ಏನಾದ್ರೂ ನಿಮ್ಮ ಹುಡುಗಿ ಭಲೇ strong ಕಣಪ್ಪಾ..

ಕಥೆಗಾರ ಮಧು ವೈ ಎನ್ ಅವರ ಕಾದಂಬರಿ ‘ಕನಸೇ ಕಾಡುಮಲ್ಲಿಗೆ’

ಈ ಕಾದಂಬರಿ ಓದಿ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ನೀಡಿದ ಅನಿಸಿಕೆ ಹೇಗಿದೆ.

ಮಲ್ಲಿಕಾ ಬಸವರಾಜು

—-

ಎಂಥಾ ಮುಗ್ಧ ಪ್ರೇಮ ಆ ಮಕ್ಕಳದು . ಲಾಭ ನಷ್ಟಗಳ ಲೆಕ್ಕಚಾರವಿರದ ಪ್ರೇಮ .
ಏನಾದ್ರೂ ನಿಮ್ಮ ಹುಡುಗಿ ಭಲೇ strong ಕಣಪ್ಪಾ. ಕಾಂಪೌಂಡ್ ಹಾರಿ ನಿಮ್ಮ ಡಾರ್ಮಿಟರಿ ಬಳಿ ಬರುವುದು. ತಿಪ್ಟೂರಿಂದ ಸ್ಕೂಟಿನಲ್ಲಿ ನಿಮ್ಮೂರಿಗೆ ಬರೋದು ಎಂಥಾ ಧೈರ್ಯ! ಸೆಳೆತ!

ಪುಟ್ಟ ಜುಟ್ಟುಗಳ ಕಟ್ಟಿಕೊಂಡು ಸ್ಕೂಲ್ ಗೆ ಹೋಗುವ ಹುಡುಗಿಯರಲ್ಲಿ ನಿಮ್ ಹುಡುಗಿಯನ್ನು ಹುಡುಕ್ತೀದೀನಿ .
ಕಾದಂಬರಿಯಲ್ಲಿ ಬರುವ ಸ್ಥಳಗಳು, ಕೆಲವು ಪಾತ್ರಗಳು, ಘಟನೆಗಳು ಕಾದಂಬರಿಗೂ ಮೊದಲೇ ಪರಿಚಯವಿದ್ದುದರಿಂದ ಇನ್ನೂ ಆಪ್ತವಾಯ್ತು . ಮೂವತ್ತು ನಲವತ್ತು ವರ್ಷದ ಹಿಂದೆ ನಮ್ ಹಳ್ಳಿಯಲ್ಲಿ ಅಡ್ಡಾಡಿ ಬಂದ ಹಾಗಾಯ್ತು.
ಎಪಿಎಂಸಿ ಯಾರ್ಡ್ ಹತ್ತಿರದ ವಿವರಣೆ ಇನ್ನೂ ಸ್ವಲ್ಪ ಇರಬೇಕಿತ್ತು ಅನಿಸ್ತು .

ಇಡೀ ದಿನ ಹಿಡಿದಿದ್ದ ಕೈಗಳ ಆಕಾಶದಲ್ಲಿ ಅರಳಿಕೊಂಡು ಬಿಡಿಸಿಕೊಂಡವು ಸನ್ನಿವೇಶದ ಭೀಕರತೆಯನ್ನು ಓದುಗರಿಗೆ ದಾಟಿಸಿಬಿಡುತ್ತೆ. ಆ ಚಾಪ್ಟರ್ ಅಲ್ಲಿಗೆ ನಿಲ್ಲಿಸಬಹುದಿತ್ತೇನೊ …

ಕೊನೆಯ ಪುಟ
ತನ್ನ ಹುಡುಗನಿಲ್ಲದೇ ಬದುಕಲಾರೆ ಎಂಬಂಥಹ ಹುಡುಗಿ ಒಂದಷ್ಟು ವರುಷಗಳ ನಂತರ ನಾಲ್ಕು ಮಕ್ಕಳ ಜೊತೆ
ಬರುವುದು ಅವಳ ಜೀವನ ಪ್ರೀತಿಯನ್ನು ಮತ್ತು ಹೆಣ್ಣು ಎಂಥಹ ಸ್ಥಿತಿಯಲ್ಲೂ ನಿಂತ ಹೆಜ್ಜೆಯಲ್ಲೊ ಹೊಸ ಬದುಕು ಪಯಣ ಆರಂಭಿಸಬಲ್ಲಳು ಎಂಬುದನ್ನು ತೋರಿಸುತ್ತೆ.

ಅಜ್ಜಿಯಂತೂ ನನಗೆ one hundred years solitude ನ ಊರ್ಸುಲಾ ನೆನಪಿಸಿಬಿಟ್ತು.
ಅಣ್ಣತಮ್ಮಂದಿರ ಜೊತೆ ಬೆಳೆದಿದ್ರೂ, ಇಬ್ಬರು ಗಂಡು ಮಕ್ಕಳು ಇದ್ರೂ ಹುಡುಗರ ಜಗತ್ತು ನನಗೆ ಗೊತ್ತೇ ಇರಲಿಲ್ಲ .
ಒಟ್ಟಾರೆ ಕಾದಂಬರಿ ತುಂಬಾ ಚೆನ್ನಾಗಿ ಬಂದಿದೆ, ತಾಜಾತನ ಇದೆ. ಲವಲವಿಕೆ ಇದೆ. ಮತ್ತೆ ಮತ್ತೆ ಓದಬೇಕೆನಿಸುತ್ತೆ.

ಪ್ರಿಟಿಂಗ್ ಸಹ ಚೆನ್ನಾಗಿದೆ.
ಒಳಿತಾಗಲಿ ಮಧು. ಕಂಡಿದ್ದು, ಕನಸಿದ್ದು, ಕಲ್ಪಿಸಿದ್ದು ಎಲ್ಲಾ ಸೇರಿ ಒಂದೊಳ್ಳೆ ಕಾದಂಬರಿ ಮಾಡಿದ್ದಿ.
‘ಕನಸೇ ಕಾಡುಮಲ್ಲಿಗೆ’ ಹೆಸರು ಸಹ ಚೆಂದ ಇದೆ.

ಬಲವಂತವಾಗಿ ನಮಗೆ ಬೇಕಾದ ಕನಸು ಬೀಳಿಸಿಕೊಳ್ಳಲು ಆಗಲ್ಲ. ಕಾಡು ಮಲ್ಲಿಗೆಯನ್ನೂ ಕೃತಕವಾಗಿ ಬೆಳೆಸಲು ಆಗಲ್ಲ. ಅದರ ಕಂಪನ್ನೂ ಬೇಕು ಅಂದಾಗ ಆಘ್ರಾಣಿಸಲು ಆಗಲ್ಲ. ಅದಾಗಿ ಆದು ಅರಳಿದಾಗ ಮಾತ್ರ ಅನುಭವಿಸಲು ಸಾಧ್ಯ.
ಅದಕ್ಕೆ ಹಿರಿಯರು ಹೇಳಿರುವುದು Love it happens .
ಎಳೆಯರ ಪ್ರೇಮಕ್ಕೆ ಕಾದಂಬರಿ ಹೆಸರು ಹೊಂದಿಕೊಂಡಿದೆ

‍ಲೇಖಕರು avadhi

December 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: