ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಹಾ ಇಲ್ಲಿ ‘ರಂಜಿ’ಸಿತು ಕೋಗಿಲೆ!

ರಾಘವೇಂದ್ರ ಬೆಟ್ಟಕೊಪ್ಪ

—-


ಸಿನೇಮಾ ತಾರೆಯರು ಸಾಹಿತ್ಯ ಕ್ಷೇತ್ರದಲ್ಲೂ ಗುರುತಾಗುವದು ಅಪರೂಪ. ಆದರೆ, ರಂಜನಿ ರಾಘವನ್ ಅವರು ಪುಟ್ಟಗೌರಿಯಾಗಿ ಕನ್ನಡತಿಯಾಗಿ ಟೀವಿಗಳ ಮೂಲಕ, ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನೇಮಾಗಳ ಮೂಲಕ ಪರಿಚಿತರು. ಮನೆಮಾತು. ಇಷ್ಟೇ ಅಲ್ಲ, ‘ಕತೆ ಡಬ್ಬಿ’ಯಂತಹ ಕೃತಿಗಳನ್ನೂ ಕೊಟ್ಟು ಹೆಸರು ಮಾಡಿದವರು. ಸಾಹಿತ್ಯದ, ಸಾಹಿತ್ಯದ ಕಥಾಕೂಟದಲ್ಲೂ ಇದ್ದವರು.

ಇವರು ಮೊನ್ನೆ ಮೊನ್ನೆ ಶಿರಸಿಗೆ ಬಂದಿದ್ದರು. ಶಿರಸಿಯ ಬೆಟ್ಟಕೊಪ್ಪದ ‘ನಮ್ಮನೆ ಹಬ್ಬ’ಕ್ಕೆ ವಾಗ್ಮಿ ಹಿರೇಮಗಳೂರು ಕಣ್ಣನ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ, ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಅಕ್ಕಿ ಡಾಕ್ಟರ್ ಶಶಿಕುಮಾರ ತಿಮ್ಮಯ್ಯ ಅವರೊಂದಿಗೆ ಪಾಲ್ಗೊಂಡಿದ್ದರು. ಮಣ್ಣಿನ ಕುಂಡದ ಮೇಲಿನ ಹಣತೆಯನ್ನು ಬೆಳಗಿದರು.

ನಮ್ಮನೆ ಹಬ್ಬಕ್ಕೆ ಚಾಲನೆ ನೀಡಿದ ರಂಜನಿ ರಾಘವನ್ ಅಭಿಮಾನದಿಂದ ನಮ್ಮ ಕಲೆ, ನಮ್ಮ ನೆಲ, ಸಂಸ್ಕೃತಿ ಸುತ್ತ. ಮಾತಿನಷ್ಟೇ ಆಪ್ತವಾಗಿತ್ತು ಅವರು ಹಾಡಿದ ಹಾಡು. ಆಹಾ ಎಂಥ ಸುಮಧುರ ಕಂಠ ಸಿರಿ. ಸುಸ್ಪಷ್ಟ ಶಬ್ಧಗಳ ಉಚ್ಛಾರನೆ. ಕೇಳುತ್ತಲೇ ಇರಬೇಕು ಎನ್ನುವ ಭಾವ.
ಕುವೆಂಪು ಅವರು ರಚಿಸಿದ ‘ಮುಚ್ಚುಮರೆ ಇಲ್ಲದೆಯೇ ನಿನ್ನ ಮುಂದೆ ಎಲ್ಲವನ್ನೂ ಬಿಚ್ಚಿಡುವೆ ಓ ಗುರುವೇ..’ ಹಾಡನ್ನು ಹೇಳಿ ಮಾತು ನಿಲ್ಲಿಸಿದಾಗ ಹಳ್ಳಿಯ ಮೂಲೆಯಲ್ಲೂ ನೆರೆದಿದ್ದ ಆರೇಳು ನೂರು ಪ್ರೇಕ್ಷಕರು ಕರತಾಡನದ ಅಭಿನಂದನೆ, ಖುಷಿ ಸಲ್ಲಿಸಿದರು.

ಇಡೀ ನಮ್ಮನೆ ಹಬ್ಬದ ಉದ್ಘಾಟನೆಗೆ ಹೊಸ ರಂಗು ನೀಡಿದರು ರಂಜನಿ ರಾಘವನ್!
ಕೋಗಿಲೆಯೊಂದು ಮೈಕಿನ ಮುಂದೆ ಬಂದು ಹಾಡಿದ ಅನುಭವ ಎಲ್ಲರಿಗೂ ಆಯಿತು. ಕೇಳಿ ಒಮ್ಮೆ.

‍ಲೇಖಕರು avadhi

6 December, 2023

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. ಸು.ಮ.

    ಭಾರೀ ಚೊಲೋ ಆಜು, ನಿನ್ನ ವರದಿ. ಅಂದಿನ ಸುವರ್ಣ ಕ್ಷಣವಾ ಮತ್ತೊಂದ್ಸಲ ನೆಂಪ್‌ ಮಾಡಿದ್ದಕ್ಕೆ ಧನ್ಯವಾದ ಮಾರಾಯಾ…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading