-ರಂಗಸ್ವಾಮಿ ಸಿದ್ದಯ್ಯ
ಗಜಲ್
ಕಣ್ಣೀರು ಇಬ್ಬನಿ ಬಿಂದುವಿನಂತೆ ಕರಗಿ ಹೋಗುವ ಮೊದಲು
ದೇಹದ ಉಸಿರು ಪರಿಮಳವಾಗಿ ಹರಿದು ಹೋಗುವ ಮೊದಲು
ಹೃದಯದೊಳಗೆ ಬಚ್ಚಿಟ್ಟ ಒಲವಿನ ಹನಿಯೊಂದು
ಕಣ್ಣಂಚಲಿ ಮುತ್ತಾಗಿ ಜಾರಿ ಹೋಗುವ ಮೊದಲು
ಉಸಿರಿನ ನಾದ ಎದೆಯ ವೀಣೆಯಲಿ ನಿಂತು ಸ್ಥಿರವಾಗಿ
ಮನದೊಳಗಿದ್ದ ಮಾತು ಮೌನವಾಗಿ ಹೋಗುವ ಮೊದಲು
ಕನಸಿನ ಕಿಟಕಿಯಲಿ ಹೊಳೆವ ಬೆಳಕಿನ ಛಾಯೆಯೊಂದು
ಕಾಲದ ಕತ್ತಲೆಯೊಳಗೆ ಕಳೆದು ಹೋಗುವ ಮೊದಲು
ಬದುಕು ಬರೆದ ಕತೆಯ ಕೊನೆಯ ಪುಟ ಮುಚ್ಚುವ ಮುನ್ನ
ನನ್ನೊಳಗೊಂದಾಗು ಪ್ರೀತಿ ದೂರಾಗಿ ಹೋಗುವ ಮೊದಲು






0 Comments