ಇದೇ ನನ್ನ ತಂಬೂರಿ..

gangadharaa pattar

ಟಿ ಕೆ ಗಂಗಾಧರ ಪತ್ತಾರ್ 

ಅಪ್ಪಟ ನಾಸ್ತಿಕನಾಗಿಯೂ ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ, ಶಹನಾಯಿ ನವಾಝ್ ಉಸ್ತಾದ ಪಂಡಿತ್ ಬಿಸ್ಮಿಲ್ಲಾ ಖಾನರಿಗೆ ಕಾಶಿ ವಿಶ್ವನಾಥ ಹಾಗೂ ಗಂಗಾನದಿ ಎಂದರೆ ಪಂಚಪ್ರಾಣ.ಅಚಲ ವಿಶ್ವಾಸ-ಶ್ರದ್ಧೆ ಉಳ್ಳವರಾಗಿದ್ದರು. ಪ್ರತಿದಿನ ಬೆಳಗಿನ ಝಾವ ಸ್ನಾನ ಮಾಡಿ ಶುಚಿರ್ಭೂತರಾಗಿ ವಿಶ್ವನಾಥನ ಸನ್ನಿಧಿಯಲ್ಲಿ ಶಹನಾಯಿ ನುಡಿಸುವ ಮೂಲಕ ನಾದೋಪಾಸನೆ ಮಾಡುತ್ತಿದ್ದರು.

ಒಮ್ಮೆ ಪಾಕಿಸ್ತಾನದವರು -“ನೀವು ಹೇಳುವ ಸೌಕರ್ಯ-ಸೌಲಭ್ಯಗಳನ್ನೆಲ್ಲಾ ಒದಗಿಸುತ್ತೇವೆ, ಐಷಾರಾಮೀ ವ್ಯವಸ್ಥೆ ಕಲ್ಪಿಸುತ್ತೇವೆ. ಪಾಕಿಸ್ತಾನದಲ್ಲಿ ವಾಸಿಸಲು ಬಂದು ಬಿಡಿ”-ಎಂದರಂತೆ. ಆಗ ಖಾನ್ ಸಾಹೇಬರು ಒಂದು ದಮ್ ಬೀಡಿ ಎಳೆದು ಉಂಗುರ-ಉಂಗುರ ಹೊಗೆ ಬಿಡುತ್ತಾ ಒಂದು ಸ್ವಚ್ಛಂದ ಮುಗುಳು ನಗೆ ಸೂಸುತ್ತಾ ಹೇಳಿದರಂತೆ “ಮೊದಲು ನನ್ನ ತಂಬೂರಿ ಸಾಗಿಸಿಬಿಡಿ, ಆಮೇಲೆ ನಾನು ಖಂಡಿತಾ ಬರುತ್ತೇನೆ”.

“ಅಯ್ಯೋ! ತಾನ್ ಪುರಾ ಸಾಗಿಸೋದು ಏನು ಮಹಾ ಕೆಲಸ. ಎಲ್ಲಿದೆ ತೋರಿಸಿ”-ಎಂದಾಗ-ಅಷ್ಟೇ ಸಹಜವಾಗಿ ಮಂದಹಾಸ ಸೂಸುತ್ತಾ ಉಸ್ತಾದರು ತೋರುಬೆರಳು ಚಾಚಿ ಗಂಗಾನದಿಯನ್ನು ತೋರಿಸುತ್ತಾ “ಇದೇ ನನ್ನ ತಂಬೂರಿ. ಇದರ ಅಲೆ-ಅಲೆಗಳೂ ನನ್ನ ಶಹನಾಯಿ ಶ್ರುತಿಗೆ ಉಸಿರು ನೀಡುತ್ತವೆ ಎಂದಾಗ ಪಾಕಿಸ್ತಾನೀಯರು ನಿಬ್ಬೆರಗಾಗಿ ಮೌನ ತಾಳಿದರು.

Diyas on the Ganges, Evening Offerings The Hindu faith has many colorful, often flamboyant traditions, rituals, and ceremonies.  Perhaps one of the more subdued traditions is that of setting offerings adrift on the sacred waters of the Ganges.  These small votives comprised of cups made of dried leaves, marigold flower petals and a lit candle, are gently placed upon the river's surface at sundown.

‍ಲೇಖಕರು admin

March 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಚಂದ್ರಪ್ರಭಾ ಬಿ.

    ಗಿರಿ ಎತ್ತರದ ಬಿಸ್ಮಿಲ್ಲಾ ಸಾಹೇಬರ ಅಂತಃಕರಣದ ಮಾತುಗಳಿಗೆ ಸಲ್ಲಲಿ ನಮ್ಮೆಲ್ಲರ ಸಲಾಂ.

    ಪ್ರತಿಕ್ರಿಯೆ
  2. Anonymous

    ಎಸ್.ಪಿ.ವಿಜಯಲಕ್ಶ್ಮಿ ……. ಎಂಥ ವ್ಯಕ್ತಿತ್ವ…! ಸರಳವಾಗಿ ಬದುಕಿ ಆ ಮೂಲಕ ಘನತತ್ವಗಳನ್ನು ಸಾರಿ, ಸಂಗೀತದ ಅನುರಣನದಲ್ಲಿ ಜೀವಂತರಾಗಿರುವ ಬಿಸ್ಮಿಲ್ಲಾಖಾನರಿಗೆ ಕೋಟಿನಮನಗಳು…..

    ಪ್ರತಿಕ್ರಿಯೆ
  3. Dr. Prabhakar M. Nimbargi

    Such are great hearts! Such people lived not only Sufi-ism but lived human-ism. Music, as everyone knows, bars religion, nations, and the Universe too. Music is universe and universe is music for such hearts. Hats off to such great hearts. They are all unique.

    ಪ್ರತಿಕ್ರಿಯೆ
  4. ಟಿ.ಕೆ.ಗಂಗಾಧರ ಪತ್ತಾರ

    ಕಾಮೆಂಟ್ ಕಾಲಮ್ಮಿನಲ್ಲಿ ಪೋಸ್ಟ್ ಮಾಡಿದ್ದುದನ್ನು ಮುಖ್ಯಪುಟದಲ್ಲಿ ಪೇಸ್ಟ್ ಮಾಡಿದ “ಅವಧಿ”ಗೆ ಕೃತಜ್ಞತಾಪೂರ್ವಕ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: