ಕೊನೆಗೂ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂದೇ ಬಿಡ್ತು..

ಶ್ರೀಜಾ ವಿ ಎನ್

ನೆಟ್ ಫ್ಲಿಕ್ಸ್

ಕೊನೆಗೂ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂದೇ ಬಿಡ್ತು.   ಕಳೆದ ಕೆಲವು ವರ್ಷಗಳಿಂದ ನೆಟ್ ಫ್ಲಿಕ್ಸ್ ಭಾರತಕ್ಕೆ ಬರುತ್ತಿದೆ ಎಂದು ಸುದ್ದಿಯಾಗಿತ್ತು, ಮತ್ತು  ಅದರ ಬರುವಿಕೆಯನ್ನು ಎಲ್ಲರು ಕುತೂಹಲದಿಂದ ಎದುರು ನೋಡುತ್ತಿದ್ದರು. ನೆಟ್ ಫ್ಲಿಕ್ಸ್ ಜನವರಿ ೬ ಕ್ಕೆ ಭಾರತ ಸೇರಿದಂತೆ ೧೨೯ ದೇಶಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭ ಮಾಡಿದೆ.

ಏನಿದು ನೆಟ್ ಫ್ಲಿಕ್ಸ್ ?

ಲಾಸ್ ಗೆಟೋಸ್, ಕ್ಯಾಲಿಫೋರ್ನಿಯಾದ ನೆಟ್ ಫ್ಲಿಕ್ಸ್ ಸಂಸ್ಥೆ, ಈಗ ಆನ್-ಡಿಮಾಂಡ್ ಇಂಟರ್ನೆಟ್ ಸ್ಟ್ರೀಮಿಂಗ್ ಸೇವೆಗಳನ್ನು ೧೪೦ ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಒದಗಿಸುತ್ತದೆ. ಅಂದರೆ ಅದು ಫಿಲಂಸ್ , ಟೆಲಿವಿಷನ್ ಕಾರ್ಯಕ್ರಮಗಳು, ಮ್ಯೂಸಿಕ್ ಅಲ್ಬಮ್ಸ್, ಐಪಿಎಲ್ ಸೇರಿದಂತೆ ಹಲವು ಪ್ರಕಾರದ  ವೀಡಿಯೊಗಳನ್ನೂ ಇಂಟರ್ನೆಟ್ ಮೂಲಕ ನಮ್ಮ ಟೀವಿ, ಕಂಪ್ಯೂಟರ್ ಮತ್ತು ಮೊಬೈಲ್ ಸ್ಕ್ರೀನ್ ಗಳಿಗೆ  ತಲುಪಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ನಮ್ಮ ನೆಚ್ಚಿನ ಟೀವಿ, ಫಿಲಂ ಮತ್ತು ಇತರ ಕಾರ್ಯಕ್ರಮಗಳನ್ನು  ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಇದ್ದು ವೀಕ್ಷಿಸುವ ಸಾಮರ್ಥ್ಯ ಅದರ ಚಂದಾದಾರರಿಗೆ ನೀಡುತ್ತದೆ. ಇನ್ನೊಂದು ರೀತಿಯಲಿ ಹೇಳುವುದಾದರೆ ನೆಟ್ ಫ್ಲಿಕ್ಸ್  ನಮ್ಮ ಕೇಬಲ್ ಟಿವಿ ಅಥವಾ ಡಿಟಿಎಚ್ ಸೇವೆಯನ್ನು ಮತ್ತು ಫಿಲಂ ರೆಂಟಲ್ ಲೈಬ್ರರಿಗಳನ್ನೂ ರಿಪ್ಲೇಸ್ ಮಾಡುವ, ಮತ್ತು ಟಿವಿ/ ವೀಡಿಯೊ ಕಾರ್ಯಕ್ರಮಗಳನ್ನು ನಾವು ನೋಡುವ ವಿಧಾನವನ್ನೇ ಬದಲಿಸುವ ಶಕ್ತಿಯನ್ನು ಹೊಂದಿದೆ. ಮುಂದೆ ಒಂದು ದಿನ ಇಂಟರ್ನೆಟ್ ಸ್ಟ್ರೀಮಿಂಗ್ ಸೇವೆ ಟೆಲಿವಿಷನ್ ಪೆಟ್ಟಿಗೆಳನ್ನು  ನಮ್ಮ ಮನೆಯ ಡ್ರಾಯಿಂಗ್ ರೂಂ ನಿಂದ ಉಚ್ಚಾಟಿಸಬಹುದು ಎಂಬುದು ಎಕ್ಸ್ಪರ್ಟ್ ಒಪಿನಿಯನ್.  ಈಗಾಗಲೇ ಅಮೇರಿಕಾ ಮತ್ತು ಯೂರೋಪಿಯನ್  ರಾಷ್ಟ್ರಗಳಲ್ಲಿ ಟೆಲಿವಿಷನ್ ಕೇಬಲ್ ನ್ನು ತೊರೆದು ಇಂಟರ್ನೆಟ್ ಸ್ಟ್ರೀಮಿಂಗ್ ಸೇವೆಗಳಿಗೆ ವರ್ಗಾವಣೆಯಾಗುವ ಜನರ ಸಂಖ್ಯೆ ಹೆಚ್ಚುತ್ತಿದೆ.

ನೆಟ್ ಫ್ಲಿಕ್ಸ್  ಯಾಕೆ ಡಿಫರೆಂಟ್ ?

ನೆಟ್ ಫ್ಲಿಕ್ಸ್ ನಂತಹ ಸೇವೆಗಳು ಈಗಾಗಲೇ ಭಾರತದಲ್ಲಿದೆ. ಎರೋಸ್ ನೌ, ಹಾಟ್ ಸ್ಟಾರ್, ಹುಲು, ಸೋನಿ ಲಿವ್ ಇವುಗಳಲ್ಲಿ ಕೆಲವು ಹೆಸರುಗಳು. ಈ ಸಂಸ್ಥೆಗಳು  ಇಂಟರ್ನೆಟ್ನಲ್ಲಿ ಟಿವಿ, ಫಿಲಂ ಮತ್ತು ಇತರ ವೀಡಿಯೊಗಳನ್ನೂ ಫ್ರೀ ಯಾಗಿ ಮತ್ತು ಸಬ್ಸ್ಕ್ರಿಪ್ಶನ್ ಅಧಾರದ ಮೇಲೆ ಗ್ರಾಹಕರಿಗೆ ನೀಡುತ್ತಿದೆ. ಆದರೆ ಈ ಯಾವ ಸೇವೆಗಳು ನೆಟ್ ಫ್ಲಿಕ್ಸ್ ಹೊಂದಿರುವಷ್ಟು ಟೀವಿ, ಫಿಲಂ ವೀಡಿಯೊ ರೈಟ್ಸ್ ಗಳನ್ನೂ ಹೊಂದಿಲ್ಲ. ಕಳೆದ ಹತ್ತು ವರ್ಷದಲ್ಲಿ ನೆಟ್ ಫ್ಲಿಕ್ಸ್ ೬೦ ದಶ ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಮತ್ತು ಒಂದು ಲಕ್ಹ್ಸಕ್ಕು ಹೆಚ್ಚು ಡಿವಿಡಿ ರೈಟ್ ಗಳನ್ನೂ ತಮ್ಮದಾಗಿಸಿಕೊಂಡಿದೆ. ಈಗ ವಿಶ್ವದ ವಿವಿಧ ಭಾಷೆಗಳಲ್ಲಿ ನ ಎಲ್ಲ ಪ್ರಮುಖ ಟಿವಿ ಶೋ ಗಳು ಮತ್ತು ಫಿಲ್ಮ್ಗಳು ನೆಟ್ ಫ್ಲಿಕ್ಸ್ ನಲ್ಲಿ ನೀವು ನೋಡಬಹುದು.

ಇದಲ್ಲದೆ ಹಲವು ಉತ್ತಮ ಕಾರ್ಯಕ್ರಮಗಳನ್ನು ನೆಟ್ ಫ್ಲಿಕ್ಸ್ ಖುದ್ದಾಗಿ ನಿರ್ಮಿಸಿ ತಮ್ಮ ಗ್ರಾಹಕರಿಗೆ ಎಕ್ಸ್ ಕ್ಲುಸಿವ್  ಆಗಿ ನೀಡುತ್ತಿದೆ. ಈ ಕಾರ್ಯಕ್ರಮಗಳು ನೆಟ್ ಫ್ಲಿಕ್ಸ್ ನಲ್ಲಿ ಮಾತ್ರ ನೀವು ನೋಡಲು ಸಾಧ್ಯ. ನೆಟ್ ಫ್ಲಿಕ್ಸ್ ನಲ್ಲಿ ಡ್ರಾಮಾ, ಕಾಮಿಡಿ, ಥ್ರಿಲ್ಲರ್, ಸ್ಪೋರ್ಸ್, ಡಾಕ್ಯುಮೆಂಟರಿ ಹೀಗೆ ಹಲವು ಪ್ರಕಾರದಲ್ಲಿ ಸಾಕಷ್ಟು ವೀಡಿಯೊಗಳಿದ್ದು, ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಪ್ಯಾಕೇಜ್ ಗಳನ್ನೂ ಆಯ್ಕೆ ಮಾಡಬಹುದು. ಇದಲ್ಲದೆ ಸಾಮಾನ್ಯವಾಗಿ ನೆಟ್ ಫ್ಲಿಕ್ಸ್ ವೀಡಿಯೊಗಳಲ್ಲಿ  ಗ್ರಾಹಕರ ಅನುಕೂಲಕ್ಕಾಗಿ  ಸಬ್ ಟೈಟಲ್ಸ್ ಸೌಲಭ್ಯ ಒದಗಿಸಿದೆ.   ನೆಟ್ ಫ್ಲಿಕ್ಷ್ ಸೇವೆ SD (standard definition), HD ( high definition) ಮತ್ತು 4k ಯಲ್ಲಿ ಲಭ್ಯ.

ನೆಟ್ ಫ್ಲಿಕ್ಸ್ ಪ್ಯಾಕೇಜ್ಸ್

ನೆಟ್ ಫ್ಲಿಕ್ಸ್ ಅನ್ನು ಟಿವಿಯಲ್ಲಿ, ಕಂಪ್ಯೂಟರ್ ನಲ್ಲಿ, ಸ್ಮಾರ್ಟ್ ಫೋನ್ ನಲ್ಲಿ, ಪ್ಲೇ ಸ್ಟೇಷನ್ ಸೇರಿದಂತೆ ಇಂಟರ್ನೆಟ್ ಕನೆಕ್ಷನ್ ಇರುವ ಯಾವುದೇ ಪರದೆ ಮೇಲೆ ನೋಡಬಹುದು. ನೆಟ್ ಫ್ಲಿಕ್ಸ್ ಭಾರತದಲ್ಲಿ ೩ ಪ್ಲಾನ್ ಗಳನ್ನು ಚಂದಾದಾರರಿಗೆ ನೀಡುತ್ತಿದೆ- ಬೇಸಿಕ್,ಸ್ಟ್ಯಾಂಡರ್ಡ್ ಮತ್ತು ಪ್ರೀಮಿಯಂ .

 

Plan Price/month Access
Basic Rs 500 ಒಂದು ಸ್ಕ್ರೀನ್ನಲ್ಲಿ ಚಂದಾದಾರರು ತಮ್ಮ ಆಯ್ಕೆಯ ವೀಡಿಯೊಗಳನ್ನೂ SDಯಲ್ಲಿ ನೋಡಬಹುದು.
Standard Rs 650 ಚಂದಾದಾರರು ಕಾರ್ಯಕ್ರಮಗಳನ್ನು ಮತ್ತು ವೀಡಿಯೊ ಗಳನ್ನು ಎರಡು ಸ್ಕ್ರೀನಿನಲ್ಲಿ ನೋಡ ಬಹುದು. ಈ ಪ್ಯಾಕೇಜ್ ನಲ್ಲಿ HD ಕಾರ್ಯಕ್ರಮಗಳು ಕೂಡ ಲಭ್ಯ.
Premium Rs 800 ಈ ಪ್ಯಾಕೇಜ್ ನ ಚಂದಾದಾರರು ನಾಲ್ಕು ಸ್ಕ್ರೀನುಗಳಲ್ಲಿ ನೆಟ್ ಫ್ಲಿಕ್ಷ್  ಬಳಸಬಹುದು. ಆದರೆ ಒಂದೇ ಸಮಯದಲ್ಲಿ ನಾಲ್ಕು ಜನರು ಬಿನ್ನ ಕಾರ್ಯಕ್ರಮಗಳನ್ನು ತಮ್ಮ ಡಿವೈಸ್ ಗಳಲ್ಲಿ ವೀಕ್ಷಿಸಬಹುದು. HD ಜೊತೆಗೆ UHD ಅಥವಾ 4k ಡೆಫಿನಿಷನ್  ಕಾರ್ಯಕ್ರಮಗಳು ಲಭ್ಯ.

ಈ ಎಲ್ಲ ಪ್ಯಾಕೇಜ್ ಗಳು ಮೊದಲಿನ ಒಂದು ತಿಂಗಳು ಗ್ರಾಹಕರು ಉಚಿತವಾಗಿ ಪಡೆಯಬಹುದು, ಮತ್ತು ತಮ್ಮ ಪ್ಲಾನ್ಗಳನ್ನೂ ಯಾವಾಗ ಬೇಕಾದರೂ ಕ್ಯಾನ್ಸಲ್ ಮಾಡಬಹುದು.

ಇದರಿಂದ ಯಾರಿಗೆ, ಎಷ್ಟು ಲಾಭ?

ನೆಟ್ ಫ್ಲಿಕ್ಸ್ ನ ಮೊದಲ ಪ್ರಯೋಜನ ಅಂತರಾಷ್ಟ್ರಮಟ್ಟದ ಉತ್ತಮ  ಮನೋರಂಜನೆಯ ಕಾರ್ಯಕ್ರಮಗಳನ್ನು, ಫಿಲಂ ಗಳನ್ನೂ, ಮ್ಯೂಸಿಕ್ , ಸ್ಪೋರ್ಟ್ಸ್ ಕಾರ್ಯಕ್ರಮಗಳನ್ನು ನೋಡಲು ಬಯಸುವ ಗ್ರಾಹಕರಿಗೆ. ಅವರು  ತಮ್ಮ ಆಯ್ಕೆಯ  ಉತ್ತಮ ಕಾರ್ಯಕ್ರಮಗಳನ್ನು ತಮಗೆ ಬೇಕಾದ ಸಮಯದಲ್ಲಿ ತಮ್ಮ ಆಯ್ಕೆಯ ಪರದೆಯಲ್ಲಿ ನೋಡಬಹುದು. ಅಂದರೆ ಪ್ರಯಾಣ ಮಾಡುವಾಗ ಮೊಬೈಲಿನಲ್ಲಿ ಅಥವಾ ಲ್ಯಾಪ್ ಟಾಪ್ ನಲ್ಲಿ ನಿಮಗೆ ಬೇಕಾದ ಕಾರ್ಯಕ್ರಮ ಡೌನ್ಲೋಡ್ ಮಾಡಿ ಅಥವಾ ಲೈವ್ ಆಗಿ ನೋಡಬಹುದು. ಇದಲ್ಲದೆ ಭಾರತದಲ್ಲಿ ಟಿವಿ ಮೂಲಕ ಲಭ್ಯವಿಲ್ಲದ, ಆದರೆ ಸಾಕಷ್ಟು ಜನಪ್ರಿಯವಾಗಿರುವ  ಗೇಮ್ ಆಫ್ ಥ್ರೋನ್ಸ್ ನಂತಹ ಅಮೆರಿಕಾದ ಟಿವಿ ಸೀರಿಯಲ್ ಗಳು  ನೆಟ್ ಫ್ಲಿಕ್ಸ್ ನಲ್ಲಿ ದೊರೆಯುತ್ತದೆ.

ಎಲ್ಲದಕ್ಕಿಂತ ಹೆಚ್ಚಾಗಿ ತಾವು ಏನು ನೋಡಬೇಕು ಎಂಬುವುದರ ಆಯ್ಕೆ ನೆಟ್ ಫ್ಲಿಕ್ಸ್ ನಂತಹ ಸಂಸ್ಥೆ ಗಳು ವೀಕ್ಷಕರಿಗೆ ನೀಡುತ್ತದೆ. ಉದಾಹರಣೆಗೆ ಪ್ರೈಮ್ ಟೈಮ್ ನಲ್ಲಿ ಇಂಡಿಯನ್ ಟಿವಿ  ಸ್ಕ್ರೀನನ್ನು ಆವರಿಸಿರುವ  ಸೀರಿಯಲ್ ಸೋಪ್ ಆಪೇರಾ ದಿಂದ ದೂರವಿರಲು ಇಚ್ಚಿಸುವ ಗ್ರಾಹಕರಿಗೆ ನೆಟ್ ಫ್ಲಿಕ್ಸ್ ಒಂದು ಉತ್ತಮ ಪರ್ಯಾಯ ವ್ಯವಸ್ಥೆ.

ಇದರಿಂದ ಉತ್ತಮ ಕಾರ್ಯಕ್ರಮಗಳಿಗೆ ವೀಕ್ಷಕರು ಹೆಚ್ಚುತ್ತಾರೆ ಮತ್ತು  ಕಾರ್ಯಕ್ರಮಗಳ ಗುಣ ಮಟ್ಟದಲ್ಲಿ ಸಾಕಷ್ಟು ಸುಧಾರಣೆಯಾಗುವ  ಸಾಧ್ಯತೆಯಿದೆ.

ಸಿನೆಮ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಸಂಚಲನ ಮೂಡಿಸಲು ನೆಟ್ ಫ್ಲಿಕ್ಸ್ ನಂತಹ ಸಂಸ್ಥೆಗಳಿಗೆ ಸಾಧ್ಯ. ದೊಡ್ಡ ಫಿಲಂ ಥಿಯೇಟರ್ಸ್ ಗಳಲ್ಲಿ ಪ್ರವೇಶ ದೊರಕದ ಡಾಕ್ಯುಮೆಂಟರಿಗಳು, ಕಿರು ಚಿತ್ರಗಳು ಮತ್ತು ಸಣ್ಣ ಬಜೆಟ್ ಚಿತ್ರಗಳಿಗೆ ವೀಕ್ಷಕರನ್ನು ತಲುಪಲು ಇದೊಂದು ಒಳ್ಳೆಯ ವೇದಿಕೆ.

ಸವಾಲುಗಳು

ನೆಟ್ ಫ್ಲಿಕ್ಸ್ ನಂತಹ ಸಂಸ್ಥೆಗಳ ಮುಂದಿರುವ ದೊಡ್ಡ ಸವಾಲು ಭಾರತದಲ್ಲಿ ಇನ್ನೂ ಮಂದಗತಿಯಲ್ಲಿರುವ ಇಂಟರ್ನೆಟ್ ಸ್ಪೀಡ್. ನೆಟ್ ಫ್ಲಿಕ್ಸ್ ಸೌಲಭ್ಯ ಪಡೆಯಲು ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಅಗತ್ಯ. ಭಾರತದಲ್ಲಿ 4G ಸೇವೆ ಚಾಲ್ತಿಗೆ ಸರಿಯಾಗಿ ಬಂದರೆ ಮಾತ್ರ ನೆಟ್ ಫ್ಲಿಕ್ಸ್ ನಂತಹ ಸೇವೆಗಳು ಗ್ರಾಹಕರನ್ನು ತಲುಪಲು ಸಾಧ್ಯ.

ನೆಟ್ ಫ್ಲಿಕ್ಸ್ ಬಗ್ಗೆ ಇರುವ ಇನ್ನೊಂದು ತಕರಾರು ಅದು ಅಮೆರಿಕನ್ ಕಂಪನಿ ಆಗಿರುವುದರಿಂದ ಅದು ಭಾರತದಲ್ಲಿ ಸಣ್ಣ ಮಟ್ಟದ ಹೂಡಿಕೆಯನ್ನು ಮಾತ್ರ ಮಾಡಿ ಹೆಚ್ಚು ಲಾಭವನ್ನು ತನ್ನ ದೇಶಕ್ಕೆ ಕೊಂಡೊಯ್ಯುತ್ತದೆ

ಇನ್ನೊಂದು ಸವಾಲು ಟಾರೆನ್ತ್ಸ್. ಭಾರತದಲ್ಲಿ ಫಿಲಂಸ್, ಮತ್ತು ವೀಡಿಯೊ ಗಳನ್ನೂ ಇಲ್ಲೀಗಲ್ ಆಗಿ ಟಾರೆಂಟ್ಸ್ ಮೂಲಕ ಡೌನ್ಲೋಡ್ ಮಾಡಿ ಫ್ರೀ ಯಾಗಿ  ನೋಡುವರ ಸಂಖ್ಯೆ ಬಹಳಷ್ಟಿದೆ. ಹೀಗೆ ನೋಡುವವರು ನೆಟ್ ಫ್ಲಿಕ್ಸ್ ಗೆ ಚಂದಾ ಪಾವತಿಸಿ  ವೀಡಿಯೋಸ್  ನೋಡಲು ಸಿದ್ದವಿರುತ್ತಾರಾ ಎಂಬುವುದು ಕಾದುನೋಡಬೇಕಾಗಿದೆ

‍ಲೇಖಕರು Admin

January 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: