‘ಕಾಪಿರೈಟ್’‌ ಸ್ವಯಂಚಾಲಿತವಾದದ್ದು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

। ಕಳೆದ ವಾರದಿಂದ ।

ಈ ಲೇಖನ ನಾನು ಬರೆಯುತ್ತಿರುವ “ಕ್ರಿಯೇಟೀವ್ ಕಾಮನ್ಸ್ ಕನ್ನಡ ೧೦೧” ಪುಸ್ತಕದ ಒಂದು ಭಾಗವಾಗಿದ್ದು, ‍Creative Commons Attribution 4.0 International License‌ ಅಡಿ ಲಭ್ಯವಿದೆ.

Creative Commons Kannada 101 by Omshivaprakash is licensed under a Creative Commons Attribution 4.0 International License, except where otherwise noted.

ಕ್ರಿಯೇಟೀವ್ ಕಾಮನ್ಸ್ ಪರವಾನಗಿ/ಲೈಸೆನ್ಸ್‌ಗಳು

Creative Commons (CC) licenses

  • ಕ್ರಿಯೇಟೀವ್ ಕಾಮನ್ಸ್ (ಸಿಸಿ) ಪರವಾನಗಿ/ಲೈಸೆನ್ಸ್‌ಗಳು ಕಾಪಿರೈಟ್ ಮೇಲೆ ಆಧಾರಿತವಾಗಿದ್ದು,  ಕಾಪಿರೈಟ್ ಹೊಂದಿರುವ ಕೃತಿಯನ್ನು ನಕಲು/ಕಾಪಿ ಮಾಡಲು, ಹಂಚಿಕೊಳ್ಳಲು ಅಥವಾ ಬಳಸಿಕೊಳ್ಳಲು ಬೇಕಿರುವ ಅನುಮತಿಗಳ ನಿರ್ದಿಷ್ಟ ಹಾಗೂ ಅತಿಹೆಚ್ಚು ಹೊಂದಾಣಿಕೆಗಳನ್ನು ಕೊಡುತ್ತವೆ.
  • ಕೃತಿಯ ಮೂಲ ಸೃಷ್ಟಿಕರ್ತ ತನ್ನ  ಕೃತಿಸ್ವಾಮ್ಯಗಳನ್ನು ತನ್ನಲ್ಲೇ ಇರಿಸಿಕೊಳ್ಳುತ್ತಾನೆ.
  • ನೀವು ಕ್ರಿಯೇಟೀವ್ ಕಾಮನ್ಸ್ ಅಡಿಯಲ್ಲಿ ನೀಡುವ ಅನುಮತಿಗಳು ವಿಶ್ವದಾದ್ಯಂತ ಕೆಲಸ ಮಾಡುತ್ತವೆ ಹಾಗೂ ಹಕ್ಕುಸ್ವಾಮ್ಯ(ಕಾಪಿರೈಟ್) ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ‍ಇರುತ್ತದೆ.
  • ಸಮಾಜಕ್ಕೆ ಹೊಸ ಕೃತಿಗಳನ್ನು ಸೃಷ್ಟಿಸಲು ಸಾಕಷ್ಟು ಕ್ರಿಯಾಶೀಲ ವಸ್ತುಗಳು ಇದರಿಂದ ದೊರಕಿದಂತಾಗುತ್ತದೆ.

ಕ್ರಿಯೇಟೀವ್ ಕಾಮನ್ಸ್‌ ಲೈಸೆನ್ಸ್‌ನ ಮೂರು ಪದರಗಳು

  1. ಲೀಗಲ್ ಕೋಡ್ / ಕಾನೂನು ಸಂಕೇತ
  2. ಕಾಮನ್ ಡೀಡ್ / ಸಾಮಾನ್ಯ ಕರಾರು‍
  3. ಮಷೀನ್ ರೀಡಬಲ್ / ಯಾಂತ್ರಿಕ ಪರಿಭಾಷೆ

ಪದರ ೧.ಕಾನೂನು ಸಂಕೇತ/ಕೋಡ್ (LEGAL CODE)

ಇದು ಕ್ರಿಯೇಟೀವ್ ಕಾಮನ್ಸ್‌ ಲೈಸೆನ್ಸ್‌ನ ಅಡಿಪಾಯವಾಗಿದ್ದು, ಇದರಲ್ಲಿ ಲೈಸೆನ್ಸ್ ನಿಯಮಗಳು ಮತ್ತು ಷರತ್ತುಗಳನ್ನು ಕಾನೂನು ಬದ್ಧವಾಗಿ ಬರೆಯಲಾಗಿದೆ. ಇವುಗಳು ವಕೀಲರು ಓದಲಾಗುವ ಭಾಷೆಯಲ್ಲಿ ಬರೆದಿರುವುದರಿಂದ ಕೋರ್ಟುಗಳಲ್ಲಿ ಬಳಸಬಹುದು.

ಪದರ ೨: ಕಾಮನ್ ಡೀಡ್ / ಸಾಮಾನ್ಯ ಕರಾರು‍ (Human Readable Common Deeds)

 ಮಧ್ಯದ ಪದರ ಸಾಮಾನ್ಯರು ಅರ್ಥ ಮಾಡಿಕೊಳ್ಳಬಹುದಾದ ಪರಿಭಾಷೆಯಲ್ಲಿರುವ ಸಾಮಾನ್ಯ ಕರಾರನ್ನು ಹೊಂದಿರುತ್ತದೆ. ಇವು ಕ್ರಿಯೇಟೀವ್ ಕಾಮನ್ಸ್ ಚಿನ್ಹೆಗಳಾಗಿದ್ದು, ಕಾನೂನು ಪರಿಭಾಷೆಯನ್ನು ‍ಸಂಕ್ಷಿಪ್ತವಾಗಿ ವಿವರಿಸುತ್ತವೆ.

ಪದರ ೩: ಮಷೀನ್ ರೀಡಬಲ್ / ಯಾಂತ್ರಿಕ ಪರಿಭಾಷೆ (Machine-readable” version of the license)

ಕಡೆಯ ಹಾಗೂ ಮೂರನೆ ಪದರ ‍ಯಾಂತ್ರಿಕ ಪರಿಭಾಷೆಯನ್ನು ಹೊಂದಿದ್ದು, ಸರ್ಚ್ ಎಂಜಿನ್‌ಗಳಿಂದ ಹಿಡಿದು ದೈನಂದಿನ ಪ್ರೊಡಕ್ಟಿವಿಟಿ ಟೂಲ್‌ಗಳು, ಸಂಗೀತದ ಸಂಕಲನ ಇತ್ಯಾದಿಗಳ ಕೆಲಸಗಳ ಸೃಷ್ಟಿ, ನಕಲು ಮಾಡುವಿಕೆ, ಅನ್ವೇಷಣೆ ಹಾಗೂ ಹಂಚಿಕೆಯಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತದೆ. ಇಂಟರ್ನೆಟ್‌ನಲ್ಲಿ ಒಂದು ಕ್ರಿಯೇಟಿವ್ ಲಭ್ಯವಾದಾಗ ಆದರ ಸುತ್ತಲಿನ ಸ್ವಾತಂತ್ರ್ಯ, ಕರಾರು ಕಟ್ಟುಪಾಡುಗಳನ್ನು ಸರ್ಚ್‌ಎಂಜಿನ್ ಹಾಗೂ ಇತರೆ ತಂತ್ರಜ್ಞಾನಗಳು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಹಾಗೆ CC Rights Expression Language (CC REL) ‌ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ ಅಂಶಗಳು (License Elements of Creative Commons)

ಸಿಸಿ ಪರವಾನಗಿ ಅಡಿಯಲ್ಲಿ ಪರವಾನಗಿ ನೀಡುವಾಗ ನಮಗೆ ನಾಲು ಮುಖ್ಯ ಆಯ್ಕೆಗಳಿವೆ.  ಇವುಗಳನ್ನು BY, NC, SA ಮತ್ತು ND ‍ಅಂಶಗಳಿಂದ ಪ್ರತಿನಿಧಿಸಲಾಗುತ್ತದೆ. ಈ ನಾಲ್ಕು ಪ್ರಾತಿನಿಧಿಕ ಅಂಶಗಳಿಂದ ಆರು ಪರವಾನಗಿಗಳ ಸಂಭಾವ್ಯ ಸಂಯೋಜನೆಗ‍ಳನ್ನು ಪಡೆಯಬಹುದು.

BY – Attributionಎಲ್ಲಾ ಪರವಾನಗಿಗಳು ಈ ನಿಬಂಧನೆಯನ್ನು ಒಳಗೊಂಡಿರುತ್ತವೆ: ಬಳಕೆದಾರರು ಮೂಲ ಕರ್ತೃವನ್ನು ‍ಸೂಕ್ತವಾಗಿ ಉಲ್ಲೇಖಿಸಬೇಕು.All of the licenses include this condition: users have to give credit to the author in an appropriate manner.
NC – NonCommercialಈ ಕೃತಿ/ಕೆಲಸ ಕೇವಲ ವಾಣಿಜ್ಯೇತರ ಉದ್ದೇಶಗಳಿಗಾಗಿ ಬಳಸಲು ಲಭ್ಯವಿದೆ. ಮೂರು ಕ್ರಿಯೇಟಿವ್‌ ಕಾಮನ್ಸ್ ಪರವಾನಗಿಗಳು ಈ ನಿರ್ಬಂಧವನ್ನು ಒಳಗೊಂಡಿವೆ.The work is only available to be used for noncommercial purposes. Three of the CC licenses include this restriction.
SA – ShareAlike ಈ ಕೃತಿ/ಕೆಲಸದ ಆಧಾರದ ಮೇಲೆ ಸೃಷ್ಟಿಸಿದ ರೂಪಾಂತರಗಳು ಒಂದೇ ಪರ‍ವಾನಗಿ ಅಡಿಯಲ್ಲಿ ಪರವಾನಗಿ ಪಡೆಯಬೇಕು. ಎರಡು ಕ್ರಿಯೇಟಿವ್‌ ಕಾಮನ್ಸ್ ಪರವಾನಗಿಗಳು ಈ ಸ್ಥಿತಿಯನ್ನು ಒಳಗೊಂಡಿವೆ.adaptations based on this work must be licensed under the same license. Two of the CC licenses include this condition.
ND – NoDerivatives ಮರುಬಳಕೆದಾರರು ಕೃತಿ/ಕೆಲಸದ ರೂಪಾಂತರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಎರಡು ಕ್ರಿಯೇಟಿವ್‌ ಕಾಮನ್ಸ್ ಪರವಾನಗಿಗಳು ಈ ನಿರ್ಬಂಧವನ್ನು ಒಳಗೊಂಡಿವೆ.Reusers cannot share adaptations of the work. Two of the CC licenses include this restriction.

‍ಲೇಖಕರು ಓಂಶಿವಪ್ರಕಾಶ್

October 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: