ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಕಾಲಕ್ಕೆರಡು ಕವಿತೆಗಳು..

ಯುನಿವರ್ಸಿಟಿ ಮುಖ್ಯಸ್ಥರು ಕರೆಸಿದ್ದರು..

krishnamurthy geeta

ಎಂ ಎಸ್ ಕೃಷ್ಣಮೂರ್ತಿ ಗೀತಾ 

ಯುನಿವರ್ಸಿಟಿ ಮುಖ್ಯಸ್ಥರು ಕರೆಸಿದ್ದರು
ಯುನಿವರ್ಸಿಟಿ ಸುತ್ತಲೂ ಮುಳ್ಳು ತಂತಿ ಬೇಲಿ ಹಾಕಿಸಲು

fence2ಕೇಳಿದೆ ಎಷ್ಟು ಎತ್ತರಕ್ಕೆ
ಹೇಳಿದರು
ಎತ್ತರೆತ್ತರಕ್ಕೆ ಮುನುಷ್ಯ ಹಾರಿ ದಾಟಲಾರದಷ್ಟು

ಕೇಳಿದೆ
ಮುಳ್ಳುಗಳು ಈಗೀಗ ತುಂಬಾ ಚೂಪಾಗಿವೆ ಪರವಾಗಿಲ್ಲವೇ
ಹೇಳಿದರು
ಓಹೋ ಒಳ್ಳೆಯದಾಯಿತು ಒಳಗಿರುವವನು ಹೊರಗೋಗಲಿಕ್ಕಾಗದು
ಹೊರಗಿರುವವನು ಒಳ ಬರಲಾಗದು ಚುಚ್ಚಿಕೊಂಡು ಸಾಯಬೇಕು

ಕೇಳಿದೆ
ಇದು ಜ್ಞಾನ ದೇಗುಲವಲ್ಲವೇ ಎಲ್ಲರೂ ಬರಬಹುದು ಹೋಗಬಹುದಲ್ಲವೇ
ಮುಳ್ಳುತಂತಿಯ ಬೇಲಿಯೇಕೆ

ಹೇಳಿದರು
ಹೌದು ಆದರೆ ನಾವು ಹೇಳಿದವರು ಮಾತ್ರ ಬರಬೇಕು
ನಮ್ಮ ಮಾತು ಕೇಳಬೇಕು
ನಾವು ಹೇಳಿದವರಿಗೆ ಜೈಕಾರ ಹಾಕಬೇಕು
ನಾವು ಹೇಳಿಕೊಟ್ಟ ಹಾಗೇ ಮಾತ್ರ ಹೇಳಬೇಕು
ಹಾಗಿದ್ದವರು ಬರಲಿ
ಒಳಗಿದ್ದವರು ಹಾಗೆ ಇರಲಾಗದಿದ್ದರೆ ಈ ಮುಳ್ಳುತಂತಿಯಾಚೆ ಹೋಗದಿರಲಿ…

ಕೇಳಿದರು
ನಿಮ್ಮ ಹೆಸರು

ಹೇಳಿದೆ
ಆಜಾದಿ

ಮತ್ತೇ ಕರೆಸಲಿಲ್ಲ…..

ನಿನ್ನೆ ಮಧ್ಯಾಹ್ನ ಅವರೇನ ಮಾಡಿದರು 

ವಾರ್ಸನ್ ಶೈರ್

samvartha

ಕನ್ನಡಕ್ಕೆ : ಸಂವರ್ತ ‘ಸಾಹಿಲ್’

 

ಸಂಬಂಧಿ ಓರ್ವರ ಮನೆಯನ್ನು ಭಸ್ಮಗೊಳಿಸಿದರು

ಟಿವಿಯಲ್ಲಿ ಅಳುವ ಹೆಂಗಸರಂತೆ
ರೋಧಿಸಿದೆ ನಾನೂ ಸಹ
ಐದು ರೂಪಾಯಿ ನೋಟು
ಮಧ್ಯದಲ್ಲಿ ಮಡಚಿದಂತೆ
ಬಾಗಿ.
world mapನನ್ನ ಪ್ರೇಮಿಸುವ ಹುಡುಗನಿಗೆ ಫೋನ್ ಮಾಡಿ
ಸ್ವರದಲ್ಲಿ ಸಮಾಧಾನ ತರಿಸಿಕೊಳ್ಳಲು ಯತ್ನಿಸುತ್ತಾ
“ಹಲೋ” ಎಂದೇ.
ಅವ ಕೇಳಿದ, “ವಾರ್ಸನ್, ಏನಾಯಿತು? ಏನಾಗಿದೆ?”

ನಾನು ಪ್ರಾರ್ಥಿಸುತ್ತಿದ್ದೇನೆ
ಮತ್ತು ಹೀಗಿದೆ ನನ್ನ ಪ್ರಾರ್ಥನೆ:
ದೇವರೇ
ಎರಡು ದೇಶಗಳಿಗೆ ಸೇರಿರುವೆ ನಾನು
ಒಂದು ದೇಶದ ಬಾಯಾರಿದ
ಮತ್ತೊಂದು ಹೊತ್ತಿ ಉರಿಯುತ್ತಿದೆ
ಎರಡೂ ದೇಶಗಳು
ನೀರಿಗಾಗಿ ಹಂಬಲಿಸಿವೆ.

ಅಂದು ರಾತ್ರಿ
ಭೂಪಟವನ್ನು ತೊಡೆಯ ಮೇಲಿರಿಸಿಕೊಂಡು
ಭೂಮಿಯ ಮೇಲೆಲ್ಲಾ ಬೆರಳಾಡಿಸಿ
ಪಿಸುಗುಟ್ಟಿ ಕೇಳಿದೆ
“ಎಲ್ಲಿ, ಅದೆಲ್ಲಿ ನೋವಾಗುತ್ತಿದೆ?”

ಅದು ಉತ್ತರಿಸಿತು:
ಎಲ್ಲೆಡೆ
ಎಲ್ಲೆಡೆ
ಎಲ್ಲೆಲ್ಲೂ.

‍ಲೇಖಕರು admin

29 March, 2016

1 Comment

  1. Shama, Nandibetta

    “ಅಂದು ರಾತ್ರಿ
    ಭೂಪಟವನ್ನು ತೊಡೆಯ ಮೇಲಿರಿಸಿಕೊಂಡು
    ಭೂಮಿಯ ಮೇಲೆಲ್ಲಾ ಬೆರಳಾಡಿಸಿ
    ಪಿಸುಗುಟ್ಟಿ ಕೇಳಿದೆ
    “ಎಲ್ಲಿ, ಅದೆಲ್ಲಿ ನೋವಾಗುತ್ತಿದೆ?”

    ಅದು ಉತ್ತರಿಸಿತು:
    ಎಲ್ಲೆಡೆ
    ಎಲ್ಲೆಡೆ
    ಎಲ್ಲೆಲ್ಲೂ.”

    ಸಂವರ್ತ, ಕೆಲವೊಂದನ್ನು ಅನುವಾದ ಮಾಡಲು ನಿಮಗಷ್ಟೇ ಸಾಧ್ಯ !!!

    ಸ್ವಲ್ಪ ಅಸೂಯೆಯೊಡನೆ,
    ಶಮ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading