ಖಾಸಗಿ ತಂತ್ರಾಂಶಗಳ ಸುತ್ತಲೇ ಗಿರಕಿ ಹೊಡೆದದ್ದು…

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

ನವೆಂಬರ್, ಮತ್ತದೇ ಚರ್ಚೆ, ಆದೇಶ, ಅವೇಶಗಳ ಸುರಿಮಳೆ. ಪ್ರತಿವರ್ಷ ಯುನಿಕೋಡ್ ಬಳಕೆಗೆ ಆದ್ಯತೆ, ಶಿಫಾರಸ್ಸು, ಕಟ್ಟಪ್ಪಣೆ. ಇತ್ತ, ಅಕ್ಷರ ಶೈಲಿಗಳಿಲ್ಲ, ಮೊಬೈಲ್‌ನಲ್ಲಿ ಕನ್ನಡ ಟೈಪಿಸಲು ಸಾಧ್ಯವಿಲ್ಲ. ಕನ್ನಡ ಹೇಗೆ ಟೈಪಿಸಲಿ? ಯಾವ ತಂತ್ರಾಂಶ ಬಳಕೆಗೆ ಸುಲಭ? ಇವುಗಳ ಬಗ್ಗೆ ನಮ್ಮಲ್ಲಿ ಹಲವರು ಬ್ಲಾಗ್‌ಗಳನ್ನು, ಲೇಖನಗಳನ್ನು ಬರೆದಿದ್ದರೂ ಕೂಡ, ಪ್ರಶ್ನೆಗಳು ನಿಲ್ಲುವುದಿಲ್ಲ. ಕೆಲವೊಮ್ಮೆ ಈ ಪ್ರಶ್ನೆಗಳು ಕಂಗ್ಲೀಷ್‌ನಲ್ಲಿರುತ್ತವೆ. ಅವರ ಪ್ರಶ್ನೆಯೂ ಭಾಗಶ: (ಏಕೆಂದರೆ ಅವುಗಳನ್ನು ಓದಲಿಕ್ಕೂ ಕಷ್ಟ ಸಾಧ್ಯ).

ಇವುಗಳಿಗೆ ಉತ್ತರ ಕೊಡುವವರೂ ಸಧ್ಯಕ್ಕೆ ಕಡಿಮೆ ಏನಿಲ್ಲ. ಕಂಪ್ಯೂಟರಿನಲ್ಲಿ ನುಡಿ ಬಳಸಿ ಎನ್ನುವ ಮಾತನ್ನು ಮಾತ್ರ ನೋಡುತ್ತೇವೆ. ಅದರಲ್ಲಿನ ತೊಂದರೆ, ಫಾಂಟುಗಳ ಕಿರಿಕಿರಿ – ಬದಲಿ ವ್ಯವಸ್ಥೆ – ವಿಂಡೋಸ್ ಇತ್ಯಾದಿಗಳಲ್ಲಿನ ಡೀಫಾಲ್ಟ್ ಕೀಬೋರ್ಡ್ ಲಭ್ಯತೆ ಇತ್ಯಾದಿಗಳ ಬಗ್ಗೆ ಜನರಿಗೆ ಮಾತನಾಡಲು ಆಸಕ್ತಿಯೇ ಇಲ್ಲ. ಯುನಿಕೋಡ್‌ನಲ್ಲಿ ಟೈಪಿಸುವುದರ ಚರ್ಚೆ ಮೊದಲೇ ಹೇಳಿದಂತೆ ದೂರ.

ಪತ್ರಿಕೆಗಳು ನುಡಿಯಲ್ಲಿ ಬರೆದುಕಳಿಸಿ ಎಂದು ಹೇಳುತ್ತಾರೆ – ಇದರಿಂದಲೇ ನುಡಿ ಬೇಕು – ಅದು ಲಿನಕ್ಸ್ ನಲ್ಲಿ ಕೆಲಸ ಮಾಡುತ್ತಾ? ಮ್ಯಾಕ್‌ನಲ್ಲಿ? – ಈ ಬಾರಿ ನನ್ನ ಉತ್ತರ ಸ್ವಲ್ಪ ಬೇರೆಯದಿತ್ತು:-

ಪತ್ರಿಕೆಗಳಿಗೆ ಬೇಕಿರುವುದು ನುಡಿಯಲ್ಲಿ ಟೈಪ್ ಮಾಡಿರುವ ಲೇಖನಗಳಲ್ಲ – ಅವರು ಕೇಳುವುದು ಆಸ್ಕಿ ಫಾಂಟುಗಳಲ್ಲಿ ಬರೆದ ಲೇಖನಗಳನ್ನು. ಅವರಿಗೆ ಯುನಿಕೋಡ್‌ಗೆ ಅಪ್ಗ್ರೇಡ್ ಆಗಲು ಕೇಳಿ. ಇದನ್ನು ಕೇಳಿದವರು ಎಷ್ಟು ಮಂದಿ? ತಮ್ಮ ಲೇಖನ ಪ್ರಿಂಟ್ ಆದರೆ ಸಾಕು ಎಂದು ಕೂತವರು ನುಡಿ ತಂತ್ರಾಂಶದಲ್ಲಿ ಸರ್ಕಸ್ ಮಾಡಿದವರೆಷ್ಟು? ನುಡಿಯಲ್ಲಿರುವ ತಪ್ಪುಗಳನ್ನು ರಿಪೋಟ್ ಮಾಡಿದರೆ ಅದಕ್ಕೆ ಅಪ್ಡೇಟ್ ದೊರೆಯುತ್ತದೆಯೇ?
ನಾನು ಕನ್ನಡ ಬರೆಯಲು ಪ್ರಾರಂಭಿಸಿದಾಗಿನಿಂದ ನುಡಿ ಬಳಸಿಲ್ಲ. ನೇರವಾಗಿ ಯುನಿಕೋಡ್‌ನಲ್ಲಿಯೇ ನನ್ನ ಕೆಲಸ ಮುಗಿದಿದೆ.

ಈ ಫಾಂಟುಗಳು, ಶಿಷ್ಠತೆಯನ್ನು ಮೈಗೂಡಿಸಿಕೊಳ್ಳುವುದು ಇತ್ಯಾದಿಗಳಿಗೆ ನಮ್ಮಲ್ಲಿಯೇ ಉತ್ತರ ಕಂಡುಕೊಳ್ಳಬಹುದು:

ಫಾಂಟುಗಳು ಬೇಕು ನಿಜ – ನಮ್ಮಲ್ಲಿರುವ ಕಲಾವಿದರು ದಿನಕ್ಕೊಂದರಂತೆ ಒಬ್ಬೊಬ್ಬರೂ ಒಂದೊಂದು ಗ್ಲಿಪ್ ರೆಡಿ ಮಾಡಿದರೆ, ತಿಂಗಳಿಗೊಂದು ಫಾಂಟು ಡಿಸೈನ್ ಸಿದ್ಧವಾಗಬಲ್ಲದು. ಇವನ್ನು ಕ್ರಿಯೇಟೀವ್ ಕಾಮನ್ಸ್ ರೀತಿಯ ಮುಕ್ತ ಪರವಾನಗಿ ಅಡಿ ನೀಡಿದರೆ, ತಂತ್ರಜ್ಞಾನ ಅರಿತವರು ಅವುಗಳನ್ನು ಫಾಂಟುಗಳಿಗೆ ಅಳವಡಿಸುವುದು ಸಾಧ್ಯ.

ಖಾಸಗೀ ತಂತ್ರಾಂಶಗಳಲ್ಲಿ ಕನ್ನಡದ ತೊಂದರೆಗಳು ಮತ್ತು ಪರಿಹಾರ:

ಆಪಲ್ ಫೋನುಗಳನ್ನು ಬಳಸುವ ಎಷ್ಟು ಜನ ಅದರಲ್ಲಿನ ತೊಂದರೆಗಳ ಬಗ್ಗೆ ಬಗ್ ರಿಪೋರ್ಟ್ ಮಾಡಿದ್ದೀರಿ? ಕನ್ನಡಿಗ ಬಳಕೆದಾರ ಆದರೆ ಸಾಲದು – ಬಳಸುವ ಎಲ್ಲ ಹಕ್ಕುಗಳನ್ನು ಪಡೆಯುವ ತಿಳುವಳಿಕೆ ಇರುವ ಬಳಕೆದಾರನಾಗಬೇಕು. ಆಪಲ್ CEO ಪ್ರಶ್ನಿಸಲೂ ಆಗ ಮಾತ್ರ ಸಾಧ್ಯ. ಇದಕ್ಕೆ ಪರಿಹಾರವನ್ನು ಸರ್ಕಾರಕ್ಕೆ ಕೇಳಿದರೆ ಸಿಗುವ ಉತ್ತರಕ್ಕೆ ನಾವೇ ಹೊಣೆ! ಇದುವರೆಗೆ ಸರ್ಕಾರ ಮೈಕ್ರೋಸಾಫ್ಟ್, ಅಡೋಬ್, ಆಫಲ್ ನಂತಹ ಕಂಪೆನಿಗಳನ್ನು ಕರೆದು ಕನ್ನಡ ಸರಿಮಾಡಿ ಎಂದು ಪಟ್ಟು ಹಿಡಿದು ಕೇಳಿಲ್ಲ. ಕೇಳಬೇಕು. ಅದಕ್ಕೂ ಮೊದಲು, ಹಣಕೊಟ್ಟು ಅವರ ತಂತ್ರಾಂಶ, ಯಂತ್ರಾಂಶಗಳನ್ನು ಬಳಸುವ ನಾವು ಕೇಳಬೇಕು.

ಈಗ ಒಂದು ಹೆಜ್ಜೆ ಮುಂದೆ ಹೋಗೋಣ.

ಯುನಿಕೋಡ್‌ನಲ್ಲಿ ಕನ್ನಡದ‍ ಕೆಲಸ ಮಾಡಲಾಗುತ್ತಿಲ್ಲ‌ವೇ – ಹಾಗಿದ್ದಲ್ಲಿ ನಿಮ್ಮ ತೊಂದರೆಗಳನ್ನು ಹೀಗೆ ‌ಪಟ್ಟಿ ಮಾಡಬಹುದೇ?
‍1. ನೀವು ಅನುಭವಿಸುತ್ತಿರುವ ತೊಂದರೆ ಏನು?
‍2. ಬಳಸುತ್ತಿರುವ ಆಪರೇಟಿಂಗ್ ‌ಸಿಸ್ಟಂ ಯಾವುದು?

  1. ಬಳಸುವ ಫಾಂಟ್ ಹಾಗೂ ತಂತ್ರಾಂಶದ ಹೆಸರು, ಆವೃತ್ತಿ ಯಾವುದು?
    ‍4. ತಾಂತ್ರಿಕ ಸಮಸ್ಯೆ‍ಯನ್ನು ಸರಳವಾಗಿ ಹೇಳಲು ಬರದಿದ್ದರೆ, ಅದ‍ಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಹಂಚಿಕೊಳ್ಳಲು ‍ಸಾಧ್ಯವೇ?
    ‍5. ತಾಂತ್ರಿಕ ಸಮಸ್ಯೆಗಳನ್ನು ದಾಖಲಿಸಲು, ಅದರ ಸೃಷ್ಟಿಕರ್ತರನ್ನು ಸಂಪರ್ಕಿಸಲು ಪ್ರಯತ್ನಿಸಿ‍ದಿರೇ?, ಅದಕ್ಕೆ ಉತ್ತರ ದೊರೆಕಿತೆ?

ಈ ಪಟ್ಟಿಗಳನ್ನು ಒಂದೆಡೆ ಸೇರಿಸಿದ ನಂತರ, ತಂತ್ರಜ್ಞಾನ ಅರಿತವರು ಅವಕ್ಕೆ ಕೊಡಬಲ್ಲ ಉತ್ತರಗಳನ್ನೂ ಪಟ್ಟಿ ಮಾಡಿ ಎಲ್ಲರಿಗೂ ತಿಳಿಯುವಂತೆ ಮಾಡಬಹುದು. – ಒಟ್ಟಿಗೆ ಸೇರಿ ಉತ್ತರ ಪಡೆಯುವ ಕೆಲಸವನ್ನು ನಾವು ಕನ್ನಡಿಗರು ಮಾಡಬಹುದಲ್ಲವೇ?

ಕನ್ನಡ ತಂತ್ರಜ್ಞಾನ ಬಳಕೆಗೆ ಬಳಕೆದಾರರು ಖಾಸಗೀ ತಂತ್ರಾಂಶಗಳ ಸುತ್ತಲೇ ಗಿರಕಿ ಹೊಡೆದದ್ದು, ಜೊತೆಗೆ ಅದರಲ್ಲಿ ಕನ್ನಡದ ಬಳಕೆಯನ್ನು ‍ಕಾಲಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳಲು ಒತ್ತಡ ಹಾಕದೇ ಇದ್ದದ್ದಕ್ಕೆ ಕಾರಣಗಳೇನಿರಬಹುದು?‍

  1. ಖಾಸಗೀ ತಂತ್ರಾಂಶಗಳ ಖರೀದಿಯ ಬಾಬ್ತು… ಲೈಸೆನ್ಸ್ ಇತ್ಯಾದಿ cost factor
  2. ಲೈಸನ್ಸ್ ‍ಕೂಡ ಕೊಳ್ಳದೆ ಪ್ರೈರೇಟೆಡ್ ತಂತ್ರಾಂಶ ಬಳಸುವ ಸಾಧ್ಯತೆಗಳನ್ನು ಕಂಡುಕೊಂಡದ್ದು.
  3. ಮುಕ್ತ ಮತ್ತು ತಂತ್ರಾಂಶಗಳನ್ನು ಕಲಿಯಲು‍, ಬಳಸಲು, ಅದರಲ್ಲಿನ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿಕೊಳ್ಳಲು ತೋರಿಸಿದ ಅಸಡ್ಡೆ – ಸುಲಭವಾಗಿ ಕೆಲಸ ಆ‍ಗುತ್ತಿರಬೇಕಿದ್ದರೆ ಇವೆಲ್ಲವುಗಳ ತತ್ವಜ್ಞಾನ ಪುಸ್ತಕದ ಬದನೇಕಾಯಿ ಆದದ್ದು.‍
  4. ಪೈರಸಿಯಿಂದ ತೊಂದರೆ ಅನುಭವಿಸಿದ ಮೈಸೂರಿನ ಕೆಲವು ಡಿ.ಟಿ.ಪಿ ಆಪರೇಟರುಗಳನ್ನು ಬಿಟ್ಟರೆ ಬೇರೆ ತೊಂದರೆಗಳ ಬಗ್ಗೆ ವರದಿಯಾಗದೇ ಇದ್ದದ್ದು / ಅಷ್ಟು ಅಚ್ಚುಕಟ್ಟಾಗಿ ಖಾಸಗೀ ತಂತ್ರಾಂಶಗಳ ಲೈಸೆನ್ಸ್ ವೆರಿಫೈ ಆಗದೇ ಇದ್ದದ್ದು.
  5. ಹೊಸ ಆವೃತ್ತಿಗಳಿಗೆ ಅಪ್ಡೇಟ್ ಆಗದೇ ಹಳೆಯ ಸ್ಟಾಂಡ್‌ಅಲೋನ್ ಸಿಸ್ಟಂ‌ಗಳನ್ನು ಬಳಸುವುದು ‍- ಬ್ಯಾಂಕ್‌ಗಳೇ ವಿ‍ಂಡೋಸ್ ಎಕ್ಸ್‌ಪಿ ಬಳಸುವಾಗ ನಾವೇಕೆ ಬಳಸಬಾರದು ಎಂಬ ಆಲೋಚನೆ.
    ಒಟ್ಟಿನಲ್ಲಿ ಕೇಳಿದರೆ ಎಲ್ಲಿ ಹೊಸ ಲೈಸೆನ್ಸ್ ಕೊಳ್ಳಬೇಕಾಗುವುದೋ ಎನ್ನುವ ಒತ್ತಡ ಇರಬಹುದು.
  6. ಕನ್ನಡಕ್ಕೆ ಬೇಕಾದ ತಂತ್ರಾಂಶಗಳನ್ನು ಒದಗಿಸಿಕೊಟ್ಟ ಸಂಸ್ಥೆಗಳೂ ಯುನಿಕೋಡ್ ಇತ್ಯಾದಿಗಳಿಗೆ ಅವಶ್ಯ ಬೆಂ‍‍ಬಲ ಒದಗಿಸ‍ದೆ, ಇರುವುದನ್ನೇ ಮಾರಿ ಲಾಭ ಮಾಡಿಕೊಳ್ಳುವುದರತ್ತ ಗಮನ‍ಹರಿಸಿದ್ದು. – ತಂತ್ರಜ್ಞಾನ ಕ್ಷೇತ್ರದಲ್ಲಿರುವವರು, ಇಂತಹ ತಂ‍ತ್ರಾಂಶಗಳನ್ನು ಅಭಿವೃದ್ಧಿಪಡಿಸಿದವರು ‍ದಶಕಗಳಾದರೂ ಇದರತ್ತ ತೋರಿದ ಅಸಡ್ಡೆ ಎದ್ದು ತೋರುತ್ತದೆ. ಅವರು ಯುನಿಕೋಡ್ ತಂತ್ರಾಂಶ ಅಭಿವೃದ್ಧಿಪಡಿ‍ಸಿ ಮಾರುಕಟ್ಟೆ ವಿಸ್ತರಿಸುವ ಅವಕಾ‍ಶಗಳು ಇದ್ದೇ ಇದ್ದವು.
  7. ಎಲ್ಲದಕ್ಕೂ ಸರ್ಕಾರವೇ ಮಾಡಲಿ ಎಂದು ಕೊಂಡದ್ದು, ಎಂದು ಕೊಳ್ಳುವುದೂ ತಂತ್ರಜ್ಞಾನವೆಂದರೆ‍ ಕೇವಲ ಕನ್ನಡ ಫಾಂಟು, ನುಡಿ ತಂತ್ರಾಂಶದ ಅಪ್ಡೇಟೆಡ್ ವರ್ಷನ್, ಡಿಟಿಪಿ ಸಾಫ್ಟ್ವೇರ್ ಇದರ ಸುತ್ತಲೇ ಸುತ್ತುತ್ತದೆ.
    ‍ಪ್ರತಿವರ್ಷ ಇದೇ ಪ್ರಶ್ನೇ, ಅದೇ ಉತ್ತರ – ಬೇರೆ ಬೆಳವಣಿಗೆಗಳ ಬಗ್ಗೆ ಮಾತನಾಡುವವರು, ಅದನ್ನು ಉತ್ತಮಗೊಳಿಸಲು ಸೂಚಿಸಿ ಬೆಂಬಲಿಸುವವರು ಸಿಗುವುದೇ ಇಲ್ಲ.

ಈ ವಿಚಾರ ಸರ್ಕಾರಗಳೂ, ಪ್ರಜೆಗಳೂ ಎಷ್ಟು ಬಾರಿ ಚರ್ಚಿಸಿದರೂ ಗಾಳಿಯಲ್ಲಿ ಯುದ್ಧ ಮಾಡಿದಂತೆ‍. ಫಾಂಟುಗಳು ಬೇಕೆಂದರೆ ಬೇಕಾದ‍ವರು ಸಿದ್ಧ ಪಡಿಸಿಕೊಳ್ಳೋಣ. ನಮ್ಮ ಕಾಲೇಜು ವಿದ್ಯಾರ್ಥಿಗಳು ತಂತ್ರಜ್ಞಾನ, ಕಲೆ ಯಾವುದೇ ವಿಭಾಗವಾದರೂ ಈ ಕೆಲಸದಲ್ಲಿ ಭಾಗವಹಿಸಬಹುದು. ಇದಕ್ಕೆ ಬೇಕಿರುವ ವರ್ಕ್‌ಶಾಪ್ ಇತ್ಯಾದಿಗಳನ್ನು ರೆಕಾರ್ಡ್ ಮಾಡಿ ಲಭ್ಯವಾಗಿಸುವ ಕೆಲಸ ಸಾಧ್ಯವಾದರೆ ಮತ್ತಷ್ಟು ಜನರೂ ಕೈ ಜೋಡಿಸಬಹುದು. ಫಾಂಟುಗಳನ್ನು ರಚಿಸಲು ಇರುವ ಫಾಂಟ್‌ಫೋರ್ಜ್ ಇತ್ಯಾದಿಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ.

‍ಲೇಖಕರು ಓಂಶಿವಪ್ರಕಾಶ್

November 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: