ಈ ರಾತ್ರಿ..

ಮೂಲ : ಮೆರ್ಸಿ ಮಾರ್ಗರೇಟ್


ಕನ್ನಡಕ್ಕೆ : ರಾಮಕೃಷ್ಣ ಸುಗತ

ಈ ರಾತ್ರಿ
ನಿದ್ದೆ ಅದ್ಯಾವ ಗೂಬೆಯೊಂದರ ಕಾಲಕೆಳಗೆ
ಕೋಳಿಮರಿಯಂತೆ ಸಿಕ್ಕಿಕೊಂಡಿರುವುದೋ
ನಿಶ್ಚಲ ಮರಗಳಿಗೂ ಆತಂಕ
ಸೋರುವ ಕಪ್ಪುರಕ್ತವ ಕಂಡು
ಕತ್ತಲು ಕವಿಯುವ ವೇಳೆಯಲ್ಲವೇ
ನಡೆಸುತ್ತಿವೆ ರಣಹದ್ದುಗಳು ಸ್ವೇಚ್ಛಾಚಾರ

ಈ ರಾತ್ರಿ
ನಿದ್ದೆಯಿಲ್ಲ ದೆಹಲಿಗೆ
ನಿದ್ದೆಯಿಲ್ಲ ಕಾಶ್ಮೀರಕ್ಕೆ
ನಿದ್ದೆಯಿಲ್ಲ ಉತ್ತರಪ್ರದೇಶಕ್ಕೆ
ನಿದ್ದೆಯನ್ನೇ ತ್ಯಾಗಮಾಡಿ ಬಿಟ್ಟುಕೊಟ್ಟಿರುವಾಗ
ಇನ್ನೆಲ್ಲಿಯ ನಿದ್ದೆ ಮನುಷ್ಯತ್ವಕ್ಕೆ

ಈ ರಾತ್ರಿ
ಕೂಸು ಮಲಗಿಸಲು ಲಾಲಿ ಮರೆತಿದ್ದಾಳೆ ತಾಯಿಯೊಬ್ಬಳು
ಪ್ರೇಮಿಗಾಗಿ ಬಾಗಿಲಲ್ಲೇ ಕಾದು ನಿಂತಿದ್ದಾಳೆ ಪ್ರಿಯತಮೆಯೊಬ್ಬಳು
ಮಗನಿಗಾಗಿ ಪ್ರಾರ್ಥಿಸುವ ತಾಯಿ
ತಂದೆಗಾಗಿ ಕಾಯುತ್ತ ಬೀದಿಯಲ್ಲೇ ದೃಷ್ಟಿ ನೆಟ್ಟ ಮಕ್ಕಳು
ಎಲ್ಲಿ ಅವರೆಲ್ಲ ?
ಅಲ್ಲಲ್ಲಿ ತಮ್ಮ ಅಸ್ತಿತ್ವ ಹುಡುಕಿಹೋಗಿರುವ
ಅವರೆಲ್ಲ ಎಲ್ಲಿ ?

ಈ ರಾತ್ರಿ
ಹೀಗಾದರೆ ಎಷ್ಟು ಒಳ್ಳೆಯದು
ತಿರುಗಬಾರದೇ ದೆಹಲಿಯ ಬೀದಿಯಲ್ಲಿ
ಮಾತುಬಲ್ಲ ಯಾವುದಾದರೂ ಹಸುವೊಂದು
ಸಾಧುಪ್ರಾಣಿಯಲ್ಲವೇ
ಹೇಳಲಾರದೇ ಮಾರಣಹೋಮ ಸಾಕೆಂದು

ಈ ರಾತ್ರಿ ಮುಗಿದುಹೋದರೆ
ಬೇಡ ಈ ರಾತ್ರಿ ಮುಗಿಯುವುದು ಬೇಡ
ನಿದ್ದೆ ಕಳೆದುಕೊಂಡ ಅದೆಷ್ಟು ಕಣ್ಣುಗಳ
ರೋಧನೆ ಕೇಳಬೇಕಾಗುವುದೋ
ಗುಡಿ ಮಸೀದಿ ಚರ್ಚು
ಉಳಿಯಲಾರವು ಮನುಷ್ಯನಿಲ್ಲದೆ ಯಾವತ್ತೂ
ಗುಡಿ ಮಸೀದಿ ಚರ್ಚು
ಕೋರಲಾರವು ಮನುಷ್ಯರಕ್ತ ಯಾವತ್ತೂ

ಈ ರಾತ್ರಿ
ಕೊಲ್ಲುವಷ್ಟು ದ್ವೇಷ ಅವರಿಗಿದೆ
ಪ್ರೀತಿಸುವಷ್ಟು ಧೈರ್ಯ ನಮಗಿದೆ

‍ಲೇಖಕರು Admin

August 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: