ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲೂ ಉಳಿದಿಲ್ಲ ಈಗ…

ಮೂಲ : ಜಾವೇದ ಅಖ್ತರ್

ಕನ್ನಡಕ್ಕೆ : ಮೆಹಬೂಬೀ

ನುಂಗಿಬಿಟ್ಟತು ಇಡಿಯಾಗಿ ಸಮುದ್ರ ನೆಲವೆ ಎಲ್ಲೂ ಉಳಿದಿಲ್ಲ ಈಗ..
ನಾನು ನನ್ನ ಜೀವ ಉಳಿಸಿಕೊಳ್ಳುವ ಆ ನಾವೆ ಎಲ್ಲೂ ಉಳಿದಿಲ್ಲ ಈಗ..

ಬಹಳ ದಿನಗಳ ನಂತರ ನಾ ಪಡೆದ ವಿರಾಮದಲಿ ನಿಂತು ತಿರುಗಿ ನೋಡಿದೆ
ಆದರೆ ನಾ ಯಾರನ್ನು ಗುರುತಿಸುತ್ತಿದ್ದೇನೋ ಆ ವ್ಯಕ್ತಿಯೆ ಎಲ್ಲೂ ಉಳಿದಿಲ್ಲ ಈಗ…

ಕಳೆದುಹೋಯ್ತು ಸಮಯ ಬರೆದು ಹೃದಯದಲ್ಲಿ ವಿಚಿತ್ರ ಮಾತುಗಳ
ಹೃದಯದ ಪುಟಗಳ ತಿರುವುತ್ತಿರುವೆ ಆ ಮುಗ್ಧತೆ ಎಲ್ಲೂ ಉಳಿದಿಲ್ಲ ಈಗ…

ಆ ಬೆಂಕಿ ಸುರಿದಿದೆ ಮಧ್ಯಾಹ್ನದ ನಡುವಲ್ಲಿ ದೃಶ್ಯಗಳೆಲ್ಲಾ ಕಂದಿವೆ
ಇಲ್ಲಿ ಬೆಳಗಿನ ತಾಜಾತನವಿದ್ದದ್ದು ಆ ತಾಜಾತನವೆ ಎಲ್ಲೂ ಉಳಿದಿಲ್ಲ ಈಗ…

ನೀವು ನಿಮ್ಮ ಹಳ್ಳಿಗಳಲ್ಲಿ ಹೋಗಿ ನೋಡಿ ಅಲ್ಲಿಯೂ ಈಗ ಪಟ್ಟಣಗಳೇ
ನೀವು ಹುಡುಕುತ್ತಿರುವ ಆ ಬದುಕು ಆ ಬದುಕೆ ಎಲ್ಲೂ ಉಳಿದಿಲ್ಲ ಈಗ…

‍ಲೇಖಕರು Admin

21 March, 2022

1 Comment

  1. T S SHRAVANA KUMARI

    ಆ ಬದುಕು ಆ ಬದುಕೆ ಎಲ್ಲೂ ಉಳಿದಿಲ್ಲ ಈಗ… ಉತ್ತಮ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading