ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಗೂಡಿನಲ್ಲಿ ಕೀಲಿಕೈಗಳಿವೆ..

kavyashree

ಕಾವ್ಯಶ್ರೀ ಎಚ್

 

ಇಲ್ಲಿ ಮನೆಯೊಳಗೆ ಶಾಂತಿ ನೆಮ್ಮದಿಗಳು ಮಾಯವಾಗಿವೆ
ಅಲ್ಲಿ ಮನೆಗಳೇ ಮಾಯವಾಗಿವೆ

ಇಲ್ಲಿ ನಂಬಿಕೆ ವಿಶ್ವಾಸ ಪ್ರೀತಿ ಅನುನಯಗಳನ್ನು ಎಂದೋ ಮೂಟೆಕಟ್ಟಿ ಎಸೆದಿದ್ದಾರೆ
ಅಲ್ಲಿ ಬೀದಿ ಬೀದಿಗಳಲ್ಲಿ ಜನ ಪ್ರೀತಿಯ ಹಂಚುತ್ತಾರೆ ನಂಬಿಕೆಯ ನೆಡುತ್ತಾರೆ ಮನ ಮನಗಳಲ್ಲಿ

ಇಲ್ಲಿ ನೂರು ಬಣ್ಣ ನಗುವಿಗೆ ನೂರು ಭಾವ ನೋವಿಗೆ
ಅಲ್ಲಿ ಹರಿವ ರಕ್ತಕ್ಕೆ ಹೆಸರಿಲ್ಲ ಕಣ್ಣೀರಿಗೆ ಬಣ್ಣವಿಲ್ಲ

ಮನದ ಮೂಲೆಮೂಲೆಗೂ ಬೀಗ ಜಡೆವ ಮೂಢರಿಲ್ಲಿ
ಕೀಲಿಕೈಗಳ ಎದೆಗೂಡಿನಲ್ಲಿ ಜೋಪಾನ ಮಾಡುವ ಮಾಂತ್ರಿಕರಲ್ಲಿ

ಬನ್ನಿ ಬನ್ನಿ ಜನಗಳೇ ಮನೆಯಿಲ್ಲದೆಯೂ ಮನದಲ್ಲಿ ನೆಲೆಯೂರುವ ಪಾಠ ಹೇಳಿಬನ್ನಿರಿ

ಸಮುದಾಯ ರಂಗತಂಡ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದ್ದ ಪ್ಯಾಲೆಸ್ಟೈನ್ ಜಾಥಾ ರಂಗ ಕಾರ್ಯಕ್ರಮ ನೋಡಿ

‍ಲೇಖಕರು Admin

14 January, 2016

2 Comments

  1. rav

    Nice poem…. siriya nenapaytu yako

    • Kavyashree H

      Thank you sir. ಹರಿವ ರಕ್ತಕ್ಕೆ ಹೆಸರಿಲ್ಲ ಕಣ್ಣೀರಿಗೆ ಬಣ್ಣವಿಲ್ಲ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading