ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಕಾಂಗಿತನ ಬಯಸಿ ನಡೆದನಲ್ಲ

-ಶಂಕರಾನಂದ ಹೆಬ್ಬಾಳ

ಗೊತ್ತಾಗಲೆ ಇಲ್ಲ

ನನ್ನವರೆ ಬೆನ್ನಿಗೆ ಚೂರಿ ಚುಚ್ಚಿದ್ದು ಗೊತ್ತಾಗಲೆ ಇಲ್ಲ
ಬಿನ್ನೈಸಿ ಬಾಳಿಗೆ ಬೆಂಕಿ ಹಚ್ಚಿದ್ದು ಗೊತ್ತಾಗಲೆ ಇಲ್ಲ

ಎಲ್ಲರನು ಸುಲಭದಲಿ ನಂಬುವ ಮೂರ್ಖ ನಾನು
ಮಲ್ಲಿಗೆ ಸುಗಂಧದಿ ಮಣ್ಣಲಿ ಮುಚ್ಚಿದ್ದು ಗೊತ್ತಾಗಲೆ ಇಲ್ಲ

ಯಾರ ಜೊತೆಗೆ ಇರಬೇಕೆಂದು ತಿಳಿಯದೆ ಹೋಯಿತಲ್ಲ
ಜರೆದು ಮೋಸದಿ ಮನವ ಕೊಚ್ಚಿದ್ದು ಗೊತ್ತಾಗಲೆ ಇಲ್ಲ

ಪ್ರತಿಕ್ಷಣವೂ ಸುತ್ತೆಲ್ಲ ಕೆಡುಕು ಮಾಡುವ ಜನರಿದ್ದಾರೆ
ಮತಿಗೆ ವಾಂಛಲ್ಯದ ಹಾಸಿಗೆ ಹೊಚ್ಚಿದ್ದು ಗೊತ್ತಾಗಲೆ ಇಲ್ಲ

ಹಠವಾದಿ ಅಭಿನವನು ಏಕಾಂಗಿತನ ಬಯಸಿ ನಡೆದನಲ್ಲ
ನಾಟಕೀಯತೆ ತೋರಿ ಒಡಲನು ಚಚ್ಚಿದ್ದು ಗೊತ್ತಾಗಲೆ ಇಲ್ಲ

‍ಲೇಖಕರು Admin

1 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading