ನಿರ್ಮಲಾ ಜಿ ಬಟ್ಟಲ ಓದಿದ ‘ನಾವು ಭಾರತೀಯರು’

ಡಾ ನಿರ್ಮಲಾ ಜಿ ಬಟ್ಟಲ

ಮೌಲಾಲಿ ಕೆ. ಆಲಗೂರ ಅವರು ವ್ಲತ್ತಿಯಲ್ಲಿಆರಕ್ಷಕ ಪೆದೆಯಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದಾರೆ. ಸೃಜನಶೀಲ ಲೇಖಕರಾಗಿನಾಡಿನಎಲ್ಲ ಪತ್ರಿಕೆಗಳಲ್ಲಿ ತಮ್ಮ ಕವನಗಳನ್ನು ಪ್ರಕಟಿಸುವ ಮೂಲಕ ಓದುಗರಿಗೆ ಪರಿಚಿತರಾಗಿರುವರು. ನನಗೂ ಅವರು ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದ ಕವಿ ಸಮಯದಕವಿತೆಯ ಮೂಲಕವೇ ಪರಿಚಿತರಾದ ಸಹೃದಯರು.

ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಮೌಲಾಲಿ ಅವರು “ನಾವು ಭಾರತೀಯರು” ಎನ್ನುವ ಶಿಶು ಗೀತೆಗಳ ಮಕ್ಕಳ ಕವನ ಸಂಕಲನವನ್ನು ಹೊರತರುವುದರ ಮೂಲಕ ಶಿಶು ಸಾಹಿತ್ಯಕ್ಕೆತಮ್ಮದೇಆದಕೊಡುಗೆಯನ್ನು ನೀಡುತ್ತಿದ್ದಾರೆ.

ನಾವು ಭಾರತೀಯರು- ಕವನ ಸಂಕಲನವು ವಿಭಿನ್ನ ವಿಷಯಗಳಾದ ರಾಷ್ಟ್ರಭಕ್ತಿ, ಭಾಷಾಭಿಮಾನ ಮಹಾನ್ ವ್ಯಕ್ತಿಗಳ ವ್ಯಕ್ತಿಚಿತ್ರ ಸಂಸ್ಕೃತಿಕ ಭಾಗವಾದ ಹಬ್ಬ ಹರಿದಿನಗಳು ಮತ್ತು ಭಾವೈಕ್ಯತೆಯ ವಿಷಯವನ್ನು ಆಧರಿಸಿ ೨೮ ಕವನಗಳನ್ನು ಒಳಗೊಂಡಿದೆ.

ನಾವೆಲ್ಲರೂ ಒಂದೇಎನ್ನುವಕವನದಲ್ಲಿ
ಭೂತಾಯಿ ಮಡಿಲಲ್ಲಿ
ನಾವೆಲ್ಲರೂಒಂದೇ
ಜಗದಜೀವ ರಾಶಿಗಳಿಗೆ
ಒಬ್ಬನೆತಂದೆ
ಎನ್ನುವ ಸಾಲುಗಳು ವಿಶ್ವ ಭಾತೃತ್ವದ ಮಂತ್ರವನ್ನು ಸಾರುತ್ತವೆ. ದೇಶದ ಪ್ರಗತಿಗಾಗಿ ನಮ್ಮಲ್ಲಿಯ ಬಡವ ಶ್ರೀಮಂತ ಜಾತಿಮತಎನ್ನುವಅಸಮಾನತೆಯನ್ನು ಮರೆತುಕಾಯಕತತ್ವವನ್ನು ಪಾಲಿಸಬೇಕು, ಸಹಿಷ್ಣುತೆಯತೇರನ್ನು ಎಳೆಯಬೇಕು ಎಂದುತಿಳಿಸುತ್ತಾರೆ.

ನಾವು ಭಾರತೀಯರುಎನ್ನುವಕವನದಲ್ಲಿ ಸಾಮರಸ್ಯದ ಸಂದೇಶವನ್ನುಕಾಣುತ್ತೇವೆ.
“ಗೀತೆ ಪುರಾಣಖುರಾನ್ ಬೈಬಲ್
ಇವುಗಳ ತತ್ವಏಕಮಾತ್ರ
ಇದನ್ನರಿತು ಸಹನೆಯಿಂದ
ಕೂಡಿಬಾಳುವುದೇ ನಿಜ ಸೂತ್ರ”

ಸರ್ವಧರ್ವ್ಮಗಳ ತತ್ವಒಂದೇಎನ್ನುವುದರ ಮೂಲಕ ಮಕ್ಕಳಲ್ಲಿ ಎಲ್ಲ ಧರ್ಮಗಳು ಸಮಾನ. ವಿವಿಧತೆಯಲ್ಲಿಏಕತೆಯನ್ನು ಸಾಧಿಸುವ ನಾವೆಲ್ಲರೂಒಂದುಎನ್ನುವ ತಿಳುವಳಿಕೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.

‘ಕಟ್ಟೋಣ ಬನ್ನಿ ನಾಡೊಂದನ್ನು’ ಎನ್ನುವ ಕವನವು ನಾಡಿನ ಹಿರಿಮೆ ಗರಿಮೆಗಳನ್ನುಸಾರುವುದರ ಮೂಲಕ ನಾಡಿನ ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ಪಾಲಿಸೋಣಎಂದುಕರೆ ನೀಡುತ್ತಾರೆ. ‘ಸ್ವಾತಂತ್ರೋತ್ಸವ’ ಎನ್ನುವಕವನದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನುಸ್ಮರಿಸುತ್ತಾರೆ.

ಇಂದು ಭಾರತವು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಭಾರತೀಯರಾದ ನಾವು
“ಪೃಥ್ವಿಯಒಡಲಲ್ಲಿ ಬಿತ್ತೋಣ ನಾವು
ಭಾತೃತ್ವ ಭಾವನೆ”
ಎನ್ನುವ ಸಂದೇಶ ಮಕ್ಕಳ ಮನದಲ್ಲಿ ಬಿತ್ತುತ್ತಾರೆ.’ಭಾವೈಕ್ಯ ಭಾರತ’ ಮತ್ತು ‘ರಾಷ್ಟ್ರೀಯ ಹಬ್ಬಗಣರಾಜ್ಯ’ ಎನ್ನುವ ಕವನಗಳು ಭಾರತೀಯ ಪರಂಪರೆಯಗತವೈಭವವನ್ನು ಮತ್ತುಗಣರಾಜ್ಯದಮಹತ್ವವನ್ನು ಸಾರುತ್ತವೆ.
“ಸುಂದರಕರುನಾಡು” ಎನ್ನುವಕವನದಲ್ಲಿ
“ಸಾರಿ ಸಾರಿ ಹೇಳಿ ಹೋದರು
ಸಾಧು ಸಂತ ಶರಣರು ಏಳುಕೋಟಿ ಕನ್ನಡಿಗರಿಗೆ
ತಾಯಿಕನ್ನಡಾಂಬೆದೇವರ”

ಎನ್ನುವ ಸಾಲುಗಳು ಕನ್ನಡ ಭಾಷೆಯ ಮಹತ್ವ ಮತ್ತುಕನ್ನಡಿಗರಾದ ನಾವೆಲ್ಲ ನಾಡು ನುಡಿಯನ್ನು ಪ್ರೀತಿಸುವಅಭಿಮಾನವನ್ನು ಬೆಳೆಸುವಲ್ಲಿ ಈ ಸಾಲುಗಳು ಮಕ್ಕಳ ಮನಸಲ್ಲಿಅಚ್ಚೋತ್ತುತ್ತವೆ.
ಕನ್ನಡ ಉಳಿಸು ಕನ್ನಡಕ್ಕಾಗಿ ಬದುಕೋಣ, ಇಂಗ್ಲೀಷ್ ಗೀಳು ಬೇಡ, ಎನ್ನುವ ಕವನಗಳು ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವಲ್ಲಿ ಪ್ರೇರೆಪಿಸುತ್ತದೆ.

ಚಂದ್ರಮಾನಯುಗಾದಿ ಎನ್ನುವಕವನದಲ್ಲಿ,
ನೋವು ನಲಿವು ಇಲ್ಲದೆ
ಒಗತನವಿಲ್ಲ
ನಮ್ಮ ಬದುಕುಒಂದು
ಬೇವು ಬೆಲ್ಲ
ಹಬ್ಬದ ಸಂದೇಶವನ್ನು ಸರಳವಾಗಿ ತಿಳಿಸುತ್ತಾರೆ.
ಹೋಳಿ ಓಕಳಿ, ದೀಪ ಬೆಳಗಲಿ, ಸಂಕ್ರಾಂತಿ ಕವನಗಳು ಮಕ್ಕಳಿಗೆ ನಮ್ಮ ಹಬ್ಬಗಳ ಪರಿಚಯವನ್ನು ಮಾಡಿಕೊಡುತ್ತವೆ.

ನಮ್ಮೂರಜಾತ್ರೆ ಕವನವು ಚರಿತ್ರೆಯ ಸೊಬಗನ್ನುಕಟ್ಟಿಕೊಡುತ್ತದೆ. ಅಪ್ಪಅಮ್ಮ ಶಿಕ್ಷಕ ಕವನಗಳು ತಂದೆತಾಯಿಯತ್ಯಾಗವನ್ನು ಬದುಕುವಛಲಕಲಿಸುವ ಶಿಕ್ಷಕರ ಮಹತ್ವವನ್ನು ಮಕ್ಕಳಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗುತ್ತದೆ. ಗಾಂಧಿತಾತ, ಸಂಗೊಳ್ಳಿ ರಾಯಣ್ಣ, ಸಾವಿತ್ರಿಬಾಯಿ ಪುಲೆ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಭಾವೈಕ್ಯತೆಯ ಸಾರುವಅಜ್ಜಿ ಸುತಾರ’ ಕವನಗಳು ವ್ಯಕ್ತಿಚಿತ್ರವನ್ನು ಮನದಟ್ಟು ಮಾಡಿಕೊಡುತ್ತವೆ.
ಹೀಗೆಎಲ್ಲ ಕವನಗಳು ಸರಳ ಭಾಷೆ ಮತ್ತುಅಂತ್ಯ ಪ್ರಾಸದೊಂದಿಗೆ ಮಕ್ಕಳಿಗೆ ಓದಲು, ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಿವೆ.

ಈ ಎಲ್ಲ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವುಗಳನ್ನೆಲ್ಲ ಸಂಕಲಿಸಿ ನಾವು ಭಾರತೀಯರುಎನ್ನುವ ಕವನ ಸಂಕಲನದ ಮೂಲಕ ಓದುಗರಕೈಗಿಡುತ್ತಿದ್ದಾರೆ.

‍ಲೇಖಕರು Admin

March 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಶಿಶುಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: