ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಷಾ ನರಸಿಂಹನ್ ಹೊಸ ಕವಿತೆ – ಸಂಜೆಯೊಲವು

ಉಷಾ ನರಸಿಂಹನ್

ಹೋಗಬೇಡ ನಲ್ಲ ನನ್ನ
ಮನಸು ತುಂಬುವನಕ;
ಸ೦ಜೆಗಣ್ಣ ಒಲವಬಣ್ಣ
ಒಡಲಿಗಿಳಿವ ತನಕ!
ಹೆಪ್ಪುಗಟ್ಟುತಿಹುದು ಹೊತ್ತು
ಕದಲಿ ಕೆಡಿಸಬೇಡ.

ಹುತ್ತಗಟ್ಟುತಿವುದು ಚಿತ್ತ
ಭಂಗಿ ಬದಲಬೇಡ!
ಹೂವಿನೆದೆಗೆ ಹನಿಯು ಬಿದ್ದು
ಸೋರಿ ಹೋದ ಹಾಗೆ…
ಸನಿಹ ಬಂದ ಇನಿಯ ನೀನು
ಜಾರಿ ಹೋಗಬೇಡ

ಗಳಿಗೆಗಳು ಕೂಡಿಕೊಳುತ
ಹೊತ್ತು ಮೀರಿ ಹೋಗಲಿ,
ಎದೆಯ ಬಡಿತ ತೀರವಾಗಿ
ಒಡಲ ಕಡಲ ಸೇರಲಿ.

ಇನಿತು ಭಿನ್ನ ಬೇಧವಿಲ್ಲ
ನನ್ನ ನಿನ್ನ ನಡುವೆ!
ಎನಿತು ಚನ್ನ ಸಮಯ ಹೊನ್ನು
ನಮ್ಮಿಬ್ಬರ ಒಡವೆ!

ಗಾಳಿ ಬೀಸುತಿಹುದು ನಡುವೆ
ಮೋಹ ಚಳಿಯ ಸುಯ್ಯುತಾ…
ಪಾಳಿಗಾಗಿ ಕಾಯುತಿಹುದು
ಅಂಗಾಗವು ಬೇಯುತಾ…

‍ಲೇಖಕರು Admin

27 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading