚನ್ನಪ್ಪನವರು ಮುಂಡರಗಿಯ ಶಿಬಿರಾಧಿಪತಿಗಳು, ಅನೇಕ ಸ್ವಾತಂತ್ರ‍್ಯ ಯೋಧರು, ಸಲಹೆ ಹಾಗು ನೆರವುಗಳನ್ನು ನೀಡುತ್ತಿದ್ದರು.
ದಿನಾಂಕ ೨೦.೬.೧೯೪೮ ರಂದು ಇಟಗಿ ಶಿಬಿರದಲ್ಲಿ ಸ್ವಾಮಿ ರಮಾನಂದತೀರ್ಥರ ಸನ್ನಿಧಿಯಲ್ಲಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಿದ್ದರು. ಇಲ್ಲಿ ನೆರೆದ ಸುಮಾರು ಎಂಟರಿ೦ದ ಹತ್ತು ಸಾವಿರ ಜನರನ್ನು ಉದ್ದೇಶಿಸಿ ಸ್ವಾಮಿ ರಮಾನಂದತೀರ್ಥರು ಕ್ರಾಂತಿಕಾರಿ ಭಾಷಣ ಮಾಡಿದರು ಎಂದು ವ್ವಿ.ಎ.ಮಳಗಿಯವರು ಹೇಳುವ ಮಾತಿನಲ್ಲಿ ಕ್ರಾಂತಿಯ ತುಡಿತವಿತ್ತು. : ಕೊಪ್ಪಳ ಜಿಲ್ಲೆಯ ಗಡಿಭಾಗದಲ್ಲಿ ಅತ್ಯಂತ ಪ್ರಭಾವಿತ ಹೋರಾಟ ನೀಡಿದ ಶಿಬಿರಗಳಲ್ಲಿ ಇಟಗಿ ಶಿಬಿರವು ಬಹಳ ಮಹತ್ವದ್ದಾಗಿದೆ. “೧೯೪೭ ರಲ್ಲಿ ಇಟಗಿ ಶಿಬಿರದ ಸುತ್ತಮುತ್ತ ಹಳ್ಳಿಗಳನ್ನು ಒಳಗೊಂಡು “ಆರಖಾದ ಆಯ್‌ಲೆಂಡ್’ ಎಂದು ನಾಮಕರಣಗೊಳಿಸಿ ಕೊಂಡಿತ್ತು.”
ಹನುಮನಾಳ ಶಿಬಿರ
ಇಂದಿನ ಹನುಮನಾಳ ಗ್ರಾಮವು, ಹಿಂದೆ ಧಾರವಾಡ ಜಿಲ್ಲೆಗೆ ಸೇರಿ ಯೂನಿಯನ್ ಪ್ರದೇಶವಾಗಿತ್ತು. ಇದು ಗಡಿಭಾಗದ ಪ್ರದೇಶವಾದ್ದರಿಂದ ಮುಂಬೈ ಪ್ರಾಂತದ ಸೇನಾ ಠಾಣೆಗಳು ಇಲ್ಲಿದ್ದವು. ಇವರ ಸಹಕಾರ ಹಾಗೂ ನೈತಿಕ ಬೆಂಬಲವು ಹನುಮನಾಳ ಸ್ವಾತಂತ್ಯ ಯೋಧರ ಶಿಬಿರಕ್ಕೆ ಇತ್ತು.ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟದಲ್ಲಿ ಈ ಶಿಬಿರದ ಪಾತ್ರವು ಮಹತ್ವದ್ದಾಗಿದೆ. ಈ ಹನುಮನಾಳ ಶಿಬಿರದ ಸುತ್ತಮುತ್ತಲಿನ ಹಳ್ಳಿಗಳ ಮೇಲೆ ರಜಾಕಾರರ ಹಾವಳಿಯು ಹೆಚ್ಚಾಯಿತು. ಈ ಪ್ರದೇಶದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದರೋಡೆಗಳಂತಹ ದುಷ್ಟತ್ಮಗಳು ಹೆಚ್ಚಾದವು. ಇನ್ನೊಂದು ಕಡೆ ಕಾಂಗ್ರೆಸ್ಸಿನ ಮುಖಂಡರು, ಶಿಬಿರದ ಕಾರ್ಯಕರ್ತರು, ದೇಶಪ್ರೇಮಿ ಭೂಗತ ಶಿಬಿರಾರ್ಥಿಗಳು, ಜನರನ್ನು ರಜಾಕಾರರ ವಿರುದ್ಧ ಎತ್ತಿಕಟ್ಟಿದರು. ಆದರೂ ಕೂಡ ಇಲ್ಲಿನ ಜನರು ರಜಾಕಾರರಿಗೆ ಭಯ ಬಿದ್ದರು. ಇಲ್ಲಿ ಅಕ್ಕಪಕ್ಕದ ಗ್ರಾಮಗಳಾದ ಕಡಿವಾಳ, ಪಟ್ಟಲಚಿಂತಿ, ಗುಡ್ಡದ ಮಲ್ಲಾಪುರ, ತುಗ್ಗಲಡೋಣಿ, ಶ್ಯಾಡಲಗೇರಿ ಮೊದಲಾದ ಹಳ್ಳಿಗಳ ಜನರು ಊರುಬಿಟ್ಟು ರಜಾಕಾರರಿಂದ ಸುರಕ್ಷಿತವಾದ ಮುಂಬೈ ಗಡಿಪ್ರಾಂತ್ಮದ ಅಡವಿಯಲ್ಲಿ ಬೀಡುಬಿಟ್ಟರು. ಅನೇಕ ತೊಂದರೆಗಳ ನಡುವೆಯೂ ರಜಾಕಾರರ ವಿರುದ್ಧ ಹೋರಾಡಲು ಶಿಬಿರದ ರೂಪುರೇಷೆಗಳನ್ನು ರಚಿಸಿಕೊಂಡರು. ಇದಕ್ಕೆ ಗಜೇಂದ್ರಗಡ ಶಿಬಿರದಿಂದ ಸಹಕಾರವು ದೊರೆಯಿತು. ಹನುಮನಾಳ, ಶಿಬಿರವು ಗಜೇಂದ್ರಗಡ ಶಿಬಿರಕ್ಕೆ ಪೂರಕವಾಗಿ ಕಾರ್ಯಗಳನ್ನು ರೂಪಿಸುತ್ತಿತ್ತು. ಮೂಗುನೂರು, ಕಡಿವಾಳ ಗ್ರಾಮದಲ್ಲಿ ರೈತರಿಂದ ಒತ್ತಾಯ ಪೂರ್ವಕವಾಗಿ ಕಂದಾಯ ವಸೂಲಿ ಮಾಡುತ್ತಿದ್ದನ್ನು ಶಿಬಿರದ ಕಾರ್ಯಕರ್ತನಾದ ಸಿದ್ದಪ್ಪನು ಜನರ ಜೊತೆಗೂಡಿ ಪ್ರತಿಭಟಿಸಿದನು. ಗ್ರಾಮದೊಳಗೆ ರಜಾಕಾರರು ಹಾಗೂ ನಿಜಾಂ ಪೊಲೀಸರು ಬರದಂತೆ ನಿರ್ಬಂಧ ವಿಧಿಸಿದರು. “ಈ ಘಟನೆಯು ಹೈದರಾಬಾದ್‌ವರೆಗೂ ಹೋಯಿತು. ಕೂಡಲೇ ಜಾಗೃತರಾದ ಕಾರ್ಯಕರ್ತರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ರಜಾಕಾರರನ್ನು ನಿದ್ದೆ ಗೆಡಿಸಿದರು. ಮುಂದಿನ ಹೋರಾಟ ಹಾಗು ದಾಳಿಗಳ ರೂಪುರೇಷೆಗಳನ್ನು ಸಿದ್ದಪಡಿಸಿದ ಜನಾರ್ಧನ ದೇಸಾಯಿಯವರು, ಶಿಬಿರಕ್ಕೆ ರಾಚಪ್ಪ ಸೂಡಿಯವರನ್ನು ಶಿಬಿರಾಧಿಪತಿಯಾಗಿ ನೇಮಿಸಿದರು.” ಮೊದಲು ಹನುಮನಾಳ ಶಿಬಿರದ ವತಿಯಿಂದ ಸುತ್ತಮುತ್ತ ಗ್ರಾಮಗಳ ಜನರಿಂದ “ರಜಾಕಾರರ ಹಾವಳಿ ವಿರುದ್ದ ಬೇಸತ್ತಿದ್ದೇವೆ ನಮ್ಮನ್ನು ಸ್ವತಂತ್ರ ಗೊಳಿಸಿ” ಎಂದು ಭಾರತ ಸರ್ಕಾರಕ್ಕೆ ಮನವಿ ಮೂಲಕ ಸಹಿ ಸಂಗ್ರಹಿಸಿದರು. ಅದರಂತೆ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೂ ಪತ್ರವನ್ನು ರವಾನಿಸಿದರು. ನಂತರ ಕುಷ್ಮಗಿ ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಪಠಾಣ ಸೈನಿಕರು ಇದ್ದರು. ಹನುಮನಾಳ ಶಿಬಿರದ ಕಾರ್ಯಕರ್ತರು ರಾಚಪ್ಪ ಸೂಡಿಯ ನೇತೃತ್ವದಲ್ಲಿ ರಾತ್ರೋರಾತ್ರಿ ಪಠಾಣರ ಕಛೇರಿಗೆ ಬೆಂಕಿ ಹಚ್ಚಿ ಬಂದರು. ಇನ್ನೊಂದು ಈ ಶಿಬಿರದ ಮಹತ್ವದ ಸಾಧನೆಯೆಂದರೆ ಬಿಳಿಕಲ್ ಗ್ರಾಮದ ಸುಮಾರು ೫೦೦ ಆಕಳು, ಎಮ್ಮೆ, ಎತ್ತು ಇವೆಲ್ಲವುಗಳನ್ನು ಪಠಾಣರು, ರಜಾಕಾರರು ಸೇರಿ, ಹೊಡೆದುಕೊಂಡು ಹೋಗುವ ಸಂದರ್ಭವು,

ಶಿಬಿರಕ್ಕೆ ವಿಷಯ ತಿಳಿಯಿತು. ಸುಮಾರು ಪ್ರಾಣಿಗಳು, ಹತ್ಯೆಯಾಗುತ್ತವೆ ಎಂದು ಶಿಬಿರದ ಗುರನಗೌಡ, ರಾಘವೇಂದ್ರ ರಾವ್, ಕಾಳಪ್ಪ ಬಡಿಗೇರ, ಲಕ್ಕಪ್ಪ ಮೊದಲಾದವರು ಎರಡು ಮೈಲು ದೂರ ರಜಾಕಾರರನ್ನು ಬೆನ್ನು ಹತ್ತಿ ಗುಂಡಿನ ಬೆದರಿಕೆ ಒಡ್ಡಿ ಸುಮಾರು ೪೪೫ ದನಗಳನ್ನು ರಕ್ಷಿಸಿ ಶಿಬಿರಕ್ಕೆ ತಂದು ಉಪಚರಿಸಿ ಸಂಬ೦ಧಿಸಿದವರಿಗೆ ಹಿಂದಿರುಗಿಸಲು ಮುಂದಾದರು. ನಿಜಾಂ ಸರ್ಕಾರದಲ್ಲಿ ಅಧಿಕಾರಿಗಳಾದ ವಾಲಿಕಾರರ ಟಪಾಲು ಕಸಿಯುವಿಕೆ, ಸರಕು ಸಾಗಾಣಿಕೆಗೆ ಅಡ್ಡಿ, ಕಂದಾಯ ವಸೂಲಿಗೆ ತಡೆ ಹೀಗೆ ಪ್ರತಿಯೊಂದರಲ್ಲೂ ನಿಜಾಂ ಸರ್ಕಾರದ ವಿರುದ್ದವಾಗಿ ಕಾರ್ಯಕೈಗೊಂಡರು. ಇದು ರಜಾಕಾರರ ದುಷ್ಟತ್ಮ, ಅಪಚಾರಗಳನ್ನು ನಿಜಾಂನಿಗೆ ತಿಳಿಸುವುದಾಗಿತ್ತು. ಈ ಶಿಬಿರವು ಕೊಪ್ಪಳ ಜಿಲ್ಲೆಯಲ್ಲಿದ್ದ ಇತರ ಶಿಬಿರಗಳಿಗಿಂತ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಇದೊಂದು ಯೂನಿಯನ್ ಪ್ರದೇಶದಲ್ಲಿ ಇದ್ದ ಶಿಬಿರವಾದ್ದರಿಂದ ಅತ್ತ ಮುಂಬೈ ಪ್ರಾಂತ್ಯದ ಸೈನ್ಮದಿಂದಲೂ, ಹೊಂಗಾರ್ಡ್ಗಳಿ೦ದಲೂ, ಸಹಕಾರ, ಬೆಂಬಲವು ಹನುಮನಾಳ ಶಿಬಿರಕ್ಕೆ ಇದ್ದುದರಿಂದ ಈ ಶಿಬಿರವು ಸ್ವಾತಂತ್ರ‍್ಯ ಸೇನಾನಿಗಳ ತರಬೇತಿ ಶಿಬಿರವಾಗಿ ಮಾರ್ಪಟ್ಟಿತ್ತು. ಸಾವಿರಾರು ಜನರು ಈ ಶಿಬಿರದ ಸುತ್ತ ಆಶ್ರಯ ಪಡೆದು ನೆಮ್ಮದಿ ಜೀವನದ ಜೊತೆಗೆ ಶಿಬಿರಾರ್ಥಿಗಳಿಗೆ ಅನ್ನ ವಸತಿಗಳ ಸಹಾಯವನ್ನು ಮಾಡುತ್ತಿದ್ದರು ಎಂದು ತಿಳಿದು ಬರುತ್ತದೆ,
ಇತಿಹಾಸವನ್ನು ಬಲ್ಲದವನು ಇತಿಹಾಸವನ್ನು ಸೃಷ್ಠಿಸಲಾರ ಎನ್ನುವ ಮಾತಿನಂತೆ ನಾವೆಲ್ಲಾ ಇಂದು ಸ್ವಚ್ಛಂದವಾಗಿ ಬದುಕುತ್ತಿರುವ ಈ ಬದುಕು ಹಿರಿಯರ ತ್ಯಾಗ ಬಲಿದಾನಗಳಿಂದ ಬಂದಿದ್ದು ಎಂದು, ಈ ನೆಲದ ಇತಿಹಾಸದ ಪುಟಗಳನ್ನು ತಿರುವಿದರೆ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಹೋರಾಟದ ಕಥನಗಳು ಜನಪದ, ಮಾಧ್ಯಮ, ಸಾಹಿತ್ಯ ಹಾಗೂ ಇನ್ನಿತರ ಮೂಲಕ ಸಿಗುತ್ತವೆ.
ಆಧಾರ ಗ್ರಂಥಗಳು
- ಮುಂಡರಗಿ ನಾಡ ಸ್ವಾತಂತ್ರö್ಯ ಸಂಗ್ರಾಮ ಡಾ.ಸಿ.ಎಮ್.ಚುರ್ಚಿಹಾಳಮಠ
- ಹೈದರಾಬಾದ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಶಿಬಿರಗಳು -ಶರಣಪ್ಪ ವಿ.ಉಮಚಗಿ
- ಸಾಲರ ಜಂಗ ಬಹದ್ದೂರ ಇವರ ಚರಿತ್ರೆ -ಪಂಡಿತ ಶ್ರೀ ವೀರನಗೌಡರು ಡಿ.ಎಸ್,ಪಾಟೀಲ ಮೆಣಶಿಗಿ
। ಮುಕ್ತಾಯ ।






0 Comments