-ಕೆ.ಮಹಾಂತೇಶ್
ಎಂದೂ ಮರೆಯಲಾರದ ಗೆಳೆಯನಿಗೆ
ಯಾಕಿಷ್ಟು ಅವಸರ ಮಾಡಿದ ಗೆಳೆಯ ?
ಏನಿತ್ತು ? ಅಂತಹ ದಾವಂತ ನಿನಗೆ?
ಕಾಲೇಜಿನ ದಿನಗಳಲ್ಲಿ ‘ಹೆಣದ ಬಟ್ಟೆ’ ನಾಟಕವನ್ನಾ ನಾಡಿನ ತುಂಬೆಲ್ಲ ಹೊತ್ತಾಡಿ ಸುತ್ತಿದವ ನೀನು ಈಗ ಅದೇ ಬಟ್ಟೆಯಿಂದ ಸುತ್ತಿದ ನಿರ್ಜೀವ ದೇಹವಾದೆಯಲ್ಲ ಯಾಕೇ?
ಕಾಲಿಗೆ ಚಕ್ರಕಟ್ಟಿಕೊಂಡವನಂತೆ ನಾಳೆಗಳೇ ಇಲ್ಲವೆನೋ ಎನ್ನುವ ಅವಸರದ ಬದುಕಾಗಿಸಿ ಕೊಂಡವ ನೀನು ಆದರೆ ಆ ನಾಳೆಯ ಕನಸುಗಳನ್ನೇ ಮರೆತು ಹೋದೆ ಯಾಕೆ ನೀನು?

ಕತ್ತಲೆ ಕಾಡುಗಳಲ್ಲಿ ಓಡಾಡಿ ಅದೆಷ್ಟೋ ಕನಸಿನ ಬೀಜಗಳ ಚೆಲ್ಲಿದವಾ ನೀನು…. ಅವು ಮೊಳಕೆಯೊಡೆಯುವ ಮೊದಲೇ ಕಡಲ ಅಲೆಗಳಿಗೆ ಬಲಿಯಾದೆ ಯಾಕೆ ನೀನು?
ಚಿಂತನ ಸಹಯಾನ ಯಕ್ಷಗಾನ ತಾಳಮದ್ದಲೆ ಗಳಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಲಹಾಕಿದವನು ನೀನು ಆದರೆ ಆ ರಂಗ ಪ್ರಯೋಗಗಳು ತೆರೆಕಾಣುವ ಮುನ್ನವೇ ಮರೆಯಾದೆ ಯಾಕೆ ನೀನು ?
ಎಷ್ಟೊಂದು ಕೆಲಸಗಳು ಎಷ್ಟೊಂದು ಕನಸಗಳ ಮನದಲ್ಲಿ ತುಂಬಿ ನಿದ್ದೆಗೆಟ್ಟವ ನೀನು ಆ ನಿದ್ದೆಯ ಮಂಪರಿನಲ್ಲೇ ದಾಳಿಯಿಟ್ಟ ಸೋಂಕನ್ನು ಮೆಟ್ಟಲಾರದಾದೆಯಾ ನೀನು?
ಭರವಸೆಗಳನ್ನೇ ಬದುಕಾಗಿಸಿಕೊಂಡವನೇ ಕನಸುಗಳನ್ನು ಕನವರಿಸುತ್ತಲೇ ಬರಡು ಭೂಮಿಗಳಲ್ಲೂ ಸಸಿಗಳ ನೆಟ್ಟವನೇ ಆ ಸಸಿಗಳು ಗಿಡವಾಗಿ ಮರವಾಗಿ ಹೂವಾಗಿ ಹಣ್ಣಾಗುವ ಮುನ್ನವೇ ಬಿದ್ದು ಹೋದಂತೆ….
ಅವಸರದಲ್ಲೇ ನೀ ನಮ್ಮನ್ನೆಲ್ಲ ಬಿಟ್ಟು ಮಣ್ಣು ಸೇರಿದೆಯಲೋ?
ಹೇಳು ಗೆಳೆಯ
ಯಾಕಿಷ್ಟು ಅವಸರ ಮಾಡಿದೆ ?
ಏನಿತ್ತು ? ಅಂತಹ ದಾವಂತ ನಿನಗೆ?






0 Comments