ಈ ಹೊತ್ತಿಗೆಯು ನಿನ್ನೆ ಅಂದರೆ ದಿನಾಂಕ 17ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಾಗತಿಕ ಮಟ್ಟದಲ್ಲಿ ಕನ್ನಡ ಕಥಾನಕಗಳು ಗೋಷ್ಠಿಯನ್ನು, ಸಾಹಿತಿ ಮತ್ತು ವೈದ್ಯ ವಸುಂದರಾ ಭೂಪತಿ ಅವರಿಗೆ ಸನ್ಮಾನ ಹಾಗೂ ವಿವೇಕ್ ಶಾನಭಾಗ್ ಅವರ ಖ್ಯಾತ ಕಾದಂಬರಿ ಘಾಚರ್ ಘೋಚರ್ ಕಾದಂಬರಿಯ ಆಯ್ದ ಭಾಗದ ಓದನ್ನು, ಬಿ ಎಂ ಶ್ರೀ ಪ್ರತಿಷ್ಠಾನ ಸಭಾಂಗಣದಲ್ಲಿ ಆಯೋಜಿಸಿತ್ತು.
ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಈ ಹೊತ್ತಿಗೆಯ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ್, ಕನ್ನಡದ ಸಾಹಿತ್ಯವು ಭಾರತೀಯ ಮಟ್ಟದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರೂ ವಿಶ್ವ ಸಾಹಿತ್ಯದ ಮಟ್ಟದಲ್ಲಿ ಗಮನಿಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಕಡಿಮೆ ಎಂದರು.
ವಿವೇಕ್ ಶಾನಭಾಗ್ ಅವರ ಘಾಚರ್ ಘೋಚರ್ ಕಾದಂಬರಿಯ ಆಯ್ದ ಭಾಗವನ್ನು ಕನ್ನಡದಲ್ಲಿ ರೇಣುಕಾ ಕೋಡಗುಂಟಿ, ಇಂಗ್ಲಿಷ್ ನಲ್ಲಿ ಅನನ್ಯ ತುಷಿರಾ ಮತ್ತು ತಮಿಳಿನಲ್ಲಿ ಕೆ ನಲ್ಲತಂಬಿ ಅವರು ಓದಿದರು.
ಈ ಹೊತ್ತಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ವಸುಂದರ ಭೂಪತಿಯವರು, ಜಾಗತಿಕ ಪುಸ್ತಕ ಮೇಳದಲ್ಲಿ ತಮಿಳು ಪುಸ್ತಕ ಮಳಿಗೆಯನ್ನು ಕಾಣಬಹುದು ಆದರೆ ಕನ್ನಡ ಪುಸ್ತಕಗಳ ಮಳಿಗೆ ಇರುವುದಿಲ್ಲ. ಇನ್ನು ಮುಂದಾದರೂ ಕನ್ನಡ ಪುಸ್ತಕ ಮಾಳಿಕೆಗಳು ಅಲ್ಲಿ ಬರಲೆಂದು ಆಶಿಸೋಣ. ಕರ್ನಾಟಕದಲ್ಲಿ 17 ಲಕ್ಷ ವೈದ್ಯರಿದ್ದಾರೆ. ಅವರಲ್ಲಿ ಬರೆಯುತ್ತಿರುವವರು 150 ಜನ ಮಾತ್ರ. ಅವರಲ್ಲೂ ಕೇವಲ 15 ಜನ ವೈದ್ಯರು ಮಾತ್ರ ಸತತವಾಗಿ ಬರೆಯುತ್ತಿದ್ದಾರೆ.

ಡಾ|| ಅನುಪಮಾ ನಿರಂಜನ ಅವರ, ‘ತಾಯಿ ಮಗು’ ಮತ್ತು ‘ದಾಂಪತ್ಯ ದೀಪಿಕೆ’ ಕೃತಿಗಳು 70ಕ್ಕೂ ಹೆಚ್ಚು ಮರು ಮುದ್ರಣಗಳನ್ನು ಕಂಡಿವೆ. ಡಾ ಸಿ ಆರ್ ಚಂದ್ರಶೇಖರ್ ಮಾನಸಿಕ ಆರೋಗ್ಯದ ಕುರಿತು ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ವೈದ್ಯಕೀಯ ಸಾಹಿತ್ಯ ಮತ್ತು ವಿಜ್ಞಾನ ಸಾಹಿತ್ಯ ಈಗ ಅತ್ಯಂತ ಪ್ರಮುಖವಾಗಿವೆ ಎಂದರು.
ಜಾಗತಿಕ ಮಟ್ಟದಲ್ಲಿ ಕನ್ನಡ ಕಥಾನಕಗಳು ಈ ಗೋಷ್ಠಿಯಲ್ಲಿ ಮಾತನಾಡುತ್ತಾ ಡಾ. ಗೀತಾ ವಸಂತ ಅವರು, ಭಾನು ಮುಷ್ತಾಕ್ ಅವರಿಗೆ ಬುಕ್ಕರ್ ಪ್ರಶಸ್ತಿ ದೊರೆತನಂತರ ಈ ವಿಷಯ ಹೆಚ್ಚು ಪ್ರಚಲಿತವಾಗಿದೆ ಆದರೆ ಕನ್ನಡಕಥನಕಗಳು ಬೇರೆ ಬೇರೆ ಭಾಷೆಗಳಿಗೆ ಹೋಗುವುದು ಸುಲಭವಲ್ಲ. ಅಕಾಡೆಮಿ ವಲಯ, ವಿಮರ್ಶಾ ವಲಯ ಮತ್ತು ಮಾರ್ಕೆಟಿಂಗ್ ವಲಯ ಇತ್ಯಾದಿ ವಿಷಯಗಳ ಬಗ್ಗೆ ಸ್ಪಷ್ಟ ಅರಿವು ಇರಬೇಕಾಗುತ್ತದೆ.
ಕನ್ನಡ ಭಾಷೆಗಳು ಬೇರೆ ಭಾಷೆಗಳಿಗೆ ಅನುವಾದಕೊಳ್ಳಬೇಕು ವಿಶೇಷವಾಗಿ ಇಂಗ್ಲಿಷ್ ಭಾಷೆಗೆ. ನಮ್ಮ ಕುವೆಂಪು ಶಿವರಾಮ ಕೊರಂಟೈನ್ ಲಂಕೇಶ್ ತೇಜಸ್ವಿ ಇವರೆಲ್ಲ ಅಂತರರಾಷ್ಟ್ರೀಯ ಮಟ್ಟದ ಬರಹಗಾರರೆ. ಇವರ ಕೃತಿಗಳು ಬೇರೆ ಭಾಷೆಗಳಿಗೆ ಹೆಚ್ಚು ಹೆಚ್ಚು ಅನುವಾದಗಳು ಬೇಕು . ಕಾಣಿಸಿಕೊಳ್ಳುವುದು ಬಹಳ ಮುಖ್ಯ ಸಾಹಿತ್ಯ ಅಕಾಡೆಮಿ ಅಂತಹ ಸಂಸ್ಥೆಗಳು ಭಾರತೀಯ ಭಾಷೆಗಳಿಗೆ ಅನುವಾದ ಗೊಳ್ಳಲು ಅವಕಾಶ ನೀಡುತ್ತವೆ.
ಡಾಕ್ಟರ್ ಯು ಆರ್ ಅನಂತಮೂರ್ತಿ ಅವರ ಸಂಸ್ಕಾರ ವನ್ನು ಎ ಕೆ ರಾಮಾನುಜನ್ ಅವರು ಇಂಗ್ಲಿಷಿಗೆ ಅನುವಾದಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ವಿವೇಕ್ ಶಾನ್ ಭಾಗ್ ಅವರ ಘಾಚರ್ ಘೋಚರ ಕಾದಂಬರಿ ಹಾಗೂ ವಸುಧೇಂದ್ರ ಅವರ ಮೋಹನ್ ಸ್ವಾಮಿಯೂ ಕೂಡ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ.
ವಸಾಹತುಶಾಹಿ ದೇಶಗಳು ಆಧುನಿಕತೆಯನ್ನು ಎದುರಿಸುತ್ತಾ ಹೇಗೆ ಮುನ್ನಡೆದಿದೆ ಎಂಬುದರ ಬಗ್ಗೆ ಕಥೆಗಳು ರಚಿತವಾಗಬೇಕು. ಭಾನು ಮುಷ್ತಾಕರ ಕೃತಿಗಳು ಎಲ್ಲ ಕಾಲದ ಹೆಣ್ಣು ಮಕ್ಕಳ ಸವಾಲುಗಳನ್ನು ಹೇಳುತ್ತವೆ. ಅವರ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಕಥೆಯು ಅತ್ಯಂತ ಗಮನಾರ್ಹವಾಗಿದೆ. ಭಾರತದ ಸಮುದಾಯಕ ಪ್ರಜ್ಞೆ, ಇಲ್ಲಿನ ವೈವಿಧ್ಯಮಯ ಬದುಕು ಮತ್ತು ಅದರ ಅಂತಾರಾತ್ಮವನ್ನು ಪರಿಚಯಿಸುವ ಕೆಲಸವಾಗಬೇಕು ಎಂದರು.
ಗುರುಪ್ರಸಾದ್ ಕಂಟಲಗೆರೆ ಅವರು ಮಾತನಾಡುತ್ತಾ, ಜಾಗತಿಕ ಕಥೆಗಳು ಎಂದಾಗ ನಾವು ಮೊದಲು ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು, ಸಣ್ಣತನವನ್ನು ಮೀರಬೇಕು, ಜಾತಿಯ ಕನ್ನಡಕಗಳನ್ನು ತೆಗೆದು ನಾವು ನಮ್ಮ ಸಮಾಜವನ್ನು ನೋಡಬೇಕಿದೆ.
ಭಾರತದ ದಲಿತರು ಆದಿವಾಸಿಗಳು ಹಕ್ಕಿಪಿಕ್ಕಿಗಳು ಹಿಂದುಳಿದವರು ಇವರ ಕಥೆಗಳು ಅನೇಕ ಭಾರತೀಯ ಅನಿಸಿಕೆ ಬರೋದಿಲ್ಲ. ಹಾಲನಹಳ್ಳಿ ಕೃಷ್ಣ, ಲಂಕೇಶ್, ಅನಂತಮೂರ್ತಿ, ತೇಜಸ್ವಿ ಇವರ ಕೃತಿಗಳು ಶ್ರೇಷ್ಠವಾಗಿವೆ. ಒಂದು ಅನುವಾದದ ಹಿಂದೆ ಜಾತಿ ರಾಜಕಾರಣವೂ ಕೆಲಸ ಮಾಡುತ್ತದೆ. ಉತ್ತಮವಾದದನ್ನು ಜಗತ್ತಿಗೆ ಕೊಡಬೇಕೆಂಬ ಸಾಂಸ್ಕೃತಿಕ ಜವಾಬ್ದಾರಿ ಬೇಕಾಗುತ್ತದೆ. ಹಿಂದೆ ಪಾಶ್ಚಾತ್ಯ ವಿದ್ವಾಂಸರಾದ ಕಿಟಲ್, ವಿಲಿಯಂ ಜೋನ್ಸ್, ಒಂದು ನಿಸ್ವಾರ್ಥ ಮನೋಭಾವದಿಂದ ಕನ್ನಡ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದಿಸುತ್ತಿದ್ದರು ಎಂದರು.
ಗೋಷ್ಟಿಯ ಉಪನ್ಯಾಸಗಳಿಗೆ ಸ್ಪಂದಿಸುತ್ತ ಯುವ ವಿಮರ್ಶಕರಾದ ಡಾ. ಮುಸ್ತಫ ಕೆಎಚ್ ಅವರು, ಕೇರಳದಲ್ಲಿ ಈಗಲೂ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ, ಶ್ರೀಕೃಷ್ಣ ಆಲನಹಳ್ಳಿ ಅವರ ಬಗ್ಗೆ ಒಂದು ಗೋಷ್ಠಿ ಇದ್ದೇ ಇರುತ್ತದೆ. ಭಾನು ಮುಷ್ತಾಕ್ ಅವರಿಗೆ ಪ್ರಶಸ್ತಿ ಬಂದಿದ್ದು ಬಯಸದೇ ಬಂದ ಭಾಗ್ಯ ಪುರುಷರೇ ನಿಯಂತ್ರಣ ಮಾಡುತ್ತಿರುವ ಅನುವಾದ ಪ್ರಪಂಚದಲ್ಲಿ ಲೇಖಕಿಯರ ಬಗ್ಗೆ ನಾವು ಯೋಚಿಸಬೇಕಿದೆ ನಾವು ಭಾರತೀಯ ಚಿಂತನೆಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸಬೇಕಿದೆ. ಅಂಬೇಡ್ಕರ್ ಚಿಂತನೆ, ಜಾತಿ ವ್ಯವಸ್ಥೆ , ನಾಥ ಪರಂಪರೆ, ಅವಧೂತ ಪರಂಪರೆ ಇತ್ಯಾದಿಗಳ ಸೈದ್ಧಂತಿಕ ಚಿಂತನೆಗಳನ್ನು ಹೊರಗಡೆ ರವಾನಿಸಬೇಕಿದೆ ಎಂದರು.
ಕಥೆಗಾರ ಕಿರಿಯ ವಿಜ್ಞಾನಿ ಆನಂದ್ ಕುಂಚನೂರವರು ಮಾತನಾಡುತ್ತಾ, ಅಕಾಡೆಮಿ ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ತರಬೇಕಿದೆ. ಲೇಖಕರಿಗೆ ಅಂತರರಾಷ್ಟ್ರೀಯ ಸಂಪರ್ಕಗಳು ಸಿಗುವುದು ಹೇಗೆ ? ನನ್ನ ಕೃತಿಯನ್ನು ನಾನೇ ಇಂಗ್ಲಿಷ್ ಗೆ ಅನುವಾದ ಮಾಡಿದರೆ ಅದನ್ನು ಮುದ್ರಿಸುವವರು ಯಾರು ? ಈ ಎಲ್ಲ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರ ಕಂಡುಕೊಳ್ಳಬೇಕಿದೆ ಎಂದರು.
ಕತೆಗಾರ್ತಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ, ಅನನ್ಯ ತುಷಿರಾ ಕಾವ್ಯನಾಮದ ಸವಿತಾ ಇನಾಮದಾರ್ ಅವರು ಮಾತನಾಡುತ್ತಾ, ಒಂದು ಮಧ್ಯಮ ವರ್ಗದ ಕಥೆಯಾಗಿತ್ತು ಅದು ಸಹಜವಾಗಿ ಸರಳವಾಗಿ ಬೇರೆಯವರನ್ನು ತಲುಪಲು ಸಾಧ್ಯವಾಯಿತು ಅಲ್ಲಿನ ಸನ್ನಿವೇಶಗಳು ಯಾವ ದೇಶದಲ್ಲಿ ಬೇಕಾದರೂ ನಡೆಯಬಹುದು ಕಥೆಯಲ್ಲಿನ ಸನ್ನಿವೇಶಗಳು ಓದುಗಳನ್ನು ತಟ್ಟಿದಾಗ ಅವು ಜನಪ್ರಿಯವಾಗುತ್ತವೆ ಎಂದರು.
ಕಾರ್ಯಕ್ರಮಕ್ಕೆ ಈ ಹೊತ್ತಿಗೆಯ ಉಪಾಧ್ಯಕ್ಷರಾದ ಇಂದಿರಾ ಶರಣ್ ಸ್ವಾಗತ ಕೋರಿದರೆ, ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯದರ್ಶಿಯಾದ ಸರ್ವ ಮಂಗಳ ಮೋಹನ್ ನಿರ್ವಹಿಸಿದರು. ವಂದನಾರ್ಪಣೆಯನ್ನು ಶ್ರೀಮತಿ ಕುಸುಮ್ ಹೆಗಡೆ ಮಾಡಿದರು.
ಸಭಿಕರಲ್ಲಿ ಡಾ. ಎಂ ಎಸ್ ಆಶಾದೇವಿ, ಶ್ರೀ. ನಲ್ಲತಂಬಿ ಕೆ, ರಶ್ಮಿ ಎಸ್ ಅವರು ಉಪಸ್ಥಿತರಿದ್ದರು.






0 Comments