-ಸೂತ್ರಧಾರ ರಾಮಯ್ಯ
ಸೋರುತಿಹುದು ದೊಡ್ಡಣ್ಣನ (us) ಮನೆಯ ಮಾಳಿಗಿ!….. ವಿಕಿ ಲೀಕ್ಸಿನಿಂದ?
ಹೊಲಿ ನಿನ್ನ ತುಟಿಗಳನು ಮಂಕು ತಿಮ್ಮ. …..ಸದಾ ರಾಜಕೀಯ ಸುದ್ದಿಯನ್ನೇ ರುಬ್ಬುವ ಟಿ.ವಿ ಚಾನಲ್ಸ್ ಗೆ ಹೇಳಿದ್ದು. ವಿಮಾನಯಾನ ದರ ಇಳಿತ.
…ಎಷ್ಟು ಹೊತ್ತೂಂತ ಏರ್ ನಲ್ಲೆ ಇರೋಕಾಗುತ್ತೆ? ಇಳಿಯಲೇಬೇಕು ಕಿಂ ಮತ್ತು. ವಿಧಿ ವಿಪರೀತ! ಅನ್ನೋ ಹಾಗಾಯ್ತಲ್ಲಾ ಅವನ ಬಾಳು. ….ನಿಧಿ ವಿಪರೀತಆದ್ರೆಹಾಗೇ. ಗುಪ್ತರ ಕಾಲವನ್ನು ಸುವರ್ಣಯುಗ ಅನ್ತಾರಲ್ವೆ? ….. ಈಗಿನ ‘ಗುಪ್ತ್ ಗುಪ್ತ್’ರ ಕಾಲವೂ ‘ಸುವರ್’ನ ಯುಗವೇ ಅಲ್ವೇ?
ಕಲಾಪವೇ ಇಲ್ಲಾ; ಪಾರ್ಲಿಮೆಂಟ್ನಲ್ಲಿ ಬರಿ ಪ್ರಲಾಪ?….ವಾಕ್ ಸ್ವಾತಂತ್ರಕ್ಕಿಂತಲೂ ವಾಕೌಟ್ ಸ್ವಾತಂತ್ರ ಬಳಸಿದ್ದರಿಂದ.
ಭಾರತದ ಯುವಕರು ಕಲಾ ಕೋವಿ ದರಾಗಬೇಕು ಅಂದರು ಶ್ರೀಗಳು. …..ಪಾಕಿಸ್ತಾನದ ಯುವಕರೂ ‘ಕಲಾಶ್ನಿ ಕೋವಿ’ದರಾಗಬೇಕು(AK47 ) ಅಂತಾ ಕರೆ ಕೊಡ್ತಾರನ್ತಲ್ಲಾ ಅಲ್ಲಿನ -ಇತಿ ಶ್ರೀಗಳು.
ನಮ್ಮ ಮುಂದಿರುವ ರೋಲ್ (ಕಾಲ್) ಮಾಡೆಲ್ ಗಳೇ ವಿಚಿತ್ರ?
….ಹೌದು. ಮಾಡಿ ಅಂದದ್ದನ್ನ ಮಾಡಲ್ಲಾ, ಕಳಚಿಕೊಳ್ಳೋಕೆ ನೋಡ್ತಾರೆ-ಬೇಡಿ-ಅಂದದ್ದನ್ನ ಮಾಡಿ ಹಾಕಿಸ್ಕೋಬೇಕಲ್ಲ ಬೇಡಿ.
ಕೌನ್ ಬನೇಗಾ ಕರೋಡ್ ಪತಿ?
..ಸಿನ್ ಪಲ್. ಮಂತ್ರಿ ಮಗ ಬನೇಗ ಕರೋಡ್ ಪತಿ; ಬೀದಿಪಾಲಾದ ರೈತನ ಮಗ ಬನೇಗ -ರೋಡ್ ಪತಿ
ನೆರೆ ರಾಜ್ಯದ ಜನರು ಸಿನೆಮಾಕ್ಕೆ ಮರುಳಾಗು ತಾರೆ. ತಾರೆಗಳೇ ಅಲ್ಲಿನ ರಾಜಕೀಯದಲ್ಲಿ ರಾರಾಜಿಸು ತಾರೆ.
…ನಾವೇನು ಕಡಿಮೆ. ಮೇಕಪ್ ಇಲ್ಲದ, ಗ್ಲಿಸರಿನ್ ಬಳಸದ (ರಾಜಕೀಯ) ನಾಟಕ ವನ್ನು ನಿಜವೆಂದು ನಂಬಿ ಮೋಸಹೋಗುತ್ತಲೇ ಇದ್ದೇವಲ್ಲ.]]>
ಇದೇ ಬಹಿರಂಗ ಸುದ್ದಿ ಅಥ್ವ ಕಾಮೆಂಟ್ಸ್ comets…
ನಿಮಗೆ ಇವೂ ಇಷ್ಟವಾಗಬಹುದು…




0 Comments