–ಸುರೇಶ ತಂಗೋಡ
ಕವಿ ಸತ್ತ ದಿನ…
ದಿನಚರಿಯಂತೆ
ಭಾಸ್ಕರ ಉದಯಿಸುತ್ತಾನೆ
ಪೂರ್ವದಲ್ಲೇ…
ಗಾಳಿ ಬೀಸುತ್ತದೆ,
ಭೂಮಿ ತಿರುಗುತ್ತದೆ,
ನಡೆಯುತ್ತದೆ ಎಲ್ಲರ ಜೀವನ
ನಿತ್ಯ ನಡೆಯುವಂತೆ.
ಅಲ್ಲಿ ಸಂಬಂಧಿಕರಿಗಿಂತ ಶಬ್ಧಗಳ
ಸಮಾಗಮವಿರುತ್ತದೆ
ತಮಟೆಗಲ್ಲಿ ಜಾಗವಿಲ್ಲ
ಆತನ ಸಿದ್ಧಾಂತಗಳ ಅಂತಿಮ ಪೂಜೆ
ಪರ ವಿರೋಧಗಳ
ಪರಾಮರ್ಶೆ.
ಕವಿಯ ಆಸ್ತಿಗೆ ಯಾರು
ಆಸೆ ಪಡುವರಿಲ್ಲ
ಪುಸ್ತಕಗಳನ್ನು ಪುಕ್ಕಟೆ ಓಡುವವರು ಇಲ್ಲ
ಇನ್ನು ಅದಕ್ಕಾಗಿ ವ್ಯಾಜ್ಯ
ದೂರದ ಮಾತು.
ಆ ಮನೆಯ ಕಪಾಟಿನಲ್ಲಿರುವ
ಪುಸ್ತಕಗಳ ರೋದನೆ ಕೇಳಲಾಗದು,
ಅರ್ಧ ಬರೆದು ಬಿಟ್ಟ ಕವಿತೆ
ಕವಿಗಿಂತ ಮೊದಲೇ ಸತ್ತಂತೆ
ಆದರೆ
ಕವಿಗಷ್ಟೇ ಇಲ್ಲಿ ಮುಕ್ತಿ
ಕವಿತೆಗಿಲ್ಲ.
ಖಾಲಿ ಕುರ್ಚಿ
ಕರಳು ಹಿಂಡಿಕೊಳ್ಳುತ್ತದೆ
ಪೆನ್ನು ಜೀವಂತ ಶವವಾಗಿದೆ.
ಕವಿ ಸತ್ತಾಗ ಯಾರು ಅಳದಿದ್ದರು
ಆತ ಬರೆದ ಬರಹಗಳು ಬಿಕ್ಕಿ ಬಿಕ್ಕಿ ಅಳುತ್ತವೆ
ಕವಿಯಾಗಬೇಕು.
ಕಾರಣ
ಕವಿಯಾದರೆ,
ಸತ್ತ ಮೇಲೂ ಬದುಕಬಹುದಲ್ಲ?
ಕವಿ ಸತ್ತ ದಿನ…
ದಿನಚರಿಯಂತೆ
ಭಾಸ್ಕರ ಉದಯಿಸುತ್ತಾನೆ
ಪೂರ್ವದಲ್ಲೇ…
ಗಾಳಿ ಬೀಸುತ್ತದೆ,
ಭೂಮಿ ತಿರುಗುತ್ತದೆ,
ನಡೆಯುತ್ತದೆ ಎಲ್ಲರ ಜೀವನ
ನಿತ್ಯ ನಡೆಯುವಂತೆ.
ಅಲ್ಲಿ ಸಂಬಂಧಿಕರಿಗಿಂತ ಶಬ್ಧಗಳ
ಸಮಾಗಮವಿರುತ್ತದೆ
ತಮಟೆಗಲ್ಲಿ ಜಾಗವಿಲ್ಲ
ಆತನ ಸಿದ್ಧಾಂತಗಳ ಅಂತಿಮ ಪೂಜೆ
ಪರ ವಿರೋಧಗಳ
ಪರಾಮರ್ಶೆ.
ಕವಿಯ ಆಸ್ತಿಗೆ ಯಾರು
ಆಸೆ ಪಡುವರಿಲ್ಲ
ಪುಸ್ತಕಗಳನ್ನು ಪುಕ್ಕಟೆ ಓಡುವವರು ಇಲ್ಲ
ಇನ್ನು ಅದಕ್ಕಾಗಿ ವ್ಯಾಜ್ಯ
ದೂರದ ಮಾತು.
ಆ ಮನೆಯ ಕಪಾಟಿನಲ್ಲಿರುವ
ಪುಸ್ತಕಗಳ ರೋದನೆ ಕೇಳಲಾಗದು,
ಅರ್ಧ ಬರೆದು ಬಿಟ್ಟ ಕವಿತೆ
ಕವಿಗಿಂತ ಮೊದಲೇ ಸತ್ತಂತೆ
ಆದರೆ
ಕವಿಗಷ್ಟೇ ಇಲ್ಲಿ ಮುಕ್ತಿ
ಕವಿತೆಗಿಲ್ಲ.
ಖಾಲಿ ಕುರ್ಚಿ
ಕರಳು ಹಿಂಡಿಕೊಳ್ಳುತ್ತದೆ
ಪೆನ್ನು ಜೀವಂತ ಶವವಾಗಿದೆ.
ಕವಿ ಸತ್ತಾಗ ಯಾರು ಅಳದಿದ್ದರು
ಆತ ಬರೆದ ಬರಹಗಳು ಬಿಕ್ಕಿ ಬಿಕ್ಕಿ ಅಳುತ್ತವೆ
ಕವಿಯಾಗಬೇಕು.
ಕಾರಣ
ಕವಿಯಾದರೆ,
ಸತ್ತ ಮೇಲೂ ಬದುಕಬಹುದಲ್ಲ?






0 Comments