ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೊಲ್ಲ ಬಾಲ ಗೋಪಾಲಾ

ಸರೋಜಿನಿ ಪಡಸಲಗಿ

ಸಲ್ಲದಿದು ಬಿಡು ಕನ್ಹಯ್ಯಾ!!

ಗೊಲ್ಲ ಬಾಲ ಗೋಪಾಲಾ
ಇದೇನು ಈ ಹೊಸ ರೂಪ
ಮರೆತೆಯಾ ಮುರಳಿಯನು
ಯಮುನೆ ತಟದ ರಾಸವನು
ಸಲ್ಲದಿದು ಬಿಡು ಕನ್ಹಯ್ಯಾ !

ಅಕ್ರೂರ ಬರುವು ತಿಳಿಯಿತೆ
ಚಣ ನಿನ್ನ ಇರುವು ಮರೆಸಿತೆ
ಅತ್ತ ಗೋವೃಂದ ಗೋವಿಂದ
ಇತ್ತ ಗೋಪಿಯರು ಮುಕುಂದ
ಸಲ್ಲದಿದು ಬಿಡು ಕನ್ಹಯ್ಯಾ !

ರುಕ್ಮಿಣಿಯ ಅಳಲು ತಾಕಿತೆ
ಕರವೀರಪುರ ನಿನ್ನ ಕರೆಯಿತೆ
ಜಾಂಬವತಿಯತ್ತ ಚಿತ್ತ ಜಾರಿತೆ
ಸತ್ಯಭಾಮೆ ಹಟ ತಾ ಸೆಳೆಯಿತೆ
ಸಲ್ಲದಿದು ಬಿಡು ಕನ್ಹಯ್ಯಾ !

ಪಾಂಚಾಲಿ ರೋದನ ಕೇಳಿತೆ
ಲೆತ್ತದಾಟದ ಲೆಕ್ಕ ಚಿತ್ತ ಕದಡಿತೆ
ಗೀತೆ ಸಾಲು ಎಣಿಕೆ ಮರಿಯಿತೆ
ಕುರುಕ್ಷೇತ್ರದಾಟಕೆ ದಿಕ್ಕು ತಪ್ಪಿತೆ
ಸಲ್ಲದಿದು ಬಿಡು ಕನ್ಹಯ್ಯಾ !

ಘನಶ್ಯಾಮ ಏನಿದು ನಿನ್ನಾಟ
ಅರಿಯೆ ನಾ ಗೋಕುಲದ ಗೊಲ್ಲತಿ
ಕಾಣದಿರೆ ಈ ರಾಧೆಯ ಸಂಕಟ
ಹೇಳದಿರೆ ನಾ ಉಡುಪಿ ಶ್ರೀ ಕೃಷ್ಣ
ಸಲ್ಲದಿದು ಬಿಡು ಕನ್ಹಯ್ಯಾ ಸಲ್ಲದಿದು!!

‍ಲೇಖಕರು Admin

19 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading