ಇಂಡೋನೇಶ್ಯಾ ಮತ್ತು ಅಂತರ್ಜಾಲ

-ಅಶೋಕ್ ಕುಮಾರ್ ಕನ್ನಡ ಬ್ಲಾಗರ್ಸ್ ಇಂಡೋನೇಶ್ಯಾವು ಅಂತಜಾಲ ಬಳಕೆಯಲ್ಲಿ ಮುಂದಿರುವ ದೇಶವಾಗುತ್ತಿದೆ.ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಇಲ್ಲಿನ ಜನರಷ್ಟು ಮೆಚ್ಚುವವರು ಬೇರೆಲ್ಲೂ ಇದ್ದಹಾಗಿಲ್ಲ.ಫೇಸ್‌ಬುಕ್ ಮತ್ತು ಟ್ವಿಟರ್ಬಳಕೆಯಲ್ಲಿ ಇಂಡೋನೇಶ್ಯಾದವರದ್ದು,ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಮೇಲುಗೈಯಾಗಿದೆ.ಜಗತ್ತಿನಲ್ಲೇ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಇಂಡೋನೇಶ್ಯಾನಾಲ್ಕನೇ ಸ್ಥಾನದಲ್ಲಿದೆ.ಹೆಚ್ಚಿನವರು ಮೊಬೈಲ್ ಸಾಧನಗಳ ಮೂಲಕವೆ ಅಂತರ್ಜಾಲ,ಅದರಲ್ಲೂ ಈತಾಣಗಳ ಬಳಕೆ ಮಾಡುತ್ತಿದ್ದಾರೆ. ಭಾರತದ ಭೇಟಿಯ ನಂತರ ಒಬಾಮಾ ದಂಪತಿಗಳು ಇಂಡೋನೇಶ್ಯಾ ಪ್ರವಾಸಕ್ಕೆ ಹೋದದ್ದು ನೆನಪಿದೆಯೇ?ಒಬಾಮ ಪತ್ನಿಯ ಕೈಕುಲುಕಿ ಸ್ವಾಗತಿಸಿದ ಇಲ್ಲಿನ ಸಚಿವರೋರ್ವರ ಕ್ರಮವು,ಸಂಪ್ರದಾಯಕ್ಕೆ ವಿರುದ್ಧವಾಗಿತ್ತು,ಜನರು ಅದರ ಬಗ್ಗೆ ಟ್ವಿಟರಿನಲ್ಲಿ ಚರ್ಚಿಸಿದ ಪರಿ ಹೇಗಿತ್ತೆಂದರೆ,ಅದು ಅಂದಿನ ಬಿಸಿ-ಬಿಸಿ ಸುದ್ದಿಯಾಯಿತು. ಇದರಲ್ಲಿ ತಂತ್ರಜ್ಞಾನ ವಿಷಯಗಳ ಚರ್ಚೆಯೂ ಗರಿಗೆದರುವುದು ವಿಶೇಷ.ಬರೇ ಒಣಚರ್ಚೆಗಲ್ಲದೆ,ಅಭಿವೃದ್ಧಿಗೂ ಈ ತಾಣಗಳ ಬಳಕೆಯಾಗುತ್ತಿವೆ.ರಾಜಧಾನಿ ಜಕಾರ್ತಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲೂ ಸಾಮಾಜಿಕ ಜಾಲತಾಣಗಳ ಬಳಕೆ ನಡೆದಿವೆ. ——————————— ಇದೀಗ ಏಸರ್ ಟ್ಯಾಬ್ಲೆಟ್ ಸರದಿ ಏಸರ್ ಕಂಪೆನಿಯೂ ಟ್ಯಾಬ್ಲೆಟ್ ಸಾಧನಗಳನ್ನು ಮಾರುಕಟ್ಟೆಗೆ ಬಿಡುವುದರಲ್ಲಿದೆ.ಏಪಲ್ ಕಂಪೆನಿಯ ಐಪ್ಯಾಡ್,ಸ್ಯಾಮ್ಸಂಗ್‌ನ ಗ್ಯಾಲಕ್ಸಿ ನಂತರ ಇದೀಗ ಏಸರ್ ಪ್ಯಾಡ್‌ಗಳ ಸರದಿ.ಹತ್ತು ಮತ್ತು ಏಳು ಇಂಚು,ಹೀಗೆ ಎರಡು ರೀತಿಯ ಸಾಧನಗಳನ್ನು ಏಸರ್ ಪರಿಚಯಿಸಿದೆ.ಸ್ಪರ್ಶ ಸಂವೇದಿ ತೆರೆ ಈ ಸಾಧನಗಳ ಹೈಲೈಟ್.ಎರಡು ಕ್ಯಾಮರ,ವೈಫೈ ಮತ್ತು ತ್ರೀಜಿ ಸಂಪರ್ಕ ಇದೆ.ವಿಂಡೋಸ್,ಆಂಡ್ರಾಯಿಡ್-ಹೀಗೆ ಎರಡು ರೀತಿಯ ಸಾಧನಗಳ ಜತೆ ಏಸರ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ.ಏಸರ್ ನೆಟ್‌ಬುಕ್‌ಗಳ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದ ಬಳಿಕ,ಈ ಮಾರುಕಟ್ಟೆ ಪ್ರವೇಶಿಸಲಿದೆ.

ಮುಂದಿನ ವರ್ಷದ ಮೊದಲಾರ್ಧದಲ್ಲಿ ಏಸರ್ಟ್ಯಾಬ್ಲೆಟ್‌ಗಳು ಮಾರು ಕಟ್ಟೆಯಲ್ಲಿ ಲಭ್ಯವಾಗುವ  ನಿರೀಕ್ಷೆಯಿದೆ.ಬೆಲೆಯ ವಿಷಯದಲ್ಲಿ ಕಂಪೆನಿಯು ಬಾಯಿಬಿಟ್ಟಿಲ್ಲ.ಎಚ್ ಪಿ,ಬ್ಲ್ಯಾಕ್‌ಬೆರಿ ಮುಂತಾದ ಕಂಪೆನಿಗಳೂ  ಪ್ಯಾಡ್ ತಯಾರಿಸುವ ಯೋಚನೆಯಲ್ಲಿವೆ.ಏಪಲ್ ಕಂಪೆನಿಯು ಎಂಭತ್ತೇ ದಿನಗಳಲ್ಲಿ ಎರಡು ದಶಲಕ್ಷ ಐಪ್ಯಾಡ್‌ಗಳನ್ನು ಮಾರಿ,ಇತರ ಕಂಪೆನಿಗಳ ಚಿತ್ತವನ್ನು ಪ್ಯಾಡುಗಳತ್ತ ಹೋಗುವಂತೆ ಮಾಡಿದೆ.ಇದರ ಜತೆಯಲ್ಲಿಯೇ ಎರಡು ತೆರೆಗಳ ಲ್ಯಾಪ್‌ಟಾಪ್ ಐಕಾನಿಕಾವನ್ನೂ ಏಸರ್ ಮಾರುಕಟ್ಟೆಗೆ ಪರಿಚಯಿಸಿದೆ. ——————————- ಉದಯವಾಣಿ ಡೈರಿ ಬಹುಮಾನ ಗೆಲ್ಲಿ! ಈ ಪ್ರಶ್ನೆಗಳಿಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಬಹುಮಾನ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ಶ್ರುತಿಗ್ರಾಫಿಕ್ಸ್,ಉಡುಪಿ. *ರೂಬಿ ಆನ್ ರೈಲ್ ಅಂದರೇನು? *ಎಕ್ಸ್ಟ್ರೀಮ್ ಪ್ರೊಗ್ರಾಮಿಂಗ್ ಪದವನ್ನು ಕನ್ನಡಕ್ಕಿಳಿಸಿ. (ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಶ್ರುತಿಗ್ರಾಫಿಕ್ಸ್‌ಗೆ ಮಿಂಚಂಚೆ ಮಾಡಿ,ವಿಷಯ:NS7 ನಮೂದಿಸಿ [email protected])]]>

‍ಲೇಖಕರು G

December 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: