-ರೇಣುಕಾ ಹನ್ನುರ್
ಚೇ, ಬಾಲ್ಯವೇ ಚಂದಿತ್ತು
ಕಪಟವ ಅರಿಯದ, ಮೋಸವ ತಿಳಿಯದ ಮುಗ್ಧ ಮನಸು.
ತಪ್ಪು ತಿಳಿದು ಮಾಡಿದ್ದರೂ, ತಿಳಿಯದೆ ಮಾಡಿದ್ದರೂ ಕೊರಗುತ್ತಿರಲಿಲ್ಲ ಮನ.
ಆಚೆ ಮನೆಯ ಆಂಟಿಯ ಮಾತು ಕೇಳಿ ಅಮ್ಮನ ಕೈಯಿಂದ ಪೆಟ್ಟು ಬಿದ್ದರೂ, ಅಮ್ಮನ ಮೇಲೆ ಕೋಪವಿರುತ್ತಿರಲಿಲ್ಲ, ಆಂಟಿಯ ಮೇಲೆ ದ್ವೇಷವಿರುತ್ತಿರಲಿಲ್ಲ.
ದಿನದಲ್ಲಿ ಅದೆಷ್ಟು ಸಲ ವಾರಿಗೆಯವರ ಜೊತೆಗೆ ಜಗಳವಾಡಿದರೂ, ಮರುಕ್ಷಣ ಮರೆತುಬಿಡುತ್ತಿದ್ದೆವು.
ಸೂಕ್ಷ್ಮ, ಅಸೂಕ್ಷ್ಮ ಎಂಬ ಮನಸ್ಥಿತಿಯ ಅರ್ಥದ ಅರಿವು ಇರಲಿಲ್ಲ.
ಸಹಪಾಠಿಯ ಮಾತು ಕೇಳಿ ಶಿಕ್ಷಕರು ಹೊಡೆದರೆಂಬ ಬೇಜಾರು ಇರತಿರಲಿಲ್ಲ. ಈಗಿನಂತೆ ಡಿಪ್ರೆಷನ್‌ಗೆ ಹೋಗುವ ಪ್ರಮೇಯವೂ ಇರಲಿಲ್ಲ.
ನಾನು ತಪ್ಪೇ ಮಾಡಿದ್ದರೂ, ಅದನ್ನ ಯಾರಾದರೂ ಒತ್ತಿ, ಒತ್ತಿ ಹೇಳಿದರೂ ನಾವು ಮರಗುತ್ತಿರಲಿಲ್ಲ. ಈಗಿನಂತೆ ಸಹೋದ್ಯೋಗಿ, ನಮ್ಮ ಬಾಸ್ ಹೀಗೆಳೆದರೂ ಎಂದು…
ಚೇ, ಬಾಲ್ಯವೇ ಚಂದಿತ್ತು
ಕಪಟವ ಅರಿಯದ, ಮೋಸವ ತಿಳಿಯದ ಮುಗ್ಧ ಮನಸು…






0 Comments