ನಿಮ್ಮ ಅಕ್ಷರ ದಾಸೋಹದಿಂದ ಹಿಡಿದಿಟ್ಟುಕೊಳ್ಳಿ..

gururaj b kulakarni

ಗುರುರಾಜ್ ಬಿ ಕುಲಕರ್ಣಿ 


ಮುಖಪುಟದಲ್ಲಿರುವವರು – ವೀಣಾ ಭಟ್

ಓದುಗನನ್ನು ಹಿಡಿದಿಟ್ಟುಕೊಳ್ಳುವದೆಂದರೇನು? ಈ ಪ್ರಶ್ನೆಗೆ ಉತ್ತರ ಜೋಗಿಯವರಿಗೆ ಗೊತ್ತು. ಹೀಗೆ ನಮ್ಮನ್ನು ನಿಮ್ಮ ಅಕ್ಷರ ದಾಸೋಹದಿಂದ ಹಿಡಿದಿಟ್ಟುಕೊಳ್ಳಿ. ಧನ್ಯವಾದಗಳು.

jogi tande taayiಪುಸ್ತಕ ಓದುವ ಗೀಳು ಕಡಿಮೆಯಾಗುತ್ತಿದೆ ಎಂಬ ಭಯ ಎಲ್ಲಾ ಅಕ್ಷರ ವ್ಯಾಮೋಹಿಗಳಲ್ಲಿ ಮೂಡಿದೆ. ಕನ್ನಡ ಪುಸ್ತಕಗಳನ್ನು ಕೊಂಡು ಓದುವರಿಲ್ಲ. ಎಲ್ಲರೂ ಫೇಸ್ ಬುಕ್ ದಾಟಿ ಮುಂದೆ ಹೋಗುತ್ತಿಲ್ಲ.ಎಮೋಟಿಕಾನ್ ಮತ್ತು ಲೈಕುಗಳನ್ನು ನಂಬುವಂತಿಲ್ಲ. ಕಾಮೆಂಟಬಾಕ್ಸ್ ಗಳು ಹೊಗಳಿಕೆ ಮತ್ತು ತೆಗಳಿಕೆಗೆ ಸೀಮಿತ. ಬ್ಲಾಗುಗಳು ಬಾಗಿಲನು ತೆರೆದರೂ ಅತಿಥಿಗಳು ಬರುತ್ತಿಲ್ಲ.

s h jameelಈಗಿನ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಜೀರ್ಣಿಸಿಕೊಳ್ಳುವದಿರಲಿ, ನಿರರ್ಗಳವಾಗಿ ಓದಲು ಕೂಡ ಬರುವದಿಲ್ಲ. ಬರೆಯಲು ಬರುವದಿಲ್ಲ. ಶಬ್ದದಾರಿದ್ರ್ಯ, ಅಸಂಭದ್ದ ಉಚ್ಚಾರಣೆ ಎಲ್ಲವೂ ಕಲಸುಮೇಲೋಗರ. ಅವರ ಇಂಗ್ಲೀಷ್ ಪರಿಸ್ಥಿತಿಯೂ ಅಷ್ಟೆ. ಆಡುಮಾತಿನಿಂದ ಸ್ವಲ್ಪ ಮುಂದೆ ಹೋಗಬಹುದು.

ಹಲವು ವರ್ಷಗಳಿಂದ ‘ಜಾನಕಿ ಕಾಲಂ’ ಓದುತ್ತಿದ್ದೆನಾದರೂ, ಜೋಗಿಯವರ ಪುಸ್ತಕಗಳನ್ನು ಓದಿರಲಿಲ್ಲ. ನಂತರ Chiranjeevi Kulkarni ಸಲಹೆಯಂತೆ ‘ಜೋಗಿ ಕತೆಗಳು’ ಪುಸ್ತಕ ಓದಿದೆ. ೨೦೦೯ರ ನನ್ನ ಹುಟ್ಟುಹಬ್ಬದ ಕಾಣಿಕೆಯಂತೆ ಅದನ್ನು ಕೊಟ್ಟಿದ್ದ. ೨೦೧೦ರಲ್ಲಿ ಧಾರವಾಡದಿಂದ ಬೆಂಗಳೂರಿಗೆ ಬಂದ ಮೇಲೆ ಜೋಗಿ ಅವರ ಒಂದೊಂದೆ ಪುಸ್ತಕ ಓದಲು ಶುರುಮಾಡಿದೆ. ಕೆಲವೇ ತಿಂಗಳುಗಳಲ್ಲಿ ಅವರ ಹಲವಾರು ಪುಸ್ತಕಗಳನ್ನು ಕೊಂಡು ಓದಿದ್ದೇನೆ. ಒಂದೆರಡು ಪುಸ್ತಕಗಳು ಸಿಕ್ಕಿಲ್ಲ. ಸಿಕ್ಕಿದಾಗ ಓದುತ್ತೇನೆ.

ಧನ್ಯವಾದಗಳು Jo Gi & SH Jameel

‍ಲೇಖಕರು admin

March 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sangeeta Kalmane

    ಜಗತ್ತೆಲ್ಲ ಇಂಗ್ಲೀಷ್ ಮಯವಾಗುತ್ತಿದೆ
    ಕೇಳುವರಿಲ್ಲವಾಗಬಹುದೇ
    ಮುಂದೊಂದು ದಿನ ಓದುವವರಿಲ್ಲವಾಗಬಹುದೇ
    ಮುತ್ತಿನಿಂತ ಕನ್ನಡಕ್ಷರಗಳ
    ಅನಾಥವಾಗಬಹುದೆ ಬರಹಗಳೆಲ್ಲ
    ಅದಕೆ ನನ್ನದೊಂದು ತೀಮಾ೯ನ
    ನನ್ನ ಶವಕ್ಕೆ ಯಾವುದೇ ಕ್ರಿಯಾಚರಣೆ ಬೇಡ
    ಮುಚ್ಚಿ ಸಮಾಧಿ ಮಾಡಿ
    ನಾ ಬರೆದ ಕಥೆ ಕವನ ನಗೆಬರಹ ಚುಟುಕುಗಳ ಗಂಟು
    ಇಲ್ಲಿ ದಿಕ್ಕೆಟ್ಟ ಹಾದಿ ಹಿಡಿದು ರದ್ದಿ ಅಂಗಡಿ ಸೇರುವುದು ಬೇಡ.

    ಪ್ರತಿಕ್ರಿಯೆ
  2. Vihi wadgi

    Sir comment box hogalike tegalike ge matra seemita bere Ella kade irabahudu aadare namma avadhiyalli charche agide kelavomme tegalike agiddaru adu pratibhatane agide aste Jogi sir bagge comment madalu tumba chikkavanu nanu avarige nanna namaskaragalu

    ಪ್ರತಿಕ್ರಿಯೆ
  3. Veena Bhat

    ಕನ್ನಡದಲ್ಲೇ ಇದು ಮೊದಲ ಪ್ರಯೋಗ. ಬರಹಗಾರನ ಹಸ್ತಾಕ್ಷರದೊಂದಿಗೆ ಪುಸ್ತಕ ಮನೆಬಾಗಿಲಿಗೆ ಬಂದರೆ ಯಾರಿಗೆ ಇಷ್ಟವಾಗಲ್ಲ…? ಓದುಗನ ಟೀಕೆ ಟಿಪ್ಪಣಿಗಳಿಗೆ ಸ್ವಾಗತ ಇದೆ ಎಂದೇ ಅರ್ಥ:-) ಬರಹಗಾರನಿಗೆ ಪ್ರಕಾಶಕರು ಸಲ್ಲಿಸಿದ ಗೌರವ. ಓದುಗನಿಗೆ ಓದಲು ಸ್ಫೂರ್ತಿ. ಒಳ್ಳೆಯ ಪುಸ್ತಕಗಳಿಗೆ ಓದುಗರು ಯಾವತ್ತೂ ಇದ್ದಾರೆ ಅನ್ನೋದು ಸಾಬೀತಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: