ಓದುವ ಮೊದಲು…

‘ಅಮೃತ ಯಾನ’ ಓದಿದ ಎಲ್ಲರೂ ಕಣ್ಣಲ್ಲಿ ನೀರು ತರಿಸಿಕೊಂಡವರೇ.

ಈಗ ಪ್ರಸಾದ್ ರಕ್ಷಿದಿ ಕುಟುಂಬ ಅದರ ಮುಂದುವರಿಕೆಯಾಗಿ ‘ಅಮೃತಯಾನದ ಸಹಪಯಣಿಗರು’ ಬರೆದಿದ್ದಾರೆ. ಅದಕ್ಕೆ ಬರೆದ ಮಾತು ನಿಮ್ಮ ಓದಿಗಾಗಿ ಇಲ್ಲಿದೆ-

ಈ ಹಿಂದೆ ‘ಅವಧಿ’ಯಲ್ಲಿ ಪ್ರಕಟವಾದ ಅಮೃತಯಾನ ಬರಹಗಳನ್ನು ಓದಲು ಈ ಕೆಳಗಿನ ಲಿಂಕ್ಸ್ ಮಾಡಿ-

https://avadhimag.in/%e0%b2%ae%e0%b3%81%e0%b2%97%e0%b2%bf%e0%b2%a6-%e0%b2%85%e0%b2%ae%e0%b3%83%e0%b2%a4%e0%b2%af%e0%b2%be%e0%b2%a8/

ರಾಧೆ, ಪ್ರಸಾದ್ ಮತ್ತು ಅಕ್ಷರ ರಕ್ಷಿದಿ

ನಾವಿದನ್ನು ಬರೆಯಲು ಹಲವಾರು ಜನರು ಕಾರಣರಾಗಿದ್ದಾರೆ ‘ಇಷ್ಟು ವರ್ಷಗಳ ನಿಮ್ಮ ಅನುಭವವನ್ನು ಬರೆಯಿರಿ, ಇದರಿಂದ ನಿಮಗೇನೂ ಉಪಯೋಗವಿಲ್ಲ ಎನಿಸಬಹುದು ಆದರೆ ಇಷ್ಟು ವರ್ಷಗಳ ಕಾಲ ನೀವು ಅವಳನ್ನು ನೋಡಿಕೊಳ್ಳಲು ಹೇಗೆ ಸಾಧ್ಯವಾಯಿತು ಎನ್ನುವುದು ನಿಮ್ಮಂತೆಯೇ ಸಮಸ್ಯೆಯಲ್ಲಿರುವ ಕೆಲವರಿಗಾದರೂ ಸಹಾಯವಾಗಬಹುದು’ ಎಂದು ಹೇಳಿದವರಲ್ಲಿ ಕೆ.ಪಿ. ಸುರೇಶ, ದೇವನೂರು ಮಹಾದೇವರಿಂದ ಹಿಡಿದು ಡಾ. ಮಹೇಶ್, ಡಾ. ಕಿಷನ್ ರವರೆಗೆ ಹಲವರಿದ್ದಾರೆ.

‘ಆಗಾಗ ಬರದಾಯ್ತ ಸರ್’ ಎಂದು ನೆನಪಿಸಿದ ಅಭಿರುಚಿ ಪ್ರಕಾಶನದ ಗಣೇಶ್ ಇದ್ದಾರೆ. ಕೊನೆಗೂ ನಮಗೆ, ಅಮೃತಾಳ ಸಮಸ್ಯೆ ಏನಾಗಿತ್ತು ಗೊತ್ತಿಲ್ಲ. ಪ್ಯಾರಾನಾಯ್ಡ್ ಸ್ಕೀಜೋಫ್ರೇನಿಯಾವೇ ? ಅಥವಾ ಇನ್ಯಾರೋ ಹೇಳಿದಂತೆ ಅತಿಯಾದ ನ್ಯೂರಾನ್ ಗಳ ಚಲನೆಯೇ ? ಸಿನಸ್ಥೇಷಿಯಾ ಎಂಬ ಸ್ಥಿತಿಯೇ ? ಅಥವಾ ಬೇರೆಯೇ ?

ಅಮೃತ ಮತ್ತೆ ಮತ್ತೆ ಹೇಳಿದ ಮಾತಿದು ‘ಪ್ರಪಂಚಕ್ಕೆ ನಮ್ಮಂಥವರೊಂದು ಸಮಸ್ಯೆ, ಆದರೆ ನಮಗೆ?.. ಇಡೀ ಪ್ರಪಂಚವೇ ಸಮಸ್ಯೆ’ ಇದು ಸೋಲುವ ಯುದ್ಧವೆಂದು ಅವಳಿಗೂ ಗೊತ್ತಿತ್ತು… ನಮಗೂ ಗೊತ್ತಿತ್ತು. ಆದರೂ ಹೋರಾಡಿದೆವು. ಇನ್ನೀಗ ಹೇಳಲೇನೂ ಉಳಿದಿಲ್ಲ.

ಸಮಸ್ಯೆಯಿರುವ ಮಕ್ಕಳೊಂದಿಗೆ ಸಹಜ ಮಮತೆ, ಅನುಕಂಪ ಮತ್ತು ಉದಾತ್ತ ಸ್ಥೈರ್ಯದಿಂದ ಇರುವುದನ್ನು ನಾವು ಕಲಿಯಬೇಕಿದೆ. ಈ ಪುಸ್ತಕವನ್ನು ಓದುವವರು ‘ಅಮೃತಯಾನ’ ವನ್ನೂ ಓದುವುದು ಅತೀ ಅಗತ್ಯವೆಂದು ಬೇರೆ ಹೇಳಬೇಕಿಲ್ಲ. ಈ ಬರಹಗಳು ಯಾರಿಗಾದರೂ ಉಪಯೋಗವಾದರೆ ಅಷ್ಟು ಸಾಕು.

‍ಲೇಖಕರು Avadhi

February 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: