ಗಾಂಧೀ ಕ್ಲಾಸು ವಿಮಾನ ಏರಿದ್ದು…

-ಧನಂಜಯ ಕುಲಕರ್ಣಿ ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ವಾಗಿಲಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಾದ ತೊಡಕುಗಳು, ಸಾಹಸಗಾಥೆಗಳು, ಅಲ್ಲಿನ ಜನರೊಂದಿಗಿನ ಒಡನಾಟ, ಮಲ್ಲೇಪುರಂ ಮಳೆಗಾಲದ ಹೊತ್ತಿನಲ್ಲಿ ತಮ್ಮ ಚಪ್ಪಲಿಯನ್ನು ಕಳೆದುಕೊಂಡು, ಇದ್ದೊಂದೇ ಚಪ್ಪಲಿಯನ್ನು ಶುಭ್ರವಾಗಿ ತೊಳೆದುಕೊಂಡು ಕುಂವೀ ಮನೆಗೆ ಬಂದು, ಅಲ್ಲಿರುವ ಚೋಳುಗಳ ಪರಿವಾರದ ಪರಿಚಯ ಮಾಡಿಕೊಂಡದ್ದು..ಹೀಗೆ ಮುಂತಾದ ರೋಚಕ ಅನುಭವಗಳನ್ನು ಓದುತ್ತ ಹೋದಂತೆ ಮೈಮೇಲಿನ ಕೂದಲು ಎದ್ದು ನಿಲ್ಲುತ್ತಿದ್ದವು.. ಬೆಳಗಿನ ಜಾವ ಆರು ಗಂಟೆಗೆ ಹೈದರಾಬಾದ್‍ಗೆ ಹೊರಡುವ ವಿಮಾನದಲ್ಲಿ ಕುಳಿತುಕೊಂಡು “ಗಾಂಧಿ ಕ್ಲಾಸು” ಓದುತ್ತಿರುವಾಗಿನ ಅನುಭವಗಳಿವು. ನಾಗರೀಕರಣದ ಗಂಧಗಾಳಿ ಗೊತ್ತಿಲ್ಲದ, ಮಾನವ ಸಂಬಂಧಗಳ ಅರ್ಥವಿಲ್ಲದ ಊರಿಗೆ ಚುನಾವಣಾ ಕೆಲಸಕ್ಕೆಂದು, ಅದೂ ಪಂಚಾಯ್ತಿ ಚುನಾವಣಾ ಕೆಲಸಕ್ಕೆಂದು ಹೋಗಿ, ಅಲ್ಲಿ ಪ್ರತಿಮನೆಯಲ್ಲಿ ತರಕಾರಿಗಳನ್ನಿಡುವ ರೀತಿಯಲ್ಲಿ ನಾಡಬಾಂಬ್ ಗಳನ್ನಿಟ್ಟುಕೊಂಡು, ಅದನ್ನೇ ಬದುಕು ಅಂತ ಅಪ್ಪಿಕೊಂಡು ಬದುಕುತ್ತಿರುವ ಜನರಮಧ್ಯೆ ಬದುಕಿ, ರಕ್ತಪಾತಗಳನ್ನು ಕಣ್ಣಾರೆಕಂಡು ಅದನ್ನು ಯಥಾವತ್ತಾಗಿ ವಿವರಿಸುವ ಕುಂವೀ…”ಹೀಗೂ ಉಂಟೇ” ಎಂದು ಹುಬ್ಬೇರಿಸುವಂತೆ ಮಾಡುತ್ತಾರೆ…. ಇದೆಲ್ಲ ಓದುತ್ತಿದ್ದಂತೆ…”ಗಾಂಧಿ ಕ್ಲಾಸು” ಕುಂವೀ ಅವರ ಆತ್ಮಕಥೆಯೆಂಬ ಕಾದಂಬರಿಯನ್ನು ಇಡಿಯಾಗಿ ರಂಗದಮೇಲೆ ತರುವ ಯೋಚನೆಗಳು ತಲೆಯಲ್ಲಿ ತಹರೆವಾರಿಯಾಗಿ ಗಿರಕಿಹೊಡೆಯ ಹತ್ತಿದವು…ಅದೇ ಗುಂಗಿನಲ್ಲಿ “ಗಾಂಧಿ ಕ್ಲಾಸು” ಪುಸ್ತಕವನ್ನು ವಿಮಾನಿನಲ್ಲಿ ನನ್ನ ಮುಂದಿನ ಸೀಟಿನ ಹಿಂದೆ ಇರುವ ಸ್ಥಳದಲ್ಲಿ ಇಟ್ಟು ಯೋಚನೆಯಲ್ಲಿ ಮುಳುಗಿದೆ..ಮುಂದೆ ಹೈದರಾಬಾದ್ ನಿಲ್ದಾಣ ಬಂತು..ನನ್ನ ಲಗೇಜು ತೆಗೆದುಕೊಂಡು ವಿಮಾನದಿಂದ ಇಳಿದು ಹೊರನಡೆದೆ…ನಿಲಾಣದಿಂದ ಹೊರಬಂದ ನಂತರ “ಗಾಂಧಿ ಕ್ಲಾಸು” ವಿಮಾನು ಏರಿ ಅಲ್ಲಿಯೇ ಪವಡಿಸುತ್ತಿರುವುದು ಗಮನಕ್ಕೆ ಬಂತು..ತುಂಬ ಚಡಪಡಿಸಿದೆ… ಕೂಡಲೇ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ ನನ್ನ ಅಳಲನ್ನು ತೋಡಿಕೊಂಡು, ಪುಸ್ತಕವನ್ನು ಹಿಂತಿರುಗಿಸಲು ವಿನಂತಿಸಿದೆ…ಕೂಡಲೇ ಕಾರ್ಯತತ್ಪರರಾದ ಅಧಿಕಾರಿಗಳು ೨-೩ ಕಡೆ ಫೋನಾಯಿಸಿ, ಅರ್ಧಗಂಟೆಯ ನಂತರ ಅದನ್ನು ನನ್ನ ಕೈಗಿತ್ತು, ಒಂದು ಬಿಳಿ ಕಾಗದದ ಮೇಲೆ ನನ್ನಿಂದ ಪ್ರಾಮಿಸರಿ ನೋಟ್ ಬರೆಸಿಕೊಂಡರು….. ಹೀಗೆ ಗಾಂಧಿ ಕ್ಲಾಸು ವಿಮಾನ ಏರಿದಂತೆಯೇ ರಂಗದ ಮೇಲೆಯೂ ಏರಲಿದೆ ಇಷ್ಟರಲ್ಲಿಯೇ !!!!!  ]]>

‍ಲೇಖಕರು G

December 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Arun

    Kumveeyavara gandhi classu rangada mele baruvudu nijakkoo olleya sangathi. adaralli saakashtu dramatic elements ive. adu cinema aagi kooda yashasviyaaguvudaralli anumanavilla.

    ಪ್ರತಿಕ್ರಿಯೆ
  2. kumara raitha

    ಕುಂವೀ ಅವರ ಆತ್ಮಕಥೆ ‘ಗಾಂಧಿ ಕ್ಲಾಸ್’ ಬಾಲ್ಕನಿ ಅಥವಾ ಫಸ್ಟ್ ಕ್ಲಾಸ್ ಅನ್ನುವುದನ್ನು ನಿಮ್ಮ ಬರಹ ಸಾಂಕೇತಿಕವಾಗಿ ತೋರಿಸುತ್ತಿದೆ. ಈ ಕೃತಿ ರಂಗದ ಮೇಲೆ ಬರುತ್ತಿರುವುದು ಸಂತಸದ ಸಂಗತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: