ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯ ಮೇಲೆ ಮಲಗಿಬಿಡು..

mamata arasikere

ಮಮತ ಅರಸೀಕೆರೆ

ಎದೆಯ ಮೇಲೆ ಮಲಗಿಬಿಡು
ಒಳ್ಳೆ ನಿದ್ದೆ ಬರಲಿ
ಕಣ್ಣಂಚಿನ ಹನಿಯು ಕರಗಿ
ಕನಸ ಹೆಣೆದು ತರಲಿ
ಕೆಂದುಟಿಯ ಮೇಲಿರಲಿ
kidಮಾಯದಂತ ಮುಗುಳ್ನಗೆ
ಕಾರಿರುಳು ಸರಿದು ಬಿಡಲಿ
ಅಳಿಸದಂತೆ ಕಾಡಿಗೆ
ಸಹನೆಯ ಕವಚ ತರಿಸು
ಸೂರನೊದಿಸು ಮೆಲ್ಲಗೆ.
ನಕ್ಷತ್ರದ ಮಾಲೆ ನಿನಗೆ
ಚಂದ್ರನದೇ ಪದಕ
ಬಾಂದಳದ ಮೋಡಗಳು
ಭಾರ ಇಳಿಸೊ ತನಕ
ಆಕಾಶದ ಕಾಯಗಳಿಗು
ಒಲವ ಹರಿಸೊ ತವಕ
ಆಸೆಗಳ ಲೆಕ್ಕ ಹೇಳು
ಪಿಸುಗುಡಲಿ ಹೃದಯ
ಅಳದಂತೆಯು ಇರಬಹುದು
ತಿಳಿಯಾಗೋ ಬಗೆಯಾ
ಕುದಿವ ಮನವ ಸಂತೈಸು
ತಂಪಿರಲಿ ಸಮಯ
ಬಾಡದಿರು ಮೊಗ್ಗೆ ನೀನು
ನಲಿವು ಕುಣಿದು ಬರಲಿ
ಕೋರೈಸುವ ಕೋಲ್ಮಿಂಚು
ನಿನ್ನ ಅರಸಿ ಬರಲಿ
ಭಾವ ಕೋಶ ಮುದುಡುವಂತ
ಸ್ವಪ್ನ ಬೀಳದಿರಲಿ

 

‍ಲೇಖಕರು Admin

1 September, 2016

2 Comments

  1. Sangeeta Kalmane

    ಹೊಸ ಬಗೆಯ ಲಾಲಿ ಹಾಡು. ಚೆನ್ನಾಗಿದೆ

    • mamatha

      thank you mdm

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading