ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿವಿಗೆ ಇಂಪಾಗುವ ಹಾಗೆ..

     

  ನವನೀತ ರಶ್ಮಿಕಾ

ನೆನಪಾಗುವರು 

ನೆನಪಾಗುವರು ಇವರು
ಮಿಡಿದ ಪ್ರತಿ ಎದೆಬಡಿತದಿ ||

ಬಯಲು ಸೀಮೆಯ ಕುವರನಾಗಿ
ಹುಟ್ಟುತಲಿ; ಬೆಳೆದರು
ದೇಶದ ಮೂಲೆ ಮೂಲೆಯ
ಉದ್ದಗಲಕ್ಕೂ
ತನ್ನ ಛಾಯೆಯ ಆವರಿಸುತಾ,
ಕಟ್ಟಿದ ಪ್ರತಿ ಕವಿತೆ
ಕಿವಿಗೆ ಇಂಪಾಗುವ ಹಾಗೆ
ಕುಳಿತೆ ಬಿಟ್ಟರು ಮನದಿ
ನೆನಪಾಗುವ ಹಾಗೆ

ದೂರದ ತೀರಕೆ ಕರೆಯುವರು
ಎಲ್ಲೆ ಇದ್ದರು ನಾವು |
ಬಿಡದೆ ಕಾಡುವ ಮನೋಙ್ಞ
ಕವಿತೆ ಮೂಲಕ
ಬದುಕಿನ ಸಾರವ ತೋರಿದರು
ನುಡಿಸುತ ನಾಕುತಂತಿಯ
ಮನದಿ ಕುಳಿತು
ನೆನಪಾಗುವ ಹಾಗೆ ||


ಹಂಚಿದರು ಸಮನಾಗಿ

ಜೀವನವ
ಸಾಹಿತ್ಯ ಸಂಸಾರಕ್ಕಾಗಿ|
ಅಡಗಿಸಿದರು ನೋವ
ನಗು ಮೊಗವ ತೋರುತ
ಹೊರಟರು ಕಷ್ಟ ಮರೆತು
ಸಮಾಧಾನದ ಅಸ್ತ್ರವ ಹಿಡಿದು
ಯಶಸ್ಸಿನ ಹಾದಿಯತ್ತ
ಮುಖ ಹಾಕಿ
ಮನದಿ ನೆನಪಗುವ ಹಾಗೆ ||

ವರವಾಗಿಯೇ ಹೋಯಿತು
ಅಂಬೆಯ ಮನದಲ್ಲಿ
ನೆನೆದು ಬರೆದ ಕೃತಿಗೆ
ವರಕವಿಯಾಗುವ ಹಾಗೆ
ನೆನಪಾಗೆ ಇರುವರು
ಕೊನೆಯವರೆಗೂ
ನಮ್ಮ ನಿಮ್ಮ ಮನದೊಳಗೆ
ಅಂಬೆ ಮುದ್ದು ಕಂದ
ಅಂದತ್ತರಾಗಿ…!
ಅಂಬಿಕಾತನಯದತ್ತರಾಗಿ…!

‍ಲೇಖಕರು avadhi

14 June, 2019

1 Comment

  1. prakash konapur

    ನವನೀತ ರಶ್ಮಿಕಾ ಅವರ ಎರಡೂ ಕವಿತೆಗಳು ಅತ್ಯಂತ ಸುಂದರವಾಗಿವೆ ದ.ರಾ.ಬೇಂದ್ರೆ ಯವರ ಕುರಿತು ಅತ್ಯಂತ ಸಮರ್ಥವಾಗಿ ಕಾವ್ಯದಲ್ಲಿ ಚಿತ್ರಿಸಿದ್ದಾರೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading